Hitler Kalyana: ದುರ್ಗಾಗೆ ಕ್ಲಾಸ್ ತೆಗೆದುಕೊಂಡ ಅಜ್ಜಿ: ಮತ್ತೆ ಲೀಲಾ-ಎಜೆ ಮದುವೆ..?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಮೇಲೆ ದುರ್ಗಾ ಕತ್ತಿ ಮಸೆಯುತ್ತಿದ್ದಾಳೆ. ಹೇಗಾದರೂ ಮಾಡಿ ಲೀಲಾಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಸದಾ ಪ್ಲ್ಯಾನ್‌ ಮಾಡುತ್ತಲೇ ಇರುತ್ತಾಳೆ.

ಈಗ ದುರ್ಗಾ ಜ್ಯೋತಿಷಿ ಹೇಳುವವರಿಗೆ ಹಣ ಕೊಟ್ಟು ಲೀಲಾ ವಿರುದ್ಧ ಭವಿಷ್ಯ ನುಡಿಯುವಂತೆ ಹೇಳಿದ್ದಾಳೆ. ಲೀಲಾ ಜಾತಕದ ಬಗ್ಗೆ ಕೆಟ್ಟದಾಗಿ ಹೇಳುವಂತೆ ಒತ್ತಾಯಿಸಿದ್ದಾಳೆ.

ಆಗ ಲೀಲಾಳನ್ನು ಮನೆಯಿಂದ ಹೊರಗೆ ಹಾಕುವುದು ಸುಲಭವಾಗುತ್ತದೆ. ಎಜೆಗೆ ಬೇರೆ ಹೆಂಡತಿಯನ್ನು ತರಬಹುದು ಎಂದು ದುರ್ಗಾ ಪ್ಲ್ಯಾನ್ ಮಾಡಿದ್ದಾಳೆ.

ಸೊಸೆಗಾಗಿ ಎಚ್ಚೆತ್ತುಕೊಂಡ ಅಜ್ಜಿ

ಸೊಸೆಗಾಗಿ ಎಚ್ಚೆತ್ತುಕೊಂಡ ಅಜ್ಜಿ

ಆದರೆ, ಅಜ್ಜಿಗೆ ಈಗ ಲೀಲಾ ಮೇಲಿನ ಕಾಳಜಿ ಹೆಚ್ಚಾಗಿದೆ. ಹಾಗಾಗಿ ಸದಾ ಲೀಲಾಳನ್ನು ಕಾಯುತ್ತಿರುತ್ತಾಳೆ. ಸೊಸೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿರುತ್ತಾಳೆ. ಹೀಗಿರುವಾಗ ಲೀಲಾ ವಿರುದ್ಧ ದುರ್ಗಾ ಕತ್ತಿ ಮಸೆಯುವುದು ಅಜ್ಜಿಗೆ ಗೊತ್ತಿದೆ. ಹೀಗಾಗಿ ಆಗಾಗ ದುರ್ಗಾ ಪ್ಲ್ಯಾನ್‌ಗೆ ಅಜ್ಜಿ ಅಡ್ಡಿ ಆಗುತ್ತಿರುತ್ತಾಳೆ. ಈಗ ಲೀಲಾಳ ಜಾತಕ ವಿಚಾರದಲ್ಲಿ ಎಚ್ಚೆತ್ತುಕೊಂಡಿದ್ದಾಳೆ. ದುರ್ಗಾ ಹಣ ಕೊಟ್ಟು ಸುಳ್ಳು ಹೇಳಲು ಪ್ರಯತ್ನಿಸಿದ್ದಕ್ಕೆ ಬ್ರೇಕ್ ಹಾಕಿದ್ದಾಳೆ.

ಅಜ್ಜಿಗೆ ಸೊಸೆ ಲೀಲಾಳೇ ಮುಖ್ಯ

ಅಜ್ಜಿಗೆ ಸೊಸೆ ಲೀಲಾಳೇ ಮುಖ್ಯ

ದುರ್ಗಾ ಅಷ್ಟು ಹಣ ಕೊಟ್ಟರು ಆತ ಸುಳ್ಳು ಜಾತಕ ಹೇಳಲಿಲ್ಲವಲ್ಲಾ ಎಂದು ಯೋಚಿಸುತ್ತಾಳೆ. ಆಗ ಅಜ್ಜಿ ದುರ್ಗಾ ಬಳಿ ಬಂದು, ನಿನ್ನ ಪ್ಲ್ಯಾನ್ ಫ್ಲಾಪ್ ಆಗುವುದಕ್ಕೆ ನಾನೇ ಕಾರಣ. ಇವತ್ತಲ್ಲ ನಾಳೆ ಬುದ್ಧಿ ಕಲಿಯುತ್ತೀಯಾ ಎಂದರೆ ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದೀಯಾ ಎಂದು ಬೈಯುತ್ತಾಳೆ. ದುರ್ಗಾ ಕೆನ್ನೆಗೆ ಬಾರಿಸಿ ಅಜ್ಜಿ ವಾರ್ನಿಂಗ್ ಕೊಡುತ್ತಾಳೆ. ನನ್ನ ಸೊಸೆಗೆ ಏನೂ ಆಗುವುದಕ್ಕೆ ನಾನು ಬಿಡುವುದಿಲ್ಲ ಎಂದು ಹೇಳುತ್ತಾಳೆ. ಅಜ್ಜಿಯ ಮಾತುಗಳಿಂದ ದುರ್ಗಾ ಅವಮಾನಕ್ಕೆ ಒಳಗಾಗುತ್ತಾಳೆ. ಮುಂದೆ ದುರ್ಗಾ ಯಾವ ಹೆಜ್ಜೆಯನ್ನು ಇಡುತ್ತಾಳೋ ಗೊತ್ತಿಲ್ಲ.

ಬೀಗರ ಮನೆಗೆ ಬಂದ ಅಜ್ಜಿ

ಬೀಗರ ಮನೆಗೆ ಬಂದ ಅಜ್ಜಿ

ಇನ್ನು ಅಜ್ಜಿ, ಲೀಲಾ ಮತ್ತು ಎಜೆಗೆ ಮತ್ತೆ ಮದುವೆ ಮಾಡಿಸಲು ಮುಂದಾಗಿದ್ದಾಳೆ. ಎಜೆ ಕೋಪದಲ್ಲಿ ಲೀಲಾ ಕುತ್ತಿಗೆಯಲ್ಲಿದ್ದ ಮಂಗಳ ಸೂತ್ರವನ್ನು ಕಿತ್ತು ಹಾಕಿದ್ದ. ಹೀಗಾಗಿ ಮತ್ತೆ ಮಾಂಗಲ್ಯಧಾರಣೆ ಮಾಡಿಸಲು ಅಜ್ಜಿ ಆಲೋಚಿಸಿದ್ದಾಳೆ. ಈ ಬಗ್ಗೆ ಮಗ ಮತ್ತು ಸೊಸೆಯ ಬಳಿಯೂ ಹೇಳಿದ್ದಾಳೆ. ಈ ಮಾತುಗಳನ್ನು ಕೇಳಿದ ಎಜೆ ಮತ್ತು ಲೀಲಾ ಇಬ್ಬರೂ ಫುಲ್ ಖುಷಿಯಾಗಿದ್ದಾರೆ. ಈ ವಿಚಾರದ ಬಗ್ಗೆ ಮಾತನಾಡುವ ಸಲುವಾಗಿ ಬೀಗರ ಮನೆಗೆ ಹೊರಟಿದ್ದಾರೆ.

ಅತ್ತೆ ಮನೆಯಲ್ಲಿ ಉಳಿದುಕೊಂಡ ಎಜೆ

ಅತ್ತೆ ಮನೆಯಲ್ಲಿ ಉಳಿದುಕೊಂಡ ಎಜೆ

ಅಜ್ಜಿ, ಲೀಲಾ ಮತ್ತು ಎಜೆ ಮೂವರು ಬೀಗರ ಮನೆಗೆ ಬರುತ್ತಾರೆ. ಆರತಿ ಎತ್ತಿ ಮಗಳು ಅಳಿಯನನ್ನು ಒಳಗೆ ಕರೆಸಿಕೊಂಡ ರಾಮಚಂದ್ರ ಖುಷಿ ಪಡುತ್ತಾನೆ. ಕೌಸಲ್ಯ ಜಗಳ ಮಾಡುತ್ತಾಳಾ ಎಂದು ಭಯವನ್ನೂ ಪಟ್ಟಿರುತ್ತಾನೆ. ಆದರೆ, ಅಜ್ಜಿ ಇಬ್ಬರ ಮದುವೆಯ ಬಗ್ಗೆ ಪ್ರಸ್ತಾಪ ಮಾಡುತ್ತಾಳೆ. ಈ ಮಾತನ್ನು ಕೇಳಿದ ಕೌಸಲ್ಯ ಒಳಗೊಳಗೆ ಖುಷಿ ಪಡುತ್ತಾಳೆ. ಇನ್ನು ರಾಮಚಂದ್ರ ಮಗಳು ಹಾಗೂ ಅಳಿಯ ನಮ್ಮ ಮನೆಯಲ್ಲೇ ಒಂದು ವಾರ ಇರಲಿ ಎಂದು ಬಯಸುತ್ತಾನೆ. ಇದಕ್ಕೆ ಎಲ್ಲರೂ ಒಪ್ಪುತ್ತಾರೆ. ಎಜೆ ಮತ್ತು ಲೀಲಾ ಮನೆಯಲ್ಲೇ ಉಳಿದುಕೊಳ್ಳುತ್ತಾಳೆ. ಕೌಸಲ್ಯ ಎಜೆ ಮನೆಯಲ್ಲಿ ಇರುವಾಗಲೇ ಏನಾದರೂ ಲಾಭ ಮಾಡಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡುತ್ತಾಳೆ.

More from Filmibeat

English summary
Hitler Kalyana serial 6th March Episode Written Update. Ajji plans to make arrangement for AJ and Leela Marriage. She speaks with leela parents. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X