ಪವಿತ್ರಾಳನ್ನು ಮುಗಿಸಲು ದೇವ್ ಮಾಸ್ಟರ್ ಪ್ಲ್ಯಾನ್!

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಜೆಯಿಂದ ಕ್ಷಣ ಕ್ಷಣವೂ ಜೀವ ಭಯದಲ್ಲಿ ಬದುಕುತ್ತಿರುವ ಲೀಲಾ, ಮುಂದಿನ ದಿನಗಳು ಹೇಗೋ ಎಂಬ ಚಿಂತೆಯಲ್ಲಿದ್ದಾಳೆ. ಎಜೆಯನ್ನು ಕಂಡರೆ ಸಾಕು ಹೆದರುತ್ತಿದ್ದಾಳೆ. ಹೆದರಿಕೆಯಲ್ಲೇ ಲೀಲಾ ದಿನಗಳನ್ನು ದೂಡುತ್ತಿದ್ದಾಳೆ.

ಪವಿತ್ರಾಳನ್ನು ಸಾಯಿಸಲು ಆಗುತ್ತಿಲ್ಲವಲ್ಲ ಎಂಬ ಯೋಚನೆಯಲ್ಲಿ ದೇವ್ ಒದ್ದಾಡುತ್ತಿದ್ದಾನೆ. ಪವಿತ್ರಾಳನ್ನು ಕೊಂದರೆ ಹೇಗಾದರೂ ಮಾಡಿ ರೇವತಿಯನ್ನು ಮದುವೆಯಾಗಬಹುದು ಎಂಬುದು ದೇವ್ ಆಲೋಚನೆ. ಆದರೆ, ಇದು ನಡೆಯಲು ಪವಿತ್ರಾ ಸಾಯಬೇಕಾಗಿದೆ.

ಲೀಲಾ, ಎಜೆಯನ್ನು ಬೇರೆ ಮಾಡಲು ಸೊಸೆಯಂದಿರು ಹರಸಾಹಸ ಪಡುತ್ತಿದ್ದಾರೆ. ಆದರೆ, ಮತ್ತೆ ಮತ್ತೆ ಲೀಲಾ ವಾಪಸ್ ಮನೆಗೆ ಬರುತ್ತಿದ್ದಾಳೆ. ಸದ್ಯ ದೇವ್ ವಿಚಾರಕ್ಕೆ ಎಜೆ, ಲೀಲಾ ಮೇಲೆ ಕೋಪ ಮಾಡಿಕೊಂಡಿದ್ದಾನೆ. ಇದರಿಂದ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಲೀಲಾಳನ್ನು ಹೊಗಳಿದ ಎಜೆ!

ಲೀಲಾಳನ್ನು ಹೊಗಳಿದ ಎಜೆ!

ಲೀಲಾ ವರಮಹಾಲಕ್ಷ್ಮೀ ಪೂಜೆಗಾಗಿ ಎಲ್ಲಾ ತಯಾರಿಯನ್ನು ಮಾಡಿದ್ದಾಳೆ. ಲಕ್ಷ್ಮೀ ದೇವಿಗೆ ಲೀಲಾ ಮಾಡಿರುವ ಅಲಂಕಾರವನ್ನು ನೋಡಿ ಅಜ್ಜಿ ಖುಷಿ ಪಟ್ಟಿದ್ದಾರೆ. ಎಜೆ ಕೂಡ ಲೀಲಾಳ ಶ್ರದ್ಧೆಯನ್ನು ಹೊಗಳಿದ್ದಾನೆ. ಮನಸಲ್ಲಿ ಶ್ರದ್ಧೆ ಭಕ್ತಿಯಿದ್ದರೆ, ಮಾಡುವ ಕೆಲಸವೂ ಚೆನ್ನಾಗಿರುತ್ತದೆ. ಲಕ್ಷ್ಮೀ ದೇವಿ ಮುಖದಲ್ಲಿ ಅದು ಎದ್ದು ಕಾಣುತ್ತಿದೆ ಎಂದು ಹೇಳುತ್ತಾನೆ. ಇದೇ ವೇಳೆಗೆ ಅಜ್ಜಿ ಒಳಗೆ ಹೋದಾಗ, ಸರು ಪೂಜೆಗೆ ಯಾಕೆ ಬಂದಿಲ್ಲ ಎಂದು ಕೇಳುತ್ತಾನೆ. ಆಗ ಸರುಗೆ ಲೀಲಾ ನಡವಳಿಕೆಯಿಂದ ಬೇಜಾರ್ ಆಗಿದೆ. ಲೀಲಾ ಕ್ಷಮೆ ಕೂಡ ಕೇಳಿಲ್ಲ. ಹಾಗಾಗಿ ಬಂದಿಲ್ಲ ಎನ್ನುತ್ತಾರೆ. ಆಗ ಎಜೆ ಲೀಲಾಳನ್ನು ಸರು ಪೂಜೆಗೆ ಬರುವಂತೆ ಮಾಡುವುದು ನಿನ್ನ ಜವಾಬ್ದಾರಿ. ಬರದೆ ಹೋದರೆ ಗೊತ್ತಲ್ಲ ಎಂದು ಹೆದರಿಸುತ್ತಾನೆ.

ಹೆದರಿಕೊಂಡ ಲೀಲಾ!

ಹೆದರಿಕೊಂಡ ಲೀಲಾ!

ಎಜೆ ಮಾತುಗಳನ್ನು ಕೇಳಿ ಹೆದರುವ ಲೀಲಾ ಹೋಗಿ ಸರುನನ್ನು ಪೂಜೆಗೆ ಕರೆದುಕೊಂಡು ಬರಲು ಹೋಗುತ್ತಾಳೆ. ಸರಸ್ವತಿಯನ್ನು ಪರಿ ಪರಿಯಾಗಿ ಬೇಡಿಕೊಳ್ಳುತ್ತಾಳೆ. ಆದರೆ ಸರು ಮೊದ ಮೊದಲು ಒಪ್ಪುವುದಿಲ್ಲ. ಲೀಲಾ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಾಳೆ. ಆಗ ಸರು ಒಪ್ಪಿ ಪೂಜೆಗೆ ಬರುತ್ತಾಳೆ. ಇದರಿಂದ ಲೀಲಾ ಸದ್ಯ ಎಜೆ ಕೈಯಲ್ಲಿ ಸಾಯುವುದು ತಪ್ಪಿತು ಎಂದು ನಿಟ್ಟುಸಿರು ಬಿಡುತ್ತಾಳೆ.

ಅಜ್ಜಿಯ ಹೊಸ ಆಸೆ!

ಅಜ್ಜಿಯ ಹೊಸ ಆಸೆ!

ಇನ್ನು ಪೂಜೆ ಮಾಡುವ ಮುನ್ನ ತೊಟ್ಟಿಲು ತಂದಿಟ್ಟ ಅಜ್ಜಿ, ಮುಂದಿನ ವರ್ಷ ವರಮಹಾಲಕ್ಷ್ಮಿ ಹಬ್ಬದೊಳಗೆ ಮನೆಯಲ್ಲಿ ತೊಟ್ಟಿಲು ತೂಗುವಂತಾಗಲಿ. ನನಗೆ ಲೀಲಾ ಹಾಗೂ ಎಜೆ ಮಗುವನ್ನು ಎತ್ತಿ ಆಡಿಸುವ ಆಸೆ ಇದೆ ಎಂದು ಹೇಳುತ್ತಾರೆ. ಆಗ ಮನೆಯವರೆಲ್ಲಾ ಒಂದು ಕ್ಷಣ ಶಾಕ್ ಆಗುತ್ತಾರೆ. ದುರ್ಗಾ, ಸರು ಹಾಗೂ ಲಕ್ಷ್ಮಿಗೆ ಹೇಳುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾಳೆ. ಆದರೆ ಅದನ್ನು ಅಜ್ಜಿ, ಲೀಲಾ ಹಾಗೂ ಎಜೆಗೆ ಹೇಳಿದ್ದು ಎಂದು ಹೇಳುತ್ತಾಳೆ. ಎಜೆಗೆ ಇದು ನನ್ನ ಕೊನೆಯ ಆಸೆ ಎಂದು ಅಂದುಕೊಂಡು ನೆರವೇರಿಸಿ ಕೊಡಿ ಎಂದು ಕೇಳುತ್ತಾರೆ. ಆಗ ಎಜೆ ಸರಿ ಎಂದು ಮಾತು ಕೊಡುತ್ತಾನೆ. ನಂತರ ಪೂಜೆ ಮಾಡುತ್ತಾರೆ.

ದೇವ್‌ಗೆ ಪವಿತ್ರಾ ಚಿಂತೆ, ಸೊಸೆಯಂದಿರಿಗೆ ಲೀಲಾ!

ದೇವ್‌ಗೆ ಪವಿತ್ರಾ ಚಿಂತೆ, ಸೊಸೆಯಂದಿರಿಗೆ ಲೀಲಾ!

ಮನೆಯಲ್ಲಿ ಈಗ ದೇವ್ ನಿತ್ಯ ಪವಿತ್ರಾಳನ್ನು ಕೊಲ್ಲುವುದು ಹೇಗೆ ಎಂದು ತಲೆ ಕೆಡಿಸಿಕೊಂಡಿದ್ದಾನೆ. ಇತ್ತ ಸೊಸೆಯಂದಿರು ಲೀಲಾಳನ್ನು ಮಟ್ಟ ಹಾಕುವ ಬಗ್ಗೆ ಯೋಚಿಸುತ್ತಿದ್ದಾರೆ. ಹೀಗಿರುವಾಗ ಲೀಲಾ ಎಜೆ ಜೊತೆಗೆ ಚಿಕ್ಕ ಹನಿಮೂನ್ ಗೆ ಹೋಗಿ ಬಂದೆವು ಎಂದು ಬಿಟ್ಟಿರುವ ಹುಳ ಸೊಸೆಯಂದಿರ ಮನಸನ್ನು ಕಲಕಿದೆ. ಯಾಕೆ ನಾವೇನೇ ಪ್ಲ್ಯಾನ್ ಮಾಡಿದರೂ ಸಕ್ಸಸ್ ಆಗುವುದಿಲ್ಲವಲ್ಲ ಎಂದು ಯೋಚಿಸಿದ್ದಾರೆ.

More from Filmibeat

English summary
Hitler Kalyana Serial Written Update On August 8th Episode, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X