Hitler Kalyana: ಒಗ್ಗಟ್ಟಾದ ಪ್ರೇಮ್-ಪ್ರಮೋದ್.. ಸರು, ದುರ್ಗಾಗೆ ಶಾಕ್.. ಅಂತರ ಫುಲ್ ಖುಷ್!
'ಹಿಟ್ಲರ್ ಕಲ್ಯಾಣ' ಧಾರಾವಾಹಿ ಇದೀಗ ನೋಡುಗರ ಮನಸೂರೆಗೊಳ್ಳುವ ಹಾಗೆ ಮಾಡುತ್ತಿದೆ. ಪ್ರೇಮ್ ಪ್ರಮೋದ್ ದೂರ ಆಗುತ್ತಾ ಇರುವುದೇ ಮನೆಯವರಿಗೆ ಬಹಳ ಬೇಸರ. ಸರು ತನ್ನ ಗಂಡನ ಬಳಿ ಇಲ್ಲ ಸಲ್ಲದನ್ನು ಹೇಳಿ ಆಕೆಯ ಗಂಡನನ್ನು ಛೂ ಬಿಟ್ಟಿದ್ದಾಳೆ. ಆದರೂ ಪ್ರೇಮ್‌ಗೆ ಮಾತ್ರ ತನ್ನ ಅಣ್ಣ ತಪ್ಪು ಮಾಡಿದ್ದಾನೆ ಎಂದು ಅನ್ನಿಸುತ್ತಾ ಇರುತ್ತದೆ. ಯಾಕೆಂದರೆ ಆಕೆ ಅಷ್ಟರ ಮಟ್ಟಿಗೆ ಪ್ರೇಮ್ ಬ್ರೈನ್ ವಾಶ್ ಮಾಡುತ್ತಾಳೆ ಇರುತ್ತಾಳೆ.
ಅಣ್ಣನ ವಿರುದ್ಧ ತಮ್ಮನನ್ನು ಎತ್ತಿಕಟ್ಟಿದ ಸರು
ಅಣ್ಣ ಪ್ರಮೋದ್ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿ ಛೂ ಬಿಟ್ಟು ಇರುತ್ತಾಳೆ. ಆದರೆ, ಪ್ರಮೋದ್ ಮಾತ್ರ ಏನೂ ತಪ್ಪೇ ಮಾಡಿ ಇರುವುದಿಲ್ಲ. ಆದರೂ ಆಕೆ ಮಾತ್ರ ನೀನು ತಪ್ಪು ಮಾಡಿದ್ದೀಯಾ ಎಂದು ಪದೇ ಪದೇ ಹೇಳಿದಾಗ ಪ್ರಮೋದ್‌ಗೆ ಮಾತ್ರ ಬಹಳ ಸಿಟ್ಟು ಬರುತ್ತದೆ. ಹಾಗೆಯೇ ಅವರಿಬ್ಬರೂ ಜಗಳ ಆಡಿಕೊಳ್ಳುತ್ತಾರೆ. ಈ ವಿಚಾರ ಏಜೆವರೆಗೂ ತಲುಪುತ್ತದೆ . ಆಗ ಏಜೆ ತನ್ನ ಮಕ್ಕಳಿಬ್ಬರನ್ನೂ ಕರೆದು ಹೇಳುತ್ತಾರೆ.

ತಮ್ಮನ ಪರ ನಿಂತ ಪ್ರಮೋದ್
ಪ್ರೇಮ್ ಬಗ್ಗೆ ಆರೋಪಗಳನ್ನು ಕೇಳಿ ಏಜೆ ಬೈಯುತ್ತಾರೆ. ಆದರೆ, ಇದರಿಂದ ಪ್ರೇಮ್‌ಗೆ ಬಹಳ ಬೇಸರ ಆಗುತ್ತದೆ. ಪ್ರೇಮ್ ಬಗ್ಗೆ ಒಬ್ಬೊಬ್ಬರು ಏನಾದರೂ ಹೇಳಿದರೆ ಪ್ರಮೋದ್‌ಗೆ ಇನ್ನೂ ಬೇಸರ ಆಗುತ್ತದೆ. ಈ ವಿಚಾರ ಏಜೆಗೆ ಕೂಡ ತಿಳಿದಿದೆ. ಆ ಕಾರಣಕ್ಕಾಗಿ ಪ್ರೇಮ್‌ಗೆ ಮಾತ್ರ ಸರಿಯಾಗಿ ಬಯ್ಯುತ್ತಾ ಇರುತ್ತಾನೆ. ಇನ್ನು ಅವರಿಬ್ಬರನ್ನು ಹೊರಗೆ ಕಳುಹಿಸುತ್ತಾನೆ. ಆ ಬಳಿಕ ತಂದೆಯ ಬಳಿಗೆ ಪ್ರಮೋದ್ ಬರುತ್ತಾನೆ. "ಅಪ್ಪ ನೀವು ಆ ರೀತಿ ಪ್ರಮೋದ್‌ನ ಬೈಯ್ಯಬಾರದಾಗಿತ್ತು. ನನಗೆ ಬಹಳ ಬೇಸರ ಆಗುತ್ತದೆ" ಎಂದು ತನ್ನ ದುಃಖ ತೋಡಿಕೊಳ್ಳುತ್ತಾ ಇರುತ್ತಾರೆ.
ಅಣ್ಣನ ಮಾತು ಕೇಳಿಸಿಕೊಂಡ ಪ್ರೇಮ್
ಇದನ್ನು ಕೇಳಿಸಿಕೊಂಡ ಇರುತ್ತಾನೆ. ಇದನ್ನು ನೋಡಿದ ಏಜೆ ಮಾತ್ರ "ಯಾಕಪ್ಪ ಏನಾಯಿತು. ತಪ್ಪು ಮಾಡಿದವರಿಗೆ ಅಲ್ವಾ ತಾನೇ ನಾನು ಬೈಯ್ಯೋದು ಇಲ್ಲವಾದರೆ ನಾನು ಯಾಕೆ ಬೈಯ್ಯುತ್ತೇನೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಪ್ರಮೋದ್, ಪ್ರೇಮ್ ಪರವಾಗಿ ಮಾತನಾಡುತ್ತಾ ಇರುವುದನ್ನು ಪ್ರೇಮ್ ಕೇಳಿಸಿಕೊಂಡು. ಅಣ್ಣನ ಕಾಲು ಹಿಡಿಯಲು ಬರುತ್ತಾರೆ. ಇದನ್ನು ನೋಡಿದ ಪ್ರಮೋದ್ ಆ ಕೂಡಲೇ ಪ್ರೇಮ್‌ನನ್ನು ಎಳೆದುಕೊಂಡು ತಬ್ಬಿಕೊಂಡು ಅಳುತ್ತಾನೆ.
ಅಣ್ಣ ತಮ್ಮನ ಬಾಂಧವ್ಯ ನೋಡಿ ಸಂತಸಗೊಂಡ ಲೀಲಾ
"ಇದೇ ಅಣ್ಣ ತಮ್ಮನ ಬಾಂಧವ್ಯ. ನಾನು ಈ ರೀತಿ ಬೈಯ್ಯಲಿಲ್ಲ ಎಂದಿದ್ದರೆ ಬಹಳ ಕಷ್ಟ ಆಗುತ್ತ ಇತ್ತು . ನಿಮಗೆ ಅಣ್ಣ ತಮ್ಮಂದಿರ ಬೆಲೆ ಗೊತ್ತಾಗುತ್ತಿರಲಿಲ್ಲ" ಎಂದು ಹೇಳುತ್ತಾರೆ. ಇದನ್ನು ಕೇಳಿದ ಅವರಿಬ್ಬರೂ ತಂದೆಯ ಕಾಲಿಗೆ ಬಿದ್ದು ಆಫೀಸ್ ಕೆಲಸದ ನಿಮಿತ್ತ ಇಬ್ಬರು ಕೆಲಸ ಮಾಡಲು ಹೋಗುತ್ತಾರೆ.
ಆಫೀಸಿಗೆ ಹೊರಟ ಪ್ರೇಮ್ , ಪ್ರಮೋದ್
ಇನ್ನು ಎಲ್ಲರೂ ತಿಂಡಿಗೆ ಕುಳಿಕೊಂಡಿರಬೇಕಾದರೆ, ಪ್ರೇಮ್ ಮತ್ತು ಪ್ರಮೋದ್ ಕಾಣಿಸದೇ ಇದ್ದಿದ್ದನ್ನು ಕಂಡು ಅವರಿಬ್ಬರೂ ಎಲ್ಲಿ ಹೋಗಿದ್ದಾರೆ? ಎಂದು ಅವರ ಹೆಂಡತಿ ಬಳಿ ವಿಚಾರಣೆ ಮಾಡಿದಾಗ ಸರು ಬೇಕಾ ಬೇಡವಾ ಎನ್ನುವ ಹಾಗೆ ಮಾಡುತ್ತಾರೆ. ಆದರೆ, ಇದನ್ನು ಕಂಡ ಅಂತರ ಮಾತ್ರ ಇವತ್ತು ಇವರು ಕೋಪವಾದ ಮುಖ ಮಾಡಿಕೊಂಡು ಇರುವುದು ಸರಿಯಲ್ಲ ಎಂದು ಅವರಿಬ್ಬರೂ ತಿಂಡಿಗೆ ಬರಲು ಹೇಳುತ್ತಾಳೆ. ಆಗ ಏಜೆ ಮಾತ್ರ ವಿಶ್ವರೂಪನನ್ನು ಕರೆದು ಪ್ರೇಮ್ ಹಾಗೂ ಪ್ರಮೋದ್‌ನನ್ನು ಬರಲು ಹೇಳುತ್ತಾರೆ. ಆಗ ಅವರಿಬ್ಬರೂ ಒಟ್ಟಾಗಿ ಬರುತ್ತಾರೆ. ಅವರಿಬ್ಬರೂ ಅಷ್ಟು ಖುಷಿಯಾಗಿ ಇರುವುದನ್ನು ನೋಡಿ ಅಂತರ ಖುಷಿಗೊಂಡರೆ, ಸರ್ಗ ಹಾಗೂ ಸರು ಮಾತ್ರ ಶಾಕ್‌ಗೆ ಒಳಗಾಗುತ್ತಾರೆ. ಮುಂದಿನ ಸಂಚಿಕೆಯಲ್ಲಿ ಹಿಟ್ಲರ್ ಕಲ್ಯಾಣ ಯಾವ ಸ್ವರೂಪ ಪಡೆದುಕೊಳ್ಳುತ್ತೆ? ಅನ್ನೋದು ಇಂಟ್ರೆಸ್ಟಿಂಗ್.


Click it and Unblock the Notifications











