ಹಿಟ್ಲರ್ ಕಲ್ಯಾಣ: ಎಜೆ-ಲೀಲಾ ಮನಸ್ಸಿನ ಪ್ರೀತಿಯನ್ನು ಹೊರ ತರುತ್ತಾ ಅಜ್ಜಿಯ ಹಠ..!

By ಎಸ್ ಸುಮಂತ್

ಹೇಗಾದರೂ ಮಾಡಿ ಮಗ ಮತ್ತು ಸೊಸೆಯ ನಡುವಿನ ಅಂತರವನ್ನು ಕಡಿಮೆ ಮಾಡಿ, ಇಬ್ಬರ ನಡುವೆ ಪ್ರೀತಿ ಚಿಗುರಿಸಲೇಬೇಕೆಂದು ಅಜ್ಜಿ ಹಠ ತೊಟ್ಟಿದ್ದಾರೆ. ಅದರ ಪ್ರಯೋಗ ಕೂಡ ಈಗಾಗಲೇ ನಡೆಯುತ್ತಾ ಇದೆ. ಅತ್ತ ಅಜ್ಜಿಗೆ ,ಇತ್ತ ಎಜೆ ಲೀಲಾಗೆ ವಿಶ್ವರೂಪ್ ಹಲವು ಐಡಿಯಾಗಳನ್ನು ಕೊಟ್ಟು ಸಂಸಾರ ಸರಿ ಮಾಡಿಸಲು ಸಾಥ್ ನೀಡುತ್ತಿದ್ದಾರೆ. ಅಮ್ಮನ ಹಠದ ಮುಂದೆ ಎಜೆ ಮತ್ತು ಲೀಲಾ ಕಂಪ್ಲೀಟ್ ಸೋಲುತ್ತಿದ್ದಾರೆ. ನಾಟಕದ ಮೂಲಕ ಇಬ್ಬರು ಪ್ರೀತಿಯ ರಥ ಏರಿದ್ದಾರೆ.

ಸಂಪೂರ್ಣವಾಗಿ ಇಬ್ಬರ ನಡುವೆ ಪ್ರೀತಿ ಇದೆ ಎಂಬುದರಲ್ಲೂ ಪ್ರೀತಿ ಹುಟ್ಟಿಸಲು ಅಜ್ಜಿಯ ಫ್ಲ್ಯಾನ್ ಮಾಡಿದ್ದಾರೆ. ಅದಕ್ಕಾಗಿಯೇ ಮನೆಯಿಂದ ಹೊರಗೆ ಬಂದು ಚಳಿ, ಗಾಳಿ ಎನ್ನದೇ ಕಷ್ಟ ಅನುಭವಿಸಿದರೂ ಚಿಂತೆಯಿಲ್ಲವೆಂಬಂತೆ ಹೊರಗಡೆಯೇ ಇದ್ದಾರೆ. ಇದು ಮಗ ಮತ್ತು ಸೊಸೆಯ ಮನಸ್ಸನ್ನು ಕದಡುತ್ತಿದೆ. ಆದರೆ ಎಜೆ ಮತ್ತು ಲೀಲಾ ಮನಸ್ಸಲ್ಲೂ ಪ್ರೀತಿ ಇದೆ. ಅದನ್ನು ವ್ಯಕ್ತಪಡಿಸಲು ಇನ್ನೇನೋ ಅಡ್ಡಿಯಾಗುತ್ತಿದೆ.

ನಿಜ ಪ್ರೀತಿ ಹೊರಬರುವುದು ಯಾವಾಗ?

ನಿಜ ಪ್ರೀತಿ ಹೊರಬರುವುದು ಯಾವಾಗ?

ಎಜೆ ಮತ್ತೊಂದು ಮದುವೆಯಾಗಿದ್ದೆ ಅಮ್ಮನ ಒತ್ತಾಯಕ್ಕಾಗಿ. ಅಂತರ ಹೋದ ಮೇಲೆ ಎಜೆಗೆ ಆಕೆಯ ನೆನಪುಗಳು ಹೆಚ್ಚಾಗಿ ಕಾಡತೊಡಗಿತ್ತು. ಆದ್ಧರಿಂದ ಮಗನನ್ನು ಹೊರ ತರಲೇಬೇಕೆಂದು ಅಮ್ಮನ ಆಶಯವಾಗಿತ್ತು. ಅದರಂತೆಯೇ ಮಗನಿಗೆ ಮದುವೆ ಮಾಡಲು ನಿರ್ಧರಿಸಿದರು. ಅಮ್ಮನ ಮಾತನ್ನು ಮೀರದ ಎಜೆಗೆ, ಅಂತರ ಕೂಡ ಗ್ರೀನ್ ಸಿಗ್ನಲ್ ಕೊಟ್ಟು ಆಗಿತ್ತು. ಜೊತೆಗೆ ಎಜೆಗೆ ಹೆಂಡತಿಯಾಗಿ ಲೀಲಾಳನ್ನೇ ಆಯ್ಕೆ ಮಾಡಲಾಗಿತ್ತು. ಹಲವು ತೊಡಕುಗಳ ನಡುವೆ ಆದ ಮದುವೆಯಿಂದ ಈಗ ಪ್ರೀತಿ ಹುಟ್ಟುವುದನ್ನು ಎದುರು ನೋಡುತ್ತಿದ್ದಾರೆ ಅಜ್ಜಿ.

ಲೀಲಾಳನ್ನು ಒಪ್ಪಿಕೊಳ್ಳುತ್ತಾನಾ ಎಜೆ?

ಲೀಲಾಳನ್ನು ಒಪ್ಪಿಕೊಳ್ಳುತ್ತಾನಾ ಎಜೆ?

ಯಾವುದೋ ಅನಿವಾರ್ಯತೆ, ಇನ್ಯಾವುದೋ ಇಕ್ಕಟ್ಟಿಗೆ ಸಿಲುಕಿ ಮದುವೆಯಾಗಿದ್ದರು ಸಹ ಲೀಲಾಗೆ ಎಜೆ ಮೇಲೆ ಮನಸ್ಸಾಗಿದೆ. ಮೊದ ಮೊದಲಿಗೆ ಎಜೆ ಕೆಟ್ಟವರೆಂದು ಭಾವಿಸಿದ್ದ ಲೀಲಾ ಮನಸ್ಸು ಇದೀಗ ಬದಲಾಗಿದೆ. ಎಜೆಯೊಳಗಿನ ರಿಯಲ್ ಮನುಷ್ಯ, ಪ್ರಾಮಾಣಿಕ ಮನುಷ್ಯನ ದರ್ಶನವಾಗಿದೆ. ಹೀಗಾಗಿ ಎಜೆ ಮೇಲೆ ಲೀಲಾಳ ಮನಸ್ಸು ವಾಲುತ್ತಿದೆ. ಈ ಹಿಂದೆ ಲಕ್ಚ್ಮೀಯ ಆ್ಯನಿವರ್ಸರಿ ಸಮಯದಲ್ಲೂ ಲೀಲಾ ತನ್ನೊಳಗಿನ ಆಸೆಯನ್ನು ಹೇಳಿಕೊಂಡಿದ್ದಳು. ತಾನಿಷ್ಟಪಡುವ ಹುಡುಗ ಹೇಗಿರಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದಳು. ಆ ಹುಡುಗ ನೀವಾಗುವಿರ ಎಂದು ಕೇಳಿದ್ದಳು. ಇನ್ನೇನು ಲೀಲಾಳ ಕನಸಿಗೆ ಒಮ್ಮತ ಸೂಚಿಸಲು ಎಜೆ ಮುಂದೆ ಬರಬೇಕು. ಅಲ್ಲಿ ಇನ್ನೇನೋ ಸಮಸ್ಯೆ ಕಾಡಿ, ಎಲ್ಲವನ್ನು ಹಾಳು ಮಾಡಿತ್ತು. ಇದೆಲ್ಲಾ ಬೆಳವಣಿಗೆ ನೋಡಿದರೇ ಲೀಲಾಗೆ ಎಜೆ ಮೇಲಿರುವುದು ರಿಯಲ್ ಪ್ರೀತಿ ಎಂಬುದು ಸ್ಪಷ್ಟವಾಗಿದೆ.

ಅಮ್ಮನಿಗಾಗಿ ಶುರುವಾಗುತ್ತಾ ಸಂಸಾರ?

ಅಮ್ಮನಿಗಾಗಿ ಶುರುವಾಗುತ್ತಾ ಸಂಸಾರ?

ನಾಟಕವೋ ಮತ್ತೊಂದೊ ಆದರೆ ಅಮ್ಮನಿಗಾಗಿ ಎಜೆ ಮತ್ತು ಲೀಲಾ ಕೆಲವೊಮ್ಮೆ ತಮ್ಮ ಕೋಪವನ್ನು ಬದಿಗಿಡುತ್ತಾರೆ. ಇದನ್ನೇ ಎಜೆ ತಾಯಿ ಸರೋಜದೇವಿ ಈಗ ಬಂಡವಾಳ ಮಾಡಿಕೊಂಡು, ಮಗ ಮತ್ತು ಸೊಸೆಯ ನಡುವಿನ ಅಂತರ ಕಡಿಮೆ ಮಾಡಲು ಹೊರಟಿದ್ದಾರೆ. ಅಜ್ಜಿಯ ಮುಂದೆ ನಾಟಕವಾಡಿದರೂ ಆಗಾಗ ಎಜೆ ‌ಮತ್ತು ಲೀಲಾ ಕಣ್ಣುಗಳು ಬೆಸೆಯುತ್ತವೆ. ಆ ಮೂಲಕ ಇಬ್ಬರ ಪ್ರೀತಿ ಎಕ್ಸ್ ಚೇಂಜ್ ಆಗುತ್ತೆ. ಆದರೆ ಇಬ್ಬರ ಮೈಂಡ್‌ನಲ್ಲಿ ಓಡುವ ಆಲೋಚನೆಗಳು ಮನಸ್ಸಿನ ಮಾತನ್ನು ಕೇಳುತ್ತಲೆ ಇಲ್ಲ.

ದುಷ್ಮನ್‌ಗಳ ಕಾಟಕ್ಕೆ ಗೆಲ್ಲುತ್ತಾ ಪ್ರೀತಿ?

ಎಜೆ ಮತ್ತು ಲೀಲಾಗೆ ದುಷ್ಮನ್‌ಗಳ ಸಂಖ್ಯೆ ಏನು ಕಡಿಮೆ ಇಲ್ಲ. ಅದರಲ್ಲೂ ಮನೆಯಲ್ಲಿರುವ ಸೊಸೆಯಂದಿರೆಲ್ಲಾ ಅದ್ಯಾವಾಗ ಇಬ್ಬರನ್ನು ದೂರ ಮಾಡುತ್ತೇವೆ ಎಂದು ಕಾಯುತ್ತಿದ್ದಾರೆ. ಇನ್ನು ಆ ಕಡೆ ಲೀಲಾಳ ಅಮ್ಮ ಮೊದಲು ಇಬ್ಬರನ್ನು ದೂರ ಮಾಡಿ 70 ಕೋಟಿಯ ವಾರಸುದಾರೆಯಾಗಬೇಕೆಂದು ಕನಸು ಕಾಣುತ್ತಿದ್ದಾಳೆ. ಈ ಮೂಲಕ ಇಬ್ಬರು ಅಡ್ಡ ದಾರಿಯಲ್ಲಿ ಎಜೆ ಮತ್ತು ಲೀಲಾಳನ್ನು ಬೇರ್ಪಡಿಸಲು ಹೋಗಿ, ಅವರೇ ಮಣ್ಣು‌ ಮುಕ್ಕುತ್ತಿದ್ದಾರೆ.

More from Filmibeat

English summary
Zee Kannada Serial Hitler kalyana Written Update on July 4th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X