Hitler Kalyana: ಅಂತರಾ ಬಂದಾಯ್ತು.. ಲೀಲಾ ಮದುವೆ ನಿಂತಾಯ್ತು: ಮುಂದೇನು..?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಹಾಗೂ ಲೀಲಾ ಮದುವೆ ನಡೆಯುತ್ತಿದೆ. ಲೀಲಾ ಅಂತೂ ತಾನು ಕಂಡ ಕನಸು ನನಸಾಗುತ್ತಿದೆ ಎಂದು ಖುಷಿಯಾಗಿದ್ದಾಳೆ. ಗೋಲ್ಡೆನ್ ಸೀರೆ ಉಟ್ಟಿರುವ ಲೀಲಾ ಚಿನ್ನದ ಗೊಂಬೆಯಂತೆ ಕಂಗೊಳಿಸುತ್ತಿದ್ದಾಳೆ. ಲೀಲಾಳನ್ನು ನೋಡಿ ಅಜ್ಜಿಯೂ ಖುಷಿಪಟ್ಟಿದ್ದಾರೆ. ಮಾಂಗಲ್ಯಧಾರಣೆ ಆಗುವವರೆಗೂ ಯಾವುದೇ ಅನಾಹುತ ನಡೆಯದೇ ಇರಲಿ ಎಂದು ಕ್ಷಣ ಕ್ಷಣವೂ ಆತಂಕದಲ್ಲೇ ಕಳೆಯುತ್ತಿದ್ದಾಳೆ.
ದುರ್ಗಾ, ಅಂತರಾಳನ್ನು ಮಂಟಪಕ್ಕೂ ಕರೆ ತಂದಿದ್ದು, ಮದುವೆ ನಡೆಯುವ ಮುನ್ನವೇ ಎಜೆ ಕಣ್ಣಿಗೆ ಅಂತರಾ ಬಿದ್ದರೆ ಸಾಕು ಎಂದು ಹಾತೊರೆಯುತ್ತಿದ್ದಾಳೆ. ಸರಸ್ವತಿ ಇದರ ಬಗ್ಗೆ ಸಣ್ಣ ಸುಳಿವೂ ಇಲ್ಲ. ಆದ್ದರಿಂದ ದುರ್ಗಾ ಅಕ್ಕನ ಮೇಲೆ ಬೇಸರವಿದೆ. ಲೀಲಾಳನ್ನು ಅತ್ತೆ ಎಂದು ಒಪ್ಪಿಕೊಳ್ಳಬೇಕಲ್ಲ ಎಂದು ಒದ್ದಾಡುತ್ತಿದ್ದಾಳೆ. ಆದರೆ, ದುರ್ಗಾ ತನ್ನ ಪ್ಲಾನ್ ಸಕ್ಸಸ್ ಆಗುತ್ತದೆ. ಈ ಮದುವೆ ನಿಲ್ಲುತ್ತದೆ ಎಂಬ ಖುಷಿಯಲ್ಲಿದ್ದಾಳೆ. ಸರಸ್ವತಿಗೆ ದುರ್ಗಾಳ ನಡೆ ಅರ್ಥವಾಗುತ್ತಿಲ್ಲ.

ಮದುವೆಯ ಮನೆಯಲ್ಲಿ ಅಂತರಾಳನ್ನು ಲಕ್ಷ್ಮೀ, ವಿಶ್ವರೂಪ್ ಕೂಡ ನೋಡಿದ್ದಾರೆ. ಲಕ್ಷ್ಮೀಗಂತೂ ಈ ಸಂದರ್ಭವನ್ನು ಹೇಗೆ ನಿಭಾಯಿಸುವುದು ಎಂಬುದೇ ಅರ್ಥವಾಗದೇ, ಯಾರಿಗೂ ಹೇಳಲಾಗದೇ, ಒದ್ದಾಡುತ್ತಿದ್ದಾಳೆ. ಯಾರಿಗೂ ಹೇಳದಂತೆ, ಅಂತರಾ ಯಾರ ಕಣ್ಣಿಗೂ ಬೀಳದ ಹಾಗೆ ಈಗ ಮದುವೆ ಆಗುವವರೆಗೂ ಸಂದರ್ಭವನ್ನು ನಿಭಾಯಿಸಬೇಕು. ಆದರೆ, ಹಾಗೆ ಸಂದರ್ಭವನ್ನು ನಿಭಾಯಿಸಲು ಲಕ್ಷ್ಮೀ ಕೈನಲ್ಲಿ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಅಂತರಾಳನ್ನು ವಿಶ್ವರೂಪ್ ಕೂಡ ನೋಡಿದ್ದು, ಇಬ್ಬರೂ ಸೇರಿ ಅಂತರಾಳನ್ನು ರೂಮಿನಲ್ಲಿ ಕೂಡಿ ಹಾಕುತ್ತಾರೆ.
ಅಂತರಾ ಅದು ಹೇಗೋ ಎಜೆ, ಲೀಲಾಳಿಗೆ ತಾಳಿ ಕಟ್ಟುವ ಸಮಯಕ್ಕೆ ಸರಿಯಾಗಿ ಬರುತ್ತಾಳೆ. ಅಂತರಾಳನ್ನು ನೋಡಿದ ಎಜೆ ತಾಳಿಯನ್ನು ಬಿಟ್ಟು, ಅಂತರಾ ಬಳಿ ಬರುತ್ತಾನೆ. ಅಂತರಾಳಿಗೆ ಎಜೆಯನ್ನು ನೋಡಿ ತಲೆ ತಿರುಗಿ ಬೀಳುತ್ತಾಳೆ. ಎಜೆ ಮದುವೆಯನ್ನು ನಿಲ್ಲಿಸಿ, ಅಂತರಾಳನ್ನು ಕರೆದುಕೊಂಡು ಮನೆಗೆ ಬರುತ್ತಾನೆ. ವೈದ್ಯರಿಗೆ ತೋರಿಸಿದಾಗ, ಅಂತರಾಳ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಹಳೆಯದೆಲ್ಲಾ ಮರೆತು ಹೋಗಿದೆ. ಆಕೆಗೆ ಶಾಕ್ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತಾರೆ.
ಇದರಿಂದ ಗಾಬರಿಯಾಗಿರುವ ಎಜೆ, ಅಂತರಾಳಿಗೆ ಏನೂ ಆಗದಂತೆ ನೋಡಿಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾನೆ. ಇದೇ ವಿಚಾರವನ್ನೆ ಬಂದು ಎಲ್ಲರಿಗೂ ಹೇಳುತ್ತಾನೆ. ಇನ್ನು ಲೀಲಾ ತಂದೆ -ತಾಯಿ ಜೊತೆಗೆ ಮಾತನಾಡುವ ಎಜೆ ಲೀಲಾಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳುತ್ತಾನೆ. ಆದರೆ, ಲೀಲಾಳನ್ನು ಹೆಂಡತಿಯಾಗಿ ಸ್ವೀಕರಿಸಲು ಬಯಸುವುದಿಲ್ಲ. ಇದರಿಂದ ಕೌಸಲ್ಯ ಮತ್ತು ರಾಮಚಂದ್ರ ಇಬ್ಬರೂ ಬೇಸರ ಮಾಡಿಕೊಳ್ಳುತ್ತಾರೆ.

ಇನ್ನು ದುರ್ಗಾ, ಲೀಲಾ ಮೂಲೆಯಲ್ಲಿ ಕುಳಿತು ಅಳುತ್ತಿರುತ್ತಾಳೆ ಎಂದು ಭಾವಿಸುತ್ತಾಳೆ. ಆದರೆ, ಲೀಲಾ ಎಲ್ಲರಿಗೂ ಟೀ ತಂದು ಕೊಟ್ಟು, ಅವಳೇ ಸಮಾಧಾನ ಮಾಡುತ್ತಾಳೆ. ಅಡುಗೆ ಮಾಡಿ ಎಲ್ಲರಿಗೂ ಊಟ ಮಾಡುವಂತೆ ಹೇಳುತ್ತಾಳೆ. ಅಜ್ಜಿಗೆ ಈ ಪರಿಸ್ಥಿತಿಯಿಂದ ಶಾಕ್ ಆಗಿರುತ್ತದೆ. ಅಲ್ಲದೇ, ಲೀಲಾಳಿಗೆ ಅನ್ಯಾಯವಾಯಿತಲ್ಲ ಎಂದು ಬೇಸರವಾಗಿರುತ್ತದೆ. ಆದರೆ, ಲೀಲಾ ಅಜ್ಜಿಗೆ ಊಟ ಮಾಡಿಸಲು ಮುಂದಾಗುತ್ತಾಳೆ. ಆದರೆ, ಅಜ್ಜಿ ಊಟ ಮಾಡುವುದಕ್ಕೆ ಬಯಸುವುದಿಲ್ಲ. ಅಲ್ಲದೇ, ಲೀಲಾಗೆ ಲಕ್ಷ್ಮೀ ಹಾಗೂ ಅಜ್ಜಿ ಇಬ್ಬರೂ ಬೈಯುತ್ತಾರೆ.
ಅಂತರಾ ಬಂದಿರುವುದು ನಿನಗೆ ಬೇಸರವಾಗಿಲ್ವಾ ಎಂದು ಕೇಳುತ್ತಾರೆ. ಅದಕ್ಕೆ ಲೀಲಾ ಇಲ್ಲ. ಅಂತರಾ ಅಕ್ಕ ಸಿಕ್ಕಿರುವುದು ಖುಷಿ ಇದೆ ಎಂಬಂತೆ ಮಾತನಾಡುತ್ತಾಳೆ. ಈಗ ಅಂತರಾ ಎಜೆ ಕಣ್ಣಿಗೆ ಬಿದ್ದಿರುವುದರಿಂದ ಲೀಲಾ ಬಾಳಲ್ಲಿ ಎದ್ದಿರುವ ಈ ಬಿರುಗಾಳಿ ಈಗಲೇ ಶಮನವಾಗುತ್ತಾ..? ಇಲ್ಲ ದುರ್ಗಾ ಲೀಲಾಳನ್ನು ಸಂಪೂರ್ಣವಾಗಿ ಬೀದಿಗೆ ತಳ್ಳುತ್ತಾಳಾ ಕಾದು ನೋಡಬೇಕಿದೆ.


Click it and Unblock the Notifications











