ಚುಕ್ಕಿಯನ್ನು ಮನೆಗೆ ಕರೆತಂದ ಎಜೆ: ದೇವ್ ಕಥೆ ಫಿನೀಶ್!
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಜೆ ಸೊಸೆಯಂದಿರು ಕೌಸಲ್ಯ ಮನೆಯಲ್ಲಿ ಬೀಡು ಬಿಟ್ಟಿದ್ದಾರೆ. ಕೌಸಲ್ಯ ಕೊಟ್ಟ ಕಾಟಕ್ಕೆ ತಿರುಮಂತ್ರ ಹಾಕಲು ಹೋಗಿದ್ದಾರೆ. ಆದರೆ ಎಜೆ ಸರಿಯಾದ ಸಮಯಕ್ಕೆ ಅಕಸ್ಮಾತ್ ಆಗಿ ಗಣೇಶ ಮೂರ್ತಿಯನ್ನು ತಂದಿದ್ದಾರೆ. ಇದರಿಂದ ಮನೆಯಲ್ಲಿ ಎಲ್ಲರೂ ಖುಷಿಯಾಗಿದ್ದಾರೆ.
ಆದರೆ ಇತ್ತ ಚುಕ್ಕಿ ಮನೆಯಲ್ಲಿ ಕಾಣಿಸುತ್ತಿಲ್ಲ. ಆಕೆ ಎಲ್ಲಿಗೆ ಹೋಗಿದ್ದಾಳೆ ಎಂಬುದು ಕೂಡ ಗೊತ್ತಿಲ್ಲ. ಎಷ್ಟು ಸಲ ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಇದರಿಂದ ಕೌಸಲ್ಯ ಟೆನ್ಷನ್ ಆಗಿದ್ದಾಳೆ.
ಆದರೆ, ಎಜೆಗೆ ಇದೆಲ್ಲವೂ ದೇವ್ ಕೆಲಸ ಎಂದು ತಿಳಿದು ಬಂದಿದೆ. ಹೀಗಾಗಿ ಲೀಲಾಗೆ ಮಾತ್ರ ಹೇಳಿ ಎಜೆ ಚುಕ್ಕಿ ಕರೆದುಕೊಂಡು ಬರಲು ಹೋಗಿದ್ದಾನೆ. ದೇವ್ ಚುಕ್ಕಿಯನ್ನು ಕಟ್ಟಿ ಹಾಕಿ ಮದುವೆಯಾಗಲು ಮುಂದಾಗಿದ್ದಾನೆ.

ದೇವ್ ಜೊತೆಯಲ್ಲಿ ಚುಕ್ಕಿ
ದೇವ್, ಚುಕ್ಕಿಯನ್ನು ಕಿಡ್ನಾಪ್ ಮಾಡಿದ್ದಾನೆ. ಮದುವೆಯಾಗಲು ಮುಂದಾಗಿದ್ದಾನೆ. ಇನ್ನು ಎಜೆ ಬಂದರೆ, ಅವರಿಗೆ ಹೊಡೆಯಲು ಗೂಂಡಾಗಳನ್ನು ಕೂಡ ಕರೆಸಿದ್ದಾನೆ. ಸ್ಥಳಕ್ಕೆ ಬಂದ ಎಜೆ ಫೈಟ್ ಮಾಡುವುದಿಲ್ಲ ಎಂದು ಹೇಳಿ ಬೆಟ್ ಕಟ್ಟಿದ್ದಾನೆ. ರೌಡಿಗಳು ಎಜೆ ಮಾತಿಗೆ ಮರುಳಾಗಿದ್ದು, ಅವರೂ ಕೂಡ ಬೆಟ್ ಕಟ್ಟಿದ್ದಾರೆ. ಎಜೆ ಈಗ ಚುಕ್ಕಿಗೆ ತನ್ನ ಕೈಗೆ ಸಿಗುವ ವಸ್ತುಗಳನ್ನೇ ಬಳಸಿ ದೇವ್‌ಗೆ ಹೊಡೆಯಲು ಹೇಳಿಕೊಟ್ಟಿದ್ದಾನೆ. ಚುಕ್ಕಿ, ಎಜೆ ಮಾತುಗಳನ್ನು ಕೇಳಿ ತಟ್ಟೆ, ತೆಂಗಿನ ಕಾಯಿಯನ್ನು ಬಳಸಿ ದೇವ್‌ಗೆ ಹೊಡೆದಿದ್ದಾಳೆ. ಆದರೆ ಚುಕ್ಕಿಗೆ ಇಟ್ಟಿಗೆಯಿಂದ ದೇವ್ ತಲೆಗೆ ಹೊಡೆದಿದ್ದಾನೆ. ಇದರಿಂದ ಚುಕ್ಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.

ಚುಕ್ಕಿಯನ್ನು ಕಾಪಾಡಲು ಬಂದ ಎಜೆ
ಇತ್ತ ಬೆಟ್ಟಿಂಗ್ ಕಟ್ಟಿರುವ ರೌಡಿಗಳು ಎಜೆಗೆ ದೇವ್‌ನನ್ನು ಹೊಡೆಯುವಂತೆ ಹೇಳಿದ್ದಾರೆ. ಆದರೆ ಗೆರೆ ಹಾಕಿದ್ದೇನೆ. ನಾನು ದೇವ್‌ಗೆ ಹೊಡೆಯಲು ಆಗೊಲ್ಲ ಎಂದಿದ್ದಕ್ಕೆ ರೌಡಿಗಳು ಗೆರೆಯನ್ನು ಅಳಿಸಿದ್ದಾರೆ. ಎಜೆ ಗೆರೆ ದಾಟಿ ಹೋಗಿದ್ದಾನೆ. ಸಿನಿಮಾ ರೀತಿಯಲ್ಲೇ ಫೈಟಿಂಗ್ ನಡೆದಿದೆ. ಫೈಟಿಂಗ್ ಮಾಡಿ ಎಜೆ, ದೇವ್‌ಗೆ ಒಂದು ಗತಿಯನ್ನು ಕಾಣಿಸಿದ್ದಾನೆ. ಹೆಣ್ಣು ಮಕ್ಕಳನ್ನು ತಪ್ಪು ದಾರಿಗೆ ಎಳೆದು, ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸಿ, ಪ್ರೀತಿ ಹೆಸರಲ್ಲಿ ಮೋಸ ಮಾಡುತ್ತಿದ್ದೀಯಾ ಎಂದು ಬಾರಿಸಿದ್ದಾನೆ. ಎಜೆ ಕೊಟ್ಟ ಏಟಿಗೆ ದೇವ್ ಸುಸ್ತಾಗಿ ಹೋಗಿದ್ದಾನೆ.

ಆತಂಕದಲ್ಲಿರುವ ಕೌಸಲ್ಯ
ಇತ್ತ ಮನೆಯಲ್ಲಿ ಗಣೇಶನ ಪೂಜೆ ಮಾಡಲು ಕೌಸಲ್ಯ, ಲೀಲಾ ಕಾಯುತ್ತಿದ್ದಾರೆ. ಆದರೆ ಗೆಜ್ಜೆ ವಸ್ತ್ರ ತರಲು ಹೋದ ಚುಕ್ಕಿನೂ ಪತ್ತೆ ಇಲ್ಲ. ಇತ್ತ ಎಜೆ ಕೂಡ ಕಾಣಿಸುತ್ತಿಲ್ಲ. ಕೌಸಲ್ಯ ಆತಂಕವನ್ನು ಕಡಿಮೆ ಮಾಡಲು ಲೀಲಾ ಎಷ್ಟು ಪ್ರಯತ್ನಿಸಿದರೂ ಆಗುತ್ತಿಲ್ಲ. ಎಜೆ ಮತ್ತು ಚುಕ್ಕಿ ಇಬ್ಬರೂ ಒಟ್ಟಿಗೆ ಬರುತ್ತಿದ್ದಾರೆ ಎಂದು ಸಮಾಧಾನ ಮಾಡಿದ್ದಾಳೆ. ಆದರೂ ಕೌಸಲ್ಯಳ ಆತಂಕ ಕೊಂಚವೂ ಕಡಿಮೆ ಆಗುತ್ತಿಲ್ಲ. ಹಬ್ಬದ ದಿನವೇ ಏಕೆ ಹೀಗೆಲ್ಲಾ ಆಗುತ್ತಿದೆ ಎಂದು ಒದ್ದಾಡುತ್ತಿದ್ದಾಳೆ. ಕೌಸಲ್ಯಳನ್ನು ನೋಡಿದ ದುರ್ಗಾ ಮತ್ತು ಲಕ್ಷ್ಮೀ ಇಬ್ಬರೂ ಖುಷಿ ಪಡುತ್ತಿದ್ದಾರೆ. ತಮ್ಮನ್ನು ಗೋಳಾಡಿಸಿಕೊಂಡಿದ್ದಕ್ಕೆ ಇದೆಲ್ಲ ಆಗಬೇಕಿದ್ದೆ ಎಂದು ಮಾತನಾಡಿಕೊಂಡಿದ್ದಾರೆ.

ಮನೆಗೆ ಬಂದ ಚುಕ್ಕಿ
ಕೌಸಲ್ಯ ಆತಂಕದಲ್ಲಿರುವಾಗಲೇ ಎಜೆ, ಚುಕ್ಕಿಯನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಚುಕ್ಕಿಯನ್ನು ನೋಡಿ ಸಮಾಧಾನ ಪಟ್ಟುಕೊಂಡ ಕೌಸಲ್ಯ ಬೈಯುತ್ತಾಳೆ. ಚುಕ್ಕಿ, ಕೌಸಲ್ಯಳನ್ನು ಆತಂಕದಿಂದ ತಬ್ಬಿಕೊಳ್ಳುತ್ತಾಳೆ. ನಂತರ ದೇವರಿಗೆ ಪೂಜೆ ಮಾಡಲಾಗುತ್ತದೆ. ನಂತರ ಲೀಲಾ ಎಜೆ ಬಳಿ ಫೈಟಿಂಗ್ ಹೇಗೆ ನಡೆಯಿತು ಎಂದು ತಿಳಿದುಕೊಲ್ಳಲು ಎಜೆ ಬಳಿ ಮಾತನಾಡಲು ಹೋಗುತ್ತಾಳೆ.


Click it and Unblock the Notifications











