ಗೊಂದಲದ ಸ್ಥಿತಿಯಲ್ಲಿ ಲೀಲಾ: ವಿಕ್ರಮ್ ವಾರ್ನಿಂಗ್ ಕೊಟ್ಟಿದ್ಯಾಕೆ...?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ತನ್ನ ತವರು ಮನೆಯಲ್ಲಾದ ನೋವಿನ ಸಂಗತಿಯನ್ನು ನೆನೆದು ಬೇಸರದಲ್ಲಿರುತ್ತಾಳೆ. ಇದನ್ನು ನೋಡಿದ ಎಜೆ ಕೇಳುತ್ತಾನೆ. ಆಗ ಲೀಲಾ ನಡೆದ ಘಟನೆಯನ್ನು ವಿವರವಾಗಿ ಹೇಳಿಬಿಡುತ್ತಾಳೆ. ಇದೆಲ್ಲವನ್ನೂ ಕೇಳಿಸಿಕೊಂಡ ಎಜೆ ಒಂದು ನಿರ್ಧಾರಕ್ಕೆ ಬರುತ್ತಾನೆ.

ಎಜೆ ರಾಮಚಂದ್ರ ಅವರಿಗೆ ಕರೆ ಮಾಡಿ ಮಾತನಾಡುತ್ತಾನೆ. ಇನ್ನೊಂದು ತಿಂಗಳಲ್ಲಿ ನಿಮ್ಮ ಮಗಳು ರೇವತಿಯ ಮದುವೆ ನಡೆಯುತ್ತೆ. ಇದಕ್ಕೆ ಎಲ್ಲಾ ವ್ಯವಸ್ಥೆಯನ್ನೂ ನಾನೇ ಮುಂದೆ ನಿಂತು ಮಾಡುತ್ತೀನಿ. ರೇವತಿ ಹಾಗೂ ನೀವು ಒಪ್ಪುವಂತಹ ಹುಡುಗನನ್ನೇ ಕರೆದುಕೊಂಡು ಬರುತ್ತೀನಿ ಎಂದು ಮಾತುಕೊಡುತ್ತಾನೆ.

ಎಜೆ ಮಾತುಗಳನ್ನು ಕೇಳಿ ಲೀಲಾ ಮನೆಯವರೆಲ್ಲರೂ ಶಾಕ್ ಆಗುತ್ತಾರೆ. ಅಲ್ಲದೇ ಎಲ್ಲರೂ ಖುಷಿ ಪಡುತ್ತಾರೆ. ಲೀಲಾ ಕೂಡ ನೀವು ನಿಜವಾಗಲೂ ನಮ್ಮ ಮನೆಯ ದೇವರು ಎಜೆ ಎಂದು ಹೇಳುತ್ತಾಳೆ

ನವರಾತ್ರಿ ಹಬ್ಬದ ಬಗ್ಗೆ ಮಾತನಾಡಿದ ಲೀಲಾ

ನವರಾತ್ರಿ ಹಬ್ಬದ ಬಗ್ಗೆ ಮಾತನಾಡಿದ ಲೀಲಾ

ಲೀಲಾ ಆಸೆಯಿಂದ ನವರಾತ್ರಿ ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದುಕೊಂಡಿರುತ್ತಾಳೆ. ಹಾಗಾಗಿ ಎಜೆ ಬಳಿ ಬಂದು ದಸರಾ ಹಬ್ಬ ಹತ್ತಿರ ಬರುತ್ತಿದೆ. ಆದರೆ ಅಜ್ಜಿ ಇಲ್ಲ. ಅದಕ್ಕೆ ಗೌರಿ ಹಬ್ಬ ಮಾಡಿದಂತೆ ನವರಾತ್ರಿಗೂ ಎಲ್ಲಾ ತಯಾರಿ ಮಾಡಿಕೊಳ್ಳಲಾ ಎಂದು ಕೇಳುತ್ತಾಳೆ. ಆಗ ಎಜೆ ಕೋಪದಿಂದ ಸಿಟ್ಟು ಮಾಡಿಕೊಳ್ಳುತ್ತಾನೆ. ಬೇಡ ಎಂದು ಎಜೆ ಹೇಳಿದರೂ ಅರ್ಥ ಮಾಡಿಕೊಳ್ಳದ ಲೀಲಾ, ಮತ್ತೆ ಯಾವುದೇ ಎಡವಟ್ಟು ಮಾಡದೆ ಹಬ್ಬಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇನೆ. ಪ್ಲೀಸ್ ಇಲ್ಲ ಎನ್ನಬೇಡಿ ಎನ್ನುತ್ತಾಳೆ. ಆಗ ಎಜೆ ಜೋರಾಗಿ ಕೂಗಾಡುತ್ತಾನೆ. ಭಯಗೊಂಡ ಲೀಲಾ ಸೀದಾ ಅಜ್ಜಿಗೆ ಕರೆ ಮಾಡಿ ಕೇಳುತ್ತಾಳೆ. ಆದರೆ ಅಜ್ಜಿ ಕಾರಣ ಕೊಡುವುದಿಲ್ಲ. ದಸರಾ ಬಗ್ಗೆ ಎಜೆ ಬಳಿ ಏನನ್ನೂ ಹೇಳಬೇಡ ಎಂದಷ್ಟೇ ಹೇಳುತ್ತಾರೆ.

ವಾಡ್ರೂಬ್‌ನಲ್ಲಿ ಗೊಂಬೆಗಳನ್ನಿಟ್ಟ ಸರಸ್ವತಿ

ವಾಡ್ರೂಬ್‌ನಲ್ಲಿ ಗೊಂಬೆಗಳನ್ನಿಟ್ಟ ಸರಸ್ವತಿ

ಇನ್ನು ಸರಸ್ವತಿ ತನ್ನ ವಾಡ್ರೂಬ್ ನಲ್ಲಿ ಗೊಂಬೆಗಳನ್ನು ಇಟ್ಟು ಲೈಟಿಂಗ್ಸ್ ಹಾಕಿದ್ದಾಳೆ. ದುರ್ಗಾಳನ್ನು ಕರೆದುಕೊಂಡು ಬಂದು ತೋರಿಸಿದ್ದಾಳೆ. ದುರ್ಗಾ ಗೊಂಬೆಗಳನ್ನು ನೋಡಿ, ಸರಸ್ವತಿಗೆ ಬೈಯುತ್ತಾಳೆ. ಎಜೆಗೆ ನೀನು ಹೀಗೆ ಗೊಂಬೆಗಳನ್ನು ಇಟ್ಟಿರುವುದು ಗೊತ್ತಾದರೆ ಕಷ್ಟವಾಗುತ್ತದೆ ಎಂದು ಹೇಳುತ್ತಾಳೆ. ಸರಸ್ವತಿ ಅವರಿಗೆ ಗೊತ್ತಾಗಲ್ಲ ಬಿಡಿ ಎಂದು ಹೇಳುತ್ತಾಳೆ. ಇನ್ನು ಲೀಲಾಗೆ ವಿಕ್ರಮ್ ಮತ್ತೆ ಫೋನ್ ಮಾಡಿದ್ದಾನೆ. ಎಜೆಯನ್ನು ಉಳಿಸಿಕೊಳ್ಳಬೇಕು ಎಂದರೆ ನನ್ನನ್ನು ಭೇಟಿ ಮಾಡು ಎಂದು ಹೆದರಿಸಿದ್ದಾನೆ.

ದಸರಾ ಹಬ್ಬಕ್ಕೆ ತಯಾರಿಸಿ ನಡೆಸಿ ಎಂದ ಎಜೆ

ದಸರಾ ಹಬ್ಬಕ್ಕೆ ತಯಾರಿಸಿ ನಡೆಸಿ ಎಂದ ಎಜೆ

ಈ ಮಾತನ್ನು ಕೇಳಿ ಹೆದರಿದ ಲೀಲಾ ಸೀದಾ ಎಜೆ ಬಳಿ ಹೋಗಿ ಮಾತನಾಡಿದ್ದಾಳೆ. ಎಜೆ ಏನಾಯ್ತು ಎಂದು ಕೇಳುತ್ತಾನೆ. ಆಗ ಲೀಲಾ ಇಷ್ಟು ದಿನ ನನಗೆ ನಮ್ಮ ಮನೆಯವರು ಬಿಟ್ಟರೆ, ಇಲ್ಲಿಗೆ ಬಂದ ಮೇಲೆ ಅಜ್ಜಿ ಕ್ಲೋಸ್ ಆಗಿದ್ದರು. ಇಷ್ಟು ದಿನ ನನಗೆ ಫ್ರೆಂಡ್ ಅಂತ ಯಾರು ಇರಲಿಲ್ಲ. ಬಟ್ ಈಗ ನನಗೆ ಬೆಸ್ಟ್ ಫ್ರೆಂಡ್ ಎಂದರೆ ಅದು ನೀವೆ ಎಜೆ. ನನಗೆ ಏನಾದರೂ ಆದರೆ ಹೆಲ್ಪ್ ಮಾಡ್ತೀರಾ ಎಂದು ಕೇಳುತ್ತಾಳೆ. ಆಗ ಎಜೆ ಖಂಡಿತಾ ಎಂದು ಹೇಳುತ್ತಾನೆ. ಇನ್ನು ಬೆಳಗ್ಗೆ ಎದ್ದ ಮೇಲೆ ಎಜೆ ಎಲ್ಲರನ್ನೂ ಕರೆದು, ಮನೆಯಲ್ಲಿ ದಸರಾ ಹಬ್ಬವನ್ನು ಆಚರಿಸುವಂತೆ ಎಲ್ಲರಿಗೂ ಹೇಳಿದ್ದಾನೆ. ಅಷ್ಟೇ ಅಲ್ಲದೇ ಯಾರೂ ಮನೆಯಿಂದ ಎಲ್ಲೂ ಹೋಗಬಾರದು ಎಂದು ಎಜೆ ಹೇಳಿದ್ದಾನೆ.

ಲೀಲಾಗೆ ವಾರ್ನ್ ಮಾಡಿದ ವಿಕ್ರಮ್

ಲೀಲಾಗೆ ವಾರ್ನ್ ಮಾಡಿದ ವಿಕ್ರಮ್

ಎಜೆ ಮಾತುಗಳನ್ನು ಕೇಳಿದ ದುರ್ಗಾ ಮತ್ತು ಸರಸ್ವತಿ ಇಬ್ಬರೂ ಶಾಕ್ ಆಗಿದ್ದಾರೆ. ನಾವೆಲ್ಲಾ ಕೇಳಿಸಿಕೊಂಡಿದ್ದು ನಿಜವೇ ಎಂದು ಮಾತನಾಡಿಕೊಂಡಿದ್ದಾರೆ. ಎಜೆಯಲ್ಲಿನ ಈ ಬದಲಾವಣೆ ಎಲ್ಲರಿಗೂ ಶಾಕ್ ಆಗಿದೆ. ಈ ನಡುವೆಯೇ ವಿಕ್ರಮ್ ಫೋನ್ ಮಾಡಿದ್ದಾನೆ. ಇವತ್ತು ನನ್ನನ್ನ ಮೀಟ್ ಮಾಡಿಲ್ಲ ಅಂದರೆ, ಮುಂದಾಗುವ ಪರಿಣಾಮವನ್ನು ನೀನೇ ಎದುರಿಸಬೇಕು ಎಂದು ವಾರ್ನಿಂಗ್ ಕೊಟ್ಟಿದ್ದಾನೆ. ಆದರೆ ಎಜೆ ಯಾರೂ ಮನೆಯಿಂದ ಹೊರಗೆ ಹೋಗಬಾರದು ಎಂದು ಹೇಳಿದ್ದಾನೆ. ಈಗ ಲೀಲಾ ಏನು ಮಾಡುತ್ತಾಳೋ ಎಂಬುದೇ ಕುತೂಹಲವಾಗಿದೆ.

More from Filmibeat

English summary
AJ plans to celebrate dasara festival at home for leela. Again and again Vikram blackmails leela. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X