India
  For Quick Alerts
  ALLOW NOTIFICATIONS  
  For Daily Alerts

  ಅಮ್ಮನಿಂದಲೇ ಮಗಳಿಗೆ ಮಹಾ ಮೋಸ!

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾಳ ಮನಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡಿರುವ ಕೌಸಲ್ಯ, ಡಿವೊರ್ಸ್ ನೋಟಿಸ್ ಕಳಿಸಿದ್ದಾಳೆ. ಈ ವಿಚಾರವಾಗಿ ಎಜೆ ತುಂಬಾನೇ ಆತಂಕದಲ್ಲಿದ್ದಾನೆ. ಆದರೆ, ಮನೆಯ ಸೊಸೆಯಂದಿರು ಲೀಲಾಗೆ ಗೇಟ್‌ ಪಾಸ್‌ ಕೊಡಲು ಕಾತುರರಾಗಿದ್ದಾರೆ.

  ಹೇಗಾದರೂ ಮಾಡಿ ಲೀಲಾಳಿಂದ ಏಜೆಗೆ ಡಿವೋರ್ಸ್‌ ಕೊಡಿಸಿ, ಕೋಟಿ-ಕೋಟಿ ಹಣವನ್ನು ಪಡೆದು ಶ್ರೀಮಂತಳಾಗುವ ಕನಸು ಕಾಣುತ್ತಿದ್ದಾಳೆ. ಹಾಗಾಗಿ ಮಗಳಿಗೂ ಹೇಳದೇ, ತಾನೇ ಲೀಲಾಳ ಸಹಿ ಹಾಕಿ ಏಜೆಗೆ ಡಿವೋರ್ಸ್‌ ನೋಟೀಸ್‌ ಕಳಿಸಿದ್ದಾಳೆ. ಬೇಗ ಡಿವೋರ್ಸ್‌ ಸಿಕ್ಕರೆ ಸಾಕು ಎಂದು ನಿತ್ಯ ಬೇಡಿಕೊಳ್ಳುತ್ತಿದ್ದಾಳೆ.

  ತಾಯಿ ಆಗಿಲ್ಲ ಏಕೆ ಎಂದವರಿಗೆ ತಕ್ಕ ಉತ್ತರ ಕೊಟ್ಟ ನಟಿತಾಯಿ ಆಗಿಲ್ಲ ಏಕೆ ಎಂದವರಿಗೆ ತಕ್ಕ ಉತ್ತರ ಕೊಟ್ಟ ನಟಿ

  ಇನ್ನು ಏಜೆ ತಾಯಿ, ಮಗ ಹಾಗೂ ಸೊಸೆ ಚೆನ್ನಾಗಿರಲಿ ಎಂದು ಹೋಮ-ಹವನ ಮಾಡಿಸಿದ್ದಾಳೆ. ಆದರೆ ಪೂಜೆಗೆ ಬಂದವರೆಲ್ಲರೂ ಇಬ್ಬರೂ ಡಿವೋರ್ಸ್‌ ಪಡೆಯುವ ವಿಚಾರವನ್ನು ಮಾತನಾಡಿದ್ದಾರೆ. ಈ ಮಾತನ್ನು ಕೇಳಿದ ಲೀಲಾ ಫುಲ್‌ ಶಾಕ್‌ ಆಗಿದ್ದಾಳೆ.

  DKD: ಶಶಾಂಕ್ - ತ್ರಿಶಾ ಪರ್ಫಾಮೆನ್ಸ್‌ಗೆ ಬೆಚ್ಚಿಬಿದ್ದ ಶಿವಣ್ಣ, ಚಿನ್ನಿ ಮಾಸ್ಟರ್, ರಕ್ಷಿತಾ!DKD: ಶಶಾಂಕ್ - ತ್ರಿಶಾ ಪರ್ಫಾಮೆನ್ಸ್‌ಗೆ ಬೆಚ್ಚಿಬಿದ್ದ ಶಿವಣ್ಣ, ಚಿನ್ನಿ ಮಾಸ್ಟರ್, ರಕ್ಷಿತಾ!

  ಲೀಲಾ ವಿಚ್ಛೇದನ ನೀಡಲ್ಲ!

  ಲೀಲಾ ವಿಚ್ಛೇದನ ನೀಡಲ್ಲ!

  ಪೂಜೆಯಲ್ಲಿ ಡಿವೋರ್ಸ್‌ ವಿಚಾರ ಬಂದಾಗ ಏಜೆ ತಾಯಿ ಶಾಕ್‌ ಆಗಿದ್ದಾರೆ. ಮಗ-ಸೊಸೆ ಚೆನ್ನಾಗಿರಲಿ ಎಂದು ಹೋಮ ಮಾಡಿಸಿದ್ವಿ, ಆದರೂ ಯಾಕೆ ಹೀಗಾಯ್ತು ಎಂದು ಬೇಸರಗೊಂಡಿದ್ದಾರೆ. ಆದರೆ ಲೀಲಾ, ಈ ಡಿವೋರ್ಸ್‌ ಪೇಪರ್ಸ್‌ಗೂ ನನಗೂ ಯಾವುದೇ ಸಂಬಂಧವಿಲ್ಲ. ದಯವಿಟ್ಟು, ಇದನ್ನು ನಂಬಬೇಡಿ. ಯಾರೋ ಬೇಕಂತಲೇ ಈ ಕೆಲಸ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಈ ಮನೆಯಿಂದ ಹೊರಗೆ ಹೋಗುವುದಿಲ್ಲ ಎಂದು ಡಿಪೂರ್ಸ್ ಪೇಪರ್ಸ್ ಹರಿದು ಬಿಸಾಡುತ್ತಾಳೆ. ಏಜೆ ಆಗ ಕೊಂಚ ನಿರಾಳನಾಗುತ್ತಾನೆ. ಅಜ್ಜಿ ಖುಷಿ ಪಡುತ್ತಾರೆ.

  ಅನುಮಾನ ಬಗೆ ಹರಿಸಿಕೊಂಡ ಏಜೆ!

  ಅನುಮಾನ ಬಗೆ ಹರಿಸಿಕೊಂಡ ಏಜೆ!

  ಲೀಲಾ ಏಜೆ ಬಳಿ ಬಂದು ತನಗೂ ನೋಟಿಸ್‌ಗೂ ತನಗೂ ಏನೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಾಳೆ. ಜೊತೆಗೆ ಆಕೆ ಮಾತನಾಡಿದ್ದು, ಗ್ರೀಟಿಂಗ್ ಕಾರ್ಡ್‌ ಬಗ್ಗೆ ಎನ್ನುತ್ತಾಳೆ. ಆಗ ಏಜೆ ಕೃಷ್ಣ ಲೀಲಾಳನ್ನು ಪ್ರಪೋಸ್ ಮಾಡಿದ ಬಗ್ಗೆ ಕೇಳುತ್ತಾನೆ. ಆಗ ಲೀಲಾ ಆವತ್ತು ನಡೆದ ಘಟನೆಯ ಬಗ್ಗೆ ವಿವರಿಸುತ್ತಾಳೆ. ಕೃಷ್ಣ ಪ್ರೀತಿಸುತ್ತಿರುವ ಬಗ್ಗೆ ಸ್ಪಷ್ಟಪಡಿಸುತ್ತಾಳೆ. ಬಳಿಕ ಮತ್ತೆ ಲೀಲಾ ಏಜೆ ಬಳಿ ಕ್ಷಮೆ ಕೇಳುತ್ತಾಳೆ. ಇದಕ್ಕೆ ಎಜೆ ಪ್ರತಿಕ್ರಿಯಿಸಿ, ತನ್ನ ತಾಯಿ ಪರಿಸ್ಥಿತಿಯ ಬಗ್ಗೆ ಲೀಲಾಗೆ ವಿವರಿಸುತ್ತಾನೆ. ಎಜೆ ಮಾತುಗಳನ್ನು ಕೇಳುವ ಲೀಲಾ ಬೇಸರಗೊಂಡು, ಈ ಕೆಲಸ ಮಾಡಿದವರನ್ನು ಏನಾದರೂ ಮಾಡಲೇಬೇಕು ಎಂದು ತೀರ್ಮಾನ ಮಾಡುತ್ತಾಳೆ.

  ಬೇಸರದಲ್ಲಿ ಕೌಸಲ್ಯ ಮತ್ತು ಸೊಸೆಯಂದಿರು!

  ಬೇಸರದಲ್ಲಿ ಕೌಸಲ್ಯ ಮತ್ತು ಸೊಸೆಯಂದಿರು!

  ಲೀಲಾ ಡಿವೋರ್ಸ್‌ ಪಡೆಯುತ್ತಿಲ್ಲ ಎಂಬ ವಿಚಾರಕ್ಕೆ ಸೊಸೆಯಂದಿರು ಬೇಸರಗೊಂಡಿದ್ದಾರೆ. ಮನೆಯಿಂದ ಹೊರಗೆ ಹೋಗುತ್ತಾಳೆ ಎಂದು ಕೊಂಡಿದ್ದೆವು ಅಂತ ಲಕ್ಷ್ಮೀ, ದುರ್ಗಾ ಬಳಿ ಬೇಸರ ಹೇಳಿಕೊಳ್ಳುತ್ತಾಳೆ. ಆಗ ದುರ್ಗಾ ಯೋಚಿಸಬೇಡ ನಾಳೆ ಏನಾದರೂ ಒಂದು ಆಗುತ್ತದೆ ಎಂದು ಕಾನ್ಫಿಡೆಂಟ್ ಆಗಿ ಮಾತನಾಡುತ್ತಾಳೆ. ಇತ್ತ ಕೌಸಲ್ಯ ಮಗಳು ಡಿವೋರ್ಸ್‌ ಪಡೆಯಲ್ಲ ಎಂದು ಹೇಳಿದ್ದಕೆ ಬೇಸರಗೊಂಡಿದ್ದಾಳೆ. ತನ್ನ ಮಗಳೇ, ಆಸೆ ಕನಸುಗಳಿಗೆ ತಣ್ಣೀರೆರಚಿದಳು ಎಂದು ನೊಂದುಕೊಂಡಿದ್ದಾಳೆ.

  ಲೀಲಾಗೆ ಸತ್ಯ ಗೊತ್ತಾಯ್ತು!

  ಲೀಲಾಗೆ ಸತ್ಯ ಗೊತ್ತಾಯ್ತು!

  ಕೌಸಲ್ಯ ಲಾಯರ್‌ಗೆ ಫೋನ್‌ ಮಾಡಿ, ಡಿವೊರ್ಸ್ ಪೇಪರ್ಸ್ ಹರಿದ ವಿಚಾರ ಹೇಳಿಕೊಂಡಿದ್ದಾಳೆ. ಹೇಗಾದರೂ ಮಾಡಿ ಡಿವೋರ್ಸ್‌ ಕೊಡಿಸಿ, ನನಗೆ 70 ಕೋಟಿ ಹಣ ಕೊಡಿಸಿ ಎಂದು ಮಾತನಾಡುತ್ತಾಳೆ. ಈ ಮಾತುಗಳನ್ನು ಕೇಳುವ ಚುಕ್ಕಿ, ಲೀಲಾಗೆ ಕರೆ ಮಾಡುತ್ತಾಳೆ. ಲೀಲಾ ಬಳಿ ಕೌಸಲ್ಯ ಮಾಡಿದ ಪ್ಲಾನ್ ಬಗ್ಗೆ ಹೇಳುತ್ತಾಳೆ. ಇದರಿಂದ ಕೋಪಗೊಂಡ ಲೀಲಾ, ಸೀದಾ ಎಜೆ ಬಳಿ ಹೋಗಿ ಆತನನ್ನು ಈಗಲೇ ಬನ್ನಿ, ಡಿವೊರ್ಸ್ ನೋಟಿಸ್ ಕಳಿಸಿದವರಿಗೆ ಗ್ರಹಚಾರ ಬಿಡಿಸಬೇಕು ಎಂದು ಕೈ ಹಿಡಿದು ಎಳೆಯುತ್ತಾಳೆ.

  English summary
  Hitler Kalyana Serial Written Update, Big Twist In Hitler Kalyana, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X