Don't Miss!
- News
ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್ ಮತ್ತೆ ವಿವಾದ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಎಜೆ ಸೊಸೆ ದುರ್ಗಾ ನ್ಯೂ ಲುಕ್‌ಗೆ ಫಿದಾ ಆದ ಫಾಲೋವರ್ಸ್ : ನೀವು ಇಲ್ಲಿರಬೇಕಾದವರಲ್ಲ ಅಂದಿದ್ಯಾಕೆ..?
'ಹಿಟ್ಲರ್ ಕಲ್ಯಾಣ'ದಲ್ಲಿ ಎಜೆಗೆ ಮೂವರು ಸೊಸೆಯಂದಿರು. ಅದರಲ್ಲಿ ದೊಡ್ಡವಳು ದುರ್ಗಾ, ಸೆಕೆಂಡ್ ಲಕ್ಷ್ಮೀ, ಮೂರನೇಯದ್ದಾಗಿ ಸರಸ್ವತಿ ಅಲಿಯಾಸ್ ಸರೂ. ಮೂವರು ಸೊಸೆಯಂದಿರು ಎಜೆ ಕಂಡರೆ ನಡುಗುತ್ತಾರೆ. ಆದರೆ ಕುತಂತ್ರ ಮಾಡುವುದನ್ನು ಮಾತ್ರ ಕಡಿಮೆ ಮಾಡಿಲ್ಲ. ಅವರಿಗಿಂತ ಯಂಗ್ ಆಗಿರೋ ಅತ್ತೆಯನ್ನು ಮನೆ ಬಿಟ್ಟು ಓಡಿಸಬೇಕು ಎಂದೇ ಬಯಸುತ್ತಿದ್ದಾರೆ.
ಈಗ ಲೀಲಾಳ ಸುದ್ದಿಯಿಂದ ಕೊಂಚ ಜರುಗಿರುವ ದುರ್ಗಾ, ಲೀಲಾಳ ತಂಗಿ ಚುಕ್ಕಿ ಲೈಫ್ ನಲ್ಲಿ ಆಟ ಆಡುವುದಕ್ಕೆ ಶುರು ಮಾಡಿದ್ದಾಳೆ. ತಾನು ಬಚಾವ್ ಆಗುವುದಲ್ಲದೆ ಈಗ ಲೀಲಾ, ದುರ್ಗಾಳ ಕುತಂತ್ರದಿಂದ ಚುಕ್ಕಿಯನ್ನು ಪಾರು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
Comedy
Khiladigalu
season
4:
ರಾಜಮೌಳಿ
ಸಿನಿಮಾಗೆ
ಕುದುರೆ
ಕಳುಹಿಸುವುದೇ
ಈ
ಗಿಲ್ಲು
ನಟರಾಜ
!
ಇದೆಲ್ಲಾ ಸೀರಿಯಲ್‌ಗೆ ಸಂಬಂಧಿಸಿದ್ದಾದರೆ ದುರ್ಗಾ ಅಲಿಯಾಸ್ ನಂದಿನಿ ಮೂರ್ತಿ ರಿಯಲ್ ಲೈಫ್‌ನಲ್ಲಿ ಇರುವುದೇ ಬೇರೆ ರೀತಿ. ಧಾರಾವಾಹಿಯಲ್ಲಿ ಯಾವಾಗಲೂ ಕತ್ತಿ ಮಸೆಯುವ ದುರ್ಗಾ ರಿಯಲ್ ಲೈಫ್‌ನಲ್ಲಿ ಲೀಲಾ ಜೊತೆಗೂ ಒಳ್ಳೆ ಬಾಂಧವ್ಯ ಹೊಂದಿದ್ದಾರೆ. ಧಾರಾವಾಹಿಯಲ್ಲಿ ಮಾತ್ರ ದುರ್ಗಾಳಿಗೆ ಲೀಲಾಳನ್ನು ಕಂಡರೆ ಇನ್ನಿಲ್ಲದ ದ್ವೇಷ. ಇದೀಗ ಹೊಸದೊಂದು ಫೋಟೊ ವಿಚಾರಕ್ಕೆ ದುರ್ಗಾ ಅಲಿಯಾಸ್ ನಂದಿನಿ ಫುಲ್ ಸುದ್ದಿಯಲ್ಲಿದ್ದಾರೆ.

ಎಜೆ ಸೊಸೆಯ ನ್ಯೂ ಲುಕ್‌ಗೆ ಫಿದಾ
ಧಾರಾವಾಹಿಯಲ್ಲಿ ಸದ್ಯದ ಟ್ರೆಂಡಿಂಗ್ ಎಂದರೆ, ಶ್ರೀಮಂತ ಮನೆಯ ಹೆಣ್ಣು ಮಕ್ಕಳೆಲ್ಲಾ ಸೀರೆಯಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ದುರ್ಗಾ, ಲಕ್ಷ್ಮೀ, ಸರಸ್ವತಿ ಕೂಡ ಸೀರೆಯನ್ನೇ ಹಾಕುತ್ತಿದ್ದಾರೆ. ನಂದಿನಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಗೆ ಬಹಳ ವರ್ಷಗಳ ಬಳಿಕ ಕಮ್ ಬ್ಯಾಕ್ ಮಾಡಿದ್ದಾರೆ. ಈ ಹಿಂದೆ ನೋಡಿದ್ದಕ್ಕಿಂತ ನಂದಿನಿಯ ಲುಕ್ ಇನ್ನು ಬ್ಯೂಟಿಫುಲ್ ಆಗಿದೆ. ಸದಾ ಸೀರೆಯಲ್ಲಿಯೇ ದರ್ಶನ ಕೊಡುವ ನಂದಿನಿ ಇದೀಗ ಹೊಸದೊಂದು ಫೋಟೊ ಹಂಚಿಕೊಂಡಿದ್ದಾರೆ. ಈ ಫೋಟೊ ಯಾರೇ ನೋಡಿದರೂ ಎರಡ್ಮೂರು ಸಲ ನೋಡುತ್ತಾರೆ. ಇದು ಎಜೆ ಸೊಸೆನೇನಾ ಎಂಬ ಅನುಮಾನ ಬಾರದೆ ಇರುವುದಿಲ್ಲ.
Comedy
Khiladigalu
Season
4:
ರಾಘವೇಂದ್ರ
ಆಚಾರ್
ಹಾಸ್ಯಕ್ಕೆ
ಬಿದ್ದು
ಬಿದ್ದು
ನಕ್ಕ
ವೇದಿಕೆ!

ಫೋಟೊಗೆ ಸಿಕ್ಕಾಪಟ್ಟೆ ಮೆಚ್ಚುಗೆ
ನಂದಿನಿಗೆ ಹೇಳಿ ಕೇಳಿ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ಅವರ ಇನ್‌ಸ್ಟಾಗ್ರಾಂನಲ್ಲಿ ಅವರನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 73 ಸಾವಿರಕ್ಕಿಂತ ಹೆಚ್ಚು. ಅವರ ಒಂದೊಂದು ಫೋಟೋ, ವಿಡಿಯೋಗೂ ಮನತುಂಬಿ ಲೈಕ್ ಒತ್ತುತ್ತಾರೆ. ಇದೀಗ ಹೊಸ ಫೋಟೊಗೂ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು, ನೀವು ಬಿಡಿ ಬೆಂಕಿ, ವಾವ್ ನೀವೂ ತುಂಬಾ ಚೆಂದ, ಸೂಪರ್, ಬಾಲಿವುಡ್ ಹೀರೊಯಿನ್ ಥರ ಕಾಣುತ್ತಾ ಇದ್ದೀರಾ, ನೀವೂ ಇಲ್ಲಿ ಇರಬೇಕಾದವರಲ್ಲ. ಆದರೆ ಕನ್ನಡ ಧಾರಾವಾಹಿ ಕೂಡ ದೊಡ್ಡ ಮಟ್ಟದ್ದೇ ಅಂತೆಲ್ಲಾ ಕಮೆಂಟ್ ಮಾಡಿದ್ದಾರೆ.

ಟ್ರೆಡಿಷನಲ್ ಫೋಟೊಗೆ ಹೆಚ್ಚು ಪೋಸ್
ಈಗ ಹಾಕಿರುವ ವೆರೈಟಿ ಫೋಟೊಗೆ ಲೈಕ್ ಒತ್ತಿದವರೇ ಹೆಚ್ಚು. ಜೊತೆಗೆ ನಂದಿನಿ ಫೋಟೊಶೂಟ್ ತುಂಬಾ ಮಾಡಿಸಿದ್ದಾರೆ. ಟ್ರೆಡಿಷನಲ್ ಲುಕ್‌ಗೂ ಸೈ, ಗ್ಲಾಮರ್ ಲುಕ್‌ಗೂ ಜೈ ಎನ್ನುವ ನಂದಿನಿ ಅವರ ಫೋಟೊಗಳು ಅದ್ಭುತವಾಗಿವೆ. ಒಂದಷ್ಟು ಪ್ರಮೋಷನ್‌ಗಾಗಿ ಮಾಡಿಸಿರುವ ಫೋಟೊಗಳು ಕೂಡ ಕಣ್ಣಿಗೆ ಕಾಣುತ್ತವೆ. ಇನ್ನೊಂದಷ್ಟು ಪರ್ಸನಲ್ ಫೋಟೊಶೂಟ್ ಕೂಡ ಕಾಣಬಹುದಾಗಿದೆ.
ತನ್ನ
ಮನೆಗೆ
ವಾಪಸ್
ಬಂದ
ಆರ್ಯನಿಗೆ
ಎಲ್ಲಾ
ನೆನಪಾಗುತ್ತಾ..?

ತೆರೆ ಹಿಂದೆ ರೀಲ್ಸ್ ಮಾಡುವುದರಲ್ಲಿ ಬ್ಯುಸಿ
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಮೂವರು ಸೊಸೆಯಂದಿರಿಗೆ ಒಬ್ಬ ಅತ್ತೆಯೇ ಟಾರ್ಗೆಟ್. ಯಾವಾಗಲೂ ಅತ್ತೆಯ ಮೇಲೆ ಕೆಂಡಕಾರುವ ಸೊಸೆಯಂದಿರು, ತೆರೆ ಹಿಂದೆ ಸ್ವಲ್ಪ ಆತ್ಮೀಯವಾಗಿಯೇ ಇದ್ದಾರೆ. ಅಷ್ಟೇ ಅಲ್ಲ, ಶೂಟಿಂಗ್ ಸ್ಪಾಟ್‌ನಲ್ಲಿ ಗ್ಯಾಪ್ ಸಿಕ್ಕಿದರೆ ಸಾಕು ಅತ್ತೆ ಸೊಸೆಯಂದಿರದ್ದು ರೀಲ್ಸ್ ಕಾರ್ಯಕ್ರಮ ಶುರುವಾಗಿಬಿಡುತ್ತೆ.