Hitler Kalyana: ಲೀಲಾ ಮತ್ತೊಂದು ಎಡವಟ್ಟು: ಎಜೆ ಮಂಗಳೂರಿಂದ ಬಂದ ಮೇಲೆ ಏನಾಗುತ್ತೆ?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಕಥೆಯೇ ಡಿಫರೆಂಟ್ ಆಗಿ ಇದೆ. ಮೂವರು ಸೊಸೆಯಂದಿರು ಸೇರಿ ಮಾವನಿಗೆ ಅತ್ತೆಯನ್ನು ಹುಡುಕಿ ಮದುವೆ ಮಾಡಿಸುವ ಕಥೆಯೇ 'ಹಿಟ್ಲರ್ ಕಲ್ಯಾಣ'. ಹೊಟೇಲ್ ಉದ್ಯಮದಲ್ಲಿರುವ ಎಜೆಗೆ ಮೂವರು ಗಂಡು ಮಕ್ಕಳಿದ್ದು, ಮೂವರಿಗೂ ಮದುವೆ ಮಾಡಿರುತ್ತಾರೆ.
ಎಜೆ ಪತ್ನಿ ಅಂತರಾ ಕಾರಣಾಂತರದಿಂದ ತೀರಿಕೊಂಡಿದ್ದಾರೆ. ಆದರೆ, ಎಜೆ ತಾಯಿ ಹಾಗೂ ಮೂವರು ಸೊಸೆಯಂದಿರು ಸೇರಿ ಎಜೆಗೆ ಮದುವೆ ಮಾಡಲು ಮುಂದಾಗುತ್ತಾರೆ. ಇದೇ ವೇಳೆ, ಧಾರಾವಾಹಿಯ ನಾಯಕಿ ಲೀಲಾ, ಎಜೆಯ ಜೊತೆ ಹಸೆಮಣೆ ಏರುತ್ತಾರೆ. ಆದರೆ ಈ ಮದುವೆ ಎಜೆಗೂ ಇಷ್ಟವಿರೋದಿಲ್ಲ. ಮತ್ತೊಂದು ಕಡೆ ಲೀಲಾಗೂ ಬೇಕಿರಲಿಲ್ಲ. ಅನಿವಾರ್ಯ ಕಾರಣಗಳಿಂದ ಸಂದರ್ಭಕ್ಕೆ ಸಿಲುಕಿ ಇಬ್ಬರೂ ಮದುವೆಯಾಗುತ್ತಾರೆ.
ಪೆದ್ದು ಪೆದ್ದಾಗಿ ನಡೆದುಕೊಳ್ಳುವ ಲೀಲಾಳನ್ನು ಕಂಡರೆ, ಎಜೆಗೆ ಸ್ವಲ್ಪವೂ ಇಷ್ಟವಿಲ್ಲ. ನಯ-ನಾಜೂಕು ಇಲ್ಲದಂತೆ ನಡೆದುಕೊಳ್ಳುವ ಲೀಲಾ, ಯಾರು ಏನೇ ಹೇಳಿದರೂ ಕೇಳುತ್ತಾಳೆ. ಕೆಲವರು ಲೀಲಾಗೆ ಎಜೆ ಮೊದಲ ಪತ್ನಿ ಸಾವಿನ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಅದನ್ನು ಕೇಳಿರುವ ಲೀಲಾ, ಎಜೆನೇ ಅಂತರಾಳನ್ನು ಕೊಂದಿದ್ದಾರೆ ಎಂದು ಅನುಮಾನಗೊಂಡಿದ್ದಾಳೆ.

ಈ ನಡುವೆ ಲೀಲಾ ಹಾಗೂ ಮೂವರ ಸೊಸೆಯರ ಮಧ್ಯೆ ಆಗಾಗ ಜಟಾಪಟಿ ನಡೆಯುತ್ತಿರುತ್ತದೆ. ಲೀಲಾ ಮನೆಗೆ ಎಜೆಯನ್ನು ಮದುವೆಯಾಗಿ ಅತ್ತೆ ಸ್ಥಾನಕ್ಕೆ ಬಂದಿರುವುದು ಸೊಸೆಯಂದಿರಿಗೆ ಸ್ವಲ್ಪವೂ ಇಷ್ಟವಿಲ್ಲ. ಹಾಗಾಗಿ ಸೊಸೆಯಂದಿರು ಸೇರಿಕೊಂಡು ಲೀಲಾಳನ್ನು ತಪ್ಪು ದಾರಿಗೆ ಎಳೆದು ಆಗಾಗ ಎಜೆ ಕೋಪಗೊಳ್ಳುವಂತೆ ಮಾಡುತ್ತಾರೆ. ಆದರೆ, ಇತ್ತೀಚೆಗೆ ಸೊಸೆಯಂದಿರು ಏನೇ ಮಾಡಿದರೂ ಲೀಲಾಗೆ ಅದು ಒಳ್ಳೆಯದೇ ಆಗುತ್ತಿದೆ.
ಎಲ್ಲಾ ಕಡೆಯೂ ಅತ್ತೆ ಸೊಸೆಯನ್ನು ಗೋಳಾಡಿಸಿಕೊಂಡರೆ, ಈ ಧಾರಾವಾಹಿಯಲ್ಲಿ ಮುಗ್ಧ ಅತ್ತೆಗೆ ಸೊಸೆಯಂದಿರು ಕಾಟ ಕೊಡುತ್ತಿದ್ದಾರೆ. ವಯಸ್ಸಿನಲ್ಲೂ ಅತ್ತೆ ಸೊಸೆಯಂದಿರಿಗಿಂತ ಚಿಕ್ಕವಳಾಗಿರುವುದು ಈ ಧಾರಾವಾಹಿಯ ಮತ್ತೊಂದು ವಿಶೇಷ. ಈಗ ಸ್ವಲ್ಪ ಸ್ವಲ್ಪವೇ ಲೀಲಾ ಎಜೆಗೆ ಹತ್ತಿರವಾಗುತ್ತಿದ್ದು, ಅದಕ್ಕೆ ಕಾರಣ, ಲೀಲಾಳಲ್ಲಿ ಎಜೆ, ತನ್ನ ಮೊದಲ ಪತ್ನಿ ಅಂತರಾಳನ್ನೇ ನೋಡುತ್ತಿರುತ್ತಾನೆ. ಹಾಗಾಗಿ ಆಗಾಗ ಲೀಲಾಗೆ ಹತ್ತಿರವಾಗುತ್ತಾನೆ. ಆದರೆ ಇದ್ಯಾವುದೂ ಲೀಲಾಗೆ ಅರ್ಥವೇ ಆಗೋದಿಲ್ಲ. ಅಂತರಾಳ ಕೆಲ ಗುಣಗಳು ಲೀಲಾಳಲ್ಲಿ ಇರುವುದನ್ನು ಕಂಡು ಎಜೆ ಕೂಡ ಶಾಕ್ ಆಗುತ್ತಾನೆ. ಆಗಾಗ ಎಜೆ ಲೀಲಾಳಿಗೆ ಹೇಗೆ ಅಡುಗೆ ಮಾಡುವುದು, ಮನೆಗೆ ಬಂದ ಗೆಸ್ಟ್ ಗೆ ಕಾಫಿ ಸರ್ವ್ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಿರುತ್ತಾನೆ.
ಇನ್ನು ಸದ್ಯ ಎಜೆ ಯಾವುದೋ ಕೆಲಸದ ಮೇಲೆ ಮಂಗಳೂರಿಗೆ ಹೊರಟಿರುತ್ತಾನೆ. ಇದನ್ನು ತಿಳಿದ ಲೀಲಾ ಧಾರಾವಾಹಿಯೊಂದರಲ್ಲಿ ನಟಿಸಲು, ಶೂಟಿಂಗ್ ಗೆ ತನ್ನ ಮನೆಯಲ್ಲಿ ಅವಕಾಶ ಮಾಡಿಕೊಡುತ್ತಾಳೆ. ಈ ವಿಚಾರ ಎಜೆಗೆ ಗೊತ್ತಿರುವುದಿಲ್ಲ. ಎಜೆ ತಾಯಿ ಬಳಿ ಹೋಗಿ ಶೂಟಿಂಗ್ ನೋಡುವ ಆಸೆ ಇದ್ರೆ, ನಮ್ಮ ಮನೆಯನ್ನೇ ಶೂಟಿಂಗ್ ಗೆ ಅವಕಾಶ ಮಾಡಿ ಕೊಡೋಣ. ನೀವು ಹು ಅನ್ನಿ ಸಾಕು ಎಂದು ಒಪ್ಪಿಸುತ್ತಾಳೆ. ಎಜೆ ಮಂಗಳೂರಿಗೆ ಹೋಗುತ್ತಿದ್ದಂತೆಯೇ, ಇತ್ತ ಲೀಲಾ ಶೂಟಿಂಗ್‌ನವರಿಗೆ ಮನೆಗೆ ಬರಲು ಸೂಚಿಸುತ್ತಾಳೆ. ಸದ್ಯ ಲೀಲಾ ಅದರಲ್ಲಿ ಸರ್ವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದು ಪವರ್ ಫುಲ್ ಪಾತ್ರ ಎಂದು ಡೈರೆಕ್ಟರ್ ನಂಬಿಸಿರುತ್ತಾನೆ. ಆದರೆ, ಎಜೆ ಮಂಗಳೂರಿನಿಂದ ಬಂದ ಮೇಲೆ ಏನಾಗುತ್ತೆ.? ಲೀಲಾಳಿಗೆ ಎಜೆ ಯಾವ ಶಿಕ್ಷೆ ಕೊಡುತ್ತಾನೆ ಎಂಬುದೇ ಈಗ ಕುತೂಹಲದ ಸಂಗತಿ.


Click it and Unblock the Notifications











