ಹಿಟ್ಲರ್ ಕಲ್ಯಾಣ: ಹೆಂಡತಿಯ ಮೇಲೆ ಕಣ್ಣಾಕಿರುವ ದೇವ್‌ನನ್ನು ಸುಮ್ಮನೆ ಬಿಡುತ್ತಾನಾ ಎಜೆ?

By ಎಸ್ ಸುಮಂತ್

ನೋಡುಗರ ಮನದ ಮೂಲೆಯಲ್ಲೆಲ್ಲೋ ಎಜೆ ಕಾದು ನೋಡುವ ತಂತ್ರ ಮಾಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಆದರೆ ಇನ್ನು ಎಷ್ಟು ದಿನ ಈ ರೀತಿಯ ತಾಳ್ಮೆ ಎಂಬ ಬೇಸರವೂ ಒಟ್ಟೊಟ್ಟಿಗೆ ಕಾಡುತ್ತಿದೆ. ಮನೆಯಲ್ಲಿ ದೇವ್ ಆಡುವ ನಾಟಕಗಳು ಜಾಸ್ತಿಯಾಗಿದೆ. ಪವಿತ್ರಾಳನ್ನ ಯಾವಾಗ ಕೊಲೆ ಮಾಡುತ್ತೀನಿ ಅಂತ ಕಾಯುತ್ತಿರುವ ದೇವ್ ಸಮಯಕ್ಕಾಗಿ ಹೊಂಚು ಹಾಕುತ್ತಿದ್ದಾನೆ. ಆದರೆ ಇದೀಗ ದೇವ್‌ನ ಕೆಟ್ಟ ಚಾಳಿ ಮಿತಿ ಮೀರಿದ್ದು, ಲೀಲಾಳ ಮೇಲೆಯೇ ಕೆಟ್ಟ ದೃಷ್ಟಿ ಬಿಟ್ಟಿದ್ದಾನೆ.

ಆತ್ಮಹತ್ಯೆ ನಾಟಕವಾಡಿ ಎಜೆಯ ಮನಸ್ಸನ್ನು ದೇವ್ ಬದಲಾಯಿಸಿದ್ದಾನೆ. ಆದೇ ಕಾರಣಕ್ಕಾಗಿಯೇ ದೇವ್ ಬಗ್ಗೆ ಯಾರು ಏನನ್ನೇ ಹೇಳಿದರೂ ಎಜೆ ನಂಬುತ್ತಿಲ್ಲ. ಲೀಲಾ ಈಗಾಗಲೇ ಸಾಕಷ್ಟು ಬಾರಿ ದೇವ್ ಬಣ್ಣ ಬಯಲು ಮಾಡಲು ಹೋಗಿ ಸೋತಿದ್ದಾಳೆ‌. ಸಾಕ್ಷಿಗಳೇ ಇಲ್ಲದೆ ಮರು ಮಾತನಾಡಲು ಆಗದ ಸ್ಥಿತಿಯಲ್ಲಿ ನಿಂತಿದ್ದಾಳೆ‌. ಎಜೆ ಕೂಡ ಲೀಲಾಳಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಯಾವುದಕ್ಕೂ ತಾಳ್ಮೆ ಇರಲಿ ಎಂದಿದ್ದಾರೆ.

ದೇವ್ ನಾಟಕ ಮುಂದುವರಿಕೆ

ದೇವ್ ನಾಟಕ ಮುಂದುವರಿಕೆ

ಪವಿತ್ರಾ ಎಂದರೆ ಪ್ರೀತಿ, ಪವಿತ್ರಾ ಈ ರೀತಿ ಇರುವುದನ್ನು ನೋಡಲು ಆಗುವುದಿಲ್ಲ ಎಂಬ ನಾಟಕವನ್ನು ಎಜೆ ಮುಂದೆ ದೇವ್ ಮುಂದುವರೆಸಿದ್ದಾನೆ. ಪವಿತ್ರಾಳನ್ನು ವಾಕ್ ಕರೆದುಕೊಂಡು ಹೋಗುವುದೇ ಪುಣ್ಯದ ಕೆಲಸ ಎಂದೆಲ್ಲಾ ರೀಲ್ ಬಿಡುತ್ತಿದ್ದಾನೆ. ಇದೆಲ್ಲವನ್ನು ಎಜೆ ಕೂಡ ತಾಳ್ಮೆಯಿಂದಲೇ ನೋಡುತ್ತಿದ್ದಾರೆ. ಆದರೆ ಎಜೆಯ ತಾಳ್ಮೆಗೆ ಕಾರಣ ಏನೆಂಬುದೇ ನೋಡುಗರ ಪ್ರಶ್ನೆಯಾಗಿದೆ. ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಪವಿತ್ರಾಳನ್ನು ಸಾಯಿಸಲು ಸ್ಕೆಚ್ ಹಾಕುವ ದೇವ್, ಮನೆಯವರೆಲ್ಲರೂ ಇದ್ದು ಬಿಟ್ಟರೆ ಪವಿತ್ರಾಳೇ ದೇವ್ ಪಾಲಿಗೆ ದೇವತೆಯಾಗಿ ಬಿಡುತ್ತಾಳೆ.

ಅಷ್ಟಕ್ಕೂ ಎಜೆ ತಾಳ್ಮೆಗೆ ಕಾರಣವೇನು?

ಅಷ್ಟಕ್ಕೂ ಎಜೆ ತಾಳ್ಮೆಗೆ ಕಾರಣವೇನು?

ಪವಿತ್ರಾಳ ಈ ಸ್ಥಿತಿಗೆ ದೇವ್ ಕಾರಣ ಎಂಬುದು ಈ ಮೊದಲೇ ಎಜೆಗೆ ಅನುಮಾನ ಬಂದಿತ್ತು. ಅದೇ ಕಾರಣಕ್ಕಾಗಿಯೇ ಪವಿತ್ರಾಳ ಸಾವಿನ ಸುತ್ತ ಎಜೆ ತನಿಖೆ ಆರಂಭಿಸಿದ್ದರು. ದೇವ್ ಮನೆಗೆ ಹೋಗಿ ಸಾಕ್ಷಿ ಸರ್ಚ್ ಮಾಡಿದ್ದರು. ಆದರೆ ದೇವ್ ಅದೃಷ್ಟ ಹಿಂದೆಯೂ ಚೆನ್ನಾಗಿತ್ತು ಅನ್ನಿಸುತ್ತೆ ಅಲ್ಲಿಯೂ ಬಚಾವ್ ಆಗಿದ್ದ. ಸೈಕಲ್ ಗ್ಯಾಪ್‌ನಲ್ಲಿ ಬಟನ್ ಇದ್ದ ಶರ್ಟ್ ಎಜೆ ಕಣ್ಣಿನಿಂದ ನಾಪತ್ತೆಯಾಗಿತ್ತು. ಆದರೆ ಇಷ್ಟೆಲ್ಲಾ ಸಾಕ್ಷಿ ಹುಡುಕಿದ್ದ ಎಜೆ ಇದೀಗ ದೇವ್ ಹೇಳಿದ ಎಲ್ಲಾ ಮಾತನ್ನು ಯಾಕೆ ನಂಬುತ್ತಿದ್ದಾರೆ ಎಂಬ ಪ್ರಶ್ನೆ ನೋಡುಗರಿಗೆ ಸೃಷ್ಟಿಯಾಗಿದೆ. ಅಥವಾ ಎಜೆ ಕಾದು ನೋಡುವ ತಂತ್ರಕ್ಕೂ ಕೈ ಹಾಕಿರಬಹುದು. ಸಾಕ್ಷಿಯನ್ಬು ಹುಡುಕುತ್ತಲೂ ಇರಬಹುದು. ಅದೇ ಕಾರಣಕ್ಕೆ‌ ಮನೆಯವರನ್ನೆಲ್ಲಾ ಪಾರ್ಟಿಗೆಂದು ಆಚೆ ಕಳುಹಿಸಿ, ದೇವ್ ಒಬ್ಬನನ್ನೇ ಮನೆಯಲ್ಲಿ ಬಿಟ್ಟಿದ್ದಾರೆ ಎನಿಸುತ್ತದೆ.

ಲೀಲಾಳನ್ನು ನೋಡಿದರೆ ಎಜೆ ಸುಮ್ಮನೆ ಬಿಡುತ್ತಾನಾ?

ಲೀಲಾಳನ್ನು ನೋಡಿದರೆ ಎಜೆ ಸುಮ್ಮನೆ ಬಿಡುತ್ತಾನಾ?

ದೇವ್ ಕರ್ಮಕಾಂಡ ಮಿತಿಮೀರಿದೆ. ಇಷ್ಟು ದಿನ ಪವಿತ್ರಳನ್ನು ಸಾಯಿಸುವ ಧೈರ್ಯಕ್ಕೆ ಕೈ ಹಾಕಿದ್ದ. ಆದರೆ ಈಗ ದೊಡ್ಡ ತಪ್ಪು ಮಾಡಲು ಹೊರಟಿದ್ದಾನೆ. ಚುಕ್ಕಿಗಾಗಿ ಪವಿತ್ರಾಳನ್ನೇ ಕೊಲೆ ಮಾಡುವ ಹಂತಕ್ಕೆ ಹೋದವನು ಈಗ ಚುಕ್ಕಿಯನ್ನು ಬಿಟ್ಟು ಲೀಲಾಳ ಮೇಲೆ ಕಣ್ಣು ಹಾಕಿದ್ದಾನೆ. ಲೀಲಾಳ ಬಗ್ಗೆ ಕೆಟ್ಟದಾಗಿ ನೋಡುತ್ತಿದ್ದಾನೆ. ಕೆಟ್ಟದಾಗಿ ವಿಡಿಯೋ ಮಾಡಿದ್ದಾನೆ. ಇದು ಲೀಲಾಳಿಗೂ ಮುಜುಗರಕ್ಕೀಡು ಮಾಡಿದೆ. ಆದರೆ ದೇವ್ ಚುಕ್ಕಿಯನ್ನು ಬಿಟ್ಟು ಬಿಡ್ತೇನೆ ನೀನು ಸಿಗುತ್ತೀಯಾ ಎಂದಾಗ ಲೀಲಾಳ ಮನಸ್ಸು ಹೊಡೆದು ಹೋಗಿದೆ.

ಎಜೆಗೆ ಲೀಲಾ ಈ ವಿಚಾರ ಹೇಳ್ತಾಳಾ?

ಈಗಾಗಲೇ ದೇವ್ ಬಗ್ಗೆ ಹೇಳಿದಾಗೆಲ್ಲಾ ಲೀಲಾಳ ವಿಚಾರ ಫೇಲ್ ಆಗಿದೆ. ಸಾಕ್ಷಿಗಳೇ ಸಿಗದೆ ಹೋದಲ್ಲಿ ಲೀಲಾ ಗೆಲ್ಲಲು ಸಾಧ್ಯವಿಲ್ಲ. ಎಜೆಗೂ ಈ ಬಗ್ಗೆ ಮಾತು ಕೊಟ್ಟಿದ್ದಾಳೆ. ಮತ್ತೆ ನಿಮ್ಮ ಮುಂದೆ ಸಾಕ್ಷಿ ಸಮೇತ ಬರ್ತೇನೆ ಅಂತ. ಆದರೆ, ಇಷ್ಟು ಕೆಟ್ಟದಾಗಿ ದೇವ್ ನಡೆದುಕೊಂಡಿರುವುದನ್ನು ಸಾಕ್ಷಿ ಇಲ್ಲದೆ ಹೇಳಿದರೆ ಎಜೆ ನಂಬಲು ಕಷ್ಟ. ಲೀಲಾಳ ಈ ವೀಕ್‌ನೆಸ್ ದೇವ್‌ಗೆ ಮತ್ತಷ್ಟು ಬಲ ನೀಡಿದೆ.

More from Filmibeat

English summary
Hitler Kalyana Serial July 28th Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X