'ಹಿಟ್ಲರ್ ಕಲ್ಯಾಣ'ದಲ್ಲಿ ಹೊಸ ಟ್ವಿಸ್ಟ್ ಏನು? ದೇವ್‌ನಿಂದಾ ಪವಿತ್ರಳನ್ನೂ ಕಾಪಾಡುತ್ತಾಳಾ ಲೀಲಾ?

By ಪೂರ್ವ

ಜೀ ಕನ್ನಡ ಟಾಪ್ ಧಾರಾವಾಹಿಗಳಲ್ಲಿ 'ಹಿಟ್ಲರ್ ಕಲ್ಯಾಣ' ಕೂಡ ಒಂದು. ಈಗಾಗಲೇ ಹಲವು ಅನಿರೀಕ್ಷಿತ ಟ್ವಿಸ್ಟ್‌ಗಳ ಮೂಲಕ ವೀಕ್ಷಕರನ್ನು ಹಿಡಿದಿಟ್ಟಿದೆ. ಮುಂದಿನ ಒಂದು ವಾರ 'ಹಿಟ್ಲರ್ ಕಲ್ಯಾಣ' ವೀಕ್ಷಕರನ್ನು ಹೇಗೆಲ್ಲಾ ರಂಜಿಸುತ್ತೆ ಅನ್ನೋ ಕುತೂಹಲವಂತೂ ಇದ್ದೇ ಇದೆ. ಇದೀಗ ಕಳೆದ ವಾರದ ಕೊನೆಯ ಎಪಿಸೋಡ್‌ನಲ್ಲಿ ಏನಾಗಿತ್ತು? ಅನ್ನೋದನ್ನು ನೋಡೋಣ.

ಏಜೆ ಹಾಗೂ ಪವಿತ್ರ ಜೊತೆ ವಾಕ್ ಮಾಡುತ್ತಾ, ತಂಗಿಯ ಬಳಿ ಹೇಳುತ್ತಾರೆ. "ಸರಿಯಾದ ದಿನ, ನಿನ್ನ ನನ್ನ ಜೀವನದಲ್ಲಿ ಬಂದ ಕೆಟ್ಟವನನ್ನು ಬೇರು ಸಮೇತ ತೊಡೆದು ಹಾಕುತ್ತೇನೆ." ಎನ್ನುತ್ತಾರೆ. ದೂರದಲ್ಲಿ ಇದನ್ನೇ ನೋಡಿದ ದೇವ್ ಏಜೆ ಬಳಿಗೆ ಗಾಬರಿಯಿಂದ ಓಡೋಡಿ ಬರುತ್ತಾನೆ.

ದೇವ್ ಓಡೋಡಿ ಬಂದಿದ್ದನ್ನು ಕಂಡ ಏಜೆ ಏನಾಯ್ತು ದೇವ್? ಎಂದು ಕೇಳುತ್ತಾನೆ. ಆಗ ದೇವ್ ಎನೂ ಇಲ್ಲ. ಪವಿತ್ರಾಳನ್ನು ನಾನು ವಾಕ್‌ಗೆ ಕರೆದುಕೊಂಡು ಹೋಗುತ್ತೇನೆ" ಎಂದು ಹೇಳುತ್ತಾನೆ. ಆಗ ಏಜೆ ಹಾಗೂ ದೇವ್ ನಡುವೆ ಒಂದಷ್ಟು ಸಂಭಾಷಣೆ ನಡೆಯುತ್ತೆ.

ದೇವ್ ಮಾತಿಗೆ ಟಾಂಗ್ ಕೊಟ್ಟ ಏಜೆ?

ಪವಿತ್ರಾಳನ್ನು ವಾಕ್‌ಗೆ ಕರೆದುಕೊಂಡು ಹೋಗುತ್ತೇನೆ ಎಂದ ದೇವ್ ಮಾತಿಗೆ ಏಜೆ ಸರಿಯಾಗಿ ಟಾಂಗ್ ಕೊಡುತ್ತಾರೆ. "ಯಾಕೆ ದೇವ್ ನಾನು ಕರೆದುಕೊಂಡು ಹೋದರೆ ನಿನಗೇನಾದರು ಪ್ರಾಬ್ಲಂ ಆಗುತ್ತಾ? ಅಥವಾ ಎಲ್ಲಾ ವಿಚಾರ ನನ್ನ ಬಳಿ ಹೇಳಿ ಬಿಡುತ್ತಾಳೆ ಅಂತ ಭಯನಾ? ಎಂದು ಅಣಕಿಸುತ್ತಾರೆ. ಆಗ ದೇವ್ "ಛೇ.. ಛೇ.. ಹಾಗೇನೂ ಇಲ್ಲ." ಎಂದು ತಬ್ಬಿಬ್ಬಾಗುತ್ತಾನೆ. ಆಗಲೇ ಏಜೆ ಪಿಎ ಓಡಿ ಬಂದು ಮೀಟಿಂಗ್ ಇರೋ ಸಂಗತಿ ತಿಳಿಸುತ್ತಾನೆ.

Hitler Kalyana Serial July 30th Episode Written Update

ತಕ್ಷಣ ಮೀಟಿಂಗ್ ಅರೇಂಜ್ ಮಾಡುವಂತೆ ಏಜೆ ಹೇಳುತ್ತಾನೆ. ಇನ್ನೂ ಪವಿತ್ರಳನ್ನು ರೂಮ್‌ಗೆ ಕರೆದುಕೊಂಡು ಬಿಡಬೇಕು ಎನ್ನುವಾಗ, ಏಜೆ ಬಳಿ ದೇವ್ "ನೀವು ಹೋಗಿ ನಾನು ವಾಕ್ ಮಾಡಿಸುತ್ತೇನೆ" ಎಂದು ಹೇಳುತ್ತಾನೆ. ಆಗ ಏಜೆ ಆಗಲಿ ಎಂದು ಹೇಳಿ ಹೋಗುತ್ತಾನೆ. ಏಜೆ ಅಲ್ಲಿಂದ ತೆರಳಿದ ಮೇಲೆ ಪವಿತ್ರಾಳನ್ನು ಕಂಡ ದೇವ್ "ಏನೇ ಹೆಂಡತಿ ನಿನ್ನೆ ಏನೋ ಮಿಸ್ ಆಗಿ ಹೋಗಿದ್ದಿಯಾ. ಆದರೆ ಇವತ್ತು ನೋಡು ಏಜೆನೇ ನಿನ್ನನ್ನು ಪ್ರಸಾದ ತರ ನನ್ನ ಕೈಗೆ ಇಟ್ಟು ಹೋಗಿದ್ದಾನೆ." ಎಂದು ಪವಿತ್ರಾಗೆ ಹೇಳುತ್ತಾನೆ.

ಏಜೆ ತೆರಳಿದ ಬಳಿಕ ದೇವ್ ಹಾಗೂ ಪವಿತ್ರಾ ಬಳಿ ಸಂಭಾಷಣೆ ನಡೆಯುತ್ತಲೇ ಇರುತ್ತೆ. "ನಿನ್ನ ಲಬಕ್ ಅಂತ ಬಾಯಿಗೆ ಹಾಕಿಕೊಂಡು ಲಬಾ ಲಬಾ ಅಂತ ಬಾಯಿಗೆ ಹಾಕಿ ತಿನ್ನುತಿರುವುದೇ. ಬಾ ಬಾ ಕಮಾನ್ ಲೆಟ್ಸ್‌ಗೊ. ಲೇ ಪವಿತ್ರ ಅದೇನು ಲಕ್ಕಿ ನೀನು ಅಬ್ಬಾಬಾ ನಾನು ನಿನ್ನ ಎಷ್ಟು ಸಾಯಿಸಬೇಕು ಎಂದು ಪ್ರಯತ್ನ ಪಟ್ಟರೂ, ನಿನಗೆ ಸಾವೇ ಬರುತ್ತಿಲ್ಲ ಅಲ್ವಾ. ಭಗವಂತನಲ್ಲಿ ಸ್ಟ್ರಾಂಗ್ ಆಗಿ ಬೇಡಿಕೊಂಡಿದ್ದಿಯಾ ಏನು? ನನ್ನ ಗಂಡನಿಂದ ಯಾವುದೇ ತೊಂದರೆ ಬರಬಾರದು ಎಂದು ಕೇಳಿಕೊಂಡಿದ್ದೀಯಾ? ನಾನು ಈಗ ಸಾಯಿಸಿದ್ರೆ ನನಗೆ ಪಾಪ ಸುತ್ತಿಕೊಳ್ಳುತ್ತೆ. ಆ ಪಾಯಿಂಟ್ ಇಟ್ಟುಕೊಂಡು ಭಗವಂತ ನನ್ನ ತಡೆಯುತ್ತಿದ್ದಾನೋ ಏನೋ? ಆದರೆ ಆ ಭಗವಂತನ ಆಟ ನಡೆಯಲ್ಲ ಪವಿತ್ರಾ. ನಡಿ ಬಾ ಬೇಗ ಹೋಗೋಣ. ಬಾ..ಬಾ" ಎಂದು ಪವಿತ್ರಾ ಕರೆದುಕೊಂಡು ಹೊರಡಲು ಅನುವಾಗುತ್ತಾನೆ. ಅಲ್ಲಿಗೆ ಲೀಲಾ ಎಂಟ್ರಿ ಆಗುತ್ತೆ.

Hitler Kalyana Serial July 30th Episode Written Update

ಲೀಲಾ ಕಂಡು ಉರಿದು ಬಿದ್ದ ದೇವ್

ಲೀಲಾಳನ್ನು ಕಂಡ ಕೂಡಲೇ ದೇವ್ ಕೋಪಗೊಳ್ಳುತ್ತಾನೆ. "ನೀವು ಯಾಕ್ರೀ ಪವಿತ್ರಾ ಅವರನ್ನು ಕರೆದುಕೊಂಡು ಬಂದಿದ್ದೀರಾ . ಇವರನ್ನು ನೋಡಿಕೊಳ್ಳಲು ನಾನಿದ್ದೀನಿ. ಮೂರನೇಯವರು ಮಧ್ಯೆ ಬರೋ ಅಗತ್ಯ ಇಲ್ಲ ಎಂದು ಲೀಲಾ ಗದರುತ್ತಾಳೆ. ಆಗ ದೇವ್ "ಎನ್ ಲೀಲಾ ಅವರೇ ಹೀಗೆ ಹೇಳುತ್ತಿದ್ದೀರಾ ಏಜೆನೇ ಪವಿತ್ರಾಳನ್ನೂ ಒಳಗೆ ಕರೆದುಕೊಂಡು ಹೋಗಲು ಅನುಮತಿ ಕೊಟ್ಟಿದ್ದು. ನಿಮಗೆ ಅಷ್ಟು ಡೌಟ್ ಇದ್ದರೆ ಕಾಲ್ ಮಾಡಿ ಕೇಳಿ." ಎನ್ನುತ್ತಾನೆ ದೇವ್. ಅದಕ್ಕೆ ಲೀಲಾ, "ಫೋನ್ ಮಾಡಿ ಕೇಳುವಷ್ಟು ಸಮಯ ನನ್ನ ಬಳಿ ಇಲ್ಲ. ಯಾರು ಏನೇ ಹೇಳಿದರೂ ಪವಿತ್ರ ಅವರನ್ನು ಮಾತ್ರ ನಿಮ್ಮ ಬಳಿ ಬಿಡಲ್ಲ." ಎನ್ನುತ್ತಾರೆ. ಆಗ ದೇವ್ ಮನದಲ್ಲಿ ಯೋಚನೆಗಿಳಿಯುತ್ತಾನೆ.

ಲೀಲಾ ಮಾತು ಕೇಳಿ ದೇವ್ ಕೋಪ ನೆತ್ತಿಗೆ ಹತ್ತುತ್ತೆ. "ನನ್ನ ಹೆಂಡತಿ ಸೇವೆ ಮಾಡಲು ಊರವರನ್ನು ಕೇಳುವಂತಾಗಿದೆ. ಇದು ಯಾವ ನ್ಯಾಯ? ನನ್ನ ಹೆಂಡತಿ ನನಗೆ ಮಾತ್ರ" ಎಂದು ಮುಂದಕ್ಕೆ ಹೋಗಲು ಅನುವಾಗುತ್ತಾನೆ. ಆಗ ಲೀಲಾ ತಡೆಯುತ್ತಾರೆ. "ಈ ನಾಟಕ ಎಲ್ಲಾ ನೀವು ಏಜೆ ಹತ್ತಿರ ಇಟ್ಟುಕೊಳ್ಳಿ. ಅವರಾದರೆ ನಿಮ್ಮನ್ನು ಹಿಂದೆ-ಮುಂದೆ ನೋಡದೆ ನಂಬುತ್ತಾರೆ. ಆದರೆ ಲೀಲಾ ಏಕ್ ಮಾರ್ ದೋ ತುಕಡ. ಪವಿತ್ರ ಅವರನ್ನು ನಾನೇ ನೋಡಿಕೊಂಡಿದ್ದೇನೆ. ಅವರು ಸರಿ ಹೋಗಿವರೆಗೂ ನಾನೇ ನೋಡಿಕೊಳ್ಳುತ್ತೇನೆ. ಸುಮ್ಮನೆ ಹೋಗುತ್ತಾ ಇರಿ" ಎಂದಾಗ ದುರ್ಗಾ ಎಂಟ್ರಿ ಆಗುತ್ತೆ.

ಲೀಲಾ ಯಾಕೆ ದೇವ್ ಬಳಿ ಜಗಳ ಮಾಡುತ್ತಿದ್ದೀಯಾ? ಲಕ್ಷ್ಮಿ, ಸರು ನನಗೆ ಹೇಳುತ್ತಲೇ ಇದ್ದರು. ಈಗ ನಾನೇ ಕಣ್ಣಾರೆ ನೋಡಿ ನಿಜ ಅನ್ನಿಸಿತು. ಅಲ್ಲಾ ಅವರ ಹೆಂಡತಿನ ಅವರು ನೋಡಿಕೊಳ್ಳುವುದರಲ್ಲಿ ತಪ್ಪೇನಿದೆ? ಇದೀಗ ನೀನು ಮಾಡುತ್ತಿರುವುದು ತಪ್ಪು. ಹೀಗೆ ಮಾಡಿದ್ರೆ ಏಜೆಗೆ ಕಂಪ್ಲೇಂಟ್ ಮಾಡಬೇಕಾಗುತ್ತದೆ." ಎನ್ನುತ್ತಾರೆ ದುರ್ಗಾ. ಅದಕ್ಕೆ ಲೀಲಾ ಅಂಜದೇ "ಮಾಡಿಕೊಳ್ಳಿ. ಫೋನ್ ನಂಬರ್ ಇದೆ ತಾನೇ. ಡಯಲ್ ಮಾಡಿ ಕಂಪ್ಲೇಂಟ್ ಮಾಡಿ. ಆದರೆ ಪವಿತ್ರಾ ಅವರ ಸುದ್ದಿಗೆ ಮಾತ್ರ ಯಾರು ಬರೋ ಹಾಗಿಲ್ಲ. ಜಾಗ ಬಿಡಿ ಎಂದು ಹೇಳಿ" ಪವಿತ್ರಾಳನ್ನೂ ಲೀಲಾ ಕರೆದುಕೊಂಡು ಹೋಗುತ್ತಾಳೆ.

English summary
Hitler Kalyana Serial July 30th Episode Written Update. Here is the detail.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X