Hitler Kalyana: ಲೀಲಾಳ ವಿರುದ್ಧ ನಿಂತ ಅಂತರಾ.. ಎಜೆ ವಿಚಾರಕ್ಕೆ ಕಿತ್ತಾಟ.. ಮುಂದೇನಾಯ್ತು?

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಬಂದಾಗಿನಿಂದಲೂ ಲೀಲಾ ತನ್ನ ಸ್ಥಾನವನ್ನೇ ಮರೆತಿದ್ದಾಳೆ. ಎಜೆ ಹಾಗೂ ಅಂತರಾ ಖುಷಿಯಾಗಿರಲಿ ಎಂದು ಎಲ್ಲವನ್ನೂ ತ್ಯಾಗ ಮಾಡಿದ್ದಾಳೆ.

ಅಂತರಾಳಿಗೆ ಲೀಲಾ ಬಗ್ಗೆ ಯಾವ ಸತ್ಯವೂ ತಿಳಿದಿಲ್ಲ. ಹೀಗಿರುವಾಗ ಲೀಲಾ ಅವರ ಅಮ್ಮ ಬಂದಾಗ, ಲೀಲಾ ಹಾಗೂ ಎಜೆ ಅನ್ನು ಗಂಡ-ಹೆಂಡತಿಯಾಗಿ ನಾಟಕ ಮಾಡುವಂತೆ ಮಾಡಿದ್ದು ಸ್ವತ: ಅಂತರ.

Hitler Kalyana-Zee Kannada Serial

ಆದರೆ, ಇದರಿಂದ ಎಜೆ ಹಾಗೂ ಲೀಲಾ ನಡುವಿನ ಬಾಂಡಿಂಗ್ ಹೆಚ್ಚಾಗಿದೆ. ಇದು ಅಂತರಾಳಲ್ಲಿ ತನಗೇ ತಿಳಿಯದಂತೆ ಅವರಿಬ್ಬರ ಬಗ್ಗೆ ಹೊಟ್ಟೆ ಉರಿ ಆಗುವಂತೆ ಮಾಡಿದೆ. ಹೀಗಾಗಿ ಇವರಿಬ್ಬರ ನಡುವೆ ಕಿತ್ತಾಟ ಶುರುವಾಗಿದೆ.

ಲೀಲಾ ಬಗ್ಗೆ ಅಂತರಾಗೆ ಅಸೂಯೆ

ದುರ್ಗಾ ಹಾಗೂ ಸರಸ್ವತಿ ಬೇರೆ ಅಂತರಾ ಬಳಿ ಬೇಕಂತಲೇ ಚಾಡಿ ಹೇಳುತ್ತಲೇ ಇದ್ದಾರೆ. ಲೀಲಾ ಸರಿ ಇಲ್ಲ. ಅವಳು ಎಜೆಯನ್ನು ತನ್ನತ್ತ ಸೆಳೆದುಕೊಳ್ಳುತ್ತಾಳೆ ಎಂದು ಹಚ್ಚಿ ಕೊಟ್ಟಿದ್ದಾರೆ. ಅಂತರಾಳಿಗೆ ಈಗ ಎಜೆ ಮೇಲೆ ಪೊಸೆಸ್ಸಿವ್‌ನೆಸ್ ಶುರುವಾಗುತ್ತಿದೆ. ಲೀಲಾ ಮೇಲೆ ಕೋಪ ಬರುವಷ್ಟು ಸಿಟ್ಟಾಗುತ್ತಿದ್ದಾಳೆ. ಲೀಲಾ ಕೂಡ ಅಂತರಾಳನ್ನು ಮರೆತು ಆಗಾಗ ಎಜೆ ಬಗ್ಗೆ ಹೆಚ್ಚು ಕಾಳಜಿ ತೋರುವುದು, ಎಜೆಯ ಜೊತೆಗೇ ಸದಾ ಇರುವುದನ್ನು ಮಾಡುತ್ತಿದ್ದಾಳೆ. ಇದೆಲ್ಲವೂ ಅಂತರಾ ಮನಸ್ಸಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಒಂದು ಬಾರಿ ಲೀಲಾಳ ತಪ್ಪಿಲ್ಲ ಎನಿಸಿದರೆ, ಮತ್ತೊಂದು ಬಾರಿ ದುರ್ಗಾ ಹಾಗೂ ಸರಸ್ವತಿ ಮಾತನ್ನು ಕೇಳಿಸಿಕೊಳ್ಳಬಾರದು ಎಂದು ಅಂದುಕೊಳ್ಳುತ್ತಾಳೆ.

Hitler Kalyana-Zee Kannada Serial

ಕಣಿ ಮಾತು ಕೇಳಿ ಒಂದಲಕ್ಕೊಳಗಾದ ಎಜೆ

ಇಂತಹ ಸಂದರ್ಭದಲ್ಲೇ ಎಜೆ ಮನೆಗೆ ಕಣಿ ಹೇಳುವಾಕೆಯ ಎಂಟ್ರಿಯಾಗಿದೆ. ಅವಳು ಅಂತರಾ ಬಗ್ಗೆ ಕಣಿ ಹೇಳಿದ್ದಾರೆ. ಅಂತರಾ ಇರುವ ಜಾಗ ಸರಿ ಅಲ್ಲ. ಅವಳ ಜೀವನವೇ ಬೇರೆ ಇದೆ. ಅಂತರಾ ಅಂದುಕೊಂಡಿರುವುದು ಯಾವುದೂ ಸತ್ಯವಲ್ಲ ಎಂದೆಲ್ಲಾ ಕಣಿ ಹೇಳುತ್ತಾರೆ. ಬಳಿಕ ಎಜೆ ಹಾಗೂ ಲೀಲಾ ಕುರಿತು ಹೇಳುತ್ತಾರೆ. ಲೀಲಾ ಸೋತು ಗೆಲ್ಲುತ್ತಾಳೆ. ತಾನು ಅಂದುಕೊಂಡಿದ್ದೆಲ್ಲವೂ ನೆರವೇರುತ್ತದೆ. ಲೀಲಾಳಿಗೆ ಧಕ್ಕಬೇಕಿರುವುದೆಲ್ಲವೂ ಸಿಗುತ್ತದೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಎಜೆಯ ಮನಸ್ಸಿನಲ್ಲಿ ಲೀಲಾ ಬಗ್ಗೆ ಯೋಚಿಸುವಂತೆ ಆಗುತ್ತದೆ.

ಲೀಲಾಳಿಗೆ ನಿಲ್ಲದ ಕಷ್ಟ

ಇನ್ನು ಲೀಲಾ ಮಾಡುತ್ತಿರುವ ಪ್ರತಿಯೊಂದು ಕೆಲಸದಲ್ಲೂ ಅಂತರಾ ತಪ್ಪು ಹುಡುಕುತ್ತಿರುತ್ತಾಳೆ. ಎಜೆಗೆ ತಲೆನೋವು ಎಂದಾಗ ಲೀಲಾ ಮಾತ್ರೆ ಕೊಟ್ಟು ಎಜೆ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಿರುತ್ತಾಳೆ. ಇದೇ ವೇಳೆಗೆ ಸರಸ್ವತಿ, ದುರ್ಗಾ ಮತ್ತು ಅಂತರಾಳನ್ನು ಕರೆದುಕೊಂಡು ಬರುತ್ತಾಳೆ. ಅಂತರಾ ಲೀಲಾ ಎಜೆ ಬಳಿ ಇರುವುದನ್ನು ನೋಡಿ ಕೂಗಾಡುತ್ತಾಳೆ. ಆಗ ಎಜೆ ಲೀಲಾ ಪರ ಮಾತನಾಡುತ್ತಾನೆ. ಲೀಲಾ ಎಲ್ಲರ ಯೋಗಕ್ಷೇಮವನ್ನು ವಿಚಾರಿಸುತ್ತಾಳೆ ಎಂದು ಬೈದು ಕಳಿಸುತ್ತಾನೆ. ಈ ಮಾತುಗಳನ್ನು ಕೇಳಿದ ದುರ್ಗಾ ಶಾಕ್ ಆಗುತ್ತಾಳೆ. ಇದರಿಂದ ಅಂತರಾಳಿಗೆ ಸಂಕಟ ಹೆಚ್ಚಾಗುತ್ತದೆ. ಜೊತೆಗೆ ಲೀಲಾ ಮೇಲಿನ ಕೋಪವೂ ಹೆಚ್ಚಾಗುತ್ತದೆ.

ಅಂತರಾ ನಡವಳಿಕೆಯಲ್ಲಿ ಬದಲಾವಣೆ

ಲೀಲಾ, ಎಜೆ ಬಟ್ಟೆಗಳನ್ನು ಐರನ್ ಮಾಡುವುದನ್ನು ನೋಡುವ ಅಂತರಾ ಬೇಕಂತಲೇ ಪ್ರಶ್ನೆ ಮಾಡುತ್ತಾಳೆ. ನಿನಗೂ ಎಜೆಗೂ ಏನು ಸಂಬಂಧ..? ನೀನ್ಯಾಕೆ ಅವರ ಕೆಲಸಗಳನ್ನು ಮಾಡಬೇಕು. ಅವರ ಹೆಂಡತಿಯಾಗಿ ನಾನಿದ್ದೀನಿ. ಇನ್ಮುಂದೆ, ಎಜೆಯ ಎಲ್ಲಾ ಕೆಲಸಗಳು ಕೂಡ ನಾನೇ ಮಾಡುತ್ತೇನೆ. ನೀನು ಇನ್ನೆಂದೂ ಈ ಕೆಲಸಗಳನ್ನು ಮಾಡಬೇಡ ಎಂದು ವಾರ್ನಿಂಗ್ ಕೊಡುತ್ತಾಳೆ. ಅಂತರಾ ಈಗ ಸಂಪೂರ್ಣವಾಗಿ ಬದಲಾಗಿದ್ದಾಳೆ. ಲೀಲಾ ಮೇಲೆ ವಿಷ ಕಾರುವಷ್ಟು ದ್ವೇಷಿಸುತ್ತಿದ್ದಾಳೆ. ಲೀಲಾಳಿಗೆ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ.

More from Filmibeat

English summary
Hitler Kalyana serial July 5th Episode Written Update. Anthara feels angry on Leela for everything. she tries to keep away Leela from AJ, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X