ಹಿಟ್ಲರ್ ಕಲ್ಯಾಣ: ಪವಿತ್ರಾ ದೇಹ ಸೇರಬೇಕಿದ್ದ ವಿಷ ಎಜೆ ದೇಹ ಸೇರಿತಾ?

By ಎಸ್ ಸುಮಂತ್

ದೇವ್ ಮಾಡಿದ ಅನ್ಯಾಯ, ಅಪರಾಧಕ್ಕೆ ತಕ್ಕ ಶಿಕ್ಷೆಯಾಗುವ ಕಾಲ ಸನಿಹವಾಗಿದೆ. ಯಾಕೆಂದರೆ ಇಷ್ಟು ದಿನ ಮೌನವಾಗಿ ಹಾಸಿಗೆಯಲ್ಲಿಯೇ ಮಲಗಿದ್ದ ಪವಿತ್ರಾ ಕಣ್ಣು ಬಿಟ್ಟಾಗಿದೆ. ಪವಿತ್ರಾಳ ಸುಧಾರಿಸಿದ ಸ್ಥಿತಿ ಕಂಡು ಎಜೆ ಮತ್ತು ಲೀಲಾಗೆ ಅತೀವ ಸಂತಸವಾಗಿದೆ. ಇಷ್ಟು ದಿನ ಲೀಲಾ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದಕ್ಕೂ ಪವಿತ್ರಾಳ ವಿಚಾರದಲ್ಲಿ ಫಲ ಸಿಕ್ಕಿದೆ. ದೇವ್ ಮಾಡಿದ ಅನ್ಯಾಯದಿಂದ ಹಾಸಿಗೆ ಸೇರಿದ್ದ ಪವಿತ್ರಾಗೆ ಇದೀಗ ಎಲ್ಲವೂ ನೆನಪಾಗಿದೆ.

ಚುಕ್ಕಿಯನ್ನು ಲವ್ ಮಾಡುತ್ತಿರುವ ದೇವ್‌ಗೆ ಪವಿತ್ರಾ ದೊಡ್ಡ ಸಮಸ್ಯೆಯಾಗಿ ಕಾಡಿದ್ದಳು. ವಿಚಾರ ತಿಳಿಯದಂತೆ ಇದ್ದಿದ್ದರೆ ಯಾವ ಸಮಸ್ಯೆಯೂ ಬರುತ್ತಿರಲಿಲ್ಲ. ಆದರೆ ವಿಚಾರ ಗೊತ್ತಾದ ಮೇಲೆ ಪವಿತ್ರಾ ಮಾಡಿದ ರಂಪಾಟಕ್ಕೆ ದೇವ್ ಹಿಂದು ಮುಂದು ನೋಡದೆ ಒಂದೇ ಸಲ ಸಾಯಿಸುವ ಮಟ್ಟಕ್ಕೆ ತಲುಪಿ ಬಿಟ್ಟ. ಅದರ ಪರಿಣಾಮವೇ ಇಷ್ಟು ದಿನ ಪವಿತ್ರಾ ಹಾಸಿಗೆ ಹಿಡಿದಿದ್ದದ್ದು.

ಎಜೆಗೆ ಪವಿತ್ರಾ ಎಂದರೆ ಬಲು ಇಷ್ಟ

ಎಜೆಗೆ ಪವಿತ್ರಾ ಎಂದರೆ ಬಲು ಇಷ್ಟ

ಎಜೆ ಸುಮ್ ಸುಮ್ಮನೆ ಒಬ್ಬರನ್ನು ನಂಬುವುದಿಲ್ಲ. ನಂಬಿ ಒಂದು ಸ್ಥಾನ ಕೊಡುತ್ತಾರೆ ಎಂದರೆ ಅದು ಸುಮ್ಮನೆ ಅಲ್ಲ. ಪವಿತ್ರಾ ಮತ್ತು ಎಜೆ ಒಬ್ಬರಿಗೊಬ್ಬರು ಸ್ವಂತದವರಲ್ಲ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಲಿಲ್ಲ. ಆದರೂ ಪವಿತ್ರಾಳನ್ನು ತಂಗಿಯೆಂದು ನಂಬಿದಾಕ್ಷಣದಿಂದ ಪವಿತ್ರಾಗೆ ಯಾವುದೇ ರೀತಿಯ ಕೆಟ್ಟದ್ದು ಆಗಲು ಬಿಡುತ್ತಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾನೆ. ದೇವ್ ಒಬ್ಬ ಕೆಟ್ಟವ ಎಂದು ಗೊತ್ತಿದ್ದರೂ ಪವಿತ್ರಾಳಿಗೋಸ್ಕರ ಎಲ್ಲದನ್ನು ಸಹಿಸಿಕೊಳ್ಳುತ್ತಿದ್ದಾನೆ. ಆದರೆ ಇದನ್ನೇ ದೇವ್ ಬಂಡವಾಳ ಮಾಡಿಕೊಂಡಿದ್ದಾನೆ.

ದೇವ್‌ನಿಂದ ಚುಕ್ಕಿಯ ರಕ್ಷಣೆ

ದೇವ್‌ನಿಂದ ಚುಕ್ಕಿಯ ರಕ್ಷಣೆ

ಮದುವೆಯಾಗಿದ್ದರು ದೇವ್ ಚುಕ್ಕಿಯ ಹಿಂದೆ ಬಿದ್ದಿರುವುದು ಎಜೆಗೆ ಸಹಿಸಲಾಗದ ಕೋಪಕ್ಕೆ ದೂಡಿದೆ. ಪವಿತ್ರಾಳನ್ನು ಈ ಸ್ಥಿತಿಗೆ ತಂದಿರುವುದು ದೇವ್ ಎಂಬುದು ಗೊತ್ತಿದ್ದರು ಎಜೆ ಕೈನಲ್ಲಿ ಏನು ಮಾಡಲು ಆಗುತ್ತಿಲ್ಲ. ಅದಕ್ಕೆ ಬೇಕಾದ ಸಾಕ್ಷಿಗಳನ್ನು ಕಲೆ ಹಾಕುವುದಕ್ಕೆ ಹೋಗಿ ಫೇಲ್ಯೂರ್ ಆಗಿದ್ದಾರೆ. ಆದರೆ ಈ ಮಧ್ಯೆ ದೇವ್ ಚುಕ್ಕಿಯ ಮನಸ್ಸನ್ನು ಹಾಳು ಮಾಡುತ್ತಿರುವುದು ಎಜೆ ಗಮನಕ್ಕೆ ಬಂದಿದೆ. ವಾರ್ನ್ ಮಾಡಿ ಕಳುಹಿಸಿದರೂ ದೇವ್ ತನ್ನ ಕೆಟ್ಟ ಬುದ್ದಿ ಬಿಡುತ್ತಿಲ್ಲ. ಈ ಮಧ್ಯೆ ಎಜೆ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾನೆ. ಯಾಕೆಂದರೆ ಚುಕ್ಕಿ ತನ್ನ ನಾದಿನಿಯಾಗಿದ್ದಾಳೆ. ಲೀಲಾಳಷ್ಟೇ ಜವಾಬ್ದಾರಿ ಅವಳನ್ನು ಕಾಪಾಡುವುದರಲ್ಲಿಯೂ ಇದೆ ಎಂಬುದು ಗೊತ್ತಿದೆ. ಹೀಗಾಗಿಯೇ ಎಜೆ ಆಗಾಗ ಚುಕ್ಕಿಗೆ ಬುದ್ಧಿ ಹೇಳುತ್ತಿರುತ್ತಾನೆ. ಅಷ್ಟೇ ಅಲ್ಲ ಚುಕ್ಕಿಗಾಗಿಯೇ ಬಿಸಿನೆಸ್ ಅನ್ನು ಕೊಡುತ್ತಿದ್ದಾನೆ.

ಪವಿತ್ರಾಗೆ ಪ್ರಜ್ಞೆ ಬಂದಿದ್ದಕ್ಕೆ ದೇವ್ ಗಾಬರಿ

ಪವಿತ್ರಾಗೆ ಪ್ರಜ್ಞೆ ಬಂದಿದ್ದಕ್ಕೆ ದೇವ್ ಗಾಬರಿ

ಪವಿತ್ರಾಳನ್ನು ಬಿಲ್ಡಿಂಗ್ ಮೇಲಿಂದ ತಳ್ಳಿದ ದೇವ್ ಅವಳು ಸತ್ತೆ ಹೋದಳು ಎಂದುಕೊಂಡು ವಾಪಾಸ್ ಬಂದ. ಆದರೆ ಅಲ್ಲಿಗೆ ಬಂದ ಎಜೆ ಪವಿತ್ರಾಳನ್ನು ಆಸ್ಪತ್ರೆಗೆ ಸೇರಿಸಿದ. ಆಸ್ಪತ್ರೆಯಲ್ಲಿರುವುದು ಡೇಂಜರ್ ಎಂದು ತಿಳಿದ ಲೀಲಾ ಮನೆಗೆ ಕರೆದುಕೊಂಡು ಬಂದು ಆರೈಕೆ ಮಾಡಿದಳು. ಈಗ ಆಕೆಯ ಆರೈಕೆಯಿಂದಾಗಿ ಪವಿತ್ರಾ ಮೊದಲಿನಂತೆ ಆಗುತ್ತಿದ್ದಾಳೆ. ಪ್ರಜ್ಞೆ ಸಂಪೂರ್ಣವಾಗಿ ಬಂದಿದೆ. ಆದರೆ ಮಾತನಾಡುವ ಶಕ್ತಿ ಇನ್ನು ಪವಿತ್ರಾನಲ್ಲಿ ಕಾಣುತ್ತಿಲ್ಲ. ಹೀಗಾಗಿ ದೇವ್ ಬಚಾವ್ ಆಗಿದ್ದಾನೆ. ಆದರೂ ದೇವ್‌ಗೆ ಮನಸ್ಸು ತಡೆಯುತ್ತಿಲ್ಲ. ಭಯದಲ್ಲಿಯೇ ದಿನದೂಡುತ್ತಿದ್ದಾನೆ.

ಎಜೆ ಪ್ರಾಣ ತೆಗೆಯುತ್ತಾನಾ ದೇವ್?

ಪವಿತ್ರಾ ಬೇಗ ಗುಣಮುಖರಾಗಲಿ ಎಂದು ನಾನು ಕೂಡ ದೇವರಲ್ಲಿ ಸದಾ ಬೇಡಿಕೊಳ್ಳುತ್ತಿದ್ದೇನೆ ಎಂದು ದೇವ್ ಎಲ್ಲರನ್ನು ನಂಬಿಸಿದ್ದಾನೆ. ದೇವ್‌ಗೂ ನಿಜವಾದ ಪ್ರೀತಿ ಇರಬಹುದೇನೋ ಎಂದು ಮನೆಯವರು ನಂಬಿದ್ದಾರೆ‌. ಈ ನಂಬಿಕೆಯ ನಡುವೆಯೇ ಪವಿತ್ರಾಳನ್ನು ಕೊಲ್ಲುವ ದುಸ್ಸಾಹಸಕ್ಕೆ ಆಗಾಗ ಕೈ ಹಾಕುತ್ತಿರುತ್ತಾನೆ ದೇವ್. ಈ ಬಾರಿ ಆ ಸಾಹಸದಿಂದ ಎಜೆ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ದೇವ್ ಪವಿತ್ರಾಳನ್ನು ಸಾಯಿಸಲು ತೀರ್ಥದಲ್ಲಿ ವಿಷ ಬೆರೆಸಿ ತಂದಿದ್ದಾನೆ. ಕುಡಿಸಲು ನೋಡಿದಾಗ ಎಜೆ ಅಲ್ಲಿಗೆ ಬಂದಿದ್ದಾರೆ. ಪವಿತ್ರಾ ಗುಣಮುಖಳಾಗ್ತಾಳೆ ಅಂದ್ರೆ ನಾನೇ ಆ ತೀರ್ಥ ಕುಡಿಯುತ್ತೇನೆ ಎಂದು ಕುಡಿಯಲು ಮುಂದಾಗಿದ್ದಾರೆ. ಈಗ ಎಜೆ ಪ್ರಾಣ ಕಾಪಾಡುವ ಆಪತ್ಭಾಂಧವ ಯಾರಾಗ್ತಾರೆ ಅನ್ನೋ ಕುತೂಹಲವಿದೆ.

More from Filmibeat

English summary
Hitler Kalyana Serial Written Update On July 11th Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X