For Quick Alerts
  ALLOW NOTIFICATIONS  
  For Daily Alerts

  ವಿಕ್ರಮ್ ಮನೆಗೆ ಬಂದು ಎಜೆಯನ್ನು ಕೊಲ್ಲುತ್ತೇನೆ ಎಂದು ಹೆದರಿಸಿದನಾ..?

  By ಪ್ರಿಯಾ ದೊರೆ
  |

  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಫುಲ್ ಖುಷಿಯಾಗಿದ್ದಾನೆ. ತನ್ನ ಅಂತರಾ ವಾಪಸ್ ಸಿಕ್ಕಿದ್ದಾಳೆ ಎಂಬಂತೆ ನಡೆದುಕೊಳ್ಳುತ್ತಿದ್ದಾನೆ. ನಿನ್ನೆಯವರೆಗೂ ದಸರಾ ಹಬ್ಬ ಆಚರಿಸುವುದು ಬೇಡ ಎನ್ನುತ್ತಿದ್ದವನು, ಈಗ ಬೆಳಗೆದ್ದು ದಸರಾ ಹಬ್ಬಕ್ಕೆ ತಯಾರಿ ನಡೆಸಲು ಹೇಳಿದ್ದಾನೆ.

  ಎಜೆ ನಡವಳಿಕೆಯನ್ನು ಯಾರೂ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇದೇ ವೇಳಗೆ ಅಂತರಾ ತಮ್ಮ ವಿಕ್ರಮ್ ಲೀಲಾಗೆ ಟಾರ್ಚರ್ ಕೊಡುತ್ತಿದ್ದಾನೆ. ನನ್ನನ್ನು ಭೇಟಿಯಾಗದಿದ್ದರೆ, ಎಜೆ ಕಥೆ ಮುಗೀತು ಎಂದು ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾನೆ.

  ಅಪ್ಪ-ಅಮ್ಮ ದೂರಾದ್ರು..ಸೆಕೆಂಡ್‌ ಪಿಯುಸಿ ಫೈಲ್‌ ಆದೆ: ಐಶ್ವರ್ಯಾ ಪಿಸೆ ಜೀವನ ಕತೆಅಪ್ಪ-ಅಮ್ಮ ದೂರಾದ್ರು..ಸೆಕೆಂಡ್‌ ಪಿಯುಸಿ ಫೈಲ್‌ ಆದೆ: ಐಶ್ವರ್ಯಾ ಪಿಸೆ ಜೀವನ ಕತೆ

  ಹಾಗಾಗಿ ಲೀಲಾ ಹೂವು ತರುವ ನೆಪದಲ್ಲಿ ವಿಕ್ರಮ್‌ನನ್ನು ಭೇಟಿಯಾಗಲು ಮನೆಯಿಂದ ಹೊರಗೆ ಬಂದಿದ್ದಾಳೆ. ಆದರೆ ವಿಕ್ರಮ್ ಬಂದಿಲ್ಲ. ಎಷ್ಟೇ ಕರೆ ಮಾಡಿದರೂ ಫೋನ್ ಕಾಲ್ ಅನ್ನು ಕೂಡ ಸ್ವೀಕರಿಸುತ್ತಿಲ್ಲ. ಲೀಲಾ ಈಗ ಗೊಂದಲದ ಸ್ಥಿತಿಯಲ್ಲಿದ್ದಾಳೆ.

  ಮನೆಗೆ ಬಂದ ವಿಕ್ರಮ್

  ಮನೆಗೆ ಬಂದ ವಿಕ್ರಮ್

  ಎಜೆ ನನ್ನ ಅಂತರಾ ಬಂದಿದ್ದಾಳೆ ಎಂದು ಹೇಳಿ ಲೀಲಾ ಎದುರಿಗೆ ಅಂಬಾರಿ ಹೊತ್ತಿರುವ ಆನೆಯ ಗೊಂಬೆಯನ್ನು ತಂದಿದ್ದಾನೆ. ಇದನ್ನು ನೋಡಿ ಲೀಲಾಗೆ ಏನು ಹೇಳಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಅಷ್ಟರಲ್ಲಿ ಗೆಸ್ಟ್ ಇದ್ದಾರೆ ಎಂದು ಹೇಳಿ ವಿಕ್ರಮ್‌ನನ್ನು ಪರಿಚಯ ಮಾಡಿಸಿದ್ದಾನೆ. ಅಂತರಾ ತಮ್ಮ, ನನ್ನ ಜೀವವಿರುವ ಈ ಗೊಂಬೆಯನ್ನು ತಂದು ಕೊಟ್ಟಿದ್ದಾನೆ ಎಂದು ಹೇಳುತ್ತಾನೆ. ವಿಕ್ರಮ್‌ನನ್ನು ನೋಡಿದ ಲೀಲಾ ಏನು ಹೇಳಬೇಕು, ಇವನ್ಯಾಕೆ ಇಲ್ಲಿಗೆ ಬಂದ ಅನ್ನೋ ಗೊಂದಲದಲ್ಲಿ ಏನನ್ನೂ ಮಾತನಾಡಿಲ್ಲ. ಆದರೆ ವಿಕ್ರಮ್, ಲೀಲಾ ಪರಿಸ್ಥಿತಿಯನ್ನು ಕಂಡು ಮಜಾ ತೆಗೆದುಕೊಳ್ಳುತ್ತಿದ್ದಾನೆ.

  ಸೌಭಾಗ್ಯರಂತೆ ಆಗ್ಬಿಟ್ರಾ ದಿಗಂತ್ ಅಮ್ಮ: ಮಗನ ಕೊಲೆಗೆ ಸಾಥ್ ನೀಡಿದ್ರಾ?ಸೌಭಾಗ್ಯರಂತೆ ಆಗ್ಬಿಟ್ರಾ ದಿಗಂತ್ ಅಮ್ಮ: ಮಗನ ಕೊಲೆಗೆ ಸಾಥ್ ನೀಡಿದ್ರಾ?

  ಲೀಲಾಳ ಹಿಂದೆ ಬಿದ್ದ ದುರ್ಗಾ

  ಲೀಲಾಳ ಹಿಂದೆ ಬಿದ್ದ ದುರ್ಗಾ

  ಎಜೆ ತುಂಬಾ ಖುಷಿಯಲ್ಲಿರುವುದು ಮನೆಯವರಿಗೆಲ್ಲಾ ಶಾಕ್ ಅನ್ನು ತಂದಿದೆ. ದುರ್ಗಾ ಇದೆ ಮೊದಲ ಸಲ ಎಜೆಯನ್ನು ಈ ರೀತಿ ನೋಡುತ್ತಿದ್ದಾಳೆ. ಎಜೆಗೆ ಏನಾಗಿದೆ ಎಂದು ದುರ್ಗಾಳಿಗೂ ಅರ್ಥವಾಗುತ್ತಿಲ್ಲ. ಆದರೆ ವಿಕ್ರಮ್ ಮನೆಗೆ ಬಂದಿರುವುದಕ್ಕೆ ಎಜೆ ಖುಷಿ ಹೆಚ್ಚಾಗಿರುವುದನ್ನು ಗಮನಿಸುತ್ತಾಳೆ. ಇತ್ತ ಲೀಲಾ ತುಂಬಾ ಗಾಬರಿಯಾಗಿರುತ್ತಾಳೆ. ಲೀಲಾ ಯಾಕೆ ವಿಕ್ರಮ್‌ನನ್ನು ನೋಡಿ ಹೆದಿಕೊಂಡಿದ್ದಾಳೆ ಎಂಬುದು ಅರ್ಥವಾಗುವುದಿಲ್ಲ. ಆದರೆ ಲೀಲಾಳ ಹಿಂದೆ ಬರುವ ದುರ್ಗಾ, ಸತ್ಯ ತಿಳಿದುಕೊಳ್ಳಲು ಪ್ರಯತ್ನಿಸುತ್ತಾಳೆ. ಬಟ್ ಲೀಲಾ ದುರ್ಗಾಳಿಗೆ ಮತ್ತೆ ಅವಮಾನ ಮಾಡಿ ಕಳಿಸುತ್ತಾಳೆ.

  ಎಜೆಯನ್ನು ಮುಗಿಸಲು ಬಂದೆ ಎಂದ ವಿಕ್ರಮ್..!!

  ಎಜೆಯನ್ನು ಮುಗಿಸಲು ಬಂದೆ ಎಂದ ವಿಕ್ರಮ್..!!

  ಇನ್ನು ಎಜೆ ಖುಷಿಯಿಂದ ಮಾತನಾಡುವಾಗಲೂ ವಿಕ್ರಮ್, ಲೀಲಾಳನ್ನು ದಿಟ್ಟಿಸಿಕೊಂಡು ನೋಡುತ್ತಿರುತ್ತಾನೆ. ಲೀಲಾಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಎಜೆ ಬಳಿ ಎಲ್ಲಾ ಸತ್ಯವನ್ನೂ ಹೇಳಲಾಗದೇ ಲೀಲಾ ಗೊಂದಲದಲ್ಲಿರುತ್ತಾಳೆ. ಇದನ್ನೆಲ್ಲಾ ಗಮನಿಸುವ ವಿಕ್ರಮ್ ಮಜಾ ತೆಗೆದುಕೊಳ್ಳುತ್ತಿರುತ್ತಾನೆ. ಎಜೆ ಹೊರಟ ಮೇಲೆ ವಿಕ್ರಮ್ ಲೀಲಾಗೆ ವಾರ್ನಿಂಗ್ ಕೊಡುತ್ತಾನೆ. ನಿತ್ಯ ನಾನೇನು ಹೇಳುತ್ತೀನಿ, ನಾನೇನು ಮಾಡುತ್ತೀನಿ ಅನ್ನೋದನ್ನ ನೋಡಿಕೊಂಡು ವಿಲವಿಲನೇ ಒದ್ದಾಡುತ್ತಿರು. ನಾನು ಹೇಳಿದರೆ ಎಜೆ ಪ್ರಾಣವನ್ನೇ ಬಿಡೋದಕ್ಕೆ ತಯಾರಾಗಿದ್ದಾನೆ. ನಾನೀಗ ಇಲ್ಲಿಗೆ ಬಂದಿರುವುದು ಎಜೆ ಕೋಟೆಯಲ್ಲೇ ಇದ್ದುಕೊಂಡು, ಅವನನ್ನು ನಾಶ ಮಾಡುವುದಕ್ಕೆ ಎಂದು ಹೇಳುತ್ತಾನೆ.

  ಎಜೆಗೆ ಎಲ್ಲಾ ಸತ್ಯವನ್ನು ಹೇಳುತ್ತಾಳಾ ಲೀಲಾ?

  ಎಜೆಗೆ ಎಲ್ಲಾ ಸತ್ಯವನ್ನು ಹೇಳುತ್ತಾಳಾ ಲೀಲಾ?

  ಲೀಲಾ, ವಿಕ್ರಮ್ ಮಾತುಗಳನ್ನು ಕೇಳಿಸಿಕೊಂಡು ಶಾಕ್ ಆಗಿರುತ್ತಾಳೆ. ನಾಳೆಯಿಂದ ವಿಕ್ರಮ್ ಯಾವ ರೀತಿಯಲ್ಲಿ ಶಾಕ್ ಕೊಡುತ್ತಾನೆ.? ವಿಕ್ರಮ್ ಏನೆಲ್ಲಾ ಆಟವಾಡಬಹುದು ಎಂಬ ಕುತೂಹಲ ಒಂದು ಕಡೆಯಾದರೆ, ಈ ಮೂಲಕ ಅಂತರಾ ಬದುಕಿದ್ದಾಗ ಏನೆಲ್ಲಾ ಆಯ್ತು..? ಅಂತರ ಸಾಯುವುದಕ್ಕೆ ಕಾರಣವೇನು..? ಎಜೆಯ ಹಿಂದಿನ ಕಥೆ ಏನು ಎಂಬುದು ತೆರೆದುಕೊಳ್ಳುತ್ತದೆಯೇ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಈಗ ಕತೆ ಮತ್ತೆ ಇಂಟರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ.

  English summary
  Hitler kalyana serial 4th October Episode Written Update. AJ is happy to see vikram. But leela is in shock, where vikram tries to blackmail leela.
  Tuesday, October 4, 2022, 19:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X