Don't Miss!
- News
ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್ ಮತ್ತೆ ವಿವಾದ
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Technology
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದೇವ್ ಜೊತೆ ಮನೆ ಬಿಟ್ಟು ಹೋಗಿ ಮದುವೆಯಾಗಲು ರೇವತಿ ಒಪ್ಪಿಗೆ: ಲೀಲಾ ಈ ಬಾರಿಯೂ ಫೇಲ್ ಆಗ್ತಾಳಾ..?
ದೇವ್ ಇಷ್ಟು ದಿನ ಬಲೆ ಬೀಸಿದ್ದು ರೇವತಿಗಾಗಿ. ಪವಿತ್ರಾಳನ್ನು ಈ ಸ್ಥಿತಿಗೆ ತಂದಿರುವುದು ಕೂಡ ಅದೇ ರೇವತಿಗಾಗಿ. ಸತ್ಯ ತಿಳಿಯುವುದಕ್ಕೂ ಮುನ್ನ ಪವಿತ್ರಾಳನ್ನು ಹೆಂಡತಿ ಸ್ಥಾನದಲ್ಲಿಟ್ಟು, ಮುದ್ದಾಗಿಯೇ ನೋಡಿಕೊಳ್ಳುತ್ತಿದ್ದ ದೇವ್.
ಆದರೆ ಅದ್ಯಾವಾಗ ರೇವತಿ ಮತ್ತು ದೇವ್ ಎಲ್ಲಾ ವಿಚಾರಗಳು ಗೊತ್ತಾಯಿತೋ ಅಂದೇ ದೇವ್, ಪವಿತ್ರಾಳ ಪ್ರಾಣವನ್ನು ಲೆಕ್ಕಿಸದೇ ದೇವ್ ಕೆಟ್ಟ ದಾರಿಯನ್ನು ಹಿಡಿದಿದ್ದ. ಈಗಲೂ ಅದೇ ರೇವತಿಗಾಗಿಯೇ ಏನೇನೋ ಮಾಡಲು ಹೊರಟಿದ್ದಾನೆ.
ಪುಟ್ಟಕ್ಕನ
ಮಕ್ಕಳು:
ಸುಮಾ
ಕ್ಲಾಸ್‌ಗೆ
ಬಂದಿಲ್ಲ?
ಮೇಷ್ಟ್ರ
ಬಳಿ
ಕ್ಷಮೆ
ಯಾಚಿಸುತ್ತಾಳಾ?
ರೇವತಿ ಮತ್ತು ನನ್ನ ಪ್ರೀತಿಗೆ ಅಡ್ಡಿ ಆಗುತ್ತಾಳೆ ಎಂದು ಲೀಲಾ ಮೇಲೆ ಆಗಾಗ ಕೆಂಡ ಕಾರುತ್ತಿರುತ್ತಾನೆ ದೇವ್. ಚಾನ್ಸ್ ಸಿಕ್ಕಿದರೆ ಲೀಲಾ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಹಿಂದು ಮುಂದು ನೋಡಲ್ಲ. ಇದೇ ಕಾರಣಕ್ಕಾಗಿಯೇ ಎಜೆಯನ್ನು ಲೀಲಾ ಮದುವೆಯಾಗುವಂತೆ ಮಾಡಿದ್ದು. ಇಷ್ಟೆಲ್ಲಾ ಪ್ರಯತ್ನಗಳ ನಡುವೆ ದೇವ್ ಅಂದುಕೊಂಡ ಕೆಲಸ ಸಲೀಸಾಗುತ್ತಿದೆ. ರೇವತಿ, ದೇವ್ ಜೊತೆ ಬರಲು ಒಪ್ಪಿದ್ದಾಳೆ.

ರೇವತಿಗೆ ಮದುವೆ ಮಾಡಲು ಮನೆಯವರ ಫ್ಲ್ಯಾನ್
ದೇವ್ ಮತ್ತು ರೇವತಿಯ ನಡುವೆ ನಡೆಯುತ್ತಿರುವ ಲವ್ವಿ ಡವ್ವಿ ಗುಟ್ಟಾಗಿ ಏನು ಉಳಿದಿಲ್ಲ. ಮನೆಯ ಎಲ್ಲಾ ಸದಸ್ಯರಿಗೂ ತಿಳಿದಿದೆ. ಆದರೆ ಎಜೆ ಸೊಸೆಯಂದಿರಿಗೆ ಬಿಟ್ಟು. ಕೌಸಲ್ಯಗೆ ಇದು ಸುತರಾಂ ಇಷ್ಟವಿಲ್ಲ. ಜೋರು ಧ್ವನಿಯಲ್ಲಿ ಹೇಳಿದರೆ ಕೇಳುವ ಮಕ್ಕಳಲ್ಲ. ಪರಿಸ್ಥಿತಿ ಮಿತಿಮೀರುತ್ತದೆ ಎಂದು ಬಹಳ ಬುದ್ಧಿವಂತಿಕೆಯಿಂದ ಆಟವಾಡಲು ಶುರು ಮಾಡಿದ್ದಾಳೆ. ಪವಿತ್ರಾಳಿಂದ ಡಿವೋರ್ಸ್ ಪಡೆದರೆ ಮಾತ್ರ ರೇವತಿಯನ್ನು ಕೊಟ್ಟು ಮದುವೆ ಮಾಡುತ್ತೀವಿ ಅಂತ ಹೇಳಿದ್ದಾಳೆ. ರೇವತಿಗೂ ಇದೇ ವಿಚಾರವನ್ನು ತಲೆಯಲ್ಲಿ ತುಂಬಿರುವುದು. ಹೀಗಾಗಿ ರೇವತಿ ಕೂಡ ಡಿವೋರ್ಸ್ ತರುವುದಕ್ಕೆ ಹೆಚ್ಚು ಒತ್ತಾಯ ಮಾಡುತ್ತಿದ್ದಾಳೆ. ಈ ಮಧ್ಯೆ ರೇವತಿ ಮನೆಯಲ್ಲಿ ಮದುವೆಯ ವಿಚಾರಗಳು ಚಾಲ್ತಿಗೆ ಬಂದಿವೆ.
ಜೊತೆಜೊತೆಯಲಿ:
ಅನುಗೆ
ಪ್ರಜ್ಞೆ
ಬಂದಾಯ್ತು:
ಝೇಂಡೇ
ಪ್ಲ್ಯಾನ್
ಮತ್ತೆ
ಠುಸ್
ಆಯ್ತು..

ರೇವತಿ ವಿಚಾರಕ್ಕೆ ದೇವ್‌ಗೆ ಎಚ್ಚರಿಕೆ
ದೇವ್‌ಗೆ ಈಗಾಗಲೇ ಮದುವೆಯಾಗಿದೆ. ಅದರಲ್ಲೂ ಪವಿತ್ರಾಳನ್ನು ಸ್ವಂತ ತಂಗಿಯಂತೆಯೇ ಎಜೆ ಇಷ್ಟಪಡುತ್ತಾರೆ. ಈ ಮಧ್ಯೆ ಪವಿತ್ರಾಗೆ ಅನ್ಯಾಯವಾಗುವುದಕ್ಕೆ ಎಜೆ ಬಿಡುವುದಿಲ್ಲ. ಅಷ್ಟೇ ಅಲ್ಲ ರೇವತಿ ಕೂಡ ಸ್ವಂತ ನಾದಿನಿ. ಹೀಗಾಗಿ ಇಬ್ಬರಿಗೂ ಮೋಸ ಮಾಡಲು ಹೊರಟ ದೇವ್‌ನನ್ನು ಎಜೆ ಕ್ಷಮಿಸುವುದು ಎಲ್ಲಿ? ಅದಕ್ಕಾಗಿಯೇ ಸಾಕಷ್ಟು ಬಾರಿ ದೇವ್‌ಗೆ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿ ದೇವಸ್ಥಾನದಲ್ಲಿ ಸಿಕ್ಕಿ ಬಿದ್ದಾಗಲೂ ದೇವ್‌ಗೆ ಎಚ್ಚರಿಕೆ ನೀಡಿದ್ದರು. ಅದರ ಜೊತೆಗೆ ರೇವತಿಗೆ ಕೂಡ ಬುದ್ಧಿ ಮಾತು ಹೇಳಿದ್ದಾರೆ.

ರೇವತಿ ಮನೆ ಬಿಟ್ಟು ಹೋಗಲು ಸಿದ್ಧ
ಮನೆಯಲ್ಲಿ ಮದುವೆಯ ತಯಾರಿ ನಡೆಯುತ್ತಿರುವುದಕ್ಕೆ ಭಯಗೊಂಡಿರುವ ರೇವತಿ ನೇರವಾಗಿ ದೇವ್‌ಗೆ ಕರೆ ಮಾಡಿದ್ದಾಳೆ. ಈ ರೀತಿಯೆಲ್ಲಾ ಫ್ಲ್ಯಾನ್ ನಡೆಯುತ್ತಿದೆ. ನನಗೆ ಭಯವಾಗ್ತಿದೆ ಎಂದು ಹೇಳಿದಾಗ ದೇವ್ ಮನೆ ಬಿಟ್ಟು ಬರಲು ಕೇಳಿದ್ದಾನೆ. ದೇವ್ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎನಿಸುತ್ತದೆ. ಆದರೆ ರೇವತಿ ಕೇಳಿದ ಕೂಡಲೇ ಅಸ್ತು ಎಂದಿದ್ದಾಳೆ. ಅಪ್ಪ, ಅಮ್ಮ, ಅಕ್ಕ ಇವತ್ತು ಬೇಸರ ಮಾಡಿಕೊಳ್ಳುತ್ತಾರೆ. ನಾಳೆ ಮಾಡಿಕೊಳ್ಳುತ್ತಾರೆ. ಆದರೆ ಮುಂದೆ ನಾವಿಬ್ಬರು ಚೆನ್ನಾಗಿ ಬಾಳಿ ಬದುಕಿದರೆ ಅವರೇ ಹೆಚ್ಚು ಖುಷಿ ಪಡುವುದು ಎಂದಿದ್ದಾಳೆ. ಇದನ್ನು ಕೇಳಿ ಒಂದು ಕ್ಷಣ ದೇವ್ ಶಾಕ್ ಕೂಡ ಆಗಿದ್ದಾನೆ.
ಲೀಲಾ ಮತ್ತೆ ಸೋಲುತ್ತಾಳಾ..? ಗೆಲ್ಲುತ್ತಾಳಾ..?
ದೇವ್ ಮೋಸದಾಟ ಲೀಲಾಳ ಕಿವಿಗೆ ಬಿದ್ದಿದೆ. ದೇವ್‌ನಿಂದ ದೂರ ಇರು ಅಂತ ಹೇಳಿದ್ದರು ಸಹ ಚುಕ್ಕಿ ಅಕ್ಕನಿಗೆ ಗೊತ್ತಿಲ್ಲದೇನೆ ದೇವ್ ಜೊತೆ ಲವ್ವಿ ಡವ್ವಿ ಮುಂದುವರೆಸಿದ್ದಾಳೆ. ಇದೀಗ ದೇವ್‌ಗಾಗಿ ಮನೆಯವರನ್ನೆಲ್ಲಾ ಬಿಟ್ಟು ಓಡಿ ಹೋಗಲು ನಿರ್ಧರಿಸಿದ್ದಾಳೆ. ಇದು ಲೀಲಾ ಕಿವಿಗೆ ಬಿದ್ದಿದ್ದು, ಆತಂಕಗೊಂಡಿದ್ದಾಳೆ. ರೇವತಿ ಇಷ್ಟು ಮೋಸ ಮಾಡಿದಳಾ ಎಂಬ ಬೇಸರವೂ ಅವಳ ಮುಖದಲ್ಲಿ ಕಾಣುತ್ತಿದೆ. ಈ ಮಧ್ಯೆ ಎಜೆ ಬಳಿ ಬಂದು ಇವತ್ತು ದೇವ್ ಮುಖವಾಡ ಕಳಚುವುದಕ್ಕೆ ಕೊನೆ ದಿನ ಎಂದಿದ್ದಾಳೆ. ಒಂದು ವೇಳೆ ದೇವ್ ಹೇಳಿದಂತೆ ರೇವತಿ ಲಗೇಜ್ ಸಮೇತ ಹೇಳಿದ ಜಾಗಕ್ಕೆ ಬಂದು, ಸಿಕ್ಖ ಬಿದ್ದರೆ ಲೀಲಾಗೆ ಗೆಲುವು. ದೇವ್‌ಗೆ ಸ್ವಲ್ಪ ಅನುಮಾನ ಬಂದರು ಅದು ಫೇಲ್.