ಏಜೆ ಮೇಲಿನ ಲೀಲಾಳ ದ್ವೇಷ ಪ್ರೀತಿಯಾಗಿ ಬದಲಾಯ್ತಾ?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಇದೀಗ ಎಜೆ ಮೇಲೆ ಲೈಟ್ ಆಗಿ ಲೀಲಾಗೆ ಲವ್ ಆಗಿದೆ. ಎದುರಿಗೆ ಮುನಿಸು ಇದ್ದೆ ಇದೆ, ಅದರ ಜೊತೆಗೆ ಪ್ರೀತಿಗೂ ಕೂಡ ಏನು ಕಡಿಮೆ ಇಲ್ಲ. ಎಜೆ ಮನೆಯಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಿರುವ ಲೀಲಾಗೆ ಮನೆಯ ಮೂವರು ಸೊಸೆಯಂದಿರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಕಿಡಿ ಕಾರುತ್ತಿದ್ದರು. ಆದರೆ ಎಜೆ ಮಾತ್ರ ತಾಯಿಯೊಂದಿಗೆ ತನ್ನ ಹಾಗೂ ತನ್ನ ಕುಟುಂಬದ ಬಗ್ಗೆ ಒಳ್ಳೆಯ ಯೋಚನೆಯನ್ನು ಮಾಡುತ್ತಾರೆ ಎಂಬುದನ್ನೆಲ್ಲ ಮನದಲ್ಲಿ ಯೋಚಿಸುತ್ತಿರುತ್ತಾಳೆ.
ಇನ್ನೂ ಲೀಲಾ ತಾಯಿ ಮಾತ್ರ ಮಗಳು-ಅಳಿಯನಿಗೆ ಡಿವೋರ್ಸ್ ಕೊಡಿಸುವ ಯೋಚನೆಯಲ್ಲಿ ಇದ್ದಾಳೆ. ನೆರೆ ಮನೆಯವರೆಲ್ಲ ಕೌಸಲ್ಯಗೆ ಇಲ್ಲ ಸಲ್ಲದನ್ನು ಹೇಳಿ ತಲೆ ಕೆಡಿಸಿ, ಹಣದ ಆಮೀಷ ಒಡ್ಡಿ ಲೀಲಾಗೂ ಎಜೆಗೂ ವಿಚ್ಚೇಧನ ಕೊಡಿಸಬೇಕು ಎಂದು ಹೇಳಿಕೊಟ್ಟಿದ್ದಾರೆ.
ಲೀಲಾಳನ್ನು ಎಜೆ ಬಹಳ ಪ್ರೀತಿಸುತ್ತಾನೆ ಹಾಗಾಗಿ ಲೀಲಾಳನ್ನು ಇದೀಗ ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಲೀಲಾ ಮನೆಯಿಂದ ಹೋದಾಗ ಎಜೆ ಮಾರುವೇಷದಲ್ಲಿದ್ದ ಲೀಲಾನ ಹಿಂಬಾಲಿಸಿಕೊಂಡು ಬಂದ ಆದರೆ ಲೀಲಾ ತಪ್ಪಿಸಿಕೊಂಡಳು, ಬಳಿಕ ವಿಶ್ವರೂಪ್‌ಗೆ ಲೀಲಾ ಸಿಗುತ್ತಾಳೆ ಮಾರುವೇಷದಲ್ಲಿದ್ದ ಲೀಲಾಳನ್ನು ನೋಡಿದ ವಿಶ್ವರೂಪ್ ಲೀಲಾ ಮೇಡಮ್ ಇದು ನೀವೇ ಎಂದು ನನಗೆ ಗೊತ್ತಾಗಿದೆ. ನಾನು ನಿಮ್ಮನ್ನ ನೋಡಿದ್ದೇನೆ ಎಂದು ಹೇಳುತ್ತಾನೆ.

ಎಜೆ ಸರ್ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿ, ರಾತ್ರಿ ನಡೆದ ಘಟನೆಗಳನ್ನೆಲ್ಲ ವಿವರವಾಗಿ ಲೀಲಾಗೆ ಹೇಳುತ್ತಾನೆ. ''ಇವೆಲ್ಲಾ ನಾಟಕ ನಾನು ಇದನ್ನೆಲ್ಲ ನಂಬುವುದಿಲ್ಲ ದೊಡ್ಡೋರು ನಾಟಕವಾಡುತ್ತಾರೆ'' ಎಂದೆಲ್ಲ ಹೇಳಿ ಬೇಸರಿಸಿಕೊಳ್ಳುತ್ತಾಳೆ, ಆದ್ರೆ ವಿರೂಪಕ್ಷ ಹೇಳುತ್ತಾನೆ ಇದುವರೆಗೂ ಎಜೆನಾ ಈ ರೀತಿ ನೋಡಿಲ್ಲ ಎಂದು ಹೇಳುತ್ತಾರೆ. ಲೀಲಾ ಈ ಬಗ್ಗೆ ಯೋಚಿಸುತ್ತಲೇ ಮನೆಗೆ ತೆರಳುತ್ತಾಳೆ.
ಇನ್ನೂ ಮನೆಯಲ್ಲಿ ರೇವತಿ ಹಾಗೂ ಲೀಲಾ ಅಡುಗೆ ಮಾಡುತ್ತಿರುವಾಗ ಲೀಲಾ ಏಜೆ ರೀತಿಯಲ್ಲಿಯೇ ಆಕ್ಷನ್ ಮಾಡಿ ತೋರಿಸುತ್ತಿದ್ದಿದ್ದನ್ನು ನೋಡಿ ರೇವತಿಗೂ ಡೌಟು ಬರುತ್ತದೆ. ಅಕ್ಕ ನಿನಗೆ ಏಜೆ ಮೇಲೆ ಲವ್ ಆಗಿದೆ ಕಣೆ ಎಂದು ಹೇಳುತ್ತಾಳೆ. ಇದನ್ನೆ ಮನದಲ್ಲಿ ಇಟ್ಟುಕೊಂಡಿದ್ದ ಲೀಲಾ ರೂಮಿಗೆ ಹೋಗಿ ಏಜೆ ಬಗ್ಗೆ ಯೋಚಿಸುತ್ತಿರುತ್ತಾಳೆ, ಇನ್ನೂ ದೇವ್ ಮಾತ್ರ ಆತನ ಹೆಂಡತಿಯನ್ನು ಸಾಯಿಸಲು ತುದಿಗಾಲಿನಲ್ಲಿ ನಿಂತಿದ್ದಾನೆ ಅದೆಷ್ಟೂ ಬಾರಿ ಸಾಯಿಸಬೇಕು ಎಂದುಕೊಂಡರು ಏನಾದರೂ ಒಂದು ಅಡೆ ತಡೆ ಬಂದು ಆಕೆಯನ್ನು ಬಿಟ್ಟು ಬಿಡುತ್ತಿದ್ದ. ಅಜ್ಜಿ ಕೂಡ ಲೀಲಾ ಕನವರಿಕೆಯಲ್ಲಿಯೇ ಇದ್ದಾರೆ ಮಗನ ಬಳಿ ಯಾವಾಗ ಮನೆಗೆ ಲೀಲಾಳನ್ನು ಕರೆತರುತ್ತೀಯ ಎಂದು ಕೇಳುತ್ತಲೆ ಇದ್ದಾರೆ. ಎಜೆ ಮನೆಗೆ ಲೀಲಾ ಬರುತ್ತಾಳ ಎಂದು ಕಾದು ನೋಡಬೇಕಿದೆ.


Click it and Unblock the Notifications