ಹಿಟ್ಲರ್ ಕಲ್ಯಾಣ: ಎಜೆ ಸೊಸೆಯಂದಿರಿಗೆ ಲೀಲಾ ರೂಮಲ್ಲೂ ಸ್ಥಾನ ಇಲ್ಲ!
ಇಷ್ಟು ದಿನ ಬೇಕು ಎಂದಿದ್ದೆಲ್ಲಾ ಎಜೆ ಸೊಸೆಯಂದಿರ ಪಾದದಡಿಗೆ ಬಂದು ಬೀಳುತ್ತಿತ್ತು. ಎಲ್ಲದನ್ನು ಕುಳಿತ ಕಡೆಯಲ್ಲಿಯೇ ಆರ್ಡರ್ ಮಾಡುತ್ತಾ ಇದ್ದರು. ಮೈ ಬಗ್ಗಿಸಿ ಕೆಲಸ ಮಾಡುವ ಕಲೆಯೇ ಗೊತ್ತಿಲ್ಲ. ಹೈಫೈ ಊಟ, ಹೈಫೈ ಲೈಫ್ ಸ್ಟೈಲ್. ಆದರೆ ಲೀಲಾ ಬಂದ ಮೇಲೆ ಜೀವನದ ಪಾಠ ಕಲಿಸಿಕೊಡಲು ನಿರ್ಧರಿಸಿದ್ದಾಳೆ. ಇದೇ ಕಾರಣಕ್ಕಾಗಿಯೇ ತನ್ನ ಅಮ್ಮನ ಮನೆಗೆ ಸೊಸೆಯಂದಿರನ್ನು ಕಳುಹಿಸಿದ್ದಾಳೆ. ಕೌಸಲ್ಯ ಮನೆಯಲ್ಲಿ ಹೇಗೆ ಬೇಕೋ ಹಾಗೆ ಇರುವ ಹಾಗಿಲ್ಲ. ಹಾಗೆಯೇ ಇರುತ್ತೀನಿ ಅಂತ ಹೊರಟರೆ ನೇರ ಎಜೆಗೆ ಕಾಲ್ ಹೋಗುತ್ತೆ.
ಕೌಸಲ್ಯ ಮತ್ತು ಎಜೆ ಸೊಸೆಯಂದಿರಿಗೆ ಮೊದಲಿನಿಂದಲೂ ಅಷ್ಟಕ್ಕೆ ಅಷ್ಟೆ. ಕೌಸಲ್ಯಾಳನ್ನು ಕಂಡರೆ ಎಜೆ ಸೊಸೆಯಂದಿರು ರೇಗಿಸುವುದು, ಅವಮಾನ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬುದಿದೆಯಲ್ಲ ಅದು ಈಗ ಕೌಸಲ್ಯ ಕಾಲವಾಗಿ ತಿರುಗಿದೆ.

ಕೌಸಲ್ಯ ಕೈನಲ್ಲಿ ಸಿಲುಕಿದ ಎಜೆ ಸೊಸೆಯರು
ಎಜೆ ಮನೆಯಲ್ಲಿ ಕೊಟ್ಟ ಬಿಲ್ಡಪ್ ಕಂಡು ನಾವೂ ಫಾರಿನ್ ಟ್ರಿಪ್ ಹೊರಟಿದ್ದೀವಿ ಎಂಬ ಫೀಲ್‌ನಲ್ಲಿದ್ದರು ಮೂವರು ಸೊಸೆಯಂದಿರು. ಆದರೆ ಬಂದು ಇಳಿದಿದ್ದು ಕೌಸಲ್ಯ ಮನೆಯಲ್ಲಿ. ಅಕ್ಷರಶಃ ಎಜೆ ಸೊಸೆಯಂದಿರು ಸಹ ಶಾಕ್ ಆಗಿದ್ದರು. ಆದರೆ ಎಜೆ ಮಾತು ಮೀರುವ ಹಾಗಿಲ್ಲ. ಅದೇ ಕಾರಣಕ್ಕೆ ಕೌಸಲ್ಯ ಕೊಡುವ ಎಲ್ಲಾ ಹಿಂಸೆಯನ್ನು ಸಹಿಸಿಕೊಂಡು ಹೋಗುತ್ತಿದ್ದಾರೆ. ಇದೇ ಚಾನ್ಸ್ ಅಂತ ಕೌಸಲ್ಯ ಮೂವರು ಸೊಸೆಯಂದಿರಿಗೆ ಬದುಕಿನ ಪಾಠ ಕಲಿಸುತ್ತಿದ್ದಾಳೆ.

ಬೆಡ್ ಸಿಕ್ಕ ಖುಷಿಯಲ್ಲಿ ಸೊಸೆಯಂದಿರು
ಕೌಸಲ್ಯ ಮನೆಗೆ ಬಂದಾಗಿನಿಂದ ಎಜೆ ಸೊಸೆಯಂದಿರ ಪಾಡು ಅಷ್ಟಿಷ್ಟಲ್ಲ.ಕಣ್ಣ ತುಂಬಾ ನಿದ್ದೆ ಮಾಡಿನೇ ಎಷ್ಟೋ ದಿನಗಳಾಗಿದೆ ಎಂಬ ಫೀಲ್ ನಲ್ಲಿದ್ದಾರೆ. ಯಾಕೆಂದರೆ ದಿನವೆಲ್ಲಾ ಮನೆ ಕೆಲಸ ಮಾಡಿಸುವ ಕೌಸಲ್ಯ, ರಾತ್ರಿ ಒಳ್ಳೆ ನಿದ್ದೆ ಮಾಡುವುದಕ್ಕೂ ಬಿಡುವುದಿಲ್ಲ. ಅಲ್ಲಿಯೂ ಟಾರ್ಚರ್ ಕೊಡುವುದನ್ನು ನಿಲ್ಲಿಸಿಲ್ಲ. ಯಾವುದೋ ಹಳೆಯ ಸೀರೆ ಕೊಟ್ಟು ಅದರ ಮೇಲೆ ಮಲಗಿ ಎನ್ನುತ್ತಿದ್ದಳು. ಆದರೀಗ ಕಷ್ಟಪಟ್ಟು ಮಂಚ ಸರಿ ಮಾಡಿಕೊಂಡಿರುವ ಎಜೆ ಸೊಸೆಯಂದಿರು, ಆರಾಮಾಗಿ ಮಲಗುವ ಕನಸು ಕಾಣುತ್ತಿದ್ದಾರೆ.

ಲೀಲಾ ಕೋಣೆಯಿಂದ ಗೇಟ್ ಪಾಸ್
ಸದ್ಯ ಕೌಸಲ್ಯ ಮನೆಯಲ್ಲಿ ಲೀಲಾ ಬಳಸುತ್ತಿದ್ದ ಕೋಣೆಯಲ್ಲಿ ಮಂಚವಿದೆ. ಎಜೆ ಸೊಸೆಯಂದಿರು ಹೈಫೈ ಬೆಡ್ ಮೇಲೆ, ಹೈಫೈ ಕೊಠಡಿಯಲ್ಲಿಯೇ ಮಲಗಿ ಅಭ್ಯಾಸ. ಹೀಗಿರುವಾಗ ಸೊಳ್ಳೆ ಕಾಟದ ಜೊತೆಗೆ ಬೆಡ್ ಇಲ್ಲದೆ, ಚಾಪೆಯೂ ಇಲ್ಲದೆ ನೆಲದ ಮೇಲೆ ಮಲಗಬೇಕೆಂದರೆ ಎಷ್ಟು ಕಷ್ಟವಾಗಬೇಡ. ಆದರೆ ಕೌಸಲ್ಯ ಕೈನಲ್ಲಿ ಸಿಲುಕಿರುವಾಗ ಅದೆಲ್ಲವನ್ನು ಅನುಭವಿಸಲೇಬೇಕಾದ ಸ್ಥಿತಿ ಬಂದಿದೆ. ಆದರೆ ಲೀಲಾ ರೂಮಲ್ಲಿ ಬೆಡ್ ಇದೆ ಎಂಬ ಖುಷಿಯಲ್ಲಿ ಬಂದ ಸೊಸೆಯಂದಿರಿಗೆ ಕೌಸಲ್ಯ ಗೇಟ್ ಪಾಸ್ ನೀಡಿದ್ದಾರೆ.

ಚುಕ್ಕಿ ಮಾಡಿದ ಸಹಾಯಕ್ಕೂ ಬಿತ್ತು ಕುತ್ತು
ಚುಕ್ಕಿ ಎಲ್ಲರನ್ನು ಕಂಡು ಪಾಪ ಎನ್ನುತ್ತಿದ್ದಾಳೆ. ಮರುಕಗೊಂಡಿದ್ದಾಳೆ. ಹೀಗಾಗಿ ರಾತ್ರಿ ಮಲಗಲು ಲೀಲಾ ಕೋಣೆ ಬಳಸಲು ಹೇಳಿದ್ದಾಳೆ. ಇದೆ ಖುಷಿಯಲ್ಲಿ ಲೀಲಾ ಕೋಣೆಗೆ ಹೋದ ಸೊಸೆಯಂದಿರು, ನೆಲದ ಮೇಲೆ ಮಲಗುವುದಕ್ಕಿಂತ ಇದು ಎಷ್ಟೋ ಉತ್ತಮ ಸುಮ್ಮನೆ ಮಲಗೋಣ ಎಂದು ತಮ್ಮ ತಮ್ಮಲ್ಲಿಯೇ ಮಾತಾಡಿಕೊಂಡು ತೀರ್ಮಾನ ಮಾಡಿದ್ದಾರೆ. ಆದರೆ ಅಲ್ಲಿಗೆ ಬಂದ ಕೌಸಲ್ಯ ಎಲ್ಲದನ್ನು ಹಾಳು ಮಾಡಿದ್ದಾಳೆ. ನಾನೆ ಈ ರೂಮ್ ಬಳಸಲು ಹೇಳಿದ್ದು ಎಂದು ಹೇಳಿದರು ಚುಕ್ಕಿ ಮಾತಿಗೆ ಬೆಲೆ ಕೊಡದೆ ಅಲ್ಲಿಂದ ಸೊಸೆಯಂದಿರನ್ನು ಓಡಿಸಿದ್ದಾಳೆ.


Click it and Unblock the Notifications











