ಹಿಟ್ಲರ್ ಕಲ್ಯಾಣ: ಪವಿತ್ರಾ ಕೊಟ್ಟ ಸನ್ನೆಯಿಂದ ದೇವ್ ಬಣ್ಣ ಬಯಲಾಗುತ್ತಾ..?

By ಎಸ್ ಸುಮಂತ್

ಹೆಂಡತಿಯ ವಿಚಾರದಲ್ಲಿ ದೇವ್ ಆಡುತ್ತಿರುವ ನಾಟಕ ಅಂತಿದ್ದದ್ದಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ರೀತಿಯ ನಾಟಕವಾಡಿ, ಕಡೆಗೂ ಎಜೆಯ ನಂಬಿಕೆಯನ್ನು ಗಳಿಸಿಬಿಟ್ಟಿದ್ದಾನೆ. ಅವನು ಸರಿ ಇಲ್ಲ. ಮಾಡುತ್ತಿರುವುದೆಲ್ಲಾ ಡ್ರಾಮಾ ಎಂದು ಲೀಲಾ ಪ್ರೂವ್ ಮಾಡುವುದಕ್ಕೂ ಆಗುತ್ತಿಲ್ಲ. ಪ್ರತಿಯೊಂದರಲ್ಲೂ ಸಾಕ್ಷಿಗಳನ್ನು ಉಳಿಸುತ್ತಿಲ್ಲ. ಸೂಕ್ಷ್ಮತೆಗಳನ್ನು ದೇವ್ ಉಳಿಸುತ್ತಿಲ್ಲ. ಹೀಗಾಗಿ ಆತನ ಕೆಟ್ಟ ಬುದ್ಧಿಯನ್ನು ಪ್ರೂವ್ ಮಾಡುವುದಕ್ಕೆ ಲೀಲಾಳಿಂದ ಆಗುತ್ತಿಲ್ಲ.

ಲೀಲಾ ಸುಮ್ಮನೆ ಕೂರುವ ಹುಡುಗಿಯಲ್ಲ. ಅನ್ಯಾಯ ಸಾಬೀತು ಮಾಡುವಲ್ಲಿ ಹರಸಾಹಸ ಪಡುತ್ತಿದ್ದಾಳೆ. ಹೇಗಾದರೂ ಮಾಡಿ ದೇವ್ ತಪ್ಪನ್ನು ಸಾಬೀತು ಪಡಿಸುತ್ತೀನಿ ಅಂತ ಹೊರಟಿದ್ದಾಳೆ. ಅದು ಸಾಧ್ಯವಾಗುವುದು ಇನ್ನು ಪವಿತ್ರಾಳ ಸಹಾಯದಿಂದ ಮಾತ್ರ. ಪವಿತ್ರಾ ಕೊಡುವ ಸೂಚನೆಯಿಂದ ಲೀಲಾಳ ಪ್ರಯತ್ನಕ್ಕೆ ಫಲ ಸಿಗಲಿದೆ.

ಎಜೆ ಕೈಹಿಡಿದು ಹೇಳಿದ್ದೇನು ಪವಿತ್ರಾ?

ಎಜೆ ಕೈಹಿಡಿದು ಹೇಳಿದ್ದೇನು ಪವಿತ್ರಾ?

ದೇವ್ ಮಾಡುತ್ತಿರುವುದು ಮೋಸ ಎಂಬುದು ಲೀಲಾ ಮತ್ತು ಪವಿತ್ರಾಗೆ ಗೊತ್ತು. ಲೀಲಾಗೆ ಮನೆಯಲ್ಲಿ ಅಜ್ಜಿ ಬಿಟ್ಟರೆ ಬೆಸ್ಟ್ ಫ್ರೆಂಡ್ ಎಂದರೆ ಪವಿತ್ರಾ. ಮನೆಯಲ್ಲಿ ಆಗಿದ್ದೆಲ್ಲವನ್ನೂ ಮಗುವಿಗೆ ಹೇಳಿದಂತೆ ಪವಿತ್ರಾ ಮುಂದೆ ಹೇಳುತ್ತಾಳೆ. ದೇವ್ ಮಾಡಯವ ಕೆಟ್ಟ ಕೆಲಸಗಳನ್ನು ಹೇಳುತ್ತಾ ಇರುತ್ತಾಳೆ. ಆಗ ಪವಿತ್ರಾ ರಿಯಾಕ್ಟ್ ಮಾಡುತ್ತಾಳೆ. ಆದರೆ ಇದನ್ನು ಎಜೆ ನಂಬುವುದಿಲ್ಲ. ಪ್ರೂವ್ ಮಾಡು ಎಂದಾಗ ಬಹಳ ಪ್ರಯತ್ನದ ಫಲವಾಗಿ, ಎಜೆ ಇನ್ನೇನು ಎದ್ದು ಹೊರಡಬೇಕು ಎನ್ನುವಾಗ ಪವಿತ್ರಾ ಎಜೆಯ ಕೈ ಹಿಡಿದಿದ್ದಾಳೆ.

ಎಜೆಗೆ ಈಗಲಾದರೂ ನಂಬಿಕೆ ಬರುತ್ತಾ?

ಎಜೆಗೆ ಈಗಲಾದರೂ ನಂಬಿಕೆ ಬರುತ್ತಾ?

ಲೀಲಾ ಸಾಕಷ್ಟು ಸಲ ಗೋಗರೆದಿದ್ದಳು. ಎಜೆ ನಂಬಬೇಕು ಎಂದರೆ ನೀನು ರಿಯಾಕ್ಟ್ ಮಾಡಲೇಬೇಕು ಎಂದಳು. ಆದರೆ ಪವಿತ್ರಾ ಯಾವುದಕ್ಕೂ ಜಗ್ಗಲಿಲ್ಲ. ಎಜೆಗೆ ಮನಸ್ಸು ಬೇಸರ ಎನಿಸಿ, ಲೀಲಾಳ ವರ್ತನೆ ಕೋಪ ತರಿಸಿತ್ತು. ಅದಕ್ಕೆ ಇಷ್ಟಕ್ಕೆ ನಿಲ್ಲಿಸು ಎಂದು ಕೋಪ ಮಾಡಿಕೊಂಡ. ಕೊನೆಗೆ ಗಂಡನನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದಾಗ ಪವಿತ್ರಾಳ ಮನಸ್ಸು ನೊಂದಿದೆ. ತಕ್ಷಣ ಎಜೆಗೆ ಕಡೆಗೆ ರಿಯಾಕ್ಟ್ ಮಾಡಿದ್ದಾಳೆ.

ದೇವ್‌ ತಂಗಿಯಿಂದ ದೂರಾದ ಲೀಲಾ

ದೇವ್‌ ತಂಗಿಯಿಂದ ದೂರಾದ ಲೀಲಾ

ದೇವ್ ಮತ್ತು ಚುಕ್ಕಿ ಪ್ರೀತಿ ಮಾಡುತ್ತಿದ್ದಾರೆ. ದೇವ್ ಕೂಡ ರೇವತಿಯನ್ನು ಪಡೆಯುವುದಕ್ಕಾಗಿಯೇ ಪವಿತ್ರಾಳನ್ನು ಈ ಸ್ಥಿತಿಗೆ ತಂದಿದ್ದಾನೆ.‌ ಆದರೆ ಲೀಲಾ ತನ್ನ ತಂಗಿಯನ್ನು ಈ ದುಷ್ಟನಿಂದ ಕಾಪಾಡುತ್ತಿದ್ದೇನೆ ಎಂದುಕೊಂಡಿದ್ದಾಳೆ. ನನ್ನ ತಂಗಿ ಆತನನ್ನು ಮರೆತಿದ್ದಾಳೆ ಎಂದುಕೊಂಡಿದ್ದಾಳೆ‌. ಈ ಮಧ್ಯೆ ಮನೆ ಬಿಟ್ಟು, ದೇವ್ ಜೊತೆ ಹೋಗಿ‌ ಮದುವೆಯಾಗುವ ಫ್ಲ್ಯಾನ್ ಹಾಕಿಕೊಂಡಿದ್ದಳು. ಇಬ್ಬರನ್ನು ಎಜೆ ಮುಂದೆ ತಂದು ನಿಲ್ಲಿಸಿದರೆ ಅಕ್ಕನ ಮರ್ಯಾದೆ ಎಂಬುದನ್ನು ನೋಡದೆ, ಚುಕ್ಕಿ ದೇವ್ ಪರವೇ ಮಾತನಾಡಿದಳು. ಫ್ರೆಂಡ್ ಬರ್ತಿನಿ ಅಂದಿದ್ದಳು. ಅದಕ್ಕೆ ಕಾಯುತ್ತಿದ್ದೆ ಎಂದಳು. ಇದು ಲೀಲಾಳ ಮನಸ್ಸಿಗೆ ತುಂಬಾನೇ ನೋವು ಮಾಡಿದ್ದು, "ನಿನ್ನ ಜೀವನ ನಿನ್ನದು ನನ್ನ ಜೀವನ ನನ್ನದು" ಎಂದು ಹೇಳಿ ದೂರಾಗಿದ್ದಾಳೆ.

ಏಜೆ, ದೇವ್ ನಂತೆಯೇ ನಾಟಕವಾಡುತ್ತಾರಾ?

ಪವಿತ್ರಾಳ ರಿಯಾಕ್ಷನ್‌ನಿಂದ ಎಜೆಗೆ ಲೀಲಾಳ ಮಾತಿನ ಮೇಲೆ ನಂಬಿಕೆ ಬರಬಹುದು. ಹಾಗೆ ಪವಿತ್ರಾಳ ಈ ಸ್ಥಿತಿಗೆ ದೇವ್ ಕಾರಣ ಎಂಬುದು ಸ್ಪಷ್ಟವಾಗಬಹುದು. ಆದರೆ ಈಗಾಗಲೇ ದೇವ್ ಸಾಕಷ್ಟು ನಾಟಕದಿಂದಲೇ ದೊಡ್ಡ ಕೋಟೆ ಕಟ್ಟಿದ್ದಾನೆ. ಆ ಕೋಟೆಯೊಳಗಿರುವ ಸತ್ಯವನ್ನು ಜಾಣ್ಮೆಯಿಂದಲೇ ಹೊರತೆಗೆಯಬೇಕು. ಸಾಕ್ಷಿ ಹಿಡಿಯಬೇಕು. ಎಜೆ ಅದರಲ್ಲಿ ಎಡವಲು ಸಾಧ್ಯವಿಲ್ಲ. ಪವಿತ್ರಾ ಸನ್ನೆ ನೀಡಿದ್ದರು., ಎಜೆ ಜಾಣ್ಮೆಯಿಂದಲೇ ಹೆಜ್ಜೆ ಇಟ್ಟು ದೇವ್‌ನ ಸಾಕ್ಷಿ ಸಮೇತ ಹಿಡಿಯಬೇಕಾಗಿದೆ.

More from Filmibeat

English summary
Hitler Kalyana Serial August 1st Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X