'ಹಿಟ್ಲರ್ ಕಲ್ಯಾಣ'ದಲ್ಲಿ ಈ ಎಪಿಸೋಡನ್ನೇ ಮಿಸ್ ಮಾಡಿಕೊಂಡ ವೀಕ್ಷಕರು!
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಆರಂಭದಿಂದಲೂ ಒಳ್ಳೆ ಟಿಆರ್‌ಪಿ ಪಡೆದಿತ್ತು. ಲೀಲಾಳ ಯಡವಟ್ಟು, ಎಜೆ ಸ್ಟ್ರಿಕ್ಟು, ಅಜ್ಜಿಯ ಪ್ರೀತಿ, ಸೊಸೆಯಂದಿರ ಮುನಿಸು, ಪ್ರೀತಿ ಎಲ್ಲವೂ ಮಿಕ್ಸ್ ಆಗಿ ಧಾರಾವಾಹಿ ಎಲ್ಲರ ಮನಸ್ಸು ಗೆದ್ದಿತ್ತು. ಯಡವಟ್ಟು ಲೀಲಾ ಕಂಡರೆ ಕೋಪ ಮಾಡಿಕೊಳ್ಳುತ್ತಿದ್ದ ಎಜೆ ಮನಸ್ಸಲ್ಲಿ ಪ್ರೀತಿ ಚಿಗುರುವುದಕ್ಕೆ ಆರಂಭವಾಗಿತ್ತು. ಆದರೆ ಅಲ್ಲಿ ಮಧ್ಯದಲ್ಲಿ ಬಂದಿದ್ದೇ ಅಂತರ.
ಅಂತರ ಪಾತ್ರದಲ್ಲಿ ರಜಿನಿ ಕಾಣಿಸಿಕೊಂಡಿದ್ದರು. ಕಾಣೆಯಾದ ಎಜೆ ಪ್ರೀತಿಯ ಅಂತರ ಬೇರೆ, ಧಾರಾವಾಹಿಗೆ ಎಂಟ್ರಿಯಾದ ಅಂತರ ಬೇರೆ. ಒಳ್ಳೆ ಧಾರಾವಾಹಿ ಅಂತರ ಕ್ಯಾರೆಕ್ಟರ್‌ನಲ್ಲಿಯೇ ಅಂತ್ಯವಾಗಿತ್ತು. ಕಾರಣಾಂತರದಿಂದ ಧಾರಾವಾಹಿ ಕಂಪ್ಲೀಟ್ ಮಾಡದೇ ಅರ್ಧಕ್ಕೆ ಮುಕ್ತಾಯವಾಗಿತ್ತು. ಕೆಲವೊಂದು ದೃಶ್ಯಗಳನ್ನು ವಿದಾಯದಿಂದ ವೀಕ್ಷಕರು ತುಂಬಾನೇ ಮಿಸ್ ಮಾಡಿಕೊಂಡರು.

ಪ್ರೋಮೊದಲ್ಲಿತ್ತು ಲೀಲಾ ಪ್ರೆಗ್ನೆಂಟ್ ಸುದ್ದಿ
ಹಿಟ್ಲರ್ ಕಲ್ಯಾಣ ಧಾರಾವಾಹಿಯ ಟೈಟಲ್ ಟ್ರ್ಯಾಕ್ ತುಂಬಾ ಚೆನ್ನಾಗಿತ್ತು. ಟೈಟಲ್ ಟ್ರ್ಯಾಕ್‌ನಲ್ಲಿ ಕೊನೆಯಲ್ಲಿ ಲೀಲಾ ಪ್ರೆಗ್ನೆಂಟ್ ಆಗಿರುವ ಕುರುಹು ಇತ್ತು. ಅತ್ತೆ ಸೋಫಾ ಮೇಲೆ ಹಾಯಾಗಿ ಕುಳಿತಿದ್ದರೆ ಸೊಸೆಯಂದಿರೆಲ್ಲಾ ಸೇವೆ ಮಾಡುತ್ತಿದ್ದಂತೆ ಅಂದ್ರೆ ಸೀಮಂತದ ದೃಶ್ಯ ಅದಾಗಿತ್ತು.
ಅಂತರಾ ಬರದಿದ್ದರೆ ಲಿಂಕ್ ಸಿಗ್ತಾ ಇತ್ತಾ
ಎಜೆ ಹಾಗೂ ಲೀಲಾ ನಡುವೆ ಪ್ರೀತಿ ಚಿಗುರಿಡೆದಿತ್ತು. ಪ್ರಪೋಸ್ ಮಾಡುವ ಸಮಯಕ್ಕೆ ಅಂತರಾ ಬಂದಿದ್ದು. ಎಜೆ ಗಮನವೆಲ್ಲಾ ಆ ಕಡೆಗೆ ತಿರುಗಿತ್ತು. ದಿನ ಕಳೆದಂತೆ ಅದೇ ಸಂಸಾರ, ಅದೇ ಅಂತರಾ ಕಥೆ ಹೀಗೆ ಸಾಗಿತ್ತು. ಕಾರಣಾಂತರದಿಂದ ಧಾರಾವಾಹಿಗೂ ಫುಲ್ ಸ್ಟಾಪ್ ಇಡಲಾಗಿತ್ತು. ಆರಂಭದಲ್ಲಿ ಅಂದುಕೊಂಡ ಕಥೆಯೇ ಬೇರೆ ಆಗಿತ್ತು. ಪ್ರೋಮೋ ಶೂಟ್ ಬೇರೆ ಆಗಿತ್ತು. ಆದರೆ ಕೊನೆಯಾಗಿದ್ದು ಮಾತ್ರ ಅಂತರಾ ಪಾತ್ರದಿಂದ. ಅಂತರ ಮೋಸ ಬಯಲಾಗುತ್ತೆ, ಸೀರಿಯಲ್ ಸುಖಾಂತ್ಯವಾಗುತ್ತೆ. ಅಲ್ಲಿಗೆ ಕಥೆ ಮುಕ್ತಾಯವಾಯ್ತು.
ರೀಲ್-ರಿಯಲ್ ಸೇಮ್ ಟು ಸೇಮ್
ಇತ್ತೀಚೆಗೆ ನಂದಿನಿ ಮೂರ್ತಿ ತಮ್ಮ ಪ್ರೆಗ್ನೆಂಟ್ ಸಮಯದ ಫೋಟೋ ಹಂಚಿಕೊಂಡಿದ್ದರು. ಸೀಮಂತಕ್ಕೆ ಎಜೆ ಮನೆಯವರೆಲ್ಲರೂ ಬಂದಿದ್ದರು. ಲೀಲಾ, ತಂಗಿಯರು, ಅಜ್ಜಿ ಬಂದಿದ್ದರು. ರೀಲ್ ಅಂಡ್ ರಿಯಲ್ ಫೋಟೋ ಹಾಕಿ, ರೀಲ್‌ನಲ್ಲಿ ಸೊಸೆಯಂದಿರಿಂದ ಅತ್ತೆಗೆ ಸೀಮಂತ ಕಾರ್ಯ. ರಿಯಲ್‌ನಲ್ಲಿ ಅತ್ತೆಯಿಂದ ದೊಡ್ಡ ಸೊಸೆಗೆ ಸೀಮಂತ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಸೀರಿಯಲ್‌ನಲ್ಲಿ ಅತ್ತೆ ಸೊಸೆಯಂದಿರು ಸದಾ ಕಿತ್ತಾಡುತ್ತಾ, ದ್ವೇಷಕಾರುತ್ತಾ ಇದ್ದರು, ರಿಯಲ್ ಲೈಫ್‌ನಲ್ಲಿ ಬಾಂಧವ್ಯ ತುಂಬಾ ಚೆನ್ನಾಗಿದೆ.
ಪ್ರೋಮೋ ನೆನೆದು ವೀಕ್ಷಕರು ಬೇಸರ
'ಹಿಟ್ಲರ್ ಕಲ್ಯಾಣ' ಸೀರಿಯಲ್ ಆರಂಭದಲ್ಲಿ ಚೆನ್ನಾಗಿತ್ತು. ಕಥೆ ಆಮೇಲೆ ಬದಲಾಯ್ತು. ಕಥೆ ಬದಲಾದ ಮೇಲೆ ಪಾತ್ರಗಳಿಗೆ ಸಿಗಬೇಕಾದ ನ್ಯಾಯ ಸಿಗಲಿಲ್ಲ. ಒಂದಷ್ಟು ಮನರಂಜನೆ, ವಾವ್ ಎನಿಸುವ ಫ್ಯಾಕ್ಟ್ ಇದರಿಂದ ಮಿಸ್ ಆಯ್ತು. ಈ ಫೋಟೋ ನೋಡಿದ ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ. ಛೇ ಲೀಲಾ, ಎಜೆ ಸಂಸಾರ ಶುರುವಾಗಿದ್ದರೆ ಇನ್ನಷ್ಟು ಅದ್ಭುತವಾಗಿ ಇರ್ತಿತ್ತು. ಕಥೆಯನ್ನು ಪ್ರೋಮೋದಲ್ಲಿರುವಂತೆಯೇ ಎಂಡ್ ಮಾಡಬೇಕಿತ್ತು ಅಂತಾನೇ ಹಲವರು ಕಮೆಂಟ್ ಹಾಕುತ್ತಿದ್ದಾರೆ.


Click it and Unblock the Notifications











