'ಹಿಟ್ಲರ್ ಕಲ್ಯಾಣ' ನಟಿ ಎಡವಟ್ ಲೀಲಾ, ತೆರೆಹಿಂದೆ ಗ್ಲ್ಯಾಮರ್ ಗೊಂಬೆ!
ಕಿರುತೆರೆ ಧಾರಾವಾಹಿ ನಟಿಯರು ರಾತ್ರೋ ರಾತ್ರಿ ಸ್ಟಾರ್ ಆಗಿ ಬಿಡ್ತಾರೆ. ಹೊಸ ಹೊಸ ಧಾರಾವಾಹಿಗಳ ಮೂಲಕ ಬಂದು, ಜನ ಮನ ಗೆದ್ದು ಅತಿ ವೇಗವಾಗಿ ನೆಚ್ಚಿನ ನಟಿ ಆಗಿ ಬಿಡ್ತಾರೆ. ಸದ್ಯ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನವ ನಟಿ ಎಂದರೆ ಅದು 'ಹಿಟ್ಲರ್ ಕಲ್ಯಾಣ' ಲೀಲಾ.
ಹೌದು 'ಹಿಟ್ಲರ್ ಕಲ್ಯಾಣ' ಧಾರಾವಾಹಿಯನ್ನು ನೀವು ನೋಡುತ್ತಿದ್ದರೆ, ಲೀಲಾ ಗುಂಗು ಹಿಡಿದಿರುತ್ತೆ. ಲೀಲಾ ತೆರೆಯ ಮೇಲೆ ಪಟ, ಪಟಾ ಅಂತ ಮಾತಾಡುತ್ತಾ, ನೇರವಾಗಿ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಡುತ್ತಾಳೆ. ಧಾರಾವಾಹಿಯಲ್ಲಿ ಈಕೆ ಎಡವಟ್ಟು ಅನಿಸಿಕೊಂಡರೂ, ಅಭಿಮಾನಿಗಳಿಗೆ ಅಚ್ಚು ಮೆಚ್ಚು.
ತೆರೆ ಮೇಲೆ ಅಭಿನಯ ನೋಡಿ ಮೆಚ್ಚಿಕೊಂಡ ಈ ಲೀಲಾ ಬಗ್ಗೆ ನಿಮಗೆಷ್ಟು ಗೊತ್ತು? ಲೀಲಾ ತೆರೆ ಹಿಂದೆ ಹೇಗೆ ಇರುತ್ತಾರೆ? ಏನೆಲ್ಲಾ ಮಾಡುತ್ತಾರೆ ಎನ್ನುವ ವಿವರ ಇಲ್ಲಿದೆ ಮುಂದೆ ಓದಿ...

ಲೀಲಾ ನಿಜವಾದ ಹೆಸರೇನು ಗೊತ್ತಾ?
ಕಿರುತೆರೆ ನಟ, ನಟಿಯರು ಹೆಚ್ಚಾಗಿ ಅವರ ಸ್ಕ್ರೀನ್ ಹೆಸರಿನಿಂದಲೇ ಖ್ಯಾತಿ ಪಡೆದಿರುತ್ತಾರೆ. ಅಂದರೆ ಧಾರಾವಾಹಿಯಲ್ಲಿನ ತಮ್ಮ ಪಾತ್ರದ ಹೆಸರಿನ ಮುಖಾಂತಾರ ಅವರು ಜನರಿಗೆ ಪರಿಚಯ ಆಗುತ್ತಾರೆ. ಹಾಗೆ 'ಹಿಟ್ಲರ್ ಕಲ್ಯಾಣ' ಸೀರಿಯಲ್ ನಟಿ ವಿಚಾರಕ್ಕೆ ಬಂದರೆ ಆಕೆ ಲೀಲಾ ಅಂತಲೇ ನಿಮಗೆಲ್ಲಾ ಪರಿಚಯ. ಆದರೆ ಆಕೆಯ ನಿಜವಾದ ಹೆಸರು ಮಲೈಕಾ ಟಿ ವಸುಪಾಲ್. ನಿಜವಾದ ಹೆಸರು ಏನೇ ಇದ್ದರು ಲೀಲಾ ಎಂದಾಕ್ಷಣ ಎಲ್ಲರಿಗೂ 'ಹಿಟ್ಲರ್ ಕಲ್ಯಾಣ' ನೆನಪಾಗುತ್ತದೆ.

ತೆರೆಹಿಂದೆ ಲೀಲಾ ಸಿಕ್ಕಾಪಟ್ಟೆ ಗ್ಲ್ಯಾಮರ್!
ನಟಿ ಲೀಲಾ ತೆರೆಮೇಲೆ ಮುದ್ದು ಮುದ್ದಾಗಿ ಮಾತನಾಡುತ್ತಾ ಏನೂ ಅರಿಯದ ಮುಗ್ಧೆ. ಅದರಲ್ಲೂ ಎಡವಟ್ಟು ಮಾಡೋದ್ರಲ್ಲಿ ನಂಬರ್ ಒನ್. ಆದರೆ ತೆರೆ ಹಿಂದಿನ ಲೀಲಾ ನಿಜವಾದ ಅವತಾರ ನೋಡಿದರೆ ಸುಸ್ತಾಗಿ ಬಿಡುತ್ತದೆ. ಯಾಕೆಂದರೆ ಮಲೈಕಾ ಸಿಕ್ಕಾಪಟ್ಟೆ ಗ್ಲ್ಯಾಮರಸ್ ಬೆಡಗಿ. ಯಾವ ಸಿನಿಮಾ ತಾರೆಗೂ ಈಕೆ ಕಡಿಮೆ ಇಲ್ಲ. ಮಾಡ್ರನ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಸಾಂಪ್ರಾದಯಿಕ ಕಾಸ್ಟ್ಯೂಂನಲ್ಲೂ ಕೂಡ ಈ ಬೆಡಗಿ ಸೂಪರೋ... ಸೂಪರ್.

ದಾವಣಗೆರೆಯ ಇಂಜಿನಿಯರ್ ಮಲೈಕಾ!
ಮಲೈಕಾ ವಸುಪಾಲ್ ಕರ್ನಾಟಕದ ಹುಡುಗಿ. ದಾವಣಗೆರೆಯ ಅಪ್ಪಟ ಕನ್ನಡತಿ. ಈಕೆ ಓದಿನಲ್ಲೂ ಮುಂದಿದ್ದಾಳೆ, ಇಂಜಿನಿಯರಿಂಗ್ ಪದವಿ ಕೂಡ ಪಡೆದುಕೊಂಡಿದ್ದಾಳೆ. ಆದರೆ ಸದ್ಯ ಕಲಾವಿದೆಯಾಗಿ ಅಭಿನಯಕ್ಕೆ ಇಳಿದು ಬಿಟ್ಟಿದ್ದಾರೆ. ಈಕೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ. ಮಲೈಕಾ ಮಾಡುವ ವಿಭಿನ್ನ ರೀಲ್ಸ್‌ಗಳಿಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಕೂಡ ಇದ್ದಾರೆ.

ಮಲೈಕಾಗೆ ವಸುಪಾಲ್‌ಗೆ ಮೊದಲ ಹೆಜ್ಜೆಯಲ್ಲೇ ಯಶಸ್ಸು!
ಮಲೈಕಾಗೆ ಅಭಿನಯ ಅಂದರೆ ಹುಚ್ಚು. ಹಾಗಾಗಿ ಪದವಿ ಬಿಟ್ಟು ನಟನೆಗೆ ಬಂದಿದ್ದಾರೆ. ಮೊದಲ ಹೆಜ್ಜೆಯಲ್ಲೇ ಮಲೈಕಾಗೆ ಯಶಸ್ಸು ಸಿಕ್ಕಿದೆ. 'ಹಿಟ್ಲರ್ ಕಲ್ಯಾಣ' ಸೀರಿಯಲ್ ಮೂಲಕ ಮನೆ ಮಾತಾಗಿದ್ದಾರೆ. ಇನ್ನು ಈಕೆಗೆ, ಈಕೆಯ ಲೀಲಾ ಅವತಾರಕ್ಕೆ ಸಾಕಷ್ಟು ಮಂದಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸದ್ಯದಲ್ಲೇ ಲೀಲಾ ಅಲಿಯಾಸ್, ಮಲೈಕಾ ಸಿನಿಮಾಗೆ ಎಂಟ್ರಿ ಕೊಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.


Click it and Unblock the Notifications











