For Quick Alerts
  ALLOW NOTIFICATIONS  
  For Daily Alerts

  ಲೀಲಾ ಮನೆಯಲ್ಲಿ ನಡೆದ ಘಟನೆಯನ್ನು ಎಜೆಗೆ ಹೇಳಲಿಲ್ಲವೇಕೆ..?

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ರೇವತಿಯನ್ನು ನೋಡಲು ಕೌಸಲ್ಯ ಮನೆಗೆ ಗಂಡಿನ ಕಡೆಯವರು ಬಂದಿದ್ದಾರೆ. ಹುಡುಗ ರೇವತಿಯ ಬೋಲ್ಡ್ ಮಾತುಗಳಿಂದ ಖುಷಿಯಾಗಿದ್ದಾನೆ. ಹಾಗಾಗಿ ಹುಡುಗಿಯನ್ನು ಒಪ್ಪಿದ್ದಾನೆ. ಈ ನಡುವೆಯೇ ಕೌಸಲ್ಯ ತಮ್ಮ ಅಳಿಯನ ಬಗ್ಗೆ ಮಾತನಾಡಿದ್ದಾಳೆ.

  ಆಗ ಹುಡುಗನ ಕಡೆಯವರು ಕುತೂಹಲದಿಂದ ನಿಮ್ಮ ಅಳಿಯ ಯಾರೆಂದು ಕೇಳುತ್ತಾರೆ. ಎಜೆ ಎಂದು ಹೇಳಿದಾಗ ಶಾಕ್ ಆಗಿ ಎದ್ದು ನಿಲ್ಲುತ್ತಾರೆ. ಏನಾಯ್ತು ಎಂದು ಕೇಳಿದಾಗ ದುಡ್ಡಿದೆ ಎಂದು ಸೆಕೆಂಡ್ ಹ್ಯಾಂಡ್ ಅನ್ನು ಮದುವೆಯಾದವಳು ನಿಮ್ಮ ಮಗಳಾ..? ಎಂದು ಕೇಳುತ್ತಾರೆ.

  ಕಂಠಿ-ಸ್ನೇಹಾ ಪೋಸ್ಟರ್ ವಿಚಾರ ಬಂಗಾರಮ್ಮಗೆ ತಿಳಿದು ಹೋಯಿತು!ಕಂಠಿ-ಸ್ನೇಹಾ ಪೋಸ್ಟರ್ ವಿಚಾರ ಬಂಗಾರಮ್ಮಗೆ ತಿಳಿದು ಹೋಯಿತು!

  ಪೇಪರ್‌ನಲೆಲ್ಲಾ ಬಂದಿತ್ತು. ನಿಮ್ಮ ಮಗಳು ಎಂಥವಳು ಎಂದು ಗೊತ್ತಿದೆ. ಇಂತಹ ಸಂಬಂಧ ನಮಗೆ ಬೇಕಿಲ್ಲ. ನಿಮ್ಮ ಎರಡನೇ ಮಗಳಿಗೂ ಹಣದ ಹುಚ್ಚಿರುತ್ತೆ ಎಂದು ಕೌಸಲ್ಯ ಕುಟುಂಬದವರಿಗೆ ಬೈದು ಹೊರಟು ಹೋಗುತ್ತಾರೆ.

  ಎಜೆ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ಲೀಲಾ

  ಎಜೆ ಕೈಯಲ್ಲಿ ಸಿಕ್ಕಿ ಹಾಕಿಕೊಂಡ ಲೀಲಾ

  ಇದೆಲ್ಲವನ್ನೂ ಲೀಲಾ ಕದ್ದು ಕೇಳಿಸಿಕೊಳ್ಳುತ್ತಿರುತ್ತಾಳೆ. ತನ್ನಿಂದ ತನ್ನ ತವರು ಮನೆಗೆ ಇಷ್ಟೆಲ್ಲಾ ಅವಮಾನವಾಗುತ್ತಿದೆ. ಛೇ ತನ್ನಿಂದ ತನ್ನ ತಂಗಿಯ ಬಾಳು ಹೀಗಾಯಿತಲ್ಲ ಎಂದು ನೊಂದುಕೊಳ್ಳುತ್ತಿರುತ್ತಾಳೆ. ಈಗ ನಾನು ಮನೆಗೆ ಹೋದರೆ ತಪ್ಪಾಗುತ್ತೆ. ನಾನು ಈ ಮಾತುಗಳೆಲ್ಲವನ್ನೂ ಕೇಳಿಸಿಕೊಂಡೆ ಎಂಬುದು ಗೊತ್ತಾದರೆ, ಮೂರು ಜನರು ಬೇಸರ ಮಾಡಿಕೊಳ್ಳುತ್ತಾಳೆ. ನಾನು ವಾಪಸ್ ಮನೆಗೆ ಹೋಗುವುದೇ ಸರಿ ಎಂದು ಹೋಗುತ್ತಿರುತ್ತಾಳೆ. ದಾರಿಯಲ್ಲಿ ಎಜೆ ಸಿಕ್ಕುತ್ತಾನೆ. ಎಜೆ ಮನೆಗೆ ಹೋಗೋಣ ಬಾ ಎಂದು ಕರೆಯುತ್ತಾನೆ. ಆಗ ಲೀಲಾ ಶಾಕ್ ಆಗುತ್ತಾಳೆ. ಈ ಏನು ಮಾಡೋದು ಎಂದು ಯೋಚಿಸುತ್ತಲೇ ಕಾರನ್ನು ಹತ್ತುತ್ತಾಳೆ.

  ನಿಜ ತಾಯಿ ಎದುರಿದ್ದರು ಗುರುತಿಸದೆ ನಕಲಿ ತಾಯಿಯನ್ನು ಒಪ್ಪಿಕೊಂಡ ಮಕ್ಕಳು!ನಿಜ ತಾಯಿ ಎದುರಿದ್ದರು ಗುರುತಿಸದೆ ನಕಲಿ ತಾಯಿಯನ್ನು ಒಪ್ಪಿಕೊಂಡ ಮಕ್ಕಳು!

  ತವರು ಮನೆ ಸ್ಥಿತಿಗೆ ನೊಂದ ಲೀಲಾ

  ತವರು ಮನೆ ಸ್ಥಿತಿಗೆ ನೊಂದ ಲೀಲಾ

  ಎಜೆ ಹಾಗೂ ಲೀಲಾ ಮನೆಗೆ ಬರುವಷ್ಟರಲ್ಲಿ ಹುಡುಗನ ಕಡೆಯವರು ಹೊರಡುತ್ತಾರೆ. ಆಗ ಲೀಲಾ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಾಳೆ. ಹುಡುಗನ ಕಡೆಯವರು ಹೋದ ಮೇಲೆ ಎಜೆ ಮತ್ತು ಲೀಲಾ ಮನೆ ಒಳಗೆ ಹೋಗುತ್ತಾರೆ. ಆಗ ಮನೆಯವರು ಕೂಡ ಸಮಾಧಾನ ಮಾಡಿಕೊಳ್ಳುತ್ತಾರೆ. ಸ್ವಲ್ಪ ಬೇಗ ಬಂದಿದ್ದರೂ ಮಗಳು ಮತ್ತು ಅಳಿಯ ಎಷ್ಟು ಬೇಸರ ಮಾಡಿಕೊಳ್ಳುತ್ತಿದ್ದರು ಎಂದು ಮಾತನಾಡಿಕೊಳ್ಳುತ್ತಾರೆ. ಅವರ ಮುಂದೆ ಯಾವುದೇ ಕಾರಣಕ್ಕೂ ಅಳಬಾರದು ಎಂದು ಹೇಳುತ್ತಿರುತ್ತಾರೆ. ಇಬ್ಬರೂ ಒಳಗೆ ಬಂದಾಗ ಕಾಫಿ ತರುವ ನೆಪದಲ್ಲಿ ಕೌಸಲ್ಯ ಅಡುಗೆ ಮನೆಗೆ ಹೋಗಿ ಅಳುತ್ತಿರುತ್ತಾಳೆ. ಮೂವರು ಅಡುಗೆ ಮನೆಯಲ್ಲಿ ಅತ್ತು ಬಳಿಕ ಬರುತ್ತಾರೆ. ಎಜೆ ಸೀರೆ ಕೊಡಲು ಹೇಳುತ್ತಾನೆ. ಆದರೆ ಲೀಲಾ ಒಪ್ಪುವುದಿಲ್ಲ. ನಾನು ಸೆಲೆಕ್ಟ್ ಮಾಡಿದ ಸೀರೆಯನ್ನು ಕೊಡಬೇಕು ಎಂದು ಹಠ ಮಾಡುತ್ತಾಳೆ. ಆದರೂ ಎಜೆ ತಂದ ಸೀರೆಯನ್ನೇ ಕೊಡುತ್ತಾಳೆ. ಆದರೂ ರೇವತಿ ಮತ್ತು ಕೌಸಲ್ಯ ಖುಷಿಯಾಗಿರುವುದಿಲ್ಲ. ಅದನ್ನು ನೋಡಿ ಲೀಲಾ ಪ್ರಶ್ನಿಸುತ್ತಾಳೆ. ಆಗ ಇಬ್ಬರೂ ನಾಟಕ ಮಾಡುತ್ತಾರೆ.

  ಲೀಲಾ ಮಾತಿನಿಂದ ಶಾಕ್ ಆದ ಮನೆಯವರು

  ಲೀಲಾ ಮಾತಿನಿಂದ ಶಾಕ್ ಆದ ಮನೆಯವರು

  ಇನ್ನು ಇಬ್ಬರೂ ಹೊರಡುತ್ತಾರೆ. ಎಜೆ ಕಾರನ್ನು ಹತ್ತಿದ ಮೇಲೆ ಲೀಲಾ ಮನೆಯವರಿಗೆ ತನ್ನನ್ನು ಸಂಪೂರ್ಣವಾಗಿ ಮರೆಯಲು ಹೇಳುತ್ತಾಳೆ. ನನ್ನಿಂದ ಇವತ್ತು ನಿಮಗೆಲ್ಲಾ ಅವಮಾನ ಆಯ್ತು. ಅದೆಲ್ಲವನ್ನೂ ಕೇಳಿಸಿಕೊಂಡೆ ನನ್ನಿಂದ ನಿಮಗೆಲ್ಲಾ ನೋವಾಗಿದೆ. ನನ್ನನ್ನು ಮರೆತು ಬಿಡಿ. ಇನ್ಯಾವತ್ತೂ ರೇವತಿಗೆ ನನ್ನಿಂದ ತೊಂದರೆಯಾಗಬಾರದು ಎಂದು ಹೇಳುತ್ತಾಳೆ. ಮಗಳ ಮಾತನ್ನು ಕೇಳಿ ಮನೆಯವರು ಶಾಕ್ ಆಗುತ್ತಾರೆ. ಅಲ್ಲಿಂದ ಲೀಲಾ ಹೊರಟು ಬಿಡುತ್ತಾಳೆ.

  ಮಹಾರಾಜ ಗೊಂಬೆಯ ಕತ್ತನ್ನೇ ಮುರಿದ ಸೌಭಾಗ್ಯ : ದಿಗಂತ್ ಈ ಸ್ಥಿತಿಗೆ ಯಾರುಕಾರಣ?ಮಹಾರಾಜ ಗೊಂಬೆಯ ಕತ್ತನ್ನೇ ಮುರಿದ ಸೌಭಾಗ್ಯ : ದಿಗಂತ್ ಈ ಸ್ಥಿತಿಗೆ ಯಾರುಕಾರಣ?

  ದುರ್ಗಾ ಪ್ಲಾನ್ ಸಕ್ಸಸ್ ಆಯ್ತಾ..?

  ದುರ್ಗಾ ಪ್ಲಾನ್ ಸಕ್ಸಸ್ ಆಯ್ತಾ..?

  ಇನ್ನು ಎಜೆ ಏನಾಯ್ತು.? ಯಾಕೆ ಹೀಗಿದ್ಯಾ..? ಎನಿ ಪ್ರಾಬ್ಲಮ್ ಎಂದು ಕೇಳುತ್ತಾನೆ. ಲೀಲಾ ಏನು ಇಲ್ಲ ಎನ್ನುತ್ತಾಳೆ. ನಂತರ ಎಜೆಗೆ ಲೀಲಾ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾಳೆ. ಇದನ್ನೆಲ್ಲಾ ಕೇಳಿ ಏಜೆ ಏನು ಹೇಳುತ್ತಾನೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಅಂತೂ ಇಂತೂ ದುರ್ಗಾ ಮಾಡಿದ ಪ್ಲಾನ್ ಸಕ್ಸಸ್ ಆಗಿದೆ. ಎಜೆ ಇದಕ್ಕೆ ಕಾರಣರಾರು ಎಂದು ಕಂಡು ಹಿಡಿಯುತ್ತಾನಾ ಕಾದು ನೋಡಬೇಕಿದೆ.

  English summary
  leela feels bad for what happened in her house. And she said her parents to forget her.
  Thursday, September 29, 2022, 17:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X