Hitler Kalyana: ನಿಜಕ್ಕೂ ದುರ್ಗಾಳಿಗೆ ಕಿಶೋರ್ ಮೇಲೆ ಕೋಪ ಇದೆಯಾ..?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಕಿಡ್ನ್ಯಾಪ್ ಆಗಿದ್ದ ದುರ್ಗಾಳನ್ನು ಹೇಗೋ ಮಾಡಿ ಮನೆಗೆ ಕರೆದುಕೊಂಡು ಬರಲಾಗಿದೆ. ಆದರೆ, ದುರ್ಗಾ ಯಾರ ಜೊತೆಗೂ ಮಾತನಾಡುವುದೇ ಇಲ್ಲ.

ಮನೆಗೆ ಬಂದಾಗಿನಿಂದಲೂ ದುರ್ಗಾ ಮೌನವಾಗಿಯೇ ಇರುತ್ತಾಳೆ. ದುಃಖವನ್ನು ಗಂಟಲಿನಲ್ಲೇ ಇಟ್ಟುಕೊಂಡು ಸಂಕಟ ಪಡುತ್ತಿರುತ್ತಾಳೆ. ಯಾರು ಏನೇ ಪ್ರಶ್ನೆ ಮಾಡಿದರೂ ಉತ್ತರ ಕೊಡುವುದೇ ಇಲ್ಲ.

hitler kalyana serial 29th November episode written update

ಲೀಲಾ, ಸರಸ್ವತಿ, ಲಕ್ಷ್ಮೀ, ಎಜೆ, ಕಿಶೋರ್ ಎಲ್ಲರೂ ದುರ್ಗಾಳನ್ನು ಮಾತನಾಡಿಸಲು ಯತ್ನಿಸುತ್ತಾರೆ. ಆದರೆ, ದುರ್ಗಾ ತುಟಿ ಬಿಚ್ಚುವುದಿಲ್ಲ. ಒಂದೇ ಕಡೆ ದೃಷ್ಟಿ ಹರಿಸಿ ಕುಳಿತಿರುತ್ತಾಳೆ.

ದುರ್ಗಾ ಕಿಡ್ನ್ಯಾಪ್ ಸತ್ಯ ಹೇಳಿದ ಅಂತರಾ

ಕಣ್ಣೆದುರಿಗೆ ಕಿಶೋರ್ ಬಂದರೆ ದುರ್ಗಾ ಮುಖದಲ್ಲಿ ಬದಲಾವಣೆಗಳು ಕಾಣುತ್ತದೆ. ಅಂತರಾಳನ್ನು ನೋಡಿದರೆ ಬಹಳ ಗಾಬರಿಯಾಗುತ್ತಾಳೆ. ಪ್ರಾರ್ಥನಾಳಿಂದ ತೊಂದರೆಯಾಗಿದೆ ಎಂಬುದನ್ನು ಅರಿತಿರುವ ಲೀಲಾ, ದುರ್ಗಾಳಿಗೆ ಧೈರ್ಯ ಹೇಳುತ್ತಾಳೆ. ಅವಳೇ ನಿನ್ನನ್ನು ಕಿಡ್ನ್ಯಾಪ್ ಮಾಡಿಸಿದ್ದು ಎಂಬುದು ನನಗೆ ಗೊತ್ತು. ನೀನು ಒಂದು ಮಾತನಾಡು ಅವಳಿಗೆ ಪಾಠ ಕಲಿಸೋಣ ಎಂದು ಹೇಳುತ್ತಾಳೆ.

ಲೀಲಾಳಿಗೆ ಸತ್ಯ ಗೊತ್ತಾಯಿತು

ಅಂತರಾ, ಕೌಸಲ್ಯಳಿಗೆ ಫೊನ್ ಮಾಡುತ್ತಾಳೆ. ಆಗ ಲೀಲಾ ಮತ್ತೊಂದು ಫೋನ್‌ನಿಂದ ಲೈನ್‌ನಲ್ಲಿ ಇರುತ್ತಾಳೆ. ಅಂತರಾ ಹಾಗೂ ಕೌಸಲ್ಯ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಾಳೆ. ಅಂತರಾ ತಾನೇ ದುರ್ಗಾಳನ್ನು ಕಿಡ್ನ್ಯಾಪ್ ಮಾಡಿಸಿ, ಬಳಿಕ ತಾನೇ ಅವಳನ್ನು ಬಿಡಿಸಿಕೊಂಡು ಬಂದ ಸತ್ಯವನ್ನು ಹೇಳುತ್ತಾಳೆ. ಲೀಲಾಳಿಗೆ ಆಗ ಎಲ್ಲವೂ ಕನ್ಫರ್ಮ್ ಆಗುತ್ತದೆ.

hitler kalyana serial 29th November episode written update

ದೃಷ್ಟಿ ಕಾರ್ಯಕ್ರಮ ಇಟ್ಟುಕೊಂಡ ಲೀಲಾ

ಇನ್ನು ದುರ್ಗಾ ಯಾರ ಜೊತೆಗೂ ಮಾತನಾಡದಿರುವುದಕ್ಕೆ ಮನೆಯಲ್ಲಿ ಎಲ್ಲರೂ ಬೇಸರ ಮಾಡಿಕೊಂಡಿರುತ್ತಾರೆ. ವೈದ್ಯರನ್ನು ಕರೆಸಿ ದುರ್ಗಾಳನ್ನು ಪರೀಕ್ಷೆಗೆ ಒಳಪಡಿಸುತ್ತಾರೆ. ಆದರೆ, ಪ್ರಯೋಜನವಾಗುವುದಿಲ್ಲ. ದುರ್ಗಾ ಶಾಕ್ ನಲ್ಲಿ ಇದ್ದಾಳೆ. ಹಾಗಾಗಿ ಹೀಗಿರಬಹುದು. ದಿನ ಕಳೆದಂತೆ ಆಕೆಯ ಮನಸ್ಥಿತಿಯೂ ಸರಿ ಹೋಗಬಹುದು ಎಂದು ಹೇಳುತ್ತಾರೆ. ಅಲ್ಲದೇ, ಆದಷ್ಟೂ ಜಾಗ ಬದಲಾವಣೆಯೂ ದುರ್ಗಾಳಿಗೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ. ಆಗ ಕಿಶೋರ್ ನಾನು ದುರ್ಗಾ ದೂರ ಹೋಗುತ್ತೇವೆ ಎಂದಾಗ ದುರ್ಗಾ, ಎಜೆ ಕೈ ಹಿಡಿದು ತಾನು ಇಲ್ಲೇ ಇರಬೇಕು ಎಂಬಂತೆ ನಡೆದುಕೊಳ್ಳುತ್ತಾಳೆ. ಆದರೆ ಅದು ಯಾರಿಗೂ ಅರ್ಥವಾಗುವುದಿಲ್ಲ. ಲೀಲಾ, ದುರ್ಗಾಳಿಗೆ ದೃಷ್ಟಿ ಆಗಿರಬಹುದು ಎಂದು ಮನೆಯಲ್ಲಿ ದೃಷ್ಟಿ ತೆಗೆಯುವ ಕಾರ್ಯಕ್ರಮವನ್ನು ಇಟ್ಟುಕೊಂಡಿರುತ್ತಾಳೆ.

ಎಜೆ ಶತ್ರು ಆಗಿರುವ ಕಿಶೋರ್

ದುರ್ಗಾಳನ್ನು ಕಿಶೋರ್ ರೆಡಿ ಮಾಡುತ್ತಿರುತ್ತಾನೆ. ಆಗ ದುರ್ಗಾ, ಕಿಶೋರ್ ಮೇಲೆ ಕೋಪ ತೋರಿಸುತ್ತಾಳೆ. ಕಿಶೋರ್‌ನನ್ನು ದೂರ ತಳ್ಳುತ್ತಾಳೆ. ಇದನ್ನು ಸರಸ್ವತಿ ಮತ್ತು ಲಕ್ಷ್ಮೀ ನೋಡುತ್ತಾರೆ. ಏನಾಯ್ತು ಎಂದು ವಿಚಾರಿಸಿದ್ದಕ್ಕೆ, ಕಿಶೋರ್ ಗೊತ್ತಿಲ್ಲ. ಆಗಾಗ ಹೀಗೆ ನಡೆದುಕೊಳ್ಳುತ್ತಾಳೆ. ನನ್ನನ್ನು ಅಪರಿಚಿತನಂತೆ ನೋಡುತ್ತಾಳೆ. ಆದರೆ, ಎಜೆಗೆ ಹೇಳಬೇಡಿ ಎಂದು ಕಿಶೋರ್ ಕೇಳಿಕೊಳ್ಳುತ್ತಾನೆ. ಅವರು ಹೋದ ಬಳಿಕ ಕಿಶೋರ್, ದುರ್ಗಾಳ ಕೈಗೆ ಬಳೆ ತೊಡಿಸಲು ಮುಂದಾಗುತ್ತಾನೆ. ಆಗ ಕೈಯನ್ನು ಜೋರಾಗಿ ಒತ್ತಿ ನೋವು ಮಾಡುವುದರ ಜೊತೆಗೆ ಬಳೆಗಳನ್ನು ಒಡೆದು ಹಾಕುತ್ತಾನೆ. ಎಜೆಗೂ ಇದೇ ಪರಿಸ್ಥಿತಿ ಬರುತ್ತೆ ನೋಡುತ್ತಿರು ಎಂದು ದುರ್ಗಾ ಮುಂದೆ ಕೂಗಾಡಿ ತಾನೇ ಎಜೆ ಶತ್ರು ಎಂದು ತೋರಿಸಿಕೊಳ್ಳುತ್ತಾನೆ.

ಪ್ರೇಕ್ಷಕರ ಅನುಮಾನ ನಿಜ

ಧಾರಾವಾಹಿಯಲ್ಲಿ ಕಿಶೋರ್ ಎಂಟ್ರಿ ಆದಾಗಿನಿಂದಲೂ ಪ್ರೇಕ್ಷಕರು ಕೂಡ ಈತನೇ ಶತ್ರು ಇರಬೇಕು ಎಂದು ಗೆಸ್ ಮಾಡುತ್ತಿದ್ದರು. ಯಾಕೆಂದರೆ ಅಂತರಾಳಿಗೆ ಆಗಾಗ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೂ ಕಿಶೋರ್ ಎಂದು ಪ್ರೇಕ್ಷಕರು ಅನುಮಾನಿಸಿದ್ದರು. ಈಗ ತಾನೇ ದುರ್ಗಾ ಬಳಿ ಹೀಗೆ ನಡೆದುಕೊಂಡಿರುವುದು ನೋಡಿ ಪ್ರೇಕ್ಷಕರಿಗೆ ತಮ್ಮ ಗೆಸ್ ನಿಜ ಎಂದು ತಿಳಿದು ಬಂದಿದೆ. ದುರ್ಗಾಳಿಗೂ ತನ್ನ ಪತಿಯ ಬಂಡವಾಳ ಗೊತ್ತಾಗಿರುವುದಕ್ಕೆ, ಸತ್ಯವನ್ನೂ ಹೇಳಲಾಗದೇ ಒದ್ದಾಡುತ್ತಿದ್ದಾಳೆ.

More from Filmibeat

English summary
hitler kalyana Kannada serial today episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X