ಹಿಟ್ಲರ್ ಕಲ್ಯಾಣ: ಲೀಲಾ ಮಾತು ನಂಬಲಿಲ್ಲ.. ಎಣ್ಣೆ ಏಟಲ್ಲಿ ಯಾಮಾರಿಯೇ ಬಿಟ್ಟ ದೇವ್!
ಎಜೆ ಮನೆಯಲ್ಲಿ ಈಗ ದೇವ್‌ನದ್ದೇ ದರ್ಬಾರ್. ದೇವ್‌ಗೆ ಪವಿತ್ರಾಳನ್ನು ಕೊಲ್ಲುವುದೇ ಕಾಯಕ. ಪೊಲೀಸ್ ಕೆಲಸವನ್ನು ಬಿಟ್ಟು ಈಗ ದೇವ್ ಪವಿತ್ರಾಳನ್ನು ನೋಡಿಕೊಳ್ಳುವುದೇ ಫುಲ್ ಡ್ಯೂಟಿ ಮಾಡಿದ್ದಾನೆ. ಆಗಾಗ ಪವಿತ್ರಾಳನ್ನು ಸಾಯಿಸಲು ಸ್ಕೆಚ್ ಹಾಕಿ ಫೇಲ್ಯೂರ್ ಆಗುತ್ತಿದ್ದಾನೆ. ಇದು ಎಜೆಗೆ ಗೊತ್ತಾದ ಮೇಲೆ ದೇವ್ ಬಳಿಯೇ ಪವಿತ್ರಾಗೆ ಒಳ್ಳೆದಾಗುವಂತ ವ್ರತಗಳನ್ನು ಮಾಡಿಸಿದ್ದಾನೆ.
ವ್ರತ ಮಾಡಿದ ಬಳಿಕ ಕುಂಕುಮ ಹಚ್ಚುವುದಕ್ಕೆ ಪವಿತ್ರಾ ರೂಮಿಗೆ ಬಂದು, ಒಂದಷ್ಟು ಬೈದು, ಕೈನಲ್ಲಿದ್ದ ಕುಂಕುಮವನ್ನು ಹಾಗೆಯೇ ಬಿಸಾಡಿದ್ದಾನೆ. ಇದು ಲೀಲಾಳ ಕೈಗೆ ಸಿಕ್ಕಿದೆ. ಪಾಪಾ ಗಾಬರಿಗೊಂಡ ದೇವ್ ಏನು ಹೇಳ್ಬೇಕು ಎಂಬುದೇ ತಿಳಿಯದೆ ತಡ ಬಡಾಯಿಸಿದ್ದಾನೆ. ಲೀಲಾ ಕಡೆಗೂ ಆತನಿಂದಲೇ ಪವಿತ್ರಾಳ ಹಣೆಗೆ ಕುಂಕುಮ ಹಚ್ಚಿಸಿದ್ದಾಳೆ. ಒಲ್ಲದ ಮನಸ್ಸಿನಿಂದ ದೇವ್- ಲೀಲಾ ಹೇಳುವಂತೆ ಕೇಳಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ದೇವ್
ತಾನೂ ಪವಿತ್ರಾಳನ್ನು ತುಂಬಾನೇ ಪ್ರೀತಿಸುತ್ತೀನಿ ಅಂತ ಮನೆಯವರ ಮುಂದೆ ದೇವ್ ನಾಟಕವಾಡುತ್ತಿದ್ದಾನೆ. ಇದರ ಜೊತೆಗೆ ಚುಕ್ಕಿ ಬಳಿ ಹೋಗಿ ನನಗೆ ಪವಿತ್ರಾ ಎಂದರೆ ಇಷ್ಟವೇ ಇಲ್ಲ ಎಂದು ನಾಟಕವಾಡುತ್ತಿದ್ದಾನೆ. ಚುಕ್ಕಿಯನ್ನು ಪಡೆಯುವುದಕ್ಕಾಗಿ ಪವಿತ್ರಾಳ ಪ್ರಾಣವನ್ನೇ ತೆಗೆಯಲು ಹೊರಟಿದ್ದಾನೆ. ಇದೀಗ ಮನೆಯವರ ಮುಂದೆ ಡ್ರಾಮಾ ಕಂಪನಿಯನ್ನೇ ತೆರೆದಿದ್ದಾನೆ. ಪವಿತ್ರಾಳ ಈ ಸ್ಥಿತಿ ನೋಡಿ, ನಾನು ಬದುಕಿದ್ದು ಏನು ಪ್ರಯೋಜನ ಇಲ್ಲ ಎಂದು ಡೈಲಾಗ್ ಹೊಡೆದವನೇ ಕೈ ಕೂಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆತ್ಮಹತ್ಯೆ ನಾಟಕವಾಡಿದ ಎಜೆ
ತನ್ನ ಹೆಂಡತಿಗಾಗಿ ವೃತ ಮಾಡಿದ. ಹೆಂಡತಿಯ ಸ್ಥಿತಿ ನೋಡಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದ ಎಂದು ಎಜೆಯನ್ನು ಸಂಪೂರ್ಣವಾಗಿ ದೇವ್ ನಂಬಿದ್ದಾನೆ. ಲೀಲಾ ಇದೆಲ್ಲಾ ನಾಟಕ ಎಂದು ಹೇಳಿದರೂ ಎಜೆ ನಂಬುತ್ತಿಲ್ಲ. ನಾಟಕವಾದರೆ ಪ್ರೂವ್ ಮಾಡು ಎಂದು ದೇವ್ ಬಳಿಯೇ ಕರೆದುಕೊಂಡು ಬಂದಿದ್ದಾನೆ. ಈ ಹಿಂದೆ ಚುಕ್ಕಿಗಾಗಿ ದೇವ್ ಇದೇ ರೀತಿಯ ನಾಟಕವಾಡಿದ್ದ. ಆದರೆ ಈ ಬಾರಿ ಅದನ್ನು ಸುಳ್ಳು ಎಂದು ಪ್ರೂವ್ ಮಾಡುವುದಕ್ಕೆ ಆಗುವುದಿಲ್ಲ. ಕೈಯನ್ನು ನಿಜವಾಗಿಯೂ ಕೂಯ್ದುಕೊಂಡಿದ್ದಾನೆ. ಹೀಗಾಗಿ ಪ್ರೂವ್ ಮಾಡಲು ಹೋದ ಲೀಲಾ ಫೇಲ್ ಆಗಿದ್ದಾಳೆ, ಎಜೆ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ.

ಎಜೆ ನಡವಳಿಕೆಗೆ ನೆಟ್ಟಿಗರ ಬೇಸರ
ಎಜೆ ಅಂದ್ರೆ ಪರ್ಫೆಕ್ಟ್ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾವುದೇ ಒಂದು ವಿಚಾರವಾದರೂ ಎಜೆ ಅದನ್ನು ಸಲೀಸಾಗಿ ನಂಬುವುದಿಲ್ಲ. ಅದರಲ್ಲೂ ದೇವ್ ವಿಚಾರದಲ್ಲಿ ಏನನ್ನು ನಂಬುವುದಿಲ್ಲ. ಆದರೆ ಅದ್ಯಾಕೋ ಆತ ಆತ್ಮಹತ್ಯೆ ನಾಟವಾಡುತ್ತಿದ್ದಂತೆ ಬ್ಲಾಂಕ್ ಆಗಿ ನಂಬಿದ್ದಾನೆ. ಇದು ನೆಟ್ಟಿಗರ ಬೇಸರಕ್ಕೆ ಕಾರಣವಾಗಿದೆ. ಎಜೆಗೆ ಏನಾಗಿದೆ. ದೇವ್‌ನನ್ನು ಸುಮ್ಮ ಸುಮ್ಮನೆ ನಂಬುತ್ತಿದ್ದಾರಲ್ಲ. ಪಾಪ ಲೀಲಾ, ಯಾವಾಗಲೂ ಹೀಗೆಯೇ ಆಗುತ್ತೆ ಎಂದು ತರಹೇವಾರಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಎಣ್ಣೆ ಕುಡಿಸಿ ನಿಜ ಹೇಳಿಸಿದ ಎಜೆ?
ಲೀಲಾ ಎಷ್ಟೇ ಹೇಳಿದರೂ ಎಜೆ ನಂಬುತ್ತಲೇ ಇಲ್ಲ. ದೇವ್ ಬಗ್ಗೆ ಎಜೆಗೆ ಒಂದು ಸ್ಟ್ರಾಂಗ್ ನಂಬಿಕೆ ಬಂದಿದೆ. ಹೆಂಡತಿಗಾಗಿ ಜೀವವನ್ನೇ ತ್ಯಾಗ ಮಾಡಲು ಹೊರಟಿದ್ದಾನೆ ಎಂಬ ಹೆಮ್ಮೆ ಎಜೆಯಲ್ಲಿದೆ. ಈ ಮಧ್ಯೆ ದೇವ್‌ಗೆ ಒಂದೇ ಒಂದು ಪೆಗ್ ಹಾಕಿಸಿದ್ದು ಅಷ್ಟೇ, ದೇವ್ ಪ್ರೀತಿ ಎಂದರೆ ಏನಪ್ಪ ಎಂದರೆ ಪ್ರೀತಿನಾ.. ಪ್ರೀತಿನೂ ಇಲ್ಲ ಮಣ್ಣು ಇಲ್ಲ ಅಂದಿದ್ದಾನೆ. ಇದೇ ಗುಂಗಲ್ಲಿ ದೇವ್ ಸತ್ಯವನ್ನೆಲ್ಲಾ ಕಕ್ಕುವ ಸಾಧ್ಯತೆ ಇದೆ.


Click it and Unblock the Notifications











