Hitler Kalyana: ದುರ್ಗಾ ಬಗ್ಗೆ ಎಜೆಗೆ ಸಿಕ್ಕ ದೊಡ್ಡ ಮಾಹಿತಿ ಏನು..?

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾಳಿಗೆ ಈಗ ಡುಪ್ಲಿಕೇಟ್ ಅಂತರಾಳ ಬಣ್ಣವನ್ನು ಬಯಲು ಮಾಡಬೇಕಿದೆ. ಇದಕ್ಕೆ ಬೇಕಾದಂತಹ ಎಲ್ಲಾ ತಯಾರಿಯನ್ನೂ ನಡೆಸುತ್ತಿದ್ದಾಳೆ.

ಲೀಲಾಳ ತಾಯಿ ಕೌಸಲ್ಯ ಕೂಡ ಈಗ ಒಳ್ಳೆಯವಳಾಗಿದ್ದಾಳೆ. ಮಗಳ ಬದುಕನ್ನು ಹಾಳು ಮಾಡಬಾರದು ಎಂದು ಅಂತರಾ ಕಥೆಯನ್ನು ಮುಗಿಸಲು ತಾನೂ ಕೈ ಜೋಡಿಸಿದ್ದಾಳೆ.

Hitler kalyana serial 6th November episode written update

ಅಂತರಾಳ ಪ್ಲ್ಯಾನ್‌ಗಳನ್ನು ಕೇಳಿಸಿಕೊಂಡು ಲೀಲಾಳಿಗೆ ಹೇಳುತ್ತಿರುತ್ತಾಳೆ. ಅಷ್ಟೇ ಅಲ್ಲದೇ, ಕೌಸಲ್ಯ ಬಹಳ ಬದಲಾಗಿದ್ದಾಳೆ. ಇದು ಮನೆಯವರನ್ನೂ ಶಾಕ್ ಆಗುವಂತೆ ಮಾಡಿರುತ್ತದೆ.

ಅಜ್ಜಿಗೆ ಅಪಾಯವಿದೆ ಎಂದು ತಿಳಿದ ಲೀಲಾ

ಕೌಸಲ್ಯ ಬಹಳ ಸಾಧು ಆಗಿದ್ದಾಳೆ. ದಿನವಿಡೀ ವ್ರತ, ಜಪ ಮಾಡಿಕೊಂಡು ಇರುತ್ತಾಳೆ. ತಣ್ಣೀರಲ್ಲಿ ಸ್ನಾನ ಮಾಡುವುದು, ನೆಲದ ಮೇಲೆ ಮಲಗುವುದು ಯಾರೇ ಮಾತನಾಡಿಸಿದರೂ ಕೂಡ ಸೌಮ್ಯವಾಗಿ ಮಾತನಾಡುತ್ತಾಳೆ. ಇದು ಮನೆಯವರಿಗೆಲ್ಲಾ ಗೊಂದಲ ಉಂಟು ಮಾಡುತ್ತಿರುತ್ತದೆ. ಹೀಗಿರುವಾಗ ಲೀಲಾ ಜೊತೆಗೆ ಫೋನ್‌ನಲ್ಲಿ ಮಾತನಾಡುವಾಗ ಕೌಸಲ್ಯ, ಅಂತರಾ ಮುಂದಿನ ಪ್ಲಾನ್ ಬಗ್ಗೆ ಹೇಳುತ್ತಾಳೆ. ಈ ಮುದುಕಿಗೆ ನನ್ನ ಬಗ್ಗೆ ಎಲ್ಲಾ ಗೊತ್ತಾಗಿದೆ ಅನಿಸುತ್ತದೆ. ಅದಕ್ಕೆ ನನಗೆ ಸ್ವಲ್ಪವೂ ಬೆಲೆ ಕೊಡುವುದಿಲ್ಲ. ಈ ಮುದುಕಿಯನ್ನು ಕೊನೆ ಗಾಣಿಸಿದರೆ, ನನ್ನ ದಾರಿ ಸರಿ ಹೋಗುತ್ತದೆ ಎಂದು ಹೇಳುತ್ತಿದ್ದಳು ಎಂದು ಹೇಳುತ್ತಾಳೆ. ಈಗ ಲೀಲಾ, ಅಜ್ಜಿಯನ್ನು ಕಾಪಾಡಿಕೊಳ್ಳಲು ಏನು ಮಾಡುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

ಅಂತರಾ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುತ್ತಾಳಾ?

ಅಂತರಾಳಿಗೆ ಈಗ ತನ್ನ ದಾರಿಗೆ ಅಡ್ಡವಾಗಿ ಇಬ್ಬರಿದ್ದಾರೆ. ಒಂದು ಅಜ್ಜಿಯಾದರೆ, ಮತ್ತೊಂದು ಲೀಲಾ. ದುರ್ಗಾ ತನ್ನ ದಾರಿಗೆ ಅಡ್ಡವಾದಳು ಎಂದು ತಿಳಿಯುತ್ತಿದ್ದಂತೆ ಅಂತರಾ ಅವಳನ್ನು ಯಾರ ಕೈಗೂ ಸಿಗದಂತೆ ಮಾಯ ಮಾಡಿಬಿಟ್ಟಿದ್ದಾಳೆ. ಆದರೆ, ದುರ್ಗಾ ಕಾಣೆಯಾಗಿರುವುದಕ್ಕೆ ಅಂತರಾಳೇ ಕಾರಣ ಎನ್ನುವುದು ಯಾರಿಗೂ ಇನ್ನು ಅರ್ಥವಾಗುತ್ತಿಲ್ಲ. ಈಗ ಅಂತರಾ, ಅಜ್ಜಿಯನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದುಕೊಂಡಿದ್ದಾಳೆ. ಅಜ್ಜಿಯನ್ನು ಎಲ್ಲಾದರೂ ಕರೆದುಕೊಂಡು ಹೋಗಬೇಕು. ಎತ್ತರದ ಸ್ಥಳದಿಂದ ದೂಡಿ ಸಾಯಿಸಬೇಕು ಎಂದುಕೊಳ್ಳುತ್ತಾಳೆ. ಆದರೆ, ಅದು ಕಷ್ಟವಾಗಬಹುದು ತನ್ನ ಹೆಸರು ಬರಬಾರದು ಎಂದು, ಬೇರೆಯೇ ಪ್ಲ್ಯಾನ್ ಮಾಡಿದ್ದಾಳೆ. ಇದರಿಂದ ಲೀಲಾಳಿಗೂ ಹಳ್ಳ ತೋಡಿದ್ದಾಳೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆಯಲು ಅಂತರಾ ಆಲೋಚಿಸಿದ್ದಾಳೆ.

Hitler kalyana serial 6th November episode written update

ದುರ್ಗಾ ಬಗ್ಗೆ ಸಣ್ಣ ಸಣ ಮಾಹಿತಿ ಪಡೆದ ಎಜೆ

ಇನ್ನು ಎಜೆ ಈಗಾಗಲೇ ಪೋಲೀಸರಿಗೆ ದುರ್ಗಾ ಬಗ್ಗೆ ಹೇಳಿರುವುದರಿಂದ ಅವರು ಹುಡುಕಾಟ ಶುರು ಮಾಡಿದ್ದಾರೆ. ಪೊಲೀಸರು, ಎಜೆಗೆ ಫೋನ್ ಮಾಡಿ ದುರ್ಗಾ ಸಿಮ್ ಅನ್ನು ಬೇರೆ ಮೊಬೈಲ್‌ನಿಂದ ಬಳಸಲಾಗುತ್ತಿದೆ. ಯಾರ ಫೋನ್ ಅನ್ನು ರಿಸೀವ್ ಮಾಡುತ್ತಿಲ್ಲ. ಸಿಮ್ ಬಳಸುತ್ತಿರುವವರು ಕೇವಲ ನಿಮಗೆ ಮಾತ್ರ ಮೆಸೇಜ್ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಎಜೆಗೆ ಶಾಕ್ ಆಗುತ್ತದೆ. ದುರ್ಗಾ ಕಿಡ್ನ್ಯಾಪ್ ಆಗಿದ್ದರೆ, ಫೋನ್ ಬರಬೇಕಿತ್ತು. ಆದರೆ, ದುರ್ಗಾಳಿಗೆ ಏನಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಯೋಚಿಸುತ್ತಾನೆ.

ಲೀಲಾಳನ್ನು ಪ್ರಶ್ನೆ ಮಾಡಿದ ಎಜೆ

ದುರ್ಗಾಳ ಕಾಲ್ ಡೀಟೇಲ್ಸ್ ಎಜೆಗೆ ಸಿಗುತ್ತದೆ. ಯಾರು ಯಾರು ಫೋನ್ ಮಾಡಿದ್ದಾರೆ ಎಂದು ಚೆಕ್ ಮಾಡಿದಾಗ ದುರ್ಗಾ, ಲೀಲಾಳಿಗೆ 98 ಸಲ ಕಾಲ್ ಮಾಡಿರುತ್ತಾಳೆ. ಆದರೆ ಲೀಲಾ, ದುರ್ಗಾ ಫೋನ್ ಅನ್ನು ರಿಸೀವ್ ಮಾಡಿರುವುದಿಲ್ಲ. ಇದನ್ನು ನೋಡಿ ಗಾಬರಿಗೊಂಡ ಎಜೆ ಕೋಪದಲ್ಲಿ ಲೀಲಾಳನ್ನು ಕರೆಯುತ್ತಾನೆ. ಲೀಲಾಳಿಗೆ ಬೈದು ಪ್ರಶ್ನೆ ಮಾಡುತ್ತಾನೆ. ಯಾಕೆ ಹೀಗೆ ಮಾಡಿದ್ದೀಯಾ ಎಂದು ಕೇಳಿದಾಗ ಲೀಲಾ, ಅಂತರಾ ಬಗೆಗಿನ ಸತ್ಯವನ್ನು ಬಿಟ್ಟು, ಬೇರೆಲ್ಲವನ್ನೂ ಹೇಳುತ್ತಾಳೆ. ನಾನು ದುರ್ಗಾ ಜೊತೆಗೆ ಮಾತನಾಡಬೇಕು ಎಂದು ಕಾಯುತ್ತಿದ್ದೇನೆ ಎಂದು ಹೇಳಿ ಎಜೆಗೆ ಸಮಾಧಾನ ಮಾಡುತ್ತಾಳೆ.

More from Filmibeat

English summary
Hitler Kalyana Kannada serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X