'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ನಟನ ತೆಲುಗು ಜರ್ನಿ ಆರಂಭ!

By ಎಸ್ ಸುಮಂತ್

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆ ಮಕ್ಕಳದ್ದು ಕೂಡ ಬಹುಮುಖ್ಯ ಪಾತ್ರವಾಗಿತ್ತು. ಅದರಲ್ಲಿ ರಾಕೇಶ್ ಮತ್ತು ವಿನಯ್ ಮುದ್ದಿನ ಮಕ್ಕಳ ಪಾತ್ರದಲ್ಲಿ ರಂಜಿಸಿದ್ದರು. ನೋಡುವುದಕ್ಕೆ ಪಕ್ಕಾ ಅಣ್ಣ ತಮ್ಮಂದಿರಂತೆಯೇ ಇದ್ದರು. ಆದರೆ ಆ ಇಬ್ಬರು ಬೆಸ್ಟ್ ಫ್ರೆಂಡ್ಸ್. ಆದರೆ ನೋಡಿದವರಿಗೆ ಅವಳಿ ಜವಳಿಯಂತೆಯೇ ಫೀಲ್ ಕೊಡುತ್ತಿದ್ದರು. ಆದರೀಗ ರಾಕೇಶ್ ತನ್ನ ನಟನಾ ಕೌಶಲ್ಯದಿಂದ ಕನ್ನಡದಿಂದ ತೆಲುಗಿಗೆ ಹಾರಿದ್ದಾರೆ.

ಮೊದ ಮೊದಲಿಗೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದ ರಾಕೇಶ್, ಇದೀಗ 'ಹಿಟ್ಲರ್ ಕಲ್ಯಾಣ'ದಲ್ಲೂ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ತೆಲುಗು ಇಂಡಸ್ಟ್ರಿಯಲ್ಲಿ ಹೊಸ ಧಾರಾವಾಹಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಹೊಸ ಧಾರಾವಾಹಿ, ಹೊಸ ಪಾತ್ರ, ಹೊಸ ರೀತಿಯ ಕಥೆಯಲ್ಲಿ ಅಭಿನಯಿಸಲು ರಾಕೇಶ್ ಕೌತುಕವಾಗಿದ್ದಾರೆ.

ರಾಕೇಶ್ ಹೊಸ ಧಾರಾವಾಹಿ 'ಮುಕ್ಕು ಪುಡುಕು'

ರಾಕೇಶ್ ಹೊಸ ಧಾರಾವಾಹಿ 'ಮುಕ್ಕು ಪುಡುಕು'

ರಾಕೇಶ್ ಈಗಾಗಲೇ ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಜೀ ಕನ್ನಡದಲ್ಲಿ ಎಲ್ಲರ ಮನಗೆದ್ದಿದ್ದ ರಾಕೇಶ್‌ಗೆ ಜೀ ತೆಲುಗು ಬಹಳ ಬೇಗ ಅವಕಾಶ ನೀಡಿದೆ. ಹೊಸ ಧಾರಾವಾಹಿ 'ಮುಕ್ಕು ಪುಡುಕು'ನಲ್ಲಿ ಅಭಿನಯಿಸಿದ್ದು, ಈಗಾಗಲೇ ಪ್ರೋಮೊ ರಿಲೀಸ್ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಜೀ ತೆಲುಗಿನಲ್ಲಿ 'ಮುಕ್ಕು ಪುಡುಕ್ಕು' ಆರಂಭವಾಗಲಿದೆ.

ತೆಲುಗಿನಲ್ಲಿ ಮುಖ್ಯ ಪಾತ್ರ

ತೆಲುಗಿನಲ್ಲಿ ಮುಖ್ಯ ಪಾತ್ರ

ನಟನಾ ಕ್ಷೇತ್ರ ಎಲ್ಲರನ್ನು ಸೆಳೆಯುತ್ತದೆ. ಅದರಂತೆ ಬೇಕೆಂದಿದ್ದು ಎಲ್ಲರಿಗೂ ಬಹಳ ಬೇಗ ಸಿಗುವುದಿಲ್ಲ. ಕೆಲವರು ಬೇಕಾದದ್ದನ್ನು ಪಡೆಯುವುದಕ್ಕಾಗಿ ಸಾಕಷ್ಟು ಕಷ್ಟ ಪಡುತ್ತಾರೆ. ರಾಕೇಶ್ ಕೂಡ ಸಾಕಷ್ಟು ಶ್ರಮ ಹಾಕಿದ್ದಾರೆ. ಆ ಶ್ರಮಕ್ಕೆ ಪ್ರತಿಫಲದಂತೆ ಕನ್ನಡದಲ್ಲಿಯೂ 'ಗಿಣಿರಾಮ' ಧಾರಾವಾಹಿಯಲ್ಲಿ ಮುಖ್ಯಪಾತ್ರದಲ್ಲಿ ಮಿಂಚಿದ್ದರು. ಇದೀಗ ಅದೇ ನಟನಾ ಕೌಶಲ್ಯ, ಪರಿಶ್ರಮ, ಶ್ರದ್ಧೆಯಿರುವ ಕಾರಣ ತೆಲುಗಿನಲ್ಲಿಯೂ ಅವಕಾಶ ಅರಸಿ ಬಂದಿದೆ. 'ಮುಕ್ಕು ಪುಡುಕ್ಕು' ಧಾರಾವಾಹಿಯಲ್ಲಿ ರಾಕೇಶ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಲವ್ವರ್ ಬಾಯ್ ಆದ ರಾಕೇಶ್

ಲವ್ವರ್ ಬಾಯ್ ಆದ ರಾಕೇಶ್

ಜೀ ತೆಲುಗುನಲ್ಲಿ 'ಮುಕ್ಕು ಪುಡುಕ್ಕು' ಪ್ರೋಮೊ ರಿಲೀಸ್ ಆಗಿದೆ. ದೈವಿಕ ಕುಟುಂಬದ ಮನೆತನದವರಾಗಿ ರಾಕೇಶ್ ಕಾಣಿಸಿಕೊಂಡಿದ್ದಾರೆ. ಹಾಗೇ ಐಶ್ವರ್ಯಾ ನಟಿಯಾಗಿ ಅಭಿನಯಿಸಿದ್ದು, ಲವ್ ಅಟ್ ಫಸ್ಟ್ ಸೈಟ್ ಎಂಬ ದೃಶ್ಯಕಾವ್ಯ ಪ್ರೋಮೊದಲ್ಲಿ ಅನಾವರಣವಾಗಿದೆ. ದೊಡ್ಡ ಮನೆತನದಲ್ಲಿ ರಾಕೇಶ್ ಇರುವುದು ಕಂಡು ಬಂದಿದೆ. ಪ್ರೋಮೊ ತುಂಬಾ ರಿಚ್ ಆಗಿ ಬಂದಿದ್ದು, ರಾಕೇಶ್ ನಿರೀಕ್ಷೆ ಯಶಸ್ಸಾಯಾಗುವುದರಲ್ಲಿ ಅನುಮಾನವಿಲ್ಲ. ಈ ಪಾತ್ರ ರಾಕೇಶ್‌ಗೆ ಕೂಡ ಖುಷಿ ಕೊಟ್ಟಿದೆ.

ತೆಲುಗುಗೆ ಹೋದ ರಾಕೇಶ್ ಹೇಳಿದ್ದು ಹೀಗೆ?

ತೆಲುಗುಗೆ ಹೋದ ರಾಕೇಶ್ ಹೇಳಿದ್ದು ಹೀಗೆ?

ರಾಕೇಶ್ ಈಗಾಗಲೇ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಈಗ ತೆಲುಗು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಬಗ್ಗೆ ರಾಕೇಶ್ ಹೇಳಿದ್ದು ಹೀಗೆ, ತೆಲುಗು 'ಮುಕ್ಕು ಪುಡುಕ್ಕು' ಎಂಬ ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದೇನೆ. 'ಗಿಣಿರಾಮ' ಮಾಡುತ್ತಿದ್ದಾಗ ಒಂದು ಧಾರಾವಾಹಿಯಲ್ಲಿ ಮಾಡುವ ಅವಕಾಶ ಬಂತು. ಆದರೆ ಆ ಹೊಸ ಧಾರಾವಾಹಿಯಲ್ಲಿ ನಟಿಸಲು ಆಗಲಿಲ್ಲ. ಆದರೆ 'ಗಿಣಿರಾಮ' ಮುಗಿದ ಕೂಡಲೇ 'ಮುಕ್ಕು ಪುಡುಕ್ಕು' ಸಿಕ್ಕಿದೆ. ಪ್ರೈಮ್ ಟೈಮ್‌ನಲ್ಲಿಯೇ ಸ್ಲಾಟ್ ಸಿಕ್ಕಿದೆ. ಅದು ನಂಗೆ ದೊಡ್ಡ ಖುಷಿ ಕೊಡುವ ವಿಚಾರ. ಹಲವು ಹಿರಿಯ ಕಲಾವಿದರು 'ಮುಕ್ಕು ಪುಡುಕ್ಕು' ಧಾರಾವಾಹಿಯಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಧಾರಾವಾಹಿ ಟೆಲಿಕಾಸ್ಟ್ ಆಗಲಿದೆ. ಒಂದೊಳ್ಳೆ ಅನುಭವ ನೀಡಿದೆ ಎನ್ನುತ್ತಿದ್ದಾರೆ.

More from Filmibeat

English summary
Hitler Kalyana Serial Actor Rakesh Entered Into Telugu Serial Mukkudu Pudukku Soon. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X