ಹಿಟ್ಲರ್ ಕಲ್ಯಾಣ: ದೇವ್ ಸಿಕ್ಕಿಬೀಳಲಿಲ್ಲ ಯಾಕೆ? ಪವಿತ್ರಾ ರೂಮಲ್ಲಿದ್ದ ಸಿಸಿ ಟಿವಿ ಏನಾಯ್ತು?

By ಎಸ್ ಸುಮಂತ್

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪವಿತ್ರಾ ಅದ್ಯಾವಾಗ ಸತ್ಯ ಹೇಳುತ್ತಾಳೆ ಅಂತ ಕಾತುವಂತೆ ಆಗಿದೆ. ಪವಿತ್ರಾ ಬಾಯಿ ಬಿಟ್ಟ ನಂತರ ದೇವ್ ಕಥೆ ಅಧೋಗತಿ ಅನ್ನೋದು ಗೊತ್ತಿದೆ. ಮಾಡಿದ ಪಾಪ ಕರ್ಮದಿಂದ ಬಚಾವ್ ಆಗುವುದಕ್ಕೆ ಸಾಧ್ಯವೇ ಇಲ್ಲ ಎಂಬ ಮಾತಿದೆ.

ಈಗ ದೇವ್ ಪರಿಸ್ಥಿತಿ ಕೂಡ ಇದ್ದೂ, ಬೇರೊಂದು ಸುಖಕ್ಕಾಗಿ ಹೆಂಡತಿಯನ್ನೇ ಕೊಲೆ ಮಾಡಲು ಹೋದವನಿಗೆ ಶಿಕ್ಷೆಯಾಗಬೇಕೆಂದರೆ ಹೆಂಡತಿ ಮತ್ತೆ ಬದುಕಲೇ ಬೇಕು, ಮಾತಾಡಲೇಬೇಕು. ಈಗ ಆ ಸಮಯ ಹತ್ತಿರವಾಗುತ್ತಿದೆ.

ಇನ್ನೆಲ್ಲಿ ತನ್ನ ಅಂತ್ಯ ಮುಗಿಯುತ್ತದೋ ಎಂದು ಭಯಪಟ್ಟಿರುವ ದೇವ್ ಸದ್ಯ ಪವಿತ್ರಾಳನ್ನು ಕೊಲ್ಲಲೇಬೇಕೆಂದು ನಿರ್ಧರಿಸಿದ್ದಾನೆ. ಅದಕ್ಕೆಂದೇ ಹಲವು ಆಯಾಮಾಗಳಲ್ಲಿ ಪ್ರಯತ್ನಿಸಿ ಎಡವಿದ್ದಾನೆ. ಎಜೆ ಪವಿತ್ರಾಳ ಕಾವಲಿಗೆ ಸದಾ ನಿಂತಿರುವುದೇ ದೇವ್ ಮಾಡಬೇಕೆಂಬ ಕೆಲಸಕ್ಕೆ ಅಡ್ಡಿಯಾಗಿದೆ. ಆದರೆ ಈಗ ಪಕ್ಕಾ ತಗಲಾಕಿಕೊಳ್ಳುವ ಹಂತ ತಲುಪಿದ್ದಾನೆ.

ಡೆತ್ ಡೇ ಮಾಡಲು ಬಂದ ದೇವ್

ಡೆತ್ ಡೇ ಮಾಡಲು ಬಂದ ದೇವ್

ಪವಿತ್ರಾಳನ್ನು ಸಾಯಿಸಲೇಬೇಕೆಂದು ಹಠ ತೊಟ್ಟು ಬಂದಿರುವ ದೇವ್ ಏನೇನೋ ದಾರಿಗಳನ್ನು ಹುಡುಕುತ್ತಿದ್ದಾನೆ. ಆದರೆ ಆ ದಾರಿ ಯಾವುದು ಸರಿಯಾಗಿ ಕೈಗೂಡುತ್ತಿಲ್ಲ. ಅಂದು ಮೊದಲ ಬಾರಿಗೆ ಸಾಯಿಸುವಾಗಲು ಅಷ್ಟೇ ಬಿಲ್ಡಿಂಗ್‌ನಿಂದ ತಳ್ಳಿ ಸತ್ತೆ ಹೋದಳು ಎಂದುಕೊಂಡಿದ್ದವನಿಗೆ ಬಳಿಕ ಶಾಕ್ ಆಗಿತ್ತು. ಇದೀಗ ಮತ್ತೆ ಮತ್ತೆ ಸಾಯಿಸುವ ಪ್ರಯೋಗದಲ್ಲಿ ಸೋಲುತ್ತಿದ್ದಾನೆ. ಎಜೆ ಮನೆಯಲ್ಲಿರುವ ಪವಿತ್ರಾ ತುಂಬಾ ಸುರಕ್ಷಿತವಾಗಿದ್ದಾಳೆ. ಆದರೆ ಒಮ್ಮೆ ಯಾರ ಬಳಿಯೋ ಚಾಕು ಕೊಟ್ಟು ಸಾಯಿಸಲು ದೇವ್ ಯತ್ನಿಸಿದ್ದ. ಅದೂ ಕೈಗೂಡಿರಲಿಲ್ಲ. ಇತ್ತೀಚೆಗೆ ವಿಷ ಬೆರೆಸಿ, ತೀರ್ಥ ಕುಡಿಸಲು ಹೋಗಿದ್ದ ಅದು ಕೂಡ ಕೈಗೂಡಲಿಲ್ಲ. ಈಗ ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಲು ಹೋಗಿದ್ದಾನೆ.

ನೀರಲ್ಲಿ ಮುಳುಗಿಸಲು ಹೋದ ದೇವ್

ನೀರಲ್ಲಿ ಮುಳುಗಿಸಲು ಹೋದ ದೇವ್

ಪವಿತ್ರಾಗೆ ಸದ್ಯ ಜ್ಞಾನ ಬಂದಿದೆ. ಆದರೆ ಮಾತಾಡಲು ಆಗುತ್ತಿಲ್ಲ. ಅದಕ್ಕೆ ಇನ್ನು ಸಮಯ ಬೇಕಾಗುತ್ತದೆ. ಆದರೆ ಸುತ್ತಮುತ್ತ ಏನಾಗುತ್ತಿದೆ ಎಂಬುದನ್ನು ಪವಿತ್ರಾ ಅರ್ಥೈಸಿಕೊಳ್ಳಬಲ್ಲರು. ಬೆಡ್ ರೀಡ್ ಆಗಿರುವ ಪವಿತ್ರಾಳನ್ನು ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ, ಕೊಲೆ ಮಾಡಲು ಟ್ರೈ ಮಾಡಿದ್ದಾನೆ. ಪವಿತ್ರಾಳ ಮುಂದೆ ಬಂದು ಕಿಂಡಲ್ ಮಾಡುತ್ತಾ, ಇವತ್ತು ನಿನ್ನ ಡೆತ್ ಡೇ, ಸೋ ಹ್ಯಾಪಿ ಜರ್ನಿ ಅಂತ ಸಂತಸದಲ್ಲಿ ಕುಣಿದಾಡುತ್ತಿದ್ದಾನೆ. ಅದೇ ಖುಷಿಯಲ್ಲಿಯೇ ಪವಿತ್ರಾಳನ್ನು ಎತ್ತಿಕೊಂಡು, ವೀಲ್ ಚೇರ್‌ನಲ್ಲಿ ಕರೆದುಕೊಂಡು ಸ್ವಿಮ್ಮಿಂಗ್ ಪೂಲ್ ಬಳಿ ಹೋಗಿದ್ದಾನೆ. ಈ ದಿನವೇ ದೇವ್ ಗ್ರಹಚಾರ ಕೆಟ್ಟಿದೆ ಎಂದೇ ಅರ್ಥವಾದಂತಿದೆ.

ಚುಕ್ಕಿ ಮನಸ್ಸು ಹಾಳು ಮಾಡುತ್ತಿರುವ ದೇವ್

ಚುಕ್ಕಿ ಮನಸ್ಸು ಹಾಳು ಮಾಡುತ್ತಿರುವ ದೇವ್

ದೇವ್ ಎಂಥವನು ಎಂದು ಎಜೆಗೆ ಈಗಾಗಲೇ ಮನವರಿಕೆ ಆಗಿದೆ. ಆದರೆ ಚುಕ್ಕಿ ಮಾತ್ರ ಓಕೆ ಎಂದು ಒಪ್ಪಿಕೊಳ್ಳುತ್ತಿದ್ದಾಳೆ. ಆದರೆ ಹಿಂದೆ ದೇವ್ ಬೀಸುತ್ತಿರುವ ಮೋಸದ ಬಲೆಗೆ ಬೀಳುತ್ತಿದ್ದಾಳೆ. ಅವನ ಮೋಸದ ಪ್ರೀತಿಗೆ ಮರುಳಾಗುತ್ತಿದ್ದಾಳೆ. ದೇವ್ ಮಾತಿಗೆ ಮರುಳಾಗಿ ಆತನ ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ. ಅದೇ ತಕ್ಷಣಕ್ಕೆ ಎಜೆ ಮತ್ತು ಲೀಲಾ ಮನೆಗೆ ಬಂದಿದ್ದಾರೆ. ಇದು ದೇವ್‌ನ ಅರ್ಧ ಆಯಸ್ಸನ್ನೇ ಮುಗಿಸಿದೆ. ಆ ಟೆನ್ಶನ್‌ನಲ್ಲಿಯೇ ಹಾಗೋ-ಹೀಗೋ ಬಚಾವ್ ಆದವ ನೇರ ತಲೆ ಓಡಿಸಿದ್ದು, ಪವಿತ್ರಾಳ ಕೊಲೆಗೆ.

ದೇವ್ ಬಣ್ಣ ಬಯಲಾಗೋದು ಹೇಗೆ?

ದೇವ್ ಬಣ್ಣ ಬಯಲಾಗೋದು ಹೇಗೆ?

ದೇವ್ ಕೆಟ್ಟವ, ಅವನೇ ಪವಿತ್ರಾಳ ಸ್ಥಿತಿಗೆ ಕಾರಣ ಎಂಬ ಅನುಮಾನ ಎಜೆಗೆ ಇದೆ. ಇದಕ್ಕೆ ಪೂರಕವಾದ ಸಾಕ್ಷಿಗಳು ಸಿಗುತ್ತಿಲ್ಲ. ಒಂದು ವೇಳೆ ಅಂದುಕೊಂಡ ಅನುಮಾನ ನಿಜವಾದರೇ ದೇವ್ ಹುಟ್ಟಡುಗುತ್ತೆ ಎಂಬುದು ದೇವ್‌ಗೆ ಕೂಡ ಗೊತ್ತಿದೆ. ಅದಕ್ಕೆ ಎಜೆ ಅಂದರೆ ನಿಂತಲ್ಲಿಯೇ ನಡುಗುತ್ತಾನೆ. ಇದೀಗ ಎಲ್ಲಾ ರೀತಿಯ ಧೈರ್ಯವನ್ನು ಒಟ್ಟುಗೂಡಿಸಿಕೊಂಡು, ಎಜೆ ಬರಲ್ಲ ಎಂಬ ಮೊಂಡು ಧೈರ್ಯದಿಂದ ಪವಿತ್ರಾಳನ್ನು ಕೊಲ್ಲಲು ಹೊರಟವನು, ಎಜೆ ಕಾರಿನ ಸದ್ದಿಗೆ ಪವಿತ್ರಾಳನ್ನು ಸ್ವಿಮ್ಮಿಂಗ್ ಪೂಲ್ ಬಳಿಯೇ ಬಿಟ್ಟು ಅವಿತುಕೊಂಡಿದ್ದಾನೆ. ಇದನ್ನು ನೋಡಿರುವ ಎಜೆ ಪಕ್ಕಾ ತನಿಖೆ ಶುರು ಮಾಡಿಯೇ ಮಾಡುತ್ತಾರೆ. ಆದರೆ ಈ ಮಧ್ಯೆ ಪವಿತ್ರಾ ರೂಮಲ್ಲಿ ಹಾಕಿದ್ದ ಸಿಸಿಟಿವಿ ಏನಾಯಿತು ಎಂಬ ಪ್ರಶ್ನೆ ಕಾಡುತ್ತಿದೆ.

More from Filmibeat

English summary
Hitler Kalyana Serial Written Update On July 14th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X