'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ದೇವ್ ರಿಯಲ್ ಲೈಫ್‌ ಹೇಗಿದೆ ನೋಡಿದ್ದೀರಾ?

By ಎಸ್ ಸುಮಂತ್

'ಹಿಟ್ಲರ್ ಕಲ್ಯಾಣ' ಧಾರಾವಾಹಿ ಇದೀಗ ಬೇರೆಯದ್ದೇ ಹಂತ ತಲುಪಿದೆ. ದೇವ್ ಕುತಂತ್ರಕ್ಕೆ ಲೀಲಾ, ಎಜೆಯನ್ನು ಮದುವೆಯಾಗಬೇಕಾಯ್ತು. ಎಜೆಯನ್ನು ಸೋಲಿಸಲೇಬೇಕು, ಬುದ್ಧಿ ಕಲಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ದೇವ್ ಯಾವಾಗಲೂ ಸೋಲುತ್ತಲೇ ಇರುತ್ತಾನೆ. ಎಜೆ ಮನೆಗೆ ಹಿತ ಶತ್ರು ಎಂದರೆ ಅದು ದೇವ್. ಆದರೆ ದೇವ್ ರಿಯಲ್ ಲೈಫ್‌ನಲ್ಲಿ ಹೇಗಿದ್ದಾರೆ ಗೊತ್ತಾ..?

ಧಾರಾವಾಹಿಯಲ್ಲೂ ದೇವ್ ಪಾತ್ರ ಖಡಕ್ಕಾಗಿಯೇ ಇದೆ. ಪೊಲೀಸ್ ಪಾತ್ರದಲ್ಲಿ ದೇವ್ ಎಲ್ಲರನ್ನೂ ಕಾಡುತ್ತಾರೆ. ಆದರೆ ಎಜೆ ಕಂಡರೆ ಸಿಕ್ಕಾಪಟ್ಟೆ ಹೆದರುತ್ತಾನೆ. ದೇವ್ ಫಿಟ್ನೆಸ್ ವಿಚಾರದಲ್ಲಿ ಎಲ್ಲರ ಗಮನ ಸೆಳೆಯುತ್ತಾನೆ. ಸದ್ಯ ಪವಿತ್ರಾಳ ಕೊಲೆ ಮಾಡಿ, ಚುಕ್ಕಿಯನ್ನು ಮದುವೆಯಾಗಲು ಸ್ಕೆಚ್ ಹಾಕುತ್ತಿದ್ದಾನೆ. ಆದರೆ ಇದಕ್ಕೆಲ್ಲಾ ಎಜೆ ಬಿಡಬೇಕಲ್ಲ. ಪವಿತ್ರಾಳ ಜೀವನ ಬರಿದಾಗಲೂ ಬಿಡುವುದಿಲ್ಲ ಎಜೆ.

ಮಾಡೆಲ್ ಬಳಿಕ ಧಾರಾವಾಹಿ

ಮಾಡೆಲ್ ಬಳಿಕ ಧಾರಾವಾಹಿ

ದೇವ್ ಮಾಡೆಲ್ ಆಗಿದ್ದವರು. ಬಳಿಕ ಧಾರಾವಾಹಿ ಮೂಲಕ ಮನೆ ಮನ ಗೆಲ್ಲುತ್ತಿದ್ದಾರೆ. ಮೊದಲ ಎಂಟ್ರಿಯೇ ನೆಗೆಟಿವ್ ಪಾತ್ರದಲ್ಲಿ ಕೊಟ್ಟಿರುವುದು, ಅವರ ನಟನಾ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ದೇವ್ ನೆಗೆಟಿವ್ ರೋಲ್‌ಗೆ ಪಕ್ಕಾ ಮ್ಯಾಚ್ ಆಗುತ್ತಿದ್ದಾರೆ. 'ಹಿಟ್ಲರ್ ಕಲ್ಯಾಣ'ದಲ್ಲಿ ದೇವ್ ಪಾತ್ರಕ್ಕೆ ಫಿದಾ ಆಗದವರಿಲ್ಲ. ಈ ಮುಂಚೆ ದೇವ್ ಧಾರಾವಾಹಿಗೆ ಬರುವುದಕ್ಕೆ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ್ದವರು.

ಜಿಮ್‌ನಲ್ಲೂ ದೇವ್ ಕಸರತ್ತು

ಜಿಮ್‌ನಲ್ಲೂ ದೇವ್ ಕಸರತ್ತು

ದೇವ್ ಅಲಿಯಾಸ್ ಶೌರ್ಯ ಶಶಾಂಕ್ ಸದ್ಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ದೇವ್ ಫಿಟ್ನೆಸ್ ಮಾಡಬೇಕು ಎಂಬುವವರಿಗೆ ಒಂದು ರೀತಿಯ ಸ್ಪೂರ್ತಿಯೇ ಸರಿ. ಫಿಟ್ನೆಸ್ ಚೆನ್ನಾಗಿಯೇ ಮೆಂಟೈನ್ ಮಾಡಿದ್ದಾರೆ. ಅದರ ಹಿಂದಿನ ರಹಸ್ಯವನ್ನು ಅವರ ಸೋಶಿಯಲ್ ಮೀಡಿಯಾದಲ್ಲಿ ನೋಡಬಹುದು. ಜಿಮ್‌ನಲ್ಲಿ ಸಾಕಷ್ಟು ಕಸರತ್ತು ನಡೆಸುವುದು ಗೊತ್ತಾಗುತ್ತಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುವ ಹಲವು ಫೋಟೋಗಳನ್ನು ಶೌರ್ಯ ಹಂಚಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು

ಶೌರ್ಯ ಸದ್ಯಕ್ಕೆ ನಟನಾ ಕ್ಷೇತ್ರಕ್ಕೆ ಎಂಟ್ರಿಯಾಗಿರುವುದು ಇತ್ತೀಚೆಗೆ. ಆದರೂ ಅಭಿಮಾನಿಗಳ ಬಳಗವೇನು ಕಡಿಮೆಯಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆದರೆ ಅವರನ್ನು ತುಂಬಾ ಜನ ಫಾಲೋ ಮಾಡುತ್ತಾರೆ. ಅವರ ಫೋಟೋಗಳಿಗೆ ಲೈಕ್ಸ್ ಮತ್ತು ಕಮೆಂಟ್‌ಗಳ ಸುರಿಮಳೆಯೇ ಸಿಗುತ್ತಿದೆ. ಅವರ ಸೋಶಿಯಲ್ ಮೀಡಿಯಾಗೆ ಒಮ್ಮೆ ವಿಸಿಟ್ ಹಾಕಿದರು ಅವರ ಲೈಫ್ ಸ್ಟೈಲ್ ಹೇಗಿದೆ ಎಂಬುದು ತಿಳಿಯದೆ ಇರುವುದಿಲ್ಲ. ಸುಮಾರು 35 ಸಾವಿರಕ್ಕೂ ಹೆಚ್ಚು ಫಾಲೋವರ್‌ಗಳನ್ನು ದೇವ್ ಹೊಂದಿದ್ದಾರೆ.

ತೆರೆ ಮೇಲೆ ವಿಲನ್.. ತೆರೆ ಹಿಂದೆ ಬೆಸ್ಟ್ ಫ್ರೆಂಡ್ಸ್

ತೆರೆ ಮೇಲೆ ವಿಲನ್.. ತೆರೆ ಹಿಂದೆ ಬೆಸ್ಟ್ ಫ್ರೆಂಡ್ಸ್

'ಹಿಟ್ಲರ್ ಕಲ್ಯಾಣ' ಧಾರಾವಾಹಿ ನೋಡುಗರಿಗೆ ಇವರಿಬ್ಬರ ಸಂಬಂಧ ಗೊತ್ತೆ ಇರುತ್ತದೆ. ಲೀಲಾಳ ತಂಗಿ ರೇವತಿಯನ್ನು ಮದುವೆಯಾಗಲೇಬೇಕೆಂದು ಸ್ಕೆಚ್ ಹಾಕುತ್ತಿದ್ದಾನೆ. ಇದು ಸದ್ಯಕ್ಕೆ ಗುಟ್ಟಾಗಿ ಉಳಿದಿಲ್ಲ. ಮನೆಯವರಿಗೆಲ್ಲಾ ತಿಳಿದಾಗಿದೆ. ಎಜೆಗೆ ಗೊತ್ತಾದ ಮೇಲೆ ವಾರ್ನಿಂಗ್ ಕೂಡ ಮಾಡಿದ್ದಾರೆ. ಆದರೂ ದೇವ್ ತನ್ನ ಬುದ್ದಿ ಬಿಡುತ್ತಿಲ್ಲ. ರೇವತಿ‌ ಮನಸ್ಸನ್ನು ಗ್ಯಾಪ್‌ನಲ್ಲಿ ಹಾಳು ಮಾಡುತ್ತಿದ್ದಾನೆ. ತೆರೆ ಮೇಲೆ ದೇವ್ ತನ್ನ ತಂಗಿಯ ವಿಚಾರಕ್ಕೆ ಬರಬಾರದು ಎಂದು ಬಯಸುವ ಲೀಲಾ ತೆರೆ ಹಿಂದೆ ಹೆಚ್ಚು ರೀಲ್ ಮಾಡುವುದು ಮಾತ್ರ ಇದೇ ದೇವ್ ಜೊತೆ. ಸೋಶಿಯಲ್ ಮೀಡಿಯಾಗೆ ವಿಸಿಟ್ ಮಾಡಿದರೆ ದೇವ್ ಮತ್ತು ಲೀಲಾ ಮಾಡಿರುವ ರೀಲ್‌ಗಳೇ ಹೆಚ್ಚು ಕಾಣುತ್ತವೆ.

More from Filmibeat

English summary
Hitler Kalyana Serial Popular Actor Shaurya aka Dev Biography And Lifestyle. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X