Hitler Kalyana Serial: 'ಹಿಟ್ಲರ್ ಕಲ್ಯಾಣ' ಸೊಸೆಯಂದಿರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಅತ್ತೆ!

By Poorva

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗೋ ಹಿಟ್ಲರ್ ಕಲ್ಯಾಣ ಧಾರಾವಾಹಿ ಆರಂಭದಿಂದಲೂ ತುಂಬಾ ಇನ್ಟ್ರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ . ಹೋಟೆಲ್ ಉದ್ಯಮ ನಡೆಸ್ತಿರೋ ಎಜೆ ಅಲಿಯಾಸ್ ಅಭಿರಾಮ್ ಜಯಶಂಕರ್ ತುಂಬಾ ಶಿಸ್ತಿನ ವ್ಯಕ್ತಿ. ಇನ್ನು ಎಜೆಗೆ ಜೋಡಿಯಾಗಿರೋ ಲೀಲಾ, ಎಡವಟ್ಟು ರಾಣಿ ಅಂತಾನೇ ಧಾರಾವಾಹಿಯಲ್ಲಿ ಫೇಮಸ್.

ಎಜೆಯ ಶಿಸ್ತಿಗೆ ವಿರುದ್ಧವಾಗಿ ಕೆಲಸ ಮಾಡೋ ಲೀಲಾ. ಪ್ರತಿ ಬಾರಿಯೂ ಎಜೆ ಮುಂದೆ ತಪ್ಪಿತಸ್ಥಳೇ ಆಗಿರುತ್ತಾಳೆ. ಹಲವು ಎಡವಟ್ಟುಗಳ ನಡುವೆ ಎಜೆ, ಲೀಲಾ ಮದುವೆಯಾಗಿದ್ದಾರೆ. ಮೂವರು ಸೊಸೆಯರಿಗೆ ಅತ್ತೆಯಾಗಿ ಬಂದಿರೋ ಲೀಲಾ ಹಲವು ಸವಾಲು ಎದುರಿಸುತ್ತಿದ್ದಾಳೆ. ಸದ್ಯ ಧಾರಾವಾಹಿಯಲ್ಲಿ ಏನು ನಡೀತಿದೆ ತಿಳಿಯಲು ಮುಂದೆ ನೋಡಿ.

ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಟ್ವಿಸ್ಟ್ ಇಲ್ಲಿದೆ

ಹಿಟ್ಲರ್ ಕಲ್ಯಾಣ ಧಾರಾವಾಹಿಗೆ ಟ್ವಿಸ್ಟ್ ಇಲ್ಲಿದೆ

'ಹಿಟ್ಲರ್ ಕಲ್ಯಾಣ' ಇಂದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಮೂವರು ಸೊಸೆಯಂದಿರು ಸೇರಿ ಫರ್ಫೆಕ್ಟ್ ಮಾವನಿಗೆ ಅತ್ತೆಯನ್ನು ಹುಡುಕುವ ವಿಭಿನ್ನ ಕಥೆಯುಳ್ಳ ಸೀರಿಯಲ್ ಇದು. ಇದೀಗ ಈ ಧಾರಾವಾಹಿ ಹಲವು ಟ್ವಿಸ್ಟ್‌ಗಳನ್ನ ಪಡೆದುಕೊಂಡಿದೆ. ಅತ್ತೆಯನ್ನು ಗೋಳಾಡಿಸಲು ಪ್ಲ್ಯಾನ್ ಮಾಡುವ ಸೊಸೆಯಂದಿರಿಗೆ ಅತ್ತೆಯೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ. ಎಡವಟ್ಟು ಅತ್ತೆಯೊಬ್ಬರು 3 ಜನ ಸೊಸೆಯಂದಿರನ್ನ ತರಾಟೆ ತೆಗೆದುಕೊಳ್ಳುವ ಸನ್ನಿವೇಶಗಳು ವೀಕ್ಷಕರಿಗೆ ಬಹಳ ಇಷ್ಟ ಆಗಿವೆ.

ಹಿರಿ ಸೊಸೆ ದುರ್ಗಾಳ ತಂತ್ರಗಳು

ಹಿರಿ ಸೊಸೆ ದುರ್ಗಾಳ ತಂತ್ರಗಳು

ಈ ಧಾರಾವಾಹಿ ಪ್ರತಿಯೊಂದು ಪಾತ್ರಗಳು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಎಜೆಯ ಗತ್ತು, ಲೀಲಾಳ ಎಡವಟ್ಟುಗಳು , ಹಿರಿ ಸೊಸೆ ದುರ್ಗಾಳ ತಂತ್ರಗಳು, ಕಿರಿ ಸೊಸೆ ಸರಸ್ವತಿಯ ಹಾಸ್ಯ ದೃಶ್ಯಗಳು ವೀಕ್ಷಕರ ಮನಗೆಲ್ಲಲು ಕಾರಣವಾಗಿದೆ. ಏಜೆ ಮೊದಲನೇ ಹೆಂಡತಿ ಅಂತರ. ಅಂತರಾಳನ್ನು ತುಂಬಾ ಇಷ್ಟಪಡುವ ಎಜೆ, ಲೀಲಾಳಿಂದ ಅಷ್ಟೇ ಅಂತರ ಕಾಪಾಡಿಕೊಂಡಿರುವುದಂತು ಸತ್ಯ. ಇತ್ತೀಚಿನ ದಿನಗಳಲ್ಲಿ ಏಜೆಗೆ ಲೀಲಾ ಮೇಲೆ ಕನಿಕರ ಮುಡುತ್ತಿರುವುದಂತು ಸತ್ಯ .

ಎಜೆ, ಅಂತರಾಳನ್ನು ಇಷ್ಟ ಪಡೋದ್ಯಾಕೆ?

ಎಜೆ, ಅಂತರಾಳನ್ನು ಇಷ್ಟ ಪಡೋದ್ಯಾಕೆ?

ಇದು ಪ್ರೀತಿಯಾಗಿ ಬದಲಾಗುವುದರಲ್ಲಿ ಸಂಶಯವೇ ಇಲ್ಲ. ಅಂತರಾ ಸ್ಥಾನಕ್ಕೆ ಯಾರನ್ನೂ ಕಲ್ಪನೆ ಮಾಡಿಕೊಳ್ಳಲು ಇಷ್ಟ ಪಡೋದಿಲ್ಲ ಎಜೆ. ಹೀಗಾಗಿ ಲೀಲಾಳಿಂದ ಎಜೆ ದೂರವಿರೋದೋ. ಮದುವೆಯಾದ್ರೂ ಎಜೆ ಮನಸ್ಸು ಅಂತರಾ ನೆನಪಿನಲ್ಲಿಯೇ ಬದುಕಲು ಇಷ್ಟ ಪಡ್ತಿದೆ. ಈ ವಿಚಾರ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಯಾಕೆ ಎಜೆ ಅಂತರಾಳನ್ನು ಅಷ್ಟೊಂದು ಇಷ್ಟ ಪಡ್ತಾರೆ? ಅಂತರಾ, ಎಜೆ ಪ್ರೀತಿ ಸಂಬಂಧ ಹೇಗಿತ್ತು? ಅಂತರಾ ಹೇಗೆ, ಯಾಕೆ ಸಾವನ್ನಪ್ಪಿದ್ದಾಳೆ? ಅನ್ನೋ ಪ್ರಶ್ನೆ ಪ್ರೇಕ್ಷಕರದ್ದು. ಇದೀಗ ಸೀರಿಯಲ್‌ನಲ್ಲಿ ಅಂತರಾ ಕಾಲ್ಪನಿಕ ಎಂಟ್ರಿ ನೋಡುಗರಿಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ದೇವ್ ಬಗ್ಗೆ ಅನುಮಾನ ಪಡುತ್ತಿರುವ ಎಜೆ !

ದೇವ್ ಬಗ್ಗೆ ಅನುಮಾನ ಪಡುತ್ತಿರುವ ಎಜೆ !

ಅಂತರ ವಿಚಾರಗಳು ಒಂದೊಂದೆ ಹೊರಗೆ ಬರಲಿದ್ದು, ಪ್ರೇಕ್ಷಕರ ಎಲ್ಲಾ ಪ್ರಶ್ನೆಗಳಿಗೂ ಶೀಘ್ರವೇ ಉತ್ತರ ಸಿಗಲಿದೆ. ಪ್ರಸ್ತುತ ಎಜೆ ತಂಗಿ ಪವಿತ್ರಳನ್ನು ಕೊಲೆ ಮಾಡಲು ಯತ್ನಿಸಿದವರು ಯಾರು ಎಂಬ ಅನುಮಾನ ಕಾಡುತ್ತಿದೆ ಎಜೆಗೆ. ದೇವ್ ಬಗ್ಗೆ ಅನುಮಾನ ಪಡುತ್ತಿರುವ ಎಜೆ ತನ್ನ ತಂಗಿಯನ್ನು ದುಷ್ಟರ ಕೈಯಿಂದ ಹೇಗೆ ಪಾರು ಮಾಡುತ್ತಾನೆ. ಲೀಲಾ ಇದೀಗ ದೇವ್‌ನನ್ನು ಮನೆಗೆ ಸೇರಿಸಿಕೊಂಡಿದ್ದೆ ತಪ್ಪಾಯಿತಾ? ಲೀಲಾ ಏನೇ ಎಡವಟ್ಟು ಮಾಡಿದ್ರೂ, ಅದು ಒಳ್ಳೆಯದಾಗುತ್ತಲೆ ಹೋಗುತ್ತಿದೆ.

ಪವಿತ್ರಳನ್ನು ಕೊಲೆ ಮಾಡಲು ಯತ್ನಿಸಿದ್ದು ಏಜೆ ?

ಪವಿತ್ರಳನ್ನು ಕೊಲೆ ಮಾಡಲು ಯತ್ನಿಸಿದ್ದು ಏಜೆ ?

ಲೀಲಾಳ ಎದುರು ದೇವ್ ಮುಖವಾಡ ಬಯಲಾಗುವುದು ಯಾವಾಗ? ಅಂತರಳನ್ನು ಕೊಂದಿದ್ದು ಎಜೆ ಎಂದು ಲೀಲಾಳನ್ನು ಅಂತರಾಳ ಸಹೋದರ ನಂಬಿಸಿದ್ದಾನೆ. ಇದೀಗ ಪವಿತ್ರಳನ್ನು ಕೊಲೆ ಮಾಡಲು ಯತ್ನಿಸಿದ್ದು ಏಜೆ ಎಂಬುವುದು ಲೀಲಾಳ ಬಲವಾದ ಅನುಮಾನ. ಅದಕ್ಕಾಗಿ ಹದ್ದಿನ ಕಣ್ಣಿಟ್ಟು ಏಜೆ ಚಲನವಲನ ಗಮನಿಸುತ್ತಿದ್ದಾಳೆ ಲೀಲಾ. ಇದೀಗ ಏಜೆ ಮನೆಗೆ ದೇವ್ ವಕ್ಕರಿಸಿಕೊಂಡಿದ್ದಾನೆ. ಪವಿತ್ರ ಕೊಲೆ ಮಾಡಲು ಇನ್ನೂ ಸುಲಭವಾದ ದಾರಿಯನ್ನು ಎಡವಟ್ಟು ರಾಣಿ ಲೀಲಾ ಮಾಡಿಕೊಟ್ಟಿದ್ದಾಳೆ. ಇದೀಗ ದೇವ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾಳೆ. ಇದೀಗ ಎಜೆಗೆ ದೇವ್ ಮೇಲೆ ಬಲವಾದ ಅನುಮಾನ ಮೂಡಿದೆ.

More from Filmibeat

English summary
Kannada serial Hitler Kalyans story. Here is more details about the zee kannada top serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X