Don't Miss!
- News
ಜನವರಿ 27ರವರೆಗೆ ಭಾರತ್ ಜೋಡೋ ಯಾತ್ರೆ ಸ್ಥಗಿತ
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Sports
ವಿಶ್ವ ಕ್ರಿಕೆಟ್ನಲ್ಲಿ ಈತನಂಥಾ ಆಟಗಾರರು ಅಪರೂಪ: ಭಾರತದ ಆಟಗಾರನ ಬಗ್ಗೆ ಇರ್ಫಾನ್ ಪಠಾಣ್ ಹೇಳಿಕೆ
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Hitler Kalyana: ಸೊಸೆಯಂದಿರನ್ನು ಬೆಚ್ಚಿಬೀಳಿಸಿದ ಲೀಲಾ: ಮಾಸ್ ಅವತಾರಕ್ಕೆ ಫ್ಯಾನ್ಸ್ ಫಿದಾ..!
ತಾನು ಮಾಡುವ ಎಟವಟ್ಟಿನಿಂದಾಗಿ ಇಷ್ಟು ದಿನ ನೋವು ಅನುಭವಿಸುತ್ತಿದ್ದ ಲೀಲಾ, ಇದೀಗ ನಂಬಿದ್ದರಿಂದ ನೋವು ಅನುಭವಿಸಿದಂತಾಗುತ್ತಿದೆ. ದುರ್ಗಾಳನ್ನು ನಂಬಿ ಸಂಪೂರ್ಣವಾಗಿ ಮೋಸ ಹೋಗಿದ್ದಾಳೆ ಲೀಲಾ. ಇನ್ನು ಮುಂದೆ ದ್ವೇಷ ಬೇಡ.. ಇಬ್ಬರು ಸ್ನೇಹಿತೆಯರಾಗಿಯೇ ಇರೋಣಾ ಎಂದಿದ್ದ ದುರ್ಗಾಳ ರಿಯಲ್ ಮುಖವಾಡ ಬಯಲಾಗಿದೆ. ನೋವಿನಿಂದ ತವರು ಮನೆ ಸೇರಿದ್ದ ಲೀಲಾ ಈಗ ಸಿಡಿದೆದ್ದು ಗಂಡನ ಮನೆಗೆ ಬಂದಿದ್ದಾಳೆ.
ಲೀಲಾಳನ್ನು ಅಜ್ಜಿ ಕೂಡ ತಪ್ಪಾಗಿ ಭಾವಿಸಿದ್ದರು. ಕೋಪದಲ್ಲಿ ನೋವು ಆಗುವಂತ ಮಾತುಗಳನ್ನು ಆಡಿದ್ದರು. ಬಳಿಕ ಸತ್ಯ ಅರ್ಥವಾದ ಮೇಲೆ ಲೀಲಾಳನ್ನು ವಾಪಾಸ್ ಮನೆಗೆ ಕರೆದುಕೊಂಡು ಬರುವುದಕ್ಕೆ ಅಜ್ಜಿ ಮತ್ತು ವಿಶ್ವರೂಪ್ ಹರಸಾಹಸ ಪಟ್ಟರು.ಕಡೆಗೂ ಅದು ಸಕ್ಸಸ್ ಆಗಿದೆ.
ಅಭಿನಯ
ನಟಿಸುತ್ತಿದ್ದ
ಪಾತ್ರಕ್ಕೆ
ಸಂಗೀತ
ಅನಿಲ್
ಗ್ರ್ಯಾಂಡ್
ಎಂಟ್ರಿ:
ಈಗ
ಕಥೆಯೊಂದು
ಶುರುವಾಗಿದೆ!

ಗಂಡನಿಗೂ ಹೆದರಲಿಲ್ಲ ಲೀಲಾ
ಇಷ್ಟು ದಿನ ಎಜೆಯನ್ನು ಕಂಡರೆ ಹೆದರಿ ಹೆದರಿ ಬೀಳುತ್ತಿದ್ದ ಲೀಲಾ, ಸದ್ಯ ತನ್ನ ಸ್ಥಾನದ ಬಗ್ಗೆ ಗಟ್ಟಿಯಾಗಿ ನಿಂತಿದ್ದಾಳೆ. ತನ್ನದೇನು ತಪ್ಪು ಇಲ್ಲ ಎಂಬುದನ್ನು ಪ್ರೂವ್ ಮಾಡುವುದಕ್ಕೆ ಹೊರಟಿದ್ದಾಳೆ. ಅಜ್ಜಿಯ ಜೊತೆಗೆ ಮನೆಗೆ ಬಂದ ಲೀಲಾಳನ್ನು ಕಂಡು ಸೊಸೆಯಂದಿರು ಅಲ್ಲದೆ ಎಜೆ ಕೂಡ ಕೋಪಗೊಂಡಿದ್ದ. ಆದರೆ ಎಜೆ ಮುಂದೆಯೇ ನಿಂತು ಹಕ್ಕಿನ ಬಗ್ಗೆ ಮಾತನಾಡಿದ್ದಾಳೆ ಲೀಲಾ. ಗಂಡ ಹೆಂಡತಿಯ ನಡುವೆ ಒಂದು ಮಾತು ಬರುತ್ತೆ ಹೋಗುತ್ತೆ. ಅದಕ್ಕೆಲ್ಲಾ ದೂರ ಮಾಡುವುದಾ ಎಂದು ಕೇಳಿ ಒಳ ನಡೆದಿದ್ದಾಳೆ.

ದುರ್ಗಾಳ ದುರ್ಬುದ್ಧಿ ತಿಳಿದ ಲೀಲಾ
ಲೀಲಾಳನ್ನು ತಪ್ಪಿತಸ್ಥೆಯ ಸ್ಥಾನದಲ್ಲಿ ನಿಲ್ಲಿಸಿದಾಗ, ತಾಳಿ ಕಿತ್ತುಕೊಂಡಾಗ, ಮನೆಯ ಯಜಮಾನಿಕೆಯ ಸ್ಥಾನ ಕಿತ್ತುಕೊಂಡಾಗಲೇ ದುರ್ಗಾಳ ದುರ್ಬುದ್ದಿ ಲೀಲಾಳಿಗೆ ತಿಳಿದಿತ್ತು. ಆದರೆ ಅಂದು ಏನು ಮಾಡುವ ಸ್ಥಿತಿಯಲ್ಲಿ ಲೀಲಾ ಇರಲಿಲ್ಲ. ಬರೀ ಕಣ್ಣಿರು ಹಾಕಿ ಮನೆಯಿಂದ ಹೊರ ನಡೆದಿದ್ದಳು. ಆದರೆ ಈಗ ಮತ್ತೆ ಪಕ್ಕಾ ಮಾಸ್ ಕ್ಯಾರೆಕ್ಟರ್ ಆಗಿ ಲೀಲಾ ಎಂಟ್ರಿ ಕೊಟ್ಟಿದ್ದಾಳೆ. ಸೋಫಾ ಮೇಲೆ ಆಯಾಗಿ ಕೂತಿದ್ದ ಸೊಸೆಯಂದಿರನ್ನು ಕೈಬೆರಳಲ್ಲಿಯೇ ಆಟವಾಡಿಸಿದ್ದಾಳೆ.

ಲೀಲಾಗೆ ಹೆದರಿದ ದುರ್ಗಾ
ದುರ್ಗಾ ಪಕ್ಕಾ ಫ್ರೆಂಡ್ ಥರ ಆಕ್ಟ್ ಮಾಡಿದ್ದು ಲೀಲಾಳನ್ನು ಮನೆಯಿಂದ ಹೊರಗೆ ಕಳುಹಿಸುವುದಕ್ಕೆ ಎನ್ನುವುದು ಗೊತ್ತಾಗಿದೆ. ಅದಕ್ಕೆ ಫ್ರೆಂಡ್‌ಶಿಪ್ ಮಾಡಿಕೊಂಡಿದ್ದೀಯಾ ಅಂತ ರೇಗಿಸಿದ್ದಾಳೆ. ಜೊತೆಯಲ್ಲಿಯೇ ಇದ್ದುಕೊಂಡು ಸರಿಯಾಗಿ ಮಸಾಲೆ ಅರೆದು ಬಿಟ್ಯಲ್ಲ ಅಂತ ಲೀಲಾ ನೇರವಾಗಿ ಹೇಳಿದ್ದಾಳೆ. ಇದಕ್ಕೆ ದುರ್ಗಾ ಜೋರಾಗಿ ಲೀಲಾಳ ಹೆಸರನ್ನು ಕೂಗಿದಾಗ, "ಹೌದೇ ಅದು ನಂದೇ ಹೆಸರು. ನನ್ನ ಮನೆಯಿಂದ ಹೊರಗೆ ಕಳುಹಿಸಬೇಕು ಅನ್ನೋದು ನಿಮ್ಮ ಆಸೆ ಅಲ್ವಾ. ಮಾಡಿ ಅದೇನು ಪ್ಲ್ಯಾನ್ ಮಾಡುತ್ತಿರೋ ಮಾಡಿ" ಅಂತ ಸವಾಲು ಹಾಕಿದ್ದಾಳೆ.

ಲೀಲಾಳ ಹೊಸ ಅವತಾರಕ್ಕೆ ಫಿದಾ
ಲೀಲಾ ಇಷ್ಟು ದಿನ ತುಂಬಾ ಅಂದ್ರೆ ತುಂಬಾ ಸಾಫ್ಟ್ ಆಗಿ ಇದ್ದಳು, ಎಲ್ಲರನ್ನು ನಂಬುತ್ತಿದ್ದಳು. ಲೀಲಾ ತಾನು ಮಾಡುವ ಎಡವಟ್ಟಿನಿಂದಾಗಿ ಬೈಸಿಕೊಳ್ಳುತ್ತಾ ಇದ್ದಳು. ಆದರೆ ಈಗ ರೆಬೆಲ್ ಆಗಿದ್ದು, ಸೊಸೆಯಂದಿರನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುತ್ತಿದ್ದಾಳೆ. ಇದೇ ಕ್ಯಾರೆಕ್ಟರ್ ನೋಡುಗರಿಗೂ ತುಂಬಾ ಇಷ್ಟವಾಗಿದೆ. ಹೀಗಾಗಿ ಇಂದಿನ ಎಪಿಸೋಡಿನ ಪ್ರೋಮೊಗೆ ಕಮೆಂಟ್ಸ್ ಹಾಕುತ್ತಿದ್ದಾರೆ. "ನೀವೂ ಹೀಗೆ ರೆಬೆಲ್ ಆಗಿಯೇ ಇರಬೇಕು. ಇದೇ ರೀತಿ ಸೊಸೆಯಂದಿರನ್ನು ಕಾಡುತ್ತಾ ಇರಬೇಕು. ಇದು ಇದು ಆಕ್ಚುಲಿ ಚೆನ್ನಾಗಿರೋದು" ಹೀಗೆ ನಾನಾ ರೀತಿಯಲ್ಲಿ ಕಮೆಂಟ್ಸ್ ಹಾಕುತ್ತಿದ್ದಾರೆ.