ದೇವ್‌ಗೆ ಚಳಿಬಿಡಿಸಿದ ಏಜೆ: ಲೀಲಾ ತಂದೆಯ ಬಳಿ ಕ್ಷಮೆ ಕೇಳ್ತಾರ?
ದೇವ್‌ಗೆ ಅದೆಷ್ಟು ಎಚ್ಚರಿಕೆ ನೀಡಿದರೂ ದೇವ್ ತನ್ನ ತಪ್ಪುಗಳನ್ನು ಮುಂದುವರೆಸುತ್ತಲೇ ಇದ್ದಾನೆ. ದೇವ್ ಹಳೇ ಚಾಳಿ ಬಿಟ್ಟು ಬದಲಾಗುತ್ತಾನೆ ಎಂಬ ನಂಬಿಕೆ ಎಜೆಗೆ ಇತ್ತು, ಆದರೆ ಈ ಬಾರಿ ಮಾತ್ರ ಏಜೆ ಕೊನೆಯ ಬಾರಿಗೆ ಎಚ್ಚರಿಕೆ ನೀಡಿದ್ದಾನೆ. ಇಷ್ಟೆಲ್ಲ ತಪ್ಪು ಮಾಡಿದ ದೇವ್‌ನನ್ನು ಏಜೆ ಇನ್ನೂ ಕ್ಷಮಿಸುತ್ತಿದ್ದಾರಲ್ಲ ಎಂಬುದು ಆಶ್ವರ್ಯ ತಂದಿದೆ. ಇತ್ತೀಚಿನ ದಿನಗಳಲ್ಲಿ ದೇವ್ ಕುತಂತ್ರಕ್ಕೆ ಲೀಲಾ ಹಾಗೂ ಏಜೆ ಅಂತರ ಇನ್ನಷ್ಟು ಹೆಚ್ಚುತ್ತಿದೆ, ಇದನ್ನೆ ಬಳಿಸಿಕೊಂಡ ದೇವ್, ಲೀಲಾ ಕುಟುಂಬದ ಮುಂದೆ ಒಳ್ಳೆಯವನೆನೆಸಿಕೊಳ್ಳಲು ಒಂದಲ್ಲ ಒಂದು ಪಿತೂರಿ ಸಡೆಸುತ್ತಿದ್ದಾನೆ.
ಇದೀಗ ದೇವ್, ಎಜೆನಾ ಎದುರು ಹಾಕೊಂಡಿದ್ದಾನೆ. ಆದರೆ ಅವನ ಯೋಜನೆ ಉಲ್ಟಾ ಆಗಿ ಇದೀಗ ಏಜೆ ಬೋನಿನಲ್ಲಿ ದೇವ್ ಸಿಕ್ಕಿಹಾಕಿಕೊಂಡಾಯಿತು. ಇದೀಗ ದೇವ್ ಏಜೆ ಮನೆಗೆ ಆಗಮಿಸಿದ್ದಾನೆ. ಇದನ್ನು ನೋಡಿದ ಲೀಲಾ, ಚುಕ್ಕಿನ ಒಳಗೆ ಕಳುಹಿಸುತ್ತಾಳೆ. ಬಳಿಕ ದೇವ್, ಲೀಲಾ ತಂದೆಯ ಬಳಿ ಸರ್ ಪ್ರೋಗ್ರಾಂಗೆ ಹೋಗಲೇಬೇಕು ನೀವು, ನೀವಿಲ್ಲದೇ ಪ್ರೋಗ್ರಾಂಗೆ ಸ್ವಲ್ಪವೂ ಕಳೆ ಇರುವುದಿಲ್ಲ. ನಿಮ್ಮನ್ನು ಅಷ್ಟು ಬ್ಯಾಂಕ್‌ನವರು ಆದರದಿಂದ ಸ್ವಾಗತಿಸಿರುವುದರಿಂದ ನೀವು ಬ್ಯಾಂಕ್‌ಗೆ ತೆರಳಲೇ ಬೇಕು ಎಂದು ಒತ್ತಾಯಿಸುತ್ತಾನೆ.
ಇದರಿಂದ ಚಕಿತಗೊಂಡ ಲೀಲಾ ತಂದೆ, ''ದೇವ್ ನೀವೆ ಹೋಗಬೇಡಿ ಕಾರ್ಯಕ್ರಮಕ್ಕೆ ನಿಮಗೆ ಅವಮಾನವಾಗುತ್ತದೆ ಅಲ್ಲಿ ಎಂದು ಹೇಳಿದಿರಿ ಆದರೆ ಇದೀಗ ನೋಈವು ಕಾರ್ಯಕ್ರಮಕ್ಕೆ ತೆರಳಿ ಎಂದು ಬಲವಂತ ಮಾಡುತ್ತಿದ್ದೀರಾ ನನಗೊಂದು ಅರ್ಥವಾಗುತ್ತಿಲ್ಲ'' ಎಂದು ಹೇಳುತ್ತಾರೆ. ಇದನ್ನೆಲ್ಲ ಕೇಳಿಸಿಕೊಂಡ ಲೀಲಾ, ಅಪ್ಪ ಹೊರಡು ನಾನು ನೀನು ಇಬ್ಬರು ಬ್ಯಾಂಕ್ ಪ್ರೋಗ್ರಾಂಗೆ ಹೋಗೋಣ ಬಾ ಎಂದು ಹೇಳುತ್ತಾಳೆ. ಆದರೆ ಲೀಲಾ ತಂದೆ ಸ್ವಲ್ಪ ಭಯಭೀತರಾಗಿದ್ದರು. ನನ್ನ ಎಲ್ಲಾ ಮರ್ಯಾದಿ ಹರಾಜಾಗಿ ಹೋಗಿದೆ. ವಾಪಸ್ ಅಲ್ಲಿ ನನ್ನ ಮರ್ಯಾದಿ ತೆಗೆದರೇ ಹೇಗಿರಲಿ ನಾನು ಎಂದೆಲ್ಲ ಹೇಳುತ್ತಾರೆ, ಅದಕ್ಕೆ ಲೀಲಾ ಏಜೆ ನಿನ್ನ ಮರ್ಯಾದಿ ತೆಗೆಯಲು ಬಂದರೆ ಏಜೆ ಮರ್ಯಾದಿಯನ್ನು ನಾನು ತೆಗೆಯುತ್ತೇನೆ ಎಂದು ಹೇಳಿ ಅಪ್ಪನನ್ನು ಕರೆದುಕೊಂಡು ಹೊಗುತ್ತಾಳೆ ಇದರಿಂದ ದೇವ್‌ಗೆ ಸ್ವಲ್ಪ ನಿರಾಳವಾಗುತ್ತದೆ.

ಬ್ಯಾಂಕ್ ಕಾರ್ಯಕ್ರಮಕ್ಕೆ ಆಗಮಿಸಿದ ಏಜೆ ಸೊಸೆಯಂದಿರು
ಇಬ್ಬರು ಸೊಸೆಯಂದಿರು ಬ್ಯಾಂಕ್ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ, ಅವರನ್ನು ಸ್ಪೆಷಲ್ ಗೆಸ್ಟ್‌ಗಳನ್ನು ಹೇಗೆ ಟ್ರೀಟ್ ಮಾಡಬೇಕೋ ಹಾಗೆ ಟ್ರೀಟ್ ಮಾಡಿದ್ದಾರೆ ಬ್ಯಾಂಕ್ ಸಿಬ್ಬಂದಿ. ಇದರಿಂದ ಖುಷಿಗೊಂಡ ದುರ್ಗಾ, ಸರಸ್ವತಿಗೆ ಕೊಂಚ ಮಟ್ಟಿಗೆ ಅಶ್ಚರ್ಯನೂ ಆಯಿತು. ದುರ್ಗಾ ಹಾಗು ಸರಸ್ವತಿಯನ್ನು ಬಹಳ ಆಧರದಿಂದ ಬರ ಮಾಡಿಕೊಳ್ಳಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಲೀಲಾ ತಂದೆ ಹಾಗೂ ಲೀಲಾ ಆಗಮಿಸುತ್ತಾರೆ ಈ ವೇಳೆ ಬ್ಯಾಂಕ್‌ನ ಸಿಬ್ಬಂದಿಯೊಬ್ಬರು ಮಾತನಾಡಿಸುತ್ತಾರೆ ಹೇಗಿದ್ದೀಯಯ್ಯ ಚೆನ್ನಾಗಿದ್ದೀಯ ವಿಷಯ ಎಲ್ಲಾ ಗೊತ್ತಾಯಿತು ಏನು ಮಾಡೋದಪ್ಪ ಎಲ್ಲ ನಮ್ಮ ಗ್ರಹಚಾರ ಸರಿ ನಿನ್ನ ಚೊತೆ ಜಾಸ್ತಿ ಮಾತನಾಡಿದರೆ ನನ್ನನ್ನು ನಿನ್ನ ಹಾಗೆ ಎಂದು ಕೊಂಡು ಬಿಡುತ್ತಾರೆ ಹೊರಗಡೆ ಮಾತನಾಡೊಣಯ್ಯ ಎಂದು ಹೇಳಿ ಹೊಗುತ್ತಾರೆ.
ಇದರಿಂದ ಬೇಸರ ಗೊಂಡ ಲೀಲಾ ತಂದೆ ನೋಡಿದಿಯಾ ಮಗಳೆ ಇಷ್ಟು ವರ್ಷ ಅವರ ಜೊತೆನೇ ಇದ್ದೆ, ಆದ್ರೆ ನನ್ನ ಮೇಲೆ ನಂಬಿಕೆನೇ ಇಲ್ಲ ಅವರಿಗೆ ಎಂದು, ಇದನ್ನೆಲ್ಲ ಮೇಲಿಂದ ದುರ್ಗಾ ಹಾಗೂ ಸರಸ್ವತಿ ಕೇಳಿಸಿಕೊಂಡು ಕುಹಕವಾಡುತ್ತಾರೆ. ಅದಕ್ಕೆ ಲೀಲಾ ತಂದೆ ಏನ್ರಿ ಇಲ್ಲಿಗೂ ಬಂದಿದ್ದೀರಿ ನನ್ನ ಮರ್ಯಾದಿ ನಿಮ್ಮ ಮನೆಯಲ್ಲಿ ತೆಗೆದಿರುವುದು ಸಾಲದಾ ಎಂದು ಕೇಳುತ್ತಾನೆ ಅದಕ್ಕೆ ಹೇಳುತ್ತಾಳೆ ದುರ್ಗಾ, ಮರ್ಯಾದಿ ಇದ್ದವನ ಮರ್ಯಾದಿ ತೆಗೆಯವಹುದು ಇಲ್ಲದವರದ್ದು ಹೇಗೆ ತೆಗೆಯಲಾಗುತ್ತೆ ಎಂದಾಗ ಲೀಲಾ ಕೋಪದಲ್ಲಿ ಅರಚುತ್ತಾಳೆ, ದುರ್ಗಾಳನ್ನು ನೀನೇನು ಮಾಡ್ಕೋತಿಯಾ ಮಾಡ್ಕೋ ಏಜೆ ನನ್ನ ಮರ್ಯಾದಿ ತೆಗೆದರೇ ನಾನು ಸುಮ್ಮನಿರಲ್ಲ ಎಂದು ಎಜೆನಾ ಕಾರ್ಯಕ್ರಮಕ್ಕೆ ಕರೆದುಕೊಂಡು ಬರುತ್ತಾಳೆ, ಕಾರ್ಯಕ್ರಮ ಶುರುವಾಯಿತು. ಇನ್ನೂ ಬ್ಯಾಂಕ್‌ನ ಎಲ್ಲಾ ಉಸ್ತುವಾರಿಯನ್ನು ಏಜೆ ನೋಡಿಕೊಳ್ಳುತ್ತಾರೆ. ಇನ್ನೂ ಏಜೆ ಲೀಲಾ ತಂದೆಯ ಹೋದ ಮರ್ಯಾದಿಯನ್ನು ವಾಪಸ್ ತಂದುಕೊಡೋ ಪ್ರಯತ್ನನಾದರು ಮಾಡುತ್ತಾರ ಕಾದು ನೋಡಬೇಕಿದೆ.


Click it and Unblock the Notifications











