ಮಿತಿ ಮೀರಿದೆ ದುರ್ಗಾ ಕುತಂತ್ರ, ಎಜೆ ಮನೆಗೆ ಬರ್ತಾಳ ಲೀಲಾ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಇತರ ಕೆಲವು ಧಾರವಾಹಿಗಳಂತೆ ಜನರ ಮನದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ. ಧಾರಾವಾಹಿಯಲ್ಲಿ ಈಗ ಲೀಲಾ, ಏಜೆಯ ಮನೆಯ ಬಿಟ್ಟು ಹೋಗಿದ್ದಾಳೆ. ಈಗ ಸತ್ಯ ಅರಿತ ಎಜೆ ಅದೆಷ್ಟೋ ಬಾರಿ ಲೀಲಾಗೆ ತಿಳಿಸಬೇಕು ಎಂದರು ಲೀಲಾ ಮಾತ್ರ ತನ್ನ ಕೋಪ ಬಿಡುತ್ತಲೇ ಇಲ್ಲ. ಇದೀಗ ಇದೀಗ ಲೀಲಾ ಮನವೊಲಿಸಲು ದುರ್ಗಾ ಬಂದಿದ್ದಾಳೆ.

ಇದೀಗ ಅಜ್ಜಿ ಸ್ಥಿತಿ ದಿನೇ-ದಿನೇ ಹದಗೆಡುತ್ತಿದೆ. ಲೀಲಾ ಬರುವಿಕೆಗಾಗಿ ಅವರು ಕಾಯುತ್ತಿದ್ದಾರೆ. ಲೀಲಾಳನ್ನು ಕರೆಯಲು ಹೋದ ಅಜ್ಜಿಗೆ ನಿರಾಸೆಯಾಗಿದೆ, ಅಜ್ಜಿ ಮಾತಿಗೆ ಚೂರು ಕಿವಿಗೊಡದೆ ಲೀಲಾ ಹಠ ಸಾಧಿಸಿದ್ದಾಳೆ. ಲೀಲಾಳ ಪ್ರತ್ಯುತ್ತರ ಕಾಣದೇ ಅಜ್ಜಿಗೆ ದುಃಖ ಉಮ್ಮಳಿಸಿದೆ ಹಾಗೆಯೇ ಲೀಲಾ ಮನೆಯಿಂದ ಹೊರಬರುವಾಗ ತಲೆ ತಿರುಗಿ ಬಿದ್ದಿದ್ದಾರೆ ಅಜ್ಜಿ. ಇದೆಲ್ಲ ಲೀಲಾ ಗಮನಕ್ಕೆ ಬಂದೇ ಇಲ್ಲ. ಇದನ್ನೆಲ್ಲ ನೋಡಿದ ಎಜೆಗೆ ಬಹಳ ದುಃಖವಾಗಿದೆ. ಅಮ್ಮನ ಸ್ಥಿತಿ ನೋಡಲಾಗದೇ ಎಜೆ ಕಂಗಾಲಾಗಿದ್ದಾರೆ. ಇನ್ನು ಅಮ್ಮ ಬದುಕಬೇಕಾದರೆ ಲೀಲಾ ಮನೆಗೆ ಬರಲೇಬೇಕು ಎಂಬುವುದು ಏಜೆ ಆಸೆ ಕೂಡ. ಇಂತಹ ಒಡೆದ ಮನೆಯಲ್ಲಿ ನಾನಂತು ಸಾಯಲು ಇಷ್ಟಪಡುವುದಿಲ್ಲ ಎಂದು ಲೀಲಾ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.

ಲೀಲಾಳನ್ನು ವಾಪಸ್ ಪಡೆಯಲು ಬಂದಿರುವ ದುರ್ಗಾ ನಾಟಕವಾಡುತ್ತಿದ್ದಾಳೆ. ದುರ್ಗಾ, ನಾಟಕ ಪ್ರದರ್ಶನ ಮಾಡುವುದು ಇದೇನು ಹೊಸತಲ್ಲ, ಯಾರಿಗೆ ಏನೇ ಆದರೂ ಆ ಬಗ್ಗೆ ಆಕೆ ತಲೆಕೆಡಿಸಿಕೊಳ್ಳುವುದಿಲ್ಲ, ಆಕೆಗೆ ಲೀಲಾ ಮರಳಿ ಏಜೆಯ ಮನೆಗೆ ಬರುವುದು ಚೂರು ಇಷ್ಟವಿಲ್ಲ. ಲೀಲಾ ತಂದೆಯ ಮೇಲೆ ಕೂಡ ಅಪವಾದ ಬರಲು ದುರ್ಗಾನೇ ಕಾರಣ, ದುರ್ಗಾ ಆಟ ಕೊನೆಗಾಣಿಸಲು ಲೀಲಾಳಿಂದ ಮಾತ್ರ ಸಾಧ್ಯ ಆದರೆ ಲೀಲಾಳೇ ಈ ರೀತಿಯಾಗಿ ವರ್ತಿಸಿದರೇ ಹೇಗೆ ಎಂಬುವುದು ಅಭಿಮಾನಿಗಳ ಪ್ರಶ್ನೆಯಾಗಿದೆ.

Hitler Kalyana Serial May 30th Episode Written Update

ಇನ್ನೂ ದುರ್ಗಾ ನಾನೇ ಲೀಲಾ ಬಳಿ ಹೋಗುತ್ತೇನೆ ಆಕೆಯನ್ನು ಹೇಗಾದರೂ ಮನೆಗೆ ಕರೆತರುತ್ತೇನೆ ಎಂದು ಎಜೆ ಬಳಿ ಹೇಳಿದಾಗ ಎಜೆ ಆಯ್ತು ಎಂದು ತಲೆ ಅಲ್ಲಾಡಿಸುತ್ತಾನೆ. ಇನ್ನೂ ಲೀಲಾ ಮನೆಗೆ ದುರ್ಗಾ ಆಗಮಿಸಿದ್ದನ್ನು ನೋಡಿದ ಲೀಲಾ ಮಾತ್ರ ಕುಪಿತಗೊಂಡಿದ್ದಾರೆ. ಎಜೆ ಮನೆಯಿಂದ ಒಬ್ಬರಲ್ಲ ಒಬ್ಬರ ಬರುತ್ತಲೇ ಇದ್ದಾರೆ. ಇದರಿಂದ ಲೀಲಾ ತಂದೆಗೆ ಕೂಡ ಕಿರಿ ಕಿರಿ ಉಂಟಾಗಿದೆ. ''ರೀ ನಿಮಗೆ ಒಮ್ಮೆ ಹೇಳಿದರೆ ಸಾಕಾಗಲ್ವ ಪದೇ ಪದೇ ಹೇಳಬೇಕಾ ಮನೆಗೆ ಬರಬೇಡಿ' ಎಂದು ಲೀಲಾಳ ತಂದೆ ಕುಪಿತಗೊಳ್ಳುತ್ತಾರೆ, ದುರ್ಗಾಳನ್ನು ಮಾತನಾಡಲು ಬಿಡದೇ ಸರಿಯಾಗಿ ಬಯ್ಯುತ್ತಾಳೆ ಲೀಲಾ, ಇದನ್ನೆಲ್ಲ ದುರ್ಗಾ ರೆಕಾರ್ಡ್ ಮಾಡಿಕೊಳ್ಳುತ್ತಾಳೆ, ದುರ್ಗಾ ಬಯಸಿದ್ದೇ ಅಲ್ಲಿ ನಡೆದಿತ್ತು ಕೂಡ ಏಜೆ ಎಲ್ಲದಕ್ಕೂ ನ್ಯಾಯ ಒದಗಿಸುತ್ತಾರೆ ನಮಗೆ ಮಾತ್ರ ಈ ರೀತಿ ಅನ್ಯಾ ಮಾಡಿದ್ದಾರೆ ಹೀಗೆಲ್ಲ ಬೈದು ಅವಮಾನ ಮಾಡುತ್ತಾಳೆ. ಇದನ್ನೆಲ್ಲ ಮೊಬೈಲಲ್ಲಿ ರೆಕಾರ್ಡ್ ಮಾಡಿ ಏಜೆಗೆ ಕೀಳಿಸುತ್ತಾಳೆ, ಎಜೆ ಮುಂದೇನು ಮಾಡುತ್ತಾರೆ ಎಂಬವುದನ್ನು ಕಾದು ನೋಡಬೇಕಾಗಿದೆ.

More from Filmibeat

English summary
Zee Kannada serial Hitler Kalyana Written Update on 30th May. Hitler Kalyana is an Kannada language television serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X