Hitler Kalyana Serial: 'ಎಜೆ'ಗೆ ಲೀಲಾ ತಾಳಿ ಬಚ್ಚಿಟ್ಟ ಸತ್ಯ ಗೊತ್ತಾಯ್ತು, ಮುಂದೇನು ಗತಿ..?
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ ಮಾಂಗಲ್ಯ ಬಿಚ್ಚಿದ್ದಕ್ಕೆ ಎಜೆ ಮನೆಯಿಂದ ಹೊರಗೆ ಕಳಿಸಿದ್ದಾನೆ. ಆದರೆ ಈ ಬಗ್ಗೆ ಸತ್ಯ ಅರಿತಿರುವ ಪಿಎ ಎಜೆ ತಾಯಿ ಅವರ ಬಳಿ ಬಂದು ನೀವು ಹೀಗೆ ಮಾಡಬಾರದಿತ್ತು. ಲೀಲಾಳನ್ನು ನೀವಾದರೂ ಅರ್ಥ ಮಾಡಿಕೊಳ್ಳುತ್ತೀರಾ ಎಂದುಕೊಂಡಿದ್ದೆ ಎಂದು ಬೇಸರವನ್ನು ವ್ಯಕ್ತಪಡಿಸುತ್ತಾನೆ.
Recommended Video

ಆಗ ಅಜ್ಜಿ, ಲೀಲಾ ಬಾಯಿ ಬಿಟ್ಟು ಸತ್ಯ ಹೇಳಿದಿದ್ದರೆ ನಾನು ಅವಳನ್ನ ವಹಸಿಕೊಳ್ಳುತ್ತಿದ್ದೆ. ಆದರೆ, ಅವಳು ಬಾಯಿ ಬಿಟ್ಟು ಏನೂ ಮಾತನಾಡಲಿಲ್ಲ. ಪರಿಸ್ಥಿತಿ ಏನೇ ಇರಲಿ, ಅವಳು ತಾಳಿ ಬಿಚ್ಚ ಬಾರದಿತ್ತು ಎಂದಾಗ, ಪಿಎ ಮಾತನಾಡಿ ಅಂತರಾ ಫೋಟೋಗೋಸ್ಕರ ತಾಳಿ ಬಿಚ್ಚಿಕೊಟ್ಟಿದ್ದು ಎಂದು ಸತ್ಯ ಹೇಳುತ್ತಾನೆ. ವಿಚಾರ ತಿಳಿದು ಅಜ್ಜಿ ಬೇಸರ ಮಾಡಿಕೊಳ್ಳುತ್ತಾಳೆ.
ಅಂತರಾ ಫೋಟೋ ಮುಂದೆ ಎಜೆ ನಿಂತು, ನೀನು ಲೀಲಾಳನ್ನು ಆಯ್ಕೆ ಮಾಡಿದ್ದು, ತಪ್ಪು ಎಂದು ಮಾತನಾಡುವಾಗ ಅಜ್ಜಿ ಬಂದು ನಿನ್ನ ನಿರ್ಧಾರ ತಪ್ಪಾಗಿದೆ ಎಂದು ಹೇಳುತ್ತಾರೆ. ನಿನಗೊಸ್ಕರ ತಾಳಿ ಬಿಚ್ಚಿದ್ದು, ಅಂತರಾ ತಂಗಿಯಾಗಿ ಲೀಲಾ ಈ ಕೆಲಸ ಮಾಡಿರೋದು ಎಂದು ಹೇಳುತ್ತಾಳೆ. ನಿನ್ನ ಉಸಿರಾಗಿರುವ ಅಂತರಾಳಿಗೋಸ್ಕರ ತಾಳಿ ಬಿಚ್ಚಿಟ್ಟಿದ್ದಾಳೆ ಎಂದು ನಡೆದ ಘಟನೆಯನ್ನೆಲ್ಲಾ ಹೇಳುತ್ತಾಳೆ. ಅಂತರಾ ಮೇಲಿನ ನಿನ್ನ ಪ್ರೀತಿ ಈ ಫೋಟೋದಲ್ಲಿ ಜೀವಿಸಿದೆ ಅನ್ನೋದು ಲೀಲಾಗೆ ಗೊತ್ತು ಕಣೋ. ಅದಕ್ಕೋಸ್ಕರ ತನಗೆ ಏನಾದರೂ ಪರವಾಗಿಲ್ಲ ಎಂದು ಈ ಕೆಲಸ ಮಾಡಿದ್ದಾಳೆ. ನಿಜ ಹೇಳು, ಈ ಫೋಟೋ ಹೋಗಿದಿದ್ದರೆ, ನೀನು ಅದನ್ನ ಸಹಿಸಿಕೊಳ್ಳುತ್ತಿದ್ಯಾ.? ಯೋಚನೆ ಮಾಡು ಎಂದು ಅಜ್ಜಿ ಹೇಳಿ ಹೋಗುತ್ತಾರೆ. ಇದನ್ನು ಕೇಳಿದ ಎಜೆ ಶಾಕ್ ಆಗುತ್ತಾನೆ.

ಇತ್ತ ಮೂವರು ಸೊಸೆಯರು ಸೇರಿಕೊಂಡು ಲೀಲಾ ಪರಿಸ್ಥಿತಿಯನ್ನು ಆಡಿಕೊಳ್ಳುತ್ತಿರುತ್ತಾರೆ. ದುರ್ಗಾ, ಲೀಲಾ ಅವರ ತಂದೆ ಬಗ್ಗೆ ಮಾತನಾಡಿ, ಚುಚ್ಚುತ್ತಿರುತ್ತಾಳೆ. ಎಜೆ ನಿನ್ನ ಮನೆಯಿಂದ ಹೊರಗೆ ಹಾಕಿದ ಮೇಲೆ, ಅಧಿಕಾರ ನಿಭಾಯಿಸೋ ಮಾತೇ ಇಲ್ಲ. ಇಷ್ಟು ದಿನ ನೀನು ಏನೇ ಮಾಡಿದರೂ ಅಜ್ಜಿ ವಹಿಸಿಕೊಳ್ಳುತ್ತಿದ್ದರು. ಇನ್ಮುಂದೆ ಅದೂ ಇಲ್ಲ. ನೀನು ಈಗ ಇಲ್ಲಿ ಎಷ್ಟೇ ಹೊತ್ತು ನಿಂತುಕೊಂಡರೂ, ಎಜೆ ಕಟ್ಟಿರುವ ತಾಳಿ ಅನ್ನೋ ಲೈಸೆನ್ಸ್ ಬರೋವರೆಗೂ ನಿನಗೆ ಈ ಮನೆಯಲ್ಲಿ ಜಾಗವಿಲ್ಲ ಎನ್ನುತ್ತಾಳೆ ದುರ್ಗಾ. ಆಗ ಅಲ್ಲಿಗೆ ಬಂದ ಎಜೆ, ಆ ಲೈಸೆನ್ಸ್ ನನ್ ಹತ್ರ ಇದೆ ಎಂದು ಹೇಳುತ್ತಾನೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗುತ್ತಾರೆ.
ಲೀಲಾಗೆ ತಾಳಿ ಕೊಟ್ಟು, ತಗೋ ಹಾಕ್ಕೊ ಎಂದು ಎಜೆ ಹೇಳುತ್ತಾನೆ. ನನಗೆ ಎಲ್ಲಾ ವಿಷಯವೂ ಗೊತ್ತಾಗಿದೆ. ಇನ್ನು ಇದರ ಬಗ್ಗೆ ಯಾವ ಚರ್ಚೆಯೂ ಬೇಡ, ತಗೋ ಹಾಕ್ಕೊ ಎನ್ನುತ್ತಾನೆ. ಆಗ ಅಜ್ಜಿ ಬಂದು, ಅದೇನು ಕೆಟ್ಟ ಗಳಿಗೆಯೋ, ಲೀಲಾ ಕುತ್ತಿಗೆಯಿಂದ ತಾಳಿ ತೆಗೆದಿದ್ದಾಳೆ. ಈಗ ಅವಳಾಗಿ ಅವಳೇ ತಾಳಿ ಹಾಕಿಕೊಂಡರೆ ಅದು ಬರೀ ಚಿನ್ನದ ಸರ ಅನ್ನಿಸಿಕೊಳ್ಳುತ್ತೆ. ಆದರೆ ನೀನು ಅವಳ ಗಂಡ ಹಾಕಿದರೆ ಅದು ಮಂಗಳ ಸೂತ್ರ ಅನ್ನಿಸಿಕೊಳ್ಳುತ್ತೆ. ನೀನೇ ಅವಳ ಕುತ್ತಿಗೆಗೆ ತಾಳಿ ಹಾಕು ರಾಮ್ ಎಂದಾಗ, ಎಜೆ ಲೀಲಾಗೆ ಮಂಗಲ್ಯ ಸರವನ್ನು ಹಾಕುತ್ತಾನೆ. ನಂತರ ಬಾ ಒಳಗೆ ಅಂತ ಕರೆಯುತ್ತಾನೆ.

ಈ ಮನೆ ಮಹಾಲಕ್ಷ್ಮೀನ ಮನೆಯಿಂದ ಹೊರಗೆ ನಿಲ್ಲಿಸುವ ಹಾಗೇ ಆಯಿತು. ನಿಮ್ಮ ಅತ್ತೆಗೆ ಆರತಿ ಮಾಡಿ ಮನೆಗೆ ತುಂಬಿಸಿಕೊಳ್ಳಿ ಎಂದು ಅಜ್ಜಿ ಹೇಳುತ್ತಾರೆ. ಲೀಲಾ ಮತ್ತೆ ಸೊಸೆಯರ ಕೈಯಲ್ಲಿ ಆರತಿ ಎತ್ತಿಸಿಕೊಂಡು ಮನೆಯೊಳಗೆ ಹೋಗುತ್ತಾಳೆ. ಆಗ ಎಜೆ ಲೀಲಾ ಕೈ ಹಿಡಿದು ತಡೆಯುತ್ತಾನೆ. ದುರ್ಗಾ, ಲಕ್ಷ್ಮೀ, ಪದ್ಮ ಮೂವರಿಗೂ ಕ್ಷಮೆ ಕೇಳಿ ಎನ್ನುತ್ತಾನೆ. ಯಾಕೆ ಎಂದಾಗ ನೀವು ಅವಳ ತಂದೆ-ತಾಯಿ ಬಗ್ಗೆ ಕೀಳಾಗಿ ಮಾತನಾಡಿದ್ದಕ್ಕೆ ಕ್ಷಮೆ ಕೇಳಿ ಎನ್ನುತ್ತಾನೆ. ಮೂವರೂ ಕ್ಷಮೆ ಕೇಳುತ್ತಾರೆ. ಎಜೆ ಒಳಗೆ ಹೋದಮೇಲೆ, ಲೀಲಾ ಚಿಟಿಕೆ ಒಡೆದು, ಸೊಸೆಯರು ಮಾತನಾಡಿದ ಮಾತುಗಳಿಗೆ ತಿರುಗೇಟು ಕೊಡುತ್ತಾಳೆ.


Click it and Unblock the Notifications











