Hitler Kalyana: ಲೀಲಾಳನ್ನು ರಕ್ಷಿಸುತ್ತಾನಾ ಎಜೆ: ದುರ್ಗಾ ಮಾಡಿದ ಪ್ಲ್ಯಾನ್ ಮತ್ತೆ ಠುಸ್ ಆಯ್ತಾ..?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾಳಿಗೆ ಅಜ್ಜಿ ತನ್ನ ಉತ್ತರಾಧಿಕಾರಿ ಸ್ಥಾನವನ್ನು ನೀಡಿರುವುದು ದುರ್ಗಾಳಿಗೆ ದ್ವೇಷ ಹೆಚ್ಚಾಗುವಂತೆ ಮಾಡುತ್ತದೆ. ಎಷ್ಟು ಸಲ ಲೀಲಾಳನ್ನು ಮನೆಯಿಂದ ಹೊರಗೆ ಹಾಕಿದರೂ ವಾಪಸ್ ಬರುತ್ತಾಳೆ.

ಈ ಸಲ ಲೀಲಾ ಮತ್ಯಾವತ್ತು ಇಲ್ಲಿಗೆ ಬರದ ಹಾಗೆ ಮಾಡಬೇಕು. ಎಂದು ದುರ್ಗಾ ಹೊಸ ಪ್ಲ್ಯಾನ್ ಮಾಡುತ್ತಾಳೆ. ಅದರ ಪ್ರಕಾರ ಲೀಲಾಳನ್ನು ಕಿಡ್ನ್ಯಾಪ್ ಮಾಡಿಸಲು ಸುಪಾರಿ ಕೊಡುತ್ತಾಳೆ.

ಕೆಂಪು ಸೀರೆ ಉಡಲಿ ಎಂದು ಸೀರೆಯನ್ನು ವಿಶ್ವರೂಪ್ ಕೈಗೆ ಕೊಟ್ಟಿರುತ್ತಾಳೆ. ಆದರೆ, ವಿಶ್ವರೂಪ್ ಅದನ್ನು ಲೀಲಾಗೆ ಕೊಡುವುದಿಲ್ಲ. ಬದಲಿಗೆ ಲಕ್ಷ್ಮೀ ಆ ಸೀರೆಯನ್ನು ನೋಡಿ ಸಿಕ್ಕಿದ್ದೇ ಸೀರುಡೆ ಎಂದು ತೆಗೆದುಕೊಂಡು ಹೋಗುತ್ತಾಳೆ.

ಲೀಲಾ ಉಡಬೇಕಿದ್ದ ಸೀರೆ ಉಟ್ಟಿರುವ ಲಕ್ಷ್ಮೀ

ಲೀಲಾ ಉಡಬೇಕಿದ್ದ ಸೀರೆ ಉಟ್ಟಿರುವ ಲಕ್ಷ್ಮೀ

ಲೀಲಾ ಆಫೀಸಿಗೆ ತೆರಳಲು ಕಪ್ಪು ಸೀರೆಯನ್ನು ಉಟ್ಟು ರೆಡಿಯಾಗಿರುತ್ತಾಳೆ. ಅಜ್ಜಿ ಲೀಲಾಳಿಗೆ ಅಲಂಕಾರ ಮಾಡಿ ಆಫೀಸಿಗೆ ಕಳಿಸಿಕೊಡುತ್ತಾಳೆ. ಕಾರಿನಲ್ಲಿ ಹೋಗು ಎಂದರೆ ಲೀಲಾ, ಎಜೆ ಮಾತನಾಡಿಸುವವರೆಗೂ ಕಾರನ್ನು ಬಳಸಲ್ಲ ಎಂದು ಹೇಳಿ ಲೀಲಾ ಕೂಡ ಖುಷಿಯಾಗಿರುತ್ತಾಳೆ. ಇತ್ತ ಲಕ್ಷ್ಮೀ ಕೆಂಪು ಸೀರೆಯನ್ನು ಇಷ್ಟ ಪಟ್ಟು ಉಡುತ್ತಾಳೆ. ಸ್ನೇಹಿತೆಯನ್ನು ಭೇಟಿ ಮಾಡುವ ಸಲುವಾಗಿ ರೆಡಿಯಾಗುತ್ತಿರುತ್ತಾಳೆ. ಬಳಿಕ ಕ್ಯಾಬ್ ಬುಕ್ ಮಾಡಿ ಹೊರಡುತ್ತಾಳೆ. ಲಕ್ಷ್ಮಿ ಹಿಂದೆಯೇ ಲೀಲಾ ಕೂಡ ಆಟೋದಲ್ಲಿ ಹೊರಡುತ್ತಾಳೆ.

ಎಜೆಗೆ ಬೈದ ಅಜ್ಜಿ

ಎಜೆಗೆ ಬೈದ ಅಜ್ಜಿ

ಎಜೆ ಆಫೀಸಿಗೆ ಹೋಗದೆ ಕುಳಿತಿರುತ್ತಾನೆ. ವಿಶ್ವರೂಪ್ ಬಂದು ಆಫೀಸಿಗೆ ಹೋಗೋಣ ಎಂದಾಗ, ಎಜೆ ಇವತ್ತು ನಾನು ಆಫೀಸಿಗೆ ಬರುವುದಿಲ್ಲ ಎಂದು ಹೇಳುತ್ತಾನೆ. ಆಗ ವಿಶ್ವರೂಪ್ ಇವತ್ತು ಲೀಲಾ ಮೇಡಂ ಅನ್ನು ಪರಿಚಯ ಮಾಡಿಸಬೇಕು ಎಂದು ಹೇಳಿದರೂ ಕೇಳುವುದಿಲ್ಲ. ಆಗ ವಿಶ್ವರೂಪ್ ಅಜ್ಜಿಗೆ ವಿಷಯವನ್ನು ತಿಳಿಸುತ್ತಾನೆ. ಎಜೆ ಬಳಿ ಬಂದ ಅಜ್ಜಿ, ಬುದ್ಧಿ ಹೇಳುತ್ತಾರೆ. ಆದರೆ ಎಜೆ ಕೇಳುವುದಿಲ್ಲ. ಅವಳು ಮಾಡಿದ ತಪ್ಪಿಗೆ ಇನ್ನೇನು ಶಿಕ್ಷೆ ಕೊಡಬೇಕು ಎಂದು ಕೇಳುತ್ತಾನೆ.

ಲಕ್ಷ್ಮಿಯನ್ನು ಉಳಿಸಲು ಬಂದ ಲೀಲಾ

ಲಕ್ಷ್ಮಿಯನ್ನು ಉಳಿಸಲು ಬಂದ ಲೀಲಾ

ಲಕ್ಷ್ಮಿಯನ್ನು ಕೆಂಪು ಸೀರೆಯಲ್ಲಿ ನೋಡಿದ ರೌಡಿಗಳು ಆಕೆಯನ್ನೇ ಕಿಡ್ನ್ಯಾಪ್ ಮಾಡಬೇಕು ಎಂದು ತಿಳಿದು ಫಾಲೋ ಮಾಡುತ್ತಾರೆ. ದಾರಿ ಮಧ್ಯೆ ಲಕ್ಷ್ಮಿಯ ಕ್ಯಾಬ್ ಅನ್ನು ರೌಡಿಗಳು ಅಡ್ಡ ಹಾಕುತ್ತಾರೆ. ಲಕ್ಷ್ಮಿಯನ್ನು ಕಿಡ್ನ್ಯಾಪ್ ಮಾಡುತ್ತಾರೆ. ಇದನ್ನು ನೋಡಿದ ಲೀಲಾ, ರೌಡಿಗಳ ಕಾರನ್ನು ಚೇಸ್ ಮಾಡಲು ಯತ್ನಿಸುತ್ತಾಳೆ. ಆದರೆ ಆಟೋ ಬರದ ಕಾರಣ, ಕಾರ್ ಹಿಂದೆಯೇ ಓಡುತ್ತಾಳೆ. ಕೊನೆಗೆ ಲಕ್ಷ್ಮಿಯನ್ನು ಕಂಡು ಹಿಡಿದು ಲೀಲಾ ಆಕೆಯನ್ನು ರಕ್ಷಿಸಲು ಯತ್ನಿಸುತ್ತಾಳೆ. ರೌಡಿಗಳು ದುರ್ಗಾಳಿಗೆ ಕಾಲ್ ಮಾಡಿದ್ದರಿಂದ ಈ ಪ್ಲಾನ್ ಲೀಲಾಗೋಸ್ಕರ ಮಾಡಿದ್ದು ಎಂಬುದು ಲಕ್ಷ್ಮಿಗೆ ತಿಳಿಯುತ್ತದೆ.

ಲೀಲಾಳನ್ನು ರಕ್ಷಿಸಲು ಬಂದ ಎಜೆ

ಲೀಲಾಳನ್ನು ರಕ್ಷಿಸಲು ಬಂದ ಎಜೆ

ಅದಕ್ಕೆ ಅಜ್ಜಿ, ನೀನೇ ಅರ್ಥ ಮಾಡಿಕೊಳ್ಳುತ್ತೀಯ ಅಂತ ಇಷ್ಟು ದಿನ ಸುಮ್ಮನಿದ್ದೆ. ನಿನಗೆ ಅರ್ಥವಾಗೊಲ್ಲ ಎಂದು ಹೇಳಿ ಪತ್ರವೊಂದನ್ನು ಕೊಡುತ್ತಾಳೆ. ಅದು ಲೀಲಾ ಬರೆದ ಪತ್ರ. ಅದನ್ನು ಓದಿದ ಎಜೆಗೆ ಲೀಲಾ ತಪ್ಪೇನು ಇಲ್ಲ ಎಂಬುದು ತಿಳಿಯುತ್ತದೆ. ಆಗ ಪಶ್ಚಾತಾಪ ಪಡುವ ಎಜೆ ಲೀಲಾಳನ್ನು ರಕ್ಷಿಸಲು ಬರುತ್ತಾನೆ. ರೌಡಿಗಳ ಬಳಿ ಫೈಟಿಂಗ್ ಮಾಡುತ್ತಾನೆ. ಇನ್ನು ದುರ್ಗಾನೇ ಈ ಪ್ಲಾನ್ ಅನ್ನು ಮಾಡಿದ್ದು ಎಂಬ ಸತ್ಯ ಎಜೆಗೆ ಗೊತ್ತಾಗುತ್ತಾ..? ಹಾಗೊಂದು ವೇಳೆ ಸತ್ಯ ಗೊತ್ತಾದರೆ ಎಜೆ ದುರ್ಗಾಳಿಗೆ ಯಾವ ಶಿಕ್ಷೆಯನ್ನು ನೀಡಬಹುದು..?

More from Filmibeat

English summary
Hitler Kalyana serial 6th February Episode Written Update. Durga plans to kidnap leela. But lakshmi get caught to rowdies. Leela goes to save lakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X