ಏಜೆ ಕೈಗೆ ಸಿಕ್ಕಿಬಿದ್ದ ದೇವ್: ಬಯಲಾಗುತ್ತಾ ಸತ್ಯದೇವ್ ಮುಖವಾಡ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ, ಪಾಪ ಏಜೆ, ಲೀಲಾ ಮೇಲೆ ಅದೆಷ್ಟೂ ಪ್ರೀತಿ ಆದ್ರೆ ಲೀಲಾಗೆ ಏಜೆ ಮೇಲೆ ಮುನಿಸು ಏಜೆ ಮನೆಗೆ ಲೀಲಾ ಬರಲು ಒಪ್ಪುತ್ತಿಲ್ಲ. ಹಾಗಂತ ಏಜೆ ಮೇಲೆ ಲೀಲಾಗೆ ಪ್ರೀತಿ ಇಲ್ಲಾಂತ ಅಲ್ಲ, ಪ್ರೀತಿ ಇದೆ ಆದರೆ ಲೀಲಾ ತೋರಿಸಿಕೊಳ್ಳುತ್ತಿಲ್ಲ.

ವಿಚ್ಛೇಧನ ಕೊಡಿಸಲು ಪ್ಲ್ಯಾನ್ ಮಾಡಿರುವ ಕೌಸಲ್ಯ, ಮಗಳ ಜೀವನಕ್ಕೆ ಕೊಳ್ಳಿ ಇಡಲು ಮುಂದಾಗಿದ್ದಾರೆ. ಗಂಡ ಮತ್ತು ಇಬ್ಬರನ್ನು ತರಾತುರಿಯಲ್ಲಿ ಮಾರ್ಕೇಟಿಗೆ ತರಕಾರಿ ತರಲು ಸಾಗ ಹಾಕಿ ತನ್ನೆಲ್ಲ ಕೆಲಸವನ್ನು ಕೌಸಲ್ಯ ಮಾಡುವ ಪ್ಲಾನ್‌ನಲ್ಲಿದ್ದಾಳೆ. ಲೀಲಾ ತಂದೆ ಮಾರ್ಕೇಟಿಗೆ ತರಕಾರಿ ತರಲು ಹೊರಟ ವೇಳೆ ಕಾಲಿಂಗ್ ಬೆಲ್ ಸೌಂಡ್ ಆಗುತ್ತದೆ. ಕೌಸಲ್ಯ ಬಾಗಿಲು ತೆಗೆದ ಕೂಡಲೇ ವೇಳೆ ಲಾಯರ್ ಎದುರು ಬಂದು ನಿಲ್ಲುತ್ತಾರೆ. ಲಾಯರ್‌ನನ್ನು ನೋಡಿದ ಕೌಸಲ್ಯಗೆ ತಲೆ ಚಕ್ಕರ್ ಬರುತ್ತದೆ ಬಳಿಕ ಗಂಡ ಯಾರೆಂದು ಕೇಳಿದಾಗ ಯಾರು ಇಲ್ಲ ರೀ ಬಿಕ್ಷುಕ ಎಂದು ಹೇಳಿ ಬಾಗಿಲು ಹಾಕುತ್ತಾಳೆ ಬಳಿಕ ತಂದೆ ಮಕ್ಕಳನ್ನು ಆತುರದಲ್ಲಿ ಮಾರ್ಕೇಟಿಗೆ ಕಳುಹಿಸುತ್ತಾಳೆ.

ಕೌಸಲ್ಯಳ ಹಣದ ದಾಹಕ್ಕೆ ಬ್ರೇಕ್ ಹಾಕ್ತಾಳಾ ಲೀಲಾ

ಕೌಸಲ್ಯಳ ಹಣದ ದಾಹಕ್ಕೆ ಬ್ರೇಕ್ ಹಾಕ್ತಾಳಾ ಲೀಲಾ

ಭಿಕ್ಷುಕನಿಗೆ ಹೋಲಿಸಿದ್ದಕ್ಕೆ ಲಾಯರ್, ಕೌಸಲ್ಯಳನ್ನು ಬೈಯ್ಯಲು ಆರಂಭಿಸುತ್ತಾನೆ. ಕೌಸಲ್ಯಳನ್ನು ನೋಡಿದ ತಕ್ಷಣ ಯಾಕಮ್ಮ ಆಗ ಬೈದಿದ್ದು ಸಾಲಿಲ್ವ ಎಂದು ಹೇಳುತ್ತಾನೆ, ಬಳಿಕ ಲಾಯರ್‌ನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಮಾತನಾಡುತ್ತಾಳೆ. ಲಾಯರ್‌ನನ್ನು ಹುಡುಕಿಕೊಂಡು ಕೋರ್ಟಿಗೆಲ್ಲ ಹೋಗಿದ್ದೆ ಆದ್ರೆ ನನಗ್ಯಾರು ಸಿಕ್ಕಿರಲಿಲ್ಲ, ಇದೀಗ ನೀವು ಸಿಕ್ಕಿದಿರಿ ಇದು ನನ್ನ ಭಾಗ್ಯ ಎಂದಳು. ಬಳಿಕ ಮಗಳ ವಿಚ್ಚೇಧನದ ಬಗ್ಗೆ ಮಾತನಾಡುತ್ತಿರುತ್ತಾಳೆ ಕೌಸಲ್ಯ.

ಸುಳ್ಳು ಹೇಳುವ ದೇವ್

ಸುಳ್ಳು ಹೇಳುವ ದೇವ್

ಇನ್ನೂ ಲೀಲಾ ಮನೆಗೆ ಆಗಮಿಸಿದ ದೇವ್, ಲೀಲಾ ತಂದೆಯ ಬಳಿ ವೀಡಿಯೋ ತುಣುಕನ್ನು ತೋರಿಸಿ ಬ್ಯಾಂಕ್‌ನವರಿಗೆ ಏಜೆನೇ ನಿಮ್ಮನ್ನ ಕೆಲಸದಿಂದ ತೆಗೆಯುವ ರೀತಿ ಮಾಡಿದ್ದು, ಬ್ಯಾಂಕ್‌ನವರನ್ನು ಕರೆಸಿ ಏಜೆ ಮಾತನಾಡುತ್ತಿರುವುದು ಎಂದು ಹೇಳುತ್ತಾನೆ ಇದರಿಂದ ಏಜೆ ತಂದೆಗೆ ಶಾಕ್ ಆಗುತ್ತದೆ. ಬಳಿಕ ದೇವ್ ಹೇಳುತ್ತಾನೆ ಬ್ಯಾಂಕ್ ಪ್ರೋಗ್ರಾಂಗೆ ಹೋಗಬೇಡಿ ಏಜೆ ನಿಮಗೆ ಅವಮಾನಿಸಲು ಅಲ್ಲಿಗೆ ಕರೆಸಿಕೊಂಡಿದ್ದು ಎಂದು ಸುಳ್ಳು ಹೇಳುತ್ತಾನೆ. ನಮ್ಮನ್ನು ಪೊಲೀಸರಿಂದ ಕಾಪಾಡಿದೆ, ಈಗಲು ಕೂಡ ನೀನೇ ಕಾಪಾಡಿದೆಯಪ್ಪ ನಮ್ಮಿಬ್ಬರ ಪಾಲಿಗೆ ನೀನೆ ದೇವ್ರು ಎಂದು ಹೇಳುತ್ತಾಳೆ ಕೌಸಲ್ಯ ಬಳಿಕ ಅಲ್ಲಿಂದ ದೇವ್ ಹೊರಡುತ್ತಾನೆ.

ಸತ್ಯದೇವ್ ಗ್ರಹಚಾರ ಬಿಡಿಸಿದ ಏಜೆ

ಸತ್ಯದೇವ್ ಗ್ರಹಚಾರ ಬಿಡಿಸಿದ ಏಜೆ

ದೇವ್ ಗಾರ್ಡ್‌ನ್‌ನಲ್ಲಿ ಒಬ್ಬನೇ ಸಿಗರೇಟ್ ಸೇದುತ್ತಾ ತಾನೇ ಮಾತನಾಡಿಕೊಳ್ಳುತ್ತಾ, ಇಷ್ಟು ದಿನ ಲೀಲಾ ಮನೆಯಲ್ಲಿ ವಿಲನ್ ಆಗಿದ್ದ ನಾನು ಇದೀಗ ಲೀಲಾ ಮನೆಯಲ್ಲಿ ಹೀರೋ. ಯಾವಗಲೂ ಹೀರೋ ತರ ಮೆರೆದಾಡುತ್ತಿದ್ದ ಏಜೆ ಇದೀಗ ವಿಲನ್ ಎಂದಾಗ ಏಜೆ ಕಣ್ಮುಂದೆ ಬರುತ್ತಾರೆ. ಇದರಿಂದ ಭಯಗೊಂಡ ದೇವ್ , ಇದೆಲ್ಲ ಸತ್ಯ ದೇವ್ ಆಸ್ತಿಕರ ಬಾಯಲ್ಲಿ ನಾಸ್ತಿಕರ ಬಾಯಲ್ಲಿ ದೇವರ ಹೆಸರು ಜಾಸ್ತಿ ಕೇಳಬಾರದಂತೆ ಪಾಪ ನೀನು ನನ್ನ ಹೆಸರನ್ನ ಅಷ್ಟೊಂದು ಜಪಿಸುವಾಗ ಅದಕ್ಕೆ ನಾನು ನಿನ್ನ ಮುಂದೆ ಇದ್ದೇನೆ ಇವತ್ತೊಂದು ಆಟ ಆಡನ ಕೂತ್ಕೋ ಎಂದು ಕೋಪದಲ್ಲಿ ಹೇಳುತ್ತಾನೆ.

ದೇವ್‌ ಕಪಾಳಕ್ಕೆ ಬಾರಿಸುವ ಏಜೆ

ದೇವ್‌ ಕಪಾಳಕ್ಕೆ ಬಾರಿಸುವ ಏಜೆ

ಮೊನ್ನೆ ಲೀಲಾ ಮನೆಗೆ ಪೊಲೀಸರನ್ನು ಕರೆದುಕೊಂಡು ಹೋಗಿದ್ದು ನೀನೇನಾ ಎಂದು ಕೇಳುತ್ತಾನೆ ಏಜೆ. ಅದಕ್ಕೆ ದೇವ್ ಸತ್ಯವಾಗಲೂ ಏಜೆ ನಾನು ಕರೆದುಕೊಂಡು ಹೋಗಿಲ್ಲ ಎಂದೆಲ್ಲ ಹೇಳುವಾಗ ಆಡಿಯೋ ಕ್ಲಿಪ್‌ನ್ನು ಕೇಳಿಸುತ್ತಾರೆ. ಬಳಿಕ ದೇವ್‌ನ ಕೆನ್ನೆಗೆ ಸರಿಯಾಗಿ ಬಿಗಿಯುತ್ತಾರೆ. ಇನ್ನೂ ಲೀಲಾ ಮನೆಗೆ ಓಡೋಡಿ ಬಂದ ದೇವ್ ಬ್ಯಾಂಕ್ ಫಂಕ್ಷನ್‌ಗೆ ಬರುವಂತೆ ಒತ್ತಾಯಿಸುತ್ತಾನೆ. ಏನು ಅರ್ಥವಾಗದೇ ಲೀಲಾ ತಂದೆ ದೇವ್ ಮುಖ ನೋಡುತ್ತಾರೆ.

More from Filmibeat

English summary
Zee kannada serial Hitler Kalyana Serial June 02th Episode Written Update. Hitler kalyana is a Kannada language television serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X