Hitler Kalyana: ಹೂವಾಗಿ ಬಂದು ಹಾವಾದ ಪ್ರಾರ್ಥನಾ: ದುರ್ಗಾಳಿಗೆ ಶುರು ಪೀಕಲಾಟ

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಪ್ರಾರ್ಥನಾ ಮನೆಗೆ ಬಂದು ಅಂತರಾಳಾಗಿ ಮಾರ್ಪಾಡಾಗಿದ್ದಾಳೆ. ಲೀಲಾಳನ್ನು ಎಜೆಯಿಂದ ದೂರ ಮಾಡಬೇಕು ಎಂದು ಆಸೆ ಪಟ್ಟಿದ್ದ ದುರ್ಗಾ ಆಸೆ ಪ್ರಾರ್ಥನಾ ಮೂಲಕ ನೆರವೇರುತ್ತಿದೆ. ಮನೆಯಲ್ಲಿ ದುರ್ಗಾ ಹಾಗೂ ಸರು ಎಲ್ಲರನ್ನು ಎದುರು ಹಾಕಿಕೊಂಡಾದರೂ ಸರಿ, ಲೀಲಾಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ತೀರ್ಮಾನಿಸಿದ್ದಾರೆ.

ಈಗ ಪ್ರಾರ್ಥನಾಳಿಗೂ ಮನೆಯಲ್ಲಿ ಎಲ್ಲರೂ ತನ್ನನ್ನು ಅಂತರಾ ಎಂದು ನಂಬಿರುವುದು ಪ್ಲಸ್ ಪಾಯಿಂಟ್ ಆಗಿದೆ. ಹೀಗಾಗಿ ಅಭಿ ಹಾಗೂ ಅವನ ಆಸ್ತಿಯನ್ನು ತನ್ನ ವಶಕ್ಕೆ ಪಡೆಯಬೇಕು ಎಂದು ನಿರ್ಧರಿಸಿದ್ದಾಳೆ. ಹೀಗಾಗಿ ಈಗ ಲೀಲಾಳನ್ನು ಎಜೆಯಿಂದ ದೂರ ಇಡಲು ಪ್ರಯತ್ನಿಸುತ್ತಿದ್ದಾಳೆ.

Hitler kalyana serial 3rd august Episode Written Update

ಲೀಲಾ ಮತ್ತು ಎಜೆ ತಮಗೆ ತಿಳಿಯದಂತೆ ಒಂದಾಗುತ್ತಿದ್ದಾರೆ. ಇದು ಪ್ರಾರ್ಥನಾಳಿಗೆ ಲೀಲಾ ಮೇಲೆ ದ್ವೇಷ ಹುಟ್ಟುವಂತೆ ಮಾಡಿದೆ. ಏನೇ ಮಾಡಿದರೂ ಎಜೆ ಮತ್ತು ಲೀಲಾ ಕದ್ದು ಮುಚ್ಚಿ ಭೇಟಿ ಮಾಡುತ್ತಿದ್ದಾರೆ.

ಎಜೆ ಕೊಟ್ಟ ಫೋನ್‌ಗೆ ಬೆಂಕಿ

ಲೀಲಾ ಮೇಲಿನ ಕೋಪಕ್ಕೆ ಪ್ರಾರ್ಥನಾ ಎಜೆ, ಲೀಲಾಳಿಗೆ ಕೊಟ್ಟ ಫೋನ್‌ಗೆ ಬೆಂಕಿ ಹಚ್ಚಿದ್ದಾಳೆ. ಇದರಿಂದ ಲೀಲಾಳಿಗೆ ಬಹಳ ಬೇಸರವಾಗಿದೆ. ಎಜೆ ಪ್ರೀತಿಯಿಂದ ತನಗೆ ಉಡುಗೊರೆಯಾಗಿ ಕೊಟ್ಟ ಫೋನ್ ಅನ್ನು ಜೋಪಾನ ಮಾಡಲು ಆಗಲಿಲ್ಲ ಎಂದು ಕಣ್ಣೀರು ಹಾಕಿದ್ದಳು. ಆದರೆ, ಎಜೆ ಲೀಲಾಳನ್ನು ಸಮಾಧಾನ ಮಾಡಿದ್ದಾನೆ.

Hitler kalyana serial 3rd august Episode Written Update

ದುರ್ಗಾಳಿಗೆ ಪ್ರಾರ್ಥನಾ ವಾರ್ನ್

ಇತ್ತ ಪ್ರಾರ್ಥನಾ, ದುರ್ಗಾಳಿಗೆ ವಾರ್ನ್ ಮಾಡಿದ್ದಾಳೆ. ತಾನು ಅಂತರಾ ಅಲ್ಲ ಪ್ರಾರ್ಥನಾ ಎಂಬುದು ದುರ್ಗಾಳಿಗೆ ಮಾತ್ರವೇ ಗೊತ್ತಿದೆ. ಹೀಗಾಗಿ ದುರ್ಗಾ ಬಳಿ ತನಗೀಗ ಎಜೆ ಹಾಗೂ ಅವನ ಹೆಸರು, ಆಸ್ತಿ, ಅಂತಸ್ತು ಎಲ್ಲವೂ ಬೇಕು ಎಂದು ಹೇಳುತ್ತಾಳೆ. ನಾನು ಇನ್ಮುಂದೆ ಅಭಿಗೆ ಸಂಪೂರ್ಣವಾಗಿ ಅಂತರಾ ಆಗಿ ಇರಬೇಕು. ಎಜೆ ನನಗೆ ಬೇಕೇಬೇಕು. ನೀನೇನಾದರೂ ಬಾಲ ಬಿಚ್ಚಿದರೆ, ಏನು ಮಾಡುತ್ತೀನಿ ಎಂದು ಯೋಚಿಸು. ಆಗ ನಿನಗೆ ಕಷ್ಟ ಆಗುವುದು ಎಂದು ವಾರ್ನಿಂಗ್ ಕೊಟ್ಟು ಹೋಗುತ್ತಾಳೆ.

ಹೂವು ಈಗ ಹಾವಾಗಿದೆ

ಈಗ ದುರ್ಗಾಳಿಗೆ ಸಂಕಷ್ಟ ಎದುರಾಗಿದೆ. ಲೀಲಾ ಈ ಮನೆಯ ಸೊಸೆ ಆಗಿ ಸೂಟ್ ಆಗುವುದಿಲ್ಲ. ಅಂತರಾಳಂತೆ ಇರು ಈ ಪ್ರಾರ್ಥನಾಳನ್ನು ಕರೆದುಕೊಂಡು ಬಂದು ಲೀಲಾಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ದುರ್ಗಾ ಮಾಡಿದ ಪ್ಲಾನ್ ಈಗ ತನಗೇ ಉಲ್ಟಾ ಆಗಿದೆ. ದುರ್ಗಾಳಿಗೆ ಆತಂಕ ಶುರುವಾಗಿದೆ. ಏನೋ ಮಾಡಲು ಹೋಗಿ ಮತ್ತೇನೋ ಆಗಿದೆ. ಈಗ ಪ್ರಾರ್ಥನಾಳಿಗೆ ಬ್ರೇಕ್ ಹಾಕುವುದು ಹೇಗೆ. ಮನೆಯಲ್ಲಿ ಈಗ ಎಲ್ಲರಿಗೂ ಸತ್ಯ ಹೇಳಿದರೆ, ಎಜೆ ತನ್ನನ್ನು ಜೀವಂತವಾಗಿ ಉಳಿಸುವುದಿಲ್ಲ. ಆದರೆ, ಈಗ ಪ್ರಾರ್ಥನಾ ರಾಕ್ಷಸಿಯಾಗಿದ್ದಾಳೆ. ಏನು ಮಾಡುವುದು ಎಂದು ಆತಂಕ ಪಡುತ್ತಿದ್ದಾಳೆ. ಹೂವಿನಂತೆ ಬಂದ ಪ್ರಾರ್ಥನಾ ಈಗ ಹಾವಾಗಿದ್ದಾಳೆ. ಪ್ರಾರ್ಥನಾ ಕೈಯಿಂದ ಮನೆಯವರನ್ನು ಹೇಗೆ ಬಚಾವ್ ಮಾಡಿಕೊಳ್ಳುವುದು ಎಂದು ದುರ್ಗಾಳಿಗೆ ಅರ್ಥವಾಗುತ್ತಿಲ್ಲ.

ನಾಟಕ ಮಾಡುತ್ತಿರುವ ಪ್ರಾರ್ಥನಾ

ಇದೇ ಸಂದರ್ಭದಲ್ಲಿ ಈಗ ಪ್ರಾರ್ಥನಾ ಎಜೆಗೆ ಹತ್ತಿರವಾಗಲು ನಾಟಕ ಮಾಡಿದ್ದಾಳೆ. ಬಿದ್ದವಳಂತೆ ನಟಿಸಿ ಪ್ರಜ್ಞೆ ಇಲ್ಲದವಳಂತೆ ನಡೆದುಕೊಂಡಿದ್ದಾಳೆ. ಎಜೆ, ಲೀಲಾ ಗಾಬರಿಯಾಗಿದ್ದಾರೆ. ಆದರೆ, ಪ್ರಾರ್ಥನಾ ನಾಟಕ ಮಾಡುತ್ತಿರುವುದು ದುರ್ಗಾಳಿಗೆ ಗೊತ್ತಾಗಿದೆ. ಹೀಗಾಗಿ ದುರ್ಗಾ ಪರಿಸ್ಥಿತಿಯನ್ನು ನೆಗಲೆಕ್ಟ್ ಮಾಡುತ್ತಿದ್ದಾಳೆ. ಆದರೆ, ಇದರಿಂದ ಮತ್ತೆ ದುರ್ಗಾ ಎಲ್ಲರ ಕಣ್ಣಲ್ಲೂ ಕೆಟ್ಟವಳಾಗಿದ್ದಾಳೆ. ದುರ್ಗಾಳನ್ನು ರೇಗಿಸಲು ಪ್ರಾರ್ಥನಾ ಕಣ್ಣು ಬಿಡುತ್ತಾಳೆ. ಅದೇ ವೇಳೆಗೆ ಎಜೆ ಎಚ್ಚರವಾಗಿದೆ ಎಂದು ಮಾತನಾಡಿಸುತ್ತಾನೆ. ಆಗ ಪ್ರಾರ್ಥನಾ ಬೇರೆ ದಾರಿ ಇಲ್ಲದೇ, ತನಗೆ ಪ್ರಜ್ಞೆ ಬಂದವಳಂತೆ ಮಾತನಾಡಿಸುತ್ತಾಳೆ. ತನಗೆ ಹಳೆಯದೆಲ್ಲಾ ನೆನಪಾಯ್ತು ಎಂದು ಹೇಳುತ್ತಾಳೆ.

More from Filmibeat

English summary
Hitler kalyana serial today episode, prarthana warns durga. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X