For Quick Alerts
  ALLOW NOTIFICATIONS  
  For Daily Alerts

  ತ್ರಿಮೂರ್ತಿಗಳಿಗೆ ಗ್ರಹಚಾರ ಶುರು: ಬೀಗರ ಮನೆ ಕೆಲಸದವರಾದ ಏಜೆ ಸೊಸೆಯಂದಿರು

  By ಪ್ರಿಯಾ ದೊರೆ
  |

  'ಹಿಟ್ಲರ್ ಕಲ್ಯಾಣ' ಧಾರಾವಾಹಿ ಈಗ ಅದ್ಭುತವಾಗಿ ಮೂಡಿ ಬರುತ್ತಿದೆ. ಎಡವಟ್ಟು ಮಾಡಿದರೂ ಲೀಲಾ ಮಾಡುತ್ತಿರುವುದೆಲ್ಲವೂ ಒಳ್ಳೆಯದೇ ಆಗುತ್ತಿದೆ. ಹೀಗಾಗಿ ಏಜೆ ಮತ್ತು ಲೀಲಾ ಈಗ ಒಂದಾಗಿದ್ದಾರೆ.

  ಮಗ ಹಾಗೂ ಸೊಸೆ ಚೆನ್ನಾಗಿರಬೇಕು ಎಂದು ಅಜ್ಜಿ ಹರಸಾಹಸಗಳನ್ನೆಲ್ಲಾ ಮಾಡಿದ್ದಾರೆ. ಪಿಎ ಮಾತು ಕೇಳಿಕೊಂಡು ಇದೀಗ ಅಜ್ಜಿ ಮನೆಯಿಂದ ತೀರ್ಥಯಾತ್ರೆ ಹೆಸರಲ್ಲಿ ಮನೆಯಿಂದ ಹೊರಗೆ ಹೋಗಿದ್ದಾಳೆ. ಸೊಸೆ ಹಾಗೂ ಏಜೆ ಒಂದಾಗಲಿ ಎಂದು ಬಯಸಿದ್ದಾಳೆ.

  Exclusive: 'ಜೊತೆ ಜೊತೆಯಲಿ' ಹರೀಶ್ ರಾಜ್ ಎಂಟ್ರಿ ಕೊಟ್ಟಾಯ್ತು, ಕಥೆಯಲ್ಲಿ ಮೆಗಾ ಟ್ವಿಸ್ಟ್!Exclusive: 'ಜೊತೆ ಜೊತೆಯಲಿ' ಹರೀಶ್ ರಾಜ್ ಎಂಟ್ರಿ ಕೊಟ್ಟಾಯ್ತು, ಕಥೆಯಲ್ಲಿ ಮೆಗಾ ಟ್ವಿಸ್ಟ್!

  ಇತ್ತೀಚೆಗೆ ದುರ್ಗಾ ಲೆಕ್ಕಾಚಾರವೆಲ್ಲಾ ಉಲ್ಟಾ ಆಗುತ್ತಿದೆ. ಲೀಲಾಗೆ ಏನೇ ಮಾಡಲು ಹೋದರು ಕೂಡ ಅದು ತಿರುಗಿ ತನ್ನತ್ತಲೇ ಬರುತ್ತಿದೆ. ಲಕ್ಷ್ಮೀ ಹಾಗೂ ಸರಸ್ವತಿ ಲೀಲಾಳಿಗೆ ಹೇಗಾದರು ಮಾಡಿ ಮನೆಯಿಂದ ಗೇಟ್ ಪಾಸ್ ಕೊಡಬೇಕು ಎಂದು ಯೋಚಿಸುತ್ತಲೇ ಇರುತ್ತಾರೆ.

  ಸೊಸೆಯರಿಗೆ ಲೀಲಾ ಸರ್ಪ್ರೈಸ್!

  ಸೊಸೆಯರಿಗೆ ಲೀಲಾ ಸರ್ಪ್ರೈಸ್!

  ದುರ್ಗಾ, ಲಕ್ಷ್ಮೀ, ಸರಸ್ವತಿಗೆ ಮನೆಯಲ್ಲೇ ಇದ್ದೂ ಇದ್ದು ಬೋರ್ ಆಗಿದೆ. ಹಾಗಾಗಿ ಮೂವರು ಮನೆಯಿಂದ ಹೊರಗೆ ಟ್ರಿಪ್ ಹೋಗಿ ಬರಬೇಕು ಎಂದು ಅಂದುಕೊಂಡಿದ್ದಾರೆ. ಇದೇ ವೇಳೆ ಲೀಲಾ ಏಜೆ ಬಳಿ ಮೂವರು ಸೊಸೆಯಂದಿರನ್ನೂ ತನ್ನ ಮನೆಗೆ ಕಳಿಸಬೇಕು ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ಒಪ್ಪಿಕೊಂಡಿರುವ ಎಜೆ ಸೊಸೆಯಂದಿರಿಗೆ ಸರ್ಪ್ರೈಸ್ ಟ್ರಿಪ್‌ಗೆ ಕಳಿಸುವುದಾಗಿ ಹೇಳಿದ್ದಾನೆ. ಇದರಿಂದ ಖುಷಿಯಾದ ಸೊಸೆಯಂದಿರು ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡು ತಯಾರಾಗಿದ್ದಾರೆ. ಆದರೆ ಇವರನ್ನು ಸೀದಾ ಲೀಲಾ ಅವರ ತಾಯಿ ಮನೆಗೆ ಕರೆದುಕೊಂಡು ಬರಲಾಗಿದೆ.

  ಸೊಸೆಯಂದಿರಿಗೆ ಶಾಕ್ ಮೇಲೆ ಶಾಕ್!

  ಸೊಸೆಯಂದಿರಿಗೆ ಶಾಕ್ ಮೇಲೆ ಶಾಕ್!

  ಸೊಸೆಯಂದಿರು ಇಲ್ಲಿಗ್ಯಾಕೆ ಬಂದ್ವಿ, ಏಜೆ ಲೀಲಾ ಮನೆಗೆ ಯಾಕೆ ಕಳಿಸಿದರು. ಮಿಡಲ್ ಕ್ಲಾಸ್ ಮನೆಯಲ್ಲಿ ನಾವ್ಯಾಕೆ ಇರಬೇಕು ಎಂದು ಶಾಕ್ ಮೇಲೆ ಶಾಕ್ ಆಗಿದ್ದಾರೆ. ಮೊದಲು ಎಜೆ ಇಲ್ಲಿಗೆ ಕಳಿಸಿದ್ದಾರೆ ಎಂದರೆ ಕಾರಣ ಇರಬೇಕು ಎಂದು ತಿಳಿದ ದುರ್ಗಾ ಸುಮ್ಮನಿದ್ದಾಳೆ. ಕೌಸಲ್ಯಗೆ ಕಂಡೀಷನ್‌ಗಳನ್ನು ಹಾಕಿದ್ದಾಳೆ. ನಮಗೆ ತಿನ್ನಲು ಇಂತಹ ಊಟಗಳೇ ಬೇಕು. ನಾವು ಕುಡಿಯುವುದು ಸ್ಲಿಮ್ ಹಾಲು, ನಮಗೆ ಬೆಡ್ ಕಾಫಿ ಬೇಕು ಎಂದೆಲ್ಲಾ ಹೇಳಿದ್ದಾಳೆ. ಕೌಸಲ್ಯ ದುರ್ಗಾ, ಲಕ್ಷ್ಮೀ, ಸರಸ್ವತಿ ಹೇಳುವುದನ್ನು ಸುಮ್ಮನೆ ಕೇಳಿಸಿಕೊಂಡಿದ್ದಾಳೆ.

  ಸೊಸೆಯರಿಗೆ ಕೌಸಲ್ಯ ಕಂಡೀಷನ್!

  ಸೊಸೆಯರಿಗೆ ಕೌಸಲ್ಯ ಕಂಡೀಷನ್!

  ಸುಮ್ಮನಿದ್ದ ಕೌಸಲ್ಯ, ತನ್ನ ಕಂಡೀಷನ್ ಗಳನ್ನು ಕೂಡ ಹೇಳಿದ್ದಾಳೆ. ದಿನ ಬೆಳಗ್ಗೆ ಅರ್ಧ ಲೀಟರ್ ಹಾಲಿಗೆ ಒಂದು ಲೀಟರ್ ನೀರು ಸೇರಿಸಿ ಕಾಫಿ ಮಾಡಬೇಕು. ಬೆಳಗ್ಗೆ ಬೇಗ ಎದ್ದು ರಂಗೋಲಿ ಹಾಕಬೇಕು. ಮನೆಯನ್ನು ಸ್ವಚ್ಛವಾಗಿ ಇಡಬೇಕು. ಅಡುಗೆ ಮಾಡಬೇಕು. ಮನೆ ಕ್ಲೀನ್ ಮಾಡಬೇಕು. ನೆಲದ ಮೇಲೆ ಮಲಗಬೇಕು. ಈ ಮನೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಹೇಳಿದ್ದಾಳೆ. ಇನ್ನು ಈ ಮನೆಯಲ್ಲಿ ನಾವು ನಡೆಸಿಕೊಳ್ಳುವಂತೆ ಇರಬೇಕು ಎಂದು ಹೇಳಿದ್ದಾಳೆ.

  ಲೀಲಾ ಮನೆಯಲ್ಲಿ ಸೊಸೆಯರಿಗೆ ಬೆಂಡು!

  ಲೀಲಾ ಮನೆಯಲ್ಲಿ ಸೊಸೆಯರಿಗೆ ಬೆಂಡು!

  ಇದೇ ಸಮಯಕ್ಕೆ ಸರಿಯಾಗಿ ಎಜೆ ಕರೆ ಮಾಡಿದ್ದಾನೆ. ದುರ್ಗಾ ಬಳಿ. ಲೈಫ್‌ನಲ್ಲಿ ಎಲ್ಲಾ ರೀತಿಯ ಚೇಂಜಸ್ ಇರಬೇಕು. ಹಾಗಾಗಿ ನಾಲ್ಕು ದಿನ ಅವರ ಮನೆಯಲ್ಲೇ ಇರಿ. ಯಾವುದೇ ಕಾರಣಕ್ಕೂ ನಮ್ಮ ಮನೆಯ ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ ಎಂದಿದ್ದಾನೆ. ಈ ಮಾತನ್ನು ಕೇಳಿದ ಸೊಸೆಯಂದಿರು ವಿಧಿಯಿಲ್ಲದೆ ಕೌಸಲ್ಯ ಹೇಳಿದಂತೆ ನಡೆದುಕೊಳ್ಳುತ್ತಿದ್ದಾಳೆ. ಕೌಸಲ್ಯ ಕಾಟ ಕೊಡಬೇಕು ಅಂತಲೇ ಮನೆಯನ್ನು ಗಲೀಜು ಮಾಡುತ್ತಿದ್ದಾಳೆ. ದುರ್ಗಾ ನೆಲವರೆಸುತ್ತಿದ್ದಾನೆ. ಲಕ್ಷ್ಮೀ ಧೂಳು ಕ್ಲೀನ್ ಮಾಡುತ್ತಿದ್ದಾಳೆ. ಇನ್ನು ಸರಸ್ವತಿ ಪಾತ್ರೆ ತೊಳೆಯುತ್ತಿದ್ದಾಳೆ. ಕೌಸಲ್ಯ ಜಮ್ ಅಂತ ಮೂವರು ಮಾಡುತ್ತಿರುವ ಕೆಲಸ ನೋಡಿಕೊಂಡು ಖುಷಿ ಪಡುತ್ತಿದ್ದಾಳೆ.

  English summary
  Hitler Kalyana Serial Written Update On August 29th Episode, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X