Hitler Kalyana: ಅತ್ತೆಯನ್ನು ಅರ್ಥ ಮಾಡಿಕೊಂಡು ಕ್ಷಮೆ ಕೇಳಿದ ಸೊಸೆ

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ದುರ್ಗಾ, ಲೀಲಾಳನ್ನು ಕೊಲೆ ಮಾಡಿಸಲು ಪ್ಲ್ಯಾನ್ ಮಾಡಿದ್ದಳು. ಆದರೆ ಲಕ್ಷ್ಮೀ ಮಾಡಿದ ಸಣ್ಣ ಎಡವಟ್ಟಿನಿಂದ ಎಲ್ಲವೂ ಫ್ಲಾಪ್ ಆಗಿದೆ.

ರೌಡಿಗಳು ಲಕ್ಷ್ಮೀಯನ್ನು ಕಿಡ್ನಾಪ್ ಮಾಡುತ್ತಾರೆ. ಇದನ್ನು ನೋಡಿದ ಲೀಲಾ ಅವರನ್ನು ಚೇಸ್ ಮಾಡುತ್ತಾಳೆ. ಆಗ ಲಕ್ಷ್ಮಿಯನ್ನು ಕಿಡ್ನಾಪ್ ಮಾಡಲು ದುರ್ಗಾಳೆ ಹೇಳಿರುವುದು ಎಂಬ ಸತ್ಯ ಲೀಲಾಳಿಗೆ ಮತ್ತು ಲಕ್ಷ್ಮಿಗೆ ಗೊತ್ತಾಗುತ್ತದೆ.

ದುರ್ಗಾ, ಲೀಲಾಳನ್ನು ಕಿಡ್ನಾಪ್ ಮಾಡಿಸಲು ಹೇಳಿದ್ದಾರೆ. ಆದರೆ ಎಡವಟ್ಟಾಗಿ ನಾನು ಬಂದಿದ್ದೇನೆ. ಹಾಗಾಗಿ ಹೀಗಾಗಿದೆ ಅಂದುಕೊಳ್ಳುತ್ತಾಳೆ. ಬಳಿಕ ಎಜೆ ಬಂದು ಲೀಲಾ ಹಾಗೂ ಲಕ್ಷ್ಮಿ ಇಬ್ಬರನ್ನು ಬಚಾವ್ ಮಾಡುತ್ತಾನೆ.

ಲೀಲಾ ಬಗ್ಗೆ ಯೋಚಿಸಿದ ಎಜೆ

ಲೀಲಾ ಬಗ್ಗೆ ಯೋಚಿಸಿದ ಎಜೆ

ಲೀಲಾಳನ್ನು ಮನೆಗೆ ಕರೆದುಕೊಂಡು ಬಂದ ಮೇಲೆ ಎಜೆಗೆ ತಾನು ತಾಳಿ ಕಿತ್ತು ಹಾಕಿದ್ದು ತಪ್ಪು ಎಂದು ಅರ್ಥವಾಗುತ್ತದೆ. ಹೀಗಾಗಿ ಎಜೆ, ಲೀಲಾಳಿಗೆ ತಾಳಿಯನ್ನು ಕಟ್ಟಲು ಮುಂದಾಗುತ್ತಾನೆ. ಆದರೆ ಲೀಲಾ ಇದಕ್ಕೆ ಒಪ್ಪುವುದಿಲ್ಲ. ನನಗೆ ನಾಲ್ಕು ಜನರಿಂದ ರಕ್ಷಣೆ ಕೊಡುವ ಸಲುವಾಗಿ ಈ ತಾಳಿಯನ್ನು ಕಟ್ಟುವುದಾದರೆ ಬೇಡ. ಪ್ರೀತಿಯಿಂದ ಕಟ್ಟುವುದಾದರೆ ಮಾತ್ರ ಈ ತಾಳಿಗೆ ಬೆಲೆ ಇರುತ್ತೆ. ಇಲ್ಲದಿದ್ದರೆ ಇಲ್ಲ ಎಂದು ಹೇಳುತ್ತಾಳೆ. ಲೀಲಾ ಮಾತನಾಡಿದ ಒಂದೊಂದು ಮಾತುಗಳು ಸತ್ಯ ಎಂದು ಎಜೆ ಯೋಚಿಸಲು ಶುರು ಮಾಡುತ್ತಾನೆ. ಆಕೆ ಏನು ತಪ್ಪು ಮಾಡಿಲ್ಲ. ನಾನೇ ತಪ್ಪಾಗಿ ಅರ್ಥ ಮಾಡಿಕೊಂಡೆ ಎಂದು ಯೋಚಿಸುತ್ತಿರುತ್ತಾನೆ.

ದುರ್ಗಾ ಮೇಲೆ ಲಕ್ಷ್ಮೀಗೆ ಕೋಪ

ದುರ್ಗಾ ಮೇಲೆ ಲಕ್ಷ್ಮೀಗೆ ಕೋಪ

ದುರ್ಗಾ ಹಾಗೂ ಸರಸ್ವತಿ ಬಳಿ ಲಕ್ಷ್ಮಿ ಬಂದು ಮಾತನಾಡುತ್ತಾಳೆ. ಆಗ ಸರಸ್ವತಿ ಹಾಗೂ ದುರ್ಗಾ ಇಬ್ಬರು ಲಕ್ಷ್ಮಿಯಿಂದಾಗಿ ಪ್ಲ್ಯಾನ್ ಉಲ್ಟಾ ಆಯಿತು. ಇಲ್ಲದಿದ್ದರೆ ಇವತ್ತು ಲೀಲಾ ಸಾಯುತ್ತಿದ್ದಳು ಎಂದು ಕೋಪದಲ್ಲಿ ಮಾತನಾಡುತ್ತಾರೆ. ನಿಮಗೆ ಅರ್ಥವಾಗುತ್ತಿಲ್ವಾ? ನಿಮಗೆ ಇಲ್ಲಿ ಲೀಲಾಳದ್ದೆ ಯೋಚನೆ ಅಲ್ವಾ ಎಂದು ಮರು ಪ್ರಶ್ನೆ ಮಾಡುತ್ತಾಳೆ. ಆಗ ದುರ್ಗಾ ಲಕ್ಷ್ಮಿಯನ್ನು ಲೆಕ್ಕಕ್ಕಿಟ್ಟುಕೊಳ್ಳದೆ ಬೇಜವಾಬ್ದಾರಿತನದಿಂದ ಮಾತನಾಡಿದಾಗ ಲಕ್ಷ್ಮಿಗೆ ಬೇಸರವಾಗುತ್ತದೆ. ನಾವು ಅಷ್ಟೆಲ್ಲ ಅನ್ಯಾಯ ಮಾಡಿದರೂ ಲೀಲಾ ನನ್ನನ್ನು ರಕ್ಷಿಸಿದಳು. ನಿಮಗಿಂತ ಅವಳೇ ಲೇಸು. ನಾನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಲಕ್ಷ್ಮಿ ತನ್ನ ಅತ್ತೆಯ ಬಗ್ಗೆ ಅರ್ಥ ಮಾಡಿಕೊಂಡು ದುರ್ಗಾ ಗುಂಪನ್ನು ಬಿಟ್ಟು ಹೊರಡುತ್ತಾಳೆ.

ಲೀಲಾ ಬಳಿ ಕ್ಷಮೆ ಕೇಳಿದ ಲಕ್ಷ್ಮೀ

ಲೀಲಾ ಬಳಿ ಕ್ಷಮೆ ಕೇಳಿದ ಲಕ್ಷ್ಮೀ

ಲಕ್ಷ್ಮಿ, ಲೀಲಾ ಬಳಿ ಬಂದು ಕ್ಷಮೆಯನ್ನು ಕೇಳುತ್ತಾಳೆ. ನಿಮ್ಮ ಬಗ್ಗೆ ನನಗೆ ಗೊತ್ತಿರಲಿಲ್ಲ ಕ್ಷಮಿಸಿ. ನಿಮಗೆ ನಾನು ಅನ್ಯಾಯ ಮಾಡಿದೆ. ನಿಮ್ಮ ಬಗ್ಗೆ ತಿಳಿಯದೆ, ಏನು ಮಾಡದ ನಿಮ್ಮ ವಿರುದ್ಧ ಕೆಲಸ ಮಾಡಿದೆ. ಇನ್ಯಾವತ್ತೂ ಹೀಗೆ ನಾನು ಮಾಡುವುದಿಲ್ಲ ಎಂದು ಹೇಳುತ್ತಾಳೆ. ಆಗ ಅಜ್ಜಿ ಬಂದು ತನ್ನ ಸೊಸೆ ಲೀಲಾ ಎಷ್ಟು ಒಳ್ಳೆಯವಳು. ಅವಳು ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಮನಸ್ಸುಳ್ಳವಳು ಎಂಬುದನ್ನು ಲಕ್ಷ್ಮಿಗೆ ಅರ್ಥ ಮಾಡಿಸುತ್ತಾರೆ.

ಪ್ರೀತಿಯಲ್ಲಿ ಬಿದ್ದನಾ ಎಜೆ

ಪ್ರೀತಿಯಲ್ಲಿ ಬಿದ್ದನಾ ಎಜೆ

ಎಜೆ, ಲೀಲಾ ಬಗ್ಗೆ ಯೋಚಿಸುತ್ತಿರುತ್ತಾನೆ. ಆಗ ಅಲ್ಲಿಗೆ ವಿಶ್ವರೂಪ್ ಬರುತ್ತಾನೆ. ವಿಶ್ವರೂಪ್ ಬಳಿ ಲೀಲಾ ಬಗ್ಗೆ ವಿಚಾರಿಸುತ್ತಾನೆ. ವಿಶ್ವರೂಪ್, ಲೀಲಾ ಬಗ್ಗೆ ಒಳ್ಳೆಯ ಮಾತುಗಳನ್ನು ಆಡುತ್ತಾನೆ. ಎಜೆ ಹೌದಲ್ಲ ತುಂಬಾ ಒಳ್ಳೆಯವಳು ಎಂದು ಮನದಲ್ಲೇ ಅಂದುಕೊಳ್ಳುತ್ತಾನೆ. ಲೀಲಾ ಮನಸ್ಸನ್ನು ಅರ್ಥಮಾಡಿಕೊಂಡರೆ ಅವಳ ಪ್ರೀತಿಯಲ್ಲಿ ಎಜೆ ಬೀಳುವುದಂತೂ ಗ್ಯಾರಂಟಿ. ಎಜೆ ಮನದಲ್ಲಿ ಲೀಲಾ ಮೇಲೆ ಪ್ರೀತಿ ಹುಟ್ಟುವುದನ್ನು ನೋಡುವುದಕ್ಕೆ ಪ್ರೇಕ್ಷಕರು ಕೂಡ ಕುತುಹಲದಿಂದ ಕಾಯುತ್ತಿದ್ದಾರೆ.

More from Filmibeat

English summary
Hitler Kalyana serial 8th February Episode Written Update. lakshmi asks sorry with leela. AJ starts thinking about leela.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X