ಎಲ್ಲೆ ಮೀರಿದ ದುರ್ಗಾ ಆಟ ಎಲ್ಲದಕ್ಕೂ ಫುಲ್ ಸ್ಟಾಪ್ ಇಡ್ತಾಳ ಲೀಲಾ?

By ಪೂರ್ವ

ಹಿಟ್ಲರ್ ಕಲ್ಯಾಣ ಧಾರವಾಹಿ ದಿನಕ್ಕೊಂದು ಇಂಟ್ರೆಸ್ಟಿಂಗ್ ಎಪಿಸೋಡ್‌ಗಳನ್ನ ನೀಡುತ್ತಲೇ ಇದೆ. ಅಭಿಮಾನಿಗಳ ನಿರೀಕ್ಷೆಗಿಂತಲೂ ಉತ್ತಮವಾಗಿ ಈ ಧಾರವಾಹಿ ಮೂಡಿಬರುತ್ತಿದೆ. ಲೀಲಾ ಎಡವಟ್ಟುಗಳನ್ನು ಮಾಡುತ್ತಿದ್ದರು ಕೆಲವೊಂದು ಬಾರಿ ದಿಟ್ಟ ಪ್ರಶ್ನೆಗಳಿಂದ ಎಲ್ಲರನ್ನು ಕಂಗೆಡಿಸಿದ್ದು ಇದೆ. ಕಣ್ಣು ತೆರೆಸಿದ್ದು ಇದೆ.

ಆದರೆ ಇಷ್ಟು ಮಾತ್ರಕ್ಕೆ ಲೀಲಾಳ ಆಟ ನಿಂತಿಲ್ಲ. ದುರ್ಗಾಳ ಆಟಕ್ಕೆ ಅಂತ್ಯ ಹಾಡಲು ಸಜ್ಜಾಗಿದ್ದಾಳೆ ಲೀಲಾ. ಆದರೆ ಲೀಲಾಗೆ ಸರಿಯಾದ ಕ್ಲೂ ಸಿಗುತ್ತಿಲ್ಲ. ದುರ್ಗಾ ಏನೇ ಕಿತಾಪತಿ ಮಾಡಿದರೂ ಅದನ್ನು ಲೀಲಾಗೆ ಕಂಡು ಹಿಡಿಯಲು ಆಗುತ್ತಿಲ್ಲ. ಪೆದ್ದು ಲೀಲಾಳನ್ನು ದುರ್ಗಾ ಚೆನ್ನಾಗಿಯೇ ಆಟ ಆಡಿಸುತ್ತಿದ್ದಾಳೆ. ಇನ್ನೂ ಲೀಲಾ ಯಾವ ರೀತಿಯಲ್ಲಿ ತನ್ನ ಮನೆತನದ ಗೌರವ ಉಳಿಸಿಕೊಳ್ಳುತ್ತಾಳೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇನ್ನೂ ಲಕ್ಷ್ಮೀ ವೆಡ್ಡಿಂಗ್ ಆನಿವರ್ಸರಿಯ ದಿನದಂದು ಲೀಲಾಳ ತಂದೆ ಮರ್ಯಾದೆ ಹರಾಜು ಹಾಕಲು ಯೋಚಿಸುತ್ತಿದ್ದಾಳೆ ದುರ್ಗಾ.

ಇನ್ನೂ ದೇವ್, ಎಜೆಯ ಮನೆ ಅಳಿಯ, ಎಜೆ ತಂಗಿಯ ಗಂಡ, ಎಜೆ ಮೇಲಿನ ಕೋಪದಿಂದಾಗಿ ತನ್ನ ಪತ್ನಿಯನ್ನು ಕೊಲ್ಲ ಹೊರಟ ಭೂಪ. ಹಾಗೆಯೇ ಎಜೆ ಹೆಂಡತಿ ಲೀಲಾಳ ತಂಗಿ ಚುಕ್ಕಿಯ ಮನಸ್ಸನ್ನ ಹಾಳು ಮಾಡಲು ಯತ್ನಿಸುತ್ತಿರುವಾತ. ಇತ್ತ ಚುಕ್ಕಿಗೆ ಒಳ್ಳೆ ಪ್ರಪೋಸಲ್ ಬರುತ್ತಿದೆ. ನಿನ್ನೆಯ ಸಂಚಿಕೆಯಲ್ಲಿ ಚುಕ್ಕಿಯನ್ನು ನೋಡಲು ಒಬ್ಬ ವರ ಆಗಮಿಸಿದ್ದ ಇದರಿಂದ ಲೀಲಾ ತಂದೆ ತಾಯಿ ಬಹಳ ಖುಷಿ ಪಟ್ಟರು, ಆದರೆ ಆ ಖುಷಿ ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ ಎಂಬುವುದು ಅವರಿಗೆ ಗೊತ್ತಿಲ್ಲ. ಮೆನೆಯವರಿಗೆ ಎಲ್ಲರಿಗೂ ಇಷ್ಟವಾಗಿತ್ತು ಈ ಸಂಭಂದ ಆದರೆ ಚುಕ್ಕಿಯೇ ತನ್ನ ಜೀವನವನ್ನು ಕೈಯಾರೇ ಹಾಳು ಮಾಡಿಕೊಳ್ಳುತ್ತಿರುವುದು ಎಂದು ಲೀಲಾಳಿಗೆ ಬಲವಾದ ಅನುಮಾನ ಮೂಡಿದೆ.

Hitler Kalyana Serial Written Update of 10 May Episode

ದೇವ್ ಮೇಲೆ ಎಜೆಗೆ ಸದಾ ಅನುಮಾನ ಇದ್ದದ್ದೇ. ತನ್ನ ತಂಗಿಯ ಈ ಸ್ಥಿತಿಗೆ ದೇವ್ ಕಾರಣ ಎನ್ನುವ ವಿಚಾರ ತಿಳಿದುಕೊಳ್ಳಲು ಎಜೆ ಪರದಾಡುತ್ತಿದ್ದಾನೆ ಜೊತೆಗೆ ತಂಗಿಯ ಸ್ಥಿತಿ ನೆನೆದು ಮರುಗುತ್ತಿದ್ದಾರೆ. ಎಂಥಹವನಿಗೆ ತಂಗಿಯ ಮದುವೆ ಮಾಡಿದೆ ಎಂದು ತನ್ನನ್ನು ತಾನು ಶಪಿಸಿಕೊಳ್ಳುತ್ತಿರುತ್ತಾನೆ ಸಹ. ಆದರೆ ಲೀಲಾ ಮನೆಯಲ್ಲೂ ಚುಕ್ಕಿ, ದೇವ್ ಹಿಂದೆ ಬಿದ್ದಿರುವುದು ಸುಳ್ಳಲ್ಲ, ಮನೆಯವರಿಗೆ ಈ ಬಗ್ಗೆ ತಿಳಿದಿದೆ. ಆದರೆ ಚುಕ್ಕಿ, ಈ ಪಾಟಿ ಮುಂದುವರೆದಿದ್ದಾಳೆ ಎಂದು ಯಾರಿಗೂ ತಿಳಿದಿಲ್ಲ. ಆದರೆ ಇದೀಗ ಲೀಲಾಳಿಗೆ ಈ ಬಗ್ಗೆ ಬಲವಾದ ಅನುಮಾನ ಮೂಡಿದೆ.

ದುರ್ಗಾ, ರಿಸಪ್ಶನ್‌ನಲ್ಲಿ ಲೀಲಾಳ ತಂದೆಗೆ ಅವಮಾನ ಮಾಡಬೇಕೆಂದು ಸಂಚು ಮಾಡುತ್ತಿದ್ದಾಳೆ. ಆದರೆ ಈ ಬಗ್ಗೆ ಲೀಲಾಗೆ ಅರಿವೇ ಇಲ್ಲ, ಇಷ್ಟೂ ಕೆಳ ಮಟ್ಟಕ್ಕೆ ದುರ್ಗಾ ಹೋಗಬಹುದು ಎಂದುಕೊಂಡಿರಲು ಇಲ್ಲ. ಆದರೆ ದುರ್ಗಾ, ಲೀಲಾಳ ತಂದೆಯ ಜೀವದ ಜೊತೆ ಚೆಲ್ಲಾಟ ಆಡಲು ಹೊರಟಿದ್ದಾಳೆ, ರಿಸೆಪ್ಶನ್‌ನಲ್ಲಿ ಎಲ್ಲರ ಮುಂದೆ ಆಗುವ ಅವಮಾನವನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಲೀಲಾ ತಂದೆ? ದುರ್ಗಾಳ ಕುತಂತ್ರಕ್ಕೆ ಬಿಳುತ್ತಾ ಕಡಿವಾಣ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Hitler Kalyana Serial Written Update of 10 May Episode. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X