For Quick Alerts
  ALLOW NOTIFICATIONS  
  For Daily Alerts

  ವಿಕ್ರಮ್ ಡ್ರಿಂಕ್ಸ್‌ನಲ್ಲಿ ಬೆರೆಸಿದ್ದು ವಿಷನಾ.? ಅದನ್ನು ಕುಡಿದ ಲೀಲಾಗೆ ಏನಾಯ್ತು..?

  By ಪ್ರಿಯಾ ದೊರೆ
  |

  'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ವಿಕ್ರಮ್, ಎಜೆ ಮನೆಗೆ ಬಂದಿರುವುದು ಲೀಲಾಗೆ ಆತಂಕವನ್ನು ಹೆಚ್ಚಿಸಿದೆ. ಅಲ್ಲದೇ ವಿಕ್ರಮ್ ಮನೆಗೆ ಬಂದಿರುವುದಕ್ಕೆ ಕಾರಣವನ್ನೂ ತಿಳಿಸಿದ್ದಾನೆ. ತಾನು ಎಜೆಯನ್ನು ಸಾಯಿಸಬೇಕು ಎಂದುಕೊಂಡಿರುವುದಾಗಿ ತಿಳಿಸಿದ್ದಾನೆ.

  ಈ ಮಾತುಗಳನ್ನು ಕೇಳಿರುವ ಲೀಲಾ ಭಯಗೊಂಡಿದ್ದಾಳೆ. ಎಜೆಗೆ ವಿಕ್ರಮ್ ಏನಾದರೂ ಮಾಡಿ ಬಿಡುತ್ತಾನೆ. ಎಜೆನ ಉಳಿಸಿಕೊಳ್ಳಬೇಕು. ಎಜೆಯಂತಹ ಒಳ್ಳೆಯ ವ್ಯಕ್ತಿ ಮೇಲೆ ವಿಕ್ರಮ್ ಯಾಕೆ ಹೀಗೆ ದ್ವೇಷ ಕಾರುತ್ತಿದ್ದಾನೋ ಎಂದು ಚಿಂತೆ ಮಾಡುತ್ತಿದ್ದಾಳೆ.

  ಎಜೆಯಂತೂ ವಿಕ್ರಮ್ ಮನೆಗೆ ಬಂದಿರುವುದಕ್ಕೆ ಫುಲ್ ಖುಷಿಯಾಗಿದ್ದಾನೆ. ಯಾರು ಏನೇ ಹೇಳಿದರೂ ಪಾಸಿಟಿವ್ ಆಗಿಯೇ ಮಾತನಾಡುತ್ತಿದ್ದಾನೆ. ಎಜೆಯಲ್ಲಿನ ಬದಲಾವಣೆಯನ್ನು ಕಂಡು ಮನೆಯವರೆಲ್ಲರೂ ಶಾಕ್ ಆಗಿದ್ದಾರೆ.

  ಸರಸ್ವತಿ ಮಾಡಿದ ಎಡವಟ್ಟು

  ಸರಸ್ವತಿ ಮಾಡಿದ ಎಡವಟ್ಟು

  ಎಜೆ ಮನೆಯಲ್ಲಿ ಆಯುಧ ಪೂಜೆಗೆ ಎಲ್ಲವೂ ಸಿದ್ಧವಾಗಿದೆ. ಎಜೆ, ವಿಕ್ರಮ್ ಹಾಗೂ ಲೀಲಾ ಮೂವರೂ ಬಂದು ಆಯುಧ ಪೂಜೆಯನ್ನು ಮಾಡಿದ್ದಾರೆ. ಎಜೆ ವಿಕ್ರಮ್ ಜೊತೆಗಿರಲು ತುಂಬಾನೇ ಎಕ್ಸೈಟ್ ಆಗಿದ್ದಾನೆ. ಲೀಲಾ, ಸರಸ್ವತಿ ಹೇಳಿದ್ದಾಳೆ ಎಂದು ಎಜೆ ಕೆಲಸ ಮಾಡುವ ಲ್ಯಾಪ್ ಟಾಪ್ ಅನ್ನು ಪೂಜೆಗೆ ತಂದಿಟ್ಟಿದ್ದಾಳೆ. ಇದನ್ನು ನೋಡಿದರೆ ಎಜೆ, ಲೀಲಾಗೆ ಬೈಯುತ್ತಾನೆ ಎಂಬುದು ಸರಸ್ವತಿ ಪ್ಲ್ಯಾನ್. ಬಟ್ ಎಜೆ ಲ್ಯಾಪ್ ಟಾಪ್ ನೋಡಿ ಮೊದಲು ಏರು ಧ್ವನಿಯಲ್ಲಿ ಯಾರು ತಂದಿಟ್ಟಿದ್ದು ಎಂದು ಕೇಳುತ್ತಾನೆ. ಅದಕ್ಕೆ ಸರಸ್ವತಿ, ಲೀಲಾ ತಂದಿಟ್ಟಿದ್ದನ್ನು ಅನು ಮತ್ತು ದುರ್ಗ ನೋಡಿದ್ವಿ ಎಂದು ಜಂಭದಿಂದ ಹೇಳುತ್ತಾಳೆ. ಆಗ ಎಜೆ, ದುರ್ಗಾಗೆ ಬೈಯುತ್ತಾನೆ. ಲೀಲಾಗೆ ಏನೂ ಗೊತ್ತಿಲ್ಲ. ಈಗ ಎಲ್ಲಾ ಕಲಿಯುತ್ತಿದ್ದಾಳೆ. ಈ ಮನೆಯ ಜವಾಬ್ದಾರಿ ಹೊತ್ತಿರುವ ದುರ್ಗಾ ನೀನು ದೊಡ್ಡವಳು. ಅವಳಿಗೆ ಬುದ್ಧಿ ಹೇಳೋದಕ್ಕೆ ಆಗಲ್ವಾ ಎಂದು ಬೈಯುತ್ತಾನೆ.

  ಬೈಯಿಸಿಕೊಂಡ ಸರಸ್ವತಿ

  ಬೈಯಿಸಿಕೊಂಡ ಸರಸ್ವತಿ

  ಎಜೆ, ದುರ್ಗಾಗೆ ಬೈದಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾಳೆ. ಸರಸ್ವತಿ ಮೇಲೆ ದುರ್ಗಾ ಕೋಪ ಮಾಡಿಕೊಂಡಿದ್ದಾಳೆ. ಸರಸ್ವತಿ ನನಗೆ ಹೀಗಾಗುತ್ತೆ ಅಂತ ಗೊತ್ತಿರಲಿಲ್ಲ. ಲೀಲಾಗೆ ಬೈಯುತ್ತಾರೆ ಎಂದುಕೊಂಡಿದ್ದೆ. ಆದರೆ ಎಜೆ ನಿಮಗೆ ಬೈದಿದ್ದಕ್ಕೆ ಕ್ಷಮಿಸಿ ಎಂದು ಹೇಳುತ್ತಾಳೆ. ಅಲ್ಲದೇ, ಏನೇ ಪ್ಲ್ಯಾನ್ ಮಾಡಿದರೂ ಅದು ನಮಗೆ ತಿರುಗುತ್ತದೆ. ಇದಕ್ಕೆ ಲೀಲಾ ಏನಾದರೂ ಮಾಟ-ಮಂತ್ರ ಮಾಡಿಸಿದ್ದಾಳಾ ಎಂದು ಸರಸ್ವತಿ ಹೇಳುತ್ತಾಳೆ. ಆಗ ದುರ್ಗಾ ಬೈದು ಕಳಿಸುತ್ತಾಳೆ. ನಿನ್ನ ಸಹವಾಸ ಮಾಡಿದ್ದು ನನ್ನ ತಪ್ಪು. ಲೀಲಾ ಮಾಡಿದ ಕೆಲಸಕ್ಕೆ ನಾನು ಬೈಯಿಸಿಕೊಳ್ಳಬೇಕಾಯ್ತು ಎನ್ನುತ್ತಾಳೆ.

  ವಿಕ್ರಮ್ ಡ್ರಿಂಕ್ಸ್‌ನಲ್ಲಿ ಬೆರೆಸಿದ್ದು ವಿಷನಾ..?

  ವಿಕ್ರಮ್ ಡ್ರಿಂಕ್ಸ್‌ನಲ್ಲಿ ಬೆರೆಸಿದ್ದು ವಿಷನಾ..?

  ಇತ್ತ ವಿಕ್ರಮ್ ಹಾಗೂ ಎಜೆ ಇಬ್ಬರೂ ಪಾರ್ಟಿ ಮಾಡಲು ಮುಂದಾಗುತ್ತಾರೆ. ವಿಕ್ರಮ್, ಎಜೆಗೆ ಗೊತ್ತಾಗದ ಹಾಗೆ ಡ್ರಿಂಕ್ಸ್‌ನಲ್ಲಿ ಏನೋ ಬೆರೆಸುತ್ತಾನೆ. ಇದನ್ನು ನೋಡಿದ ಲೀಲಾ ಭಯಪಡುತ್ತಾಳೆ. ವಿಷ ಹಾಕಿದ್ದಾನೇನೋ ಎಂದುಕೊಳ್ಳುತ್ತಾಳೆ. ವಿಕ್ರಮ್, ಎಜೆಗೆ ಡ್ರಿಂಕ್ಸ್ ಮಾಡುವಂತೆ ಬಲವಂತ ಮಾಡುತ್ತಿರುತ್ತಾನೆ. ಅಷ್ಟರಲ್ಲಿ ಬರುವ ಲೀಲಾ ಅದನ್ನು ತಾನೇ ಕುಡಿದು ಬಿಡುತ್ತಾಳೆ. ಕುಡಿದು ಮತ್ತಿನಲ್ಲಿ ವಿಕ್ರಮ್ ಬಗ್ಗೆ ಏನೇನೋ ಹೇಳುತ್ತಾಳೆ. ಅವನು ಒಳ್ಳೆಯವನಲ್ಲ. ನಿಮಗೆ ಏನೂ ಆಗಬಾರದು ಎಜೆ ಎಂದೆಲ್ಲಾ ಮಾತನಾಡುತ್ತಿರುತ್ತಾಳೆ.

  ಅಂಬಾರಿ ಗೊಂಬೆ ಲೀಲಾ ಬಿಸಾಡಿದ್ಯಾಕೆ..?

  ಅಂಬಾರಿ ಗೊಂಬೆ ಲೀಲಾ ಬಿಸಾಡಿದ್ಯಾಕೆ..?

  ನಂತರ ಎಜೆ, ವಿಕ್ರಮ್ ಬಳಿ ಕ್ಷಮೆ ಕೇಳುತ್ತಾನೆ. ಲೀಲಾ ಏನೋ ಎಮೋಷನಲ್ ಆಗಿ ಮಾತನಾಡಿದಳು ಬೇಸರ ಮಾಡಿಕೊಳ್ಳಬೇಡ ಎಂದು ವಿಕ್ರಮ್ ಗೆ ಹೇಳುತ್ತಾನೆ. ವಿಕ್ರಮ್ ನನಗೇನು ಬೇಸರವಿಲ್ಲ. ನನಗೆ ಕೆಲಸವಿದೆ ಎಂದು ಹೇಳಿ ಹೊರಡುತ್ತಾನೆ. ಇನ್ನು ಲೀಲಾ ಬೆಳಗೆದ್ದು, ಎಜೆ ಇಷ್ಟಪಟ್ಟ ಅಂಬಾರಿಯನ್ನು ಆಚೆ ತಂದು ಬಿಸಾಡುತ್ತಾಳೆ. ಲೀಲಾಳನ್ನು ಸಾಯಿಸಿಬಿಡುತ್ತಾನಾ..? ಮುಂದೆ ಎಜೆ ಲೀಲಾಗೆ ಏನು ಮಾಡುತ್ತಾನೋ ಎಂಬ ಕುತೂಹಲವಿದೆ.

  English summary
  Hitler Kalyana serial 6th October Episode Written Update. AJ scolds durga for leela mistake. Vikram mixed something for AJ’s drinks. And leela drinks it.
  Friday, October 7, 2022, 17:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X