ಉಲ್ಟಾ ಹೊಡೆದ ಅಂತರಾ ಪ್ಲ್ಯಾನ್ : ಲೀಲಾ ವಾಪಸ್ ಮನೆಗೆ ಬಂದಿದ್ದೇಕೆ..?
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ದುರ್ಗಾ ಮನೆಗೆ ಬಂದು ಲೀಲಾ ಬಳಿ ಅಂತರಾ ಬಗ್ಗೆ ಎಲ್ಲಾ ಸತ್ಯ ಹೇಳಿದರೂ ನಂಬಿರುವುದಿಲ್ಲ. ಆದರೆ, ಸದಾ ಲೀಲಾ ಎಜೆ ಬಗ್ಗೆ ಹಾಗೂ ಅವಳ ಮನೆಯ ಬಗ್ಗೆಯೇ ಯೋಚಿಸುತ್ತಿರುತ್ತಾಳೆ. ಅಜ್ಜಿ, ಎಜೆಯನ್ನು ಬಿಟ್ಟಿರಲಾರದೇ ಒಬ್ಬಳೇ ಮನದಲ್ಲಿ ಕೊರಗುತ್ತಿರುತ್ತಾಳೆ.
ಇನ್ನು ಅಂತರಾ ಹೇಗಿದ್ದರೂ ಲೀಲಾ ಮನೆ ಬಿಟ್ಟು ಹೋಗಿದ್ದಾಗಿದೆ. ಈ ಸಮಯವನ್ನು ಉಪಯೋಗಿಸಿಕೊಂಡು ಎಜೆಗೆ ಇನ್ನಷ್ಟು ಹತ್ತಿರವಾಗಬೇಕು ಎಂದು ಪ್ರಯತ್ನಿಸುತ್ತಾಳೆ.

ಅಂತರಾಗೆ ತಾಳಿ ಕಟ್ಟದ ಎಜೆ
ಎಜೆಗೆ ಹತ್ತಿರವಾಗಲು ಅಂತರಾ ಒಂದು ಪ್ಲ್ಯಾನ್ ಮಾಡುತ್ತಾಳೆ. ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅಲ್ಲೇ ತಾಳಿ ಕಟ್ಟಿಸಿಕೊಳ್ಳಬೇಕು. ಆಗ ಅಧಿಕೃತವಾಗಿ ತಾನು ಎಜೆ ಹೆಂಡತಿಯಾಗುತ್ತೇನೆ ಎಂದು. ಹೀಗಾಗಿ ಅಂತರಾ ಎಜೆ, ಅಜ್ಜಿ, ಸರಸ್ವತಿ ಹಾಗೂ ರೂಪಾಳನ್ನು ಕರೆದುಕೊಂಡು ಹೋಗಿರುತ್ತಾಲೆಳೆ. ದೇವಸ್ಥಾನದಲ್ಲಿ ಪೂಜೆ ಮುಗಿದ ಮೇಲೆ. ತನಗೆ ತಾಳಿ ಕಟ್ಟುವಂತೆ ಎಜೆಗೆ ಹೇಳುತ್ತಾಳೆ.
ನಾನು ನಿನ್ನ ಹೆಂಡತಿಯೇ ಆಗಿದ್ದರೂ ನನ್ನ ಕೊರಳಲ್ಲಿ ತಾಳಿ ಇಲ್ಲ. ಇದರಿಂದ ನನಗೆ ಬಹಳ ಸಮಸ್ಯೆ ಆಗುತ್ತಿದೆ ಎನಿಸುತ್ತಿದೆ. ದಯಮಾಡಿ ತಾಳಿ ಕಟ್ಟಿ ಎಂದು ಹೇಳುತ್ತಾಳೆ. ಮನೆಯಲ್ಲಿ ಎಲ್ಲರೂ ಇದಕ್ಕೆ ಒಪ್ಪುವಂತೆಯೂ ಮಾಡುತ್ತಾಳೆ. ಅಜ್ಜಿ, ರೂಪ ಮನದಲ್ಲೇ ಎಜೆ ಅಂತರಾ ಕೊರಳಿಗೆ ತಾಳಿ ಕಟ್ಟುವುದು ಬೇಡ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿರುತ್ತಾರೆ.

ಎಜೆ ಮನೆಗೆ ಲೀಲಾ ವಾಪಸ್
ಅದೇ ವೇಳೆಗೆ ಅಲ್ಲಿಗೆ ಲೀಲಾ ಬರುತ್ತಾಳೆ. ಲೀಲಾ ಎಜೆ ಅಂತರಾಳಿಗೆ ತಾಳಿ ಕಟ್ಟುವುದನ್ನು ಮರೆಯಲ್ಲಿ ನಿಂತು ನೋಡುತ್ತಿರುತ್ತಾಳೆ. ಅಜ್ಜಿ ತಲೆಸುತ್ತು ಬಂದಂತಾಗಿ ಬೀಳಲು ಮುಂದಾಗುತ್ತಾರೆ. ಆಗ ಲೀಲಾ ಬಂದು ಅಜ್ಜಿಯನ್ನು ಹಿಡಿದುಕೊಳ್ಳುತ್ತಾಳೆ. ಎಜೆ ಕೂಡ ತಾಳಿಯನ್ನು ಕೈಬಿಟ್ಟು ಅಜ್ಜಿಯತ್ತ ಗಮನ ಹರಿಸುತ್ತಾನೆ. ಆಗ ಅಂತರಾ ಅದೆಲ್ಲಾ ಬಿಟ್ಟು ತಾಳಿ ಕಟ್ಟು ಎಂದು ಬಲವಂತ ಮಾಡಿದರೂ ಎಜೆ ಬಂದು ಬಿಡುತ್ತಾನೆ.
ಇನ್ನು, ರೂಪಾ ಲೀಲಾಳಿಗೆ ಬುದ್ಧಿ ಹೇಳುತ್ತಾಳೆ. ನೀವು ಆ ಮನೆಯಲ್ಲಿ ಇಲ್ಲ ಎಂದು ಅಜ್ಜಿ ನಿತ್ಯ ಕೊರಗುತ್ತಿದ್ದಾರೆ. ಇನ್ನು ಸ್ವಲ್ಪ ದಿನ ಕಳೆದರೆ, ಅಜ್ಜಿ ಈ ಕೊರಗಿನಲ್ಲೇ ಸಾಯುತ್ತಾರೆ. ಅದಕ್ಕೆಲ್ಲಾ ಅವಕಾಶ ಮಾಡಿಕೊಡಬೇಡಿ ಎಂದು ಹೇಳಿ ವಾಪಸ್ ಎಜೆ ಮನೆಗೆ ಬರುವಂತೆ ಮಾಡುತ್ತಾಳೆ. ಲೀಲಾ ಕೂಡ ಅಜ್ಜಿಯ ಒಳಿತಿಗಾಗಿ ವಾಪಸ್ ಬರುತ್ತಾಳೆ.
ದುರ್ಗಾಳಿಗೆ ಲೀಲಾ ಟಾಸ್ಕ್
ಲೀಲಾ ವಾಪಸ್ ಮನೆಗೆ ಬಂದಿದ್ದಕ್ಕೆ ದುರ್ಗಾ ಫುಲ್ ಖುಷಿ ಪಡುತ್ತಾಳೆ. ಲೀಲಾ ಬಳಿ ಥ್ಯಾಂಕ್ಸ್ ಕೇಳಿ, ಅಂತರಾಳನ್ನು ಮನೆಯಿಂದ ಹೊರಗೆ ಹಾಕಬೇಕು. ಈ ಮನೆಗೆ ನೀವೇ ಸರಿಯಾದ ಸೊಸೆ. ನಾನು ನಿಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದೆ ಎಂದು ಹೇಳುತ್ತಾಳೆ. ಆದರೆ, ದುರ್ಗಾ ಮಾತನ್ನು ಲೀಲಾ ನಂಬುವುದಿಲ್ಲ. ಹಾಗಾಗಿ ಲೀಲಾ ಅಂತರಾ ಅಕ್ಕ ಹೇಗೆ ಒಳ್ಳೆಯವರಲ್ಲ ಎಂಬುದನ್ನು ಪ್ರೂವ್ ಮಾಡು. ಆಗ ನಿನ್ನ ಮಾತನ್ನು ನಂಬುತ್ತೇನೆ ಎಂದು ಹೇಳುತ್ತಾಳೆ. ದುರ್ಗಾ ಇಷ್ಟು ಸಾಕು ನನಗೆ ಖಂಡಿತವಾಗಿಯೂ ನಾನು ಪ್ರೂವ್ ಮಾಡುತ್ತೇನೆ ಎಂದು ಹೇಳುತ್ತಾಳೆ.
ಕ್ಷಮೆ ಕೇಳಿದ ಅಂತರಾ
ಇನ್ನು ಅಂತರಾಳಿಗೆ ಎಜೆ ತಾಳಿ ಕಟ್ಟದಿದ್ದಕ್ಕೆ ತುಂಬಾ ಕೋಪ ಬಂದಿದೆ. ಒಬ್ಬಳೇ ಲೀಲಾ ಮೇಲೆ ಕೋಪ ಮಾಡಿಕೊಂಡು ರೂಮ್ ನಲ್ಲಿ ಇರುತ್ತಾಳೆ. ಆಗ, ಎಜೆ ಬಂದು ಅಮ್ಮನಿಗೆ ಹುಷಾರಿಲ್ಲ ಎಂದು ಗೊತ್ತಿದ್ದರೂ ಯಾಕಷ್ಟು ಬಲವಂತ ಮಾಡಿದೆ. ಆ ಸಮಯದಲ್ಲಿ ನಾನು ನಿನಗೆ ತಾಳಿ ಕಟ್ಟಬೇಕಿತ್ತಾ ಎಂದು ಪ್ರಶ್ನಿಸುತ್ತಾನೆ. ಆಗ ಅಂತರಾ ಪರಿಸ್ಥಿತಿಯಿಂದ ಜಾರಿಕೊಳ್ಳಲು ನನ್ನನ್ನು ಕ್ಷಮಿಸಿ. ನಾನು ಯಾಕೆ ಹಾಗೆ ಮಾಡಿದೆನೋ ಗೊತ್ತಿಲ್ಲ. ಎಂದು ಎಜೆ ಬಳಿ ಕ್ಷಮೆ ಕೇಳುತ್ತಾಳೆ.


Click it and Unblock the Notifications











