Hitler kalyana: ಲೀಲಾ ಜೊತೆಗಿರೋ ಆ ಹುಡುಗ ಯಾರು? ಎಜೆ ಮುಂದಿನ ನಿರ್ಧಾರವೇನು?

By ಎಸ್ ಸುಮಂತ್

ಎಜೆ ಹಾಗೂಲೀಲಾ ನಡುವೆ ಈಗೀಗ ಪ್ರೀತಿ ಪ್ರೇಮ ಶುರುವಾಗಿದೆ. ಎಜೆ ನೀಡುವ ಪ್ರೀತಿಗೆ ಲೀಲಾ ಫಿದಾ ಆಗಿದ್ದಾಳೆ. ಎಜೆಯನ್ನು ಕಾಡಿಸುವುದಕ್ಕೆ ಶುರು ಮಾಡಿದ್ದಾಳೆ. ಎಜೆ ಕೂಡ ಲೀಲಾಳನ್ನು ಇಂಪ್ರೆಸ್ ಮಾಡುವುದಕ್ಕೆ ಟ್ರೈ ಮಾಡ್ತಾ ಇರುತ್ತಾನೆ. ಅವಳಿಗೆ ಇಷ್ಟವಾಗುವಂತ ಗಿಫ್ಟ್ ನೀಡುತ್ತಾ, ತನ್ನ ಪ್ರೀತಿಯನ್ನು ಕಾಪಾಡುತ್ತಾ ಇದ್ದಾನೆ.

ಈ ಕಡೆ ಪ್ರೀತಿಯ ಪಕ್ಷಿಗಳು ಹಾರಾಟ ಶುರು ಮಾಡಿದ್ದರೆ, ಆ ಕಡೆ ಅಜ್ಜಿಗೆ ಟೆನ್ಶನ್ ಕೊಡಲು ಶುರು ಮಾಡಿದೆ. ಎಜೆ ಮನೆಯಲ್ಲಿ ಸದ್ಯ ಅಂತರ ಫೋಟೋದಲ್ಲಿ, ಎಲ್ಲರ ಮನದಲ್ಲಿ ಇದ್ದಾಳೆ. ಆದ್ರೆ ಅಂತರ ಅಜ್ಜಿ ಕಣ್ಣ ಮುಂದೆ ಬಂದು ಟೆನ್ಶನ್ ಕೊಟ್ಟಿದ್ದಾಳೆ. ಇದರ ನಡುವೆ ದುರ್ಗಾ‌ ಕೂಡ ಲೀಲಾಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾಳೆ.

ದುರ್ಗಾಳ ದುರ್ಬುದ್ದಿಗೆ ಲೀಲಾ ಸಂಕಷ್ಟಕ್ಕೆ..!

ದುರ್ಗಾಳ ದುರ್ಬುದ್ದಿಗೆ ಲೀಲಾ ಸಂಕಷ್ಟಕ್ಕೆ..!

ಎಜೆ ಮನೆಗೆ ಲೀಲಾ ಸೊಸೆಯಾಗಿ ಬಂದಾಗಿನಿಂದ ದುರ್ಗಾಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ದುರ್ಗಾಳ ಜೊತೆಗೆ ಲಕ್ಷ್ಮೀ, ಸರೂ ಕೂಡ ಜೊತೆಯಾಗಿದ್ದರು. ಕೊಡಬಾರದ ಕಷ್ಟವನ್ನೇ ಕೊಟ್ಟರೂ ಲೀಲಾ ಯಾವುದಕ್ಕೂ ತಲೆ ಬಾಗಿರಲಿಲ್ಲ. ಈಗ ಲಕ್ಷ್ಮೀ ಲೀಲಾಳ ಒಳ್ಳೆತನವನ್ನು ಕಂಡುಕೊಂಡಿದ್ದು, ಈಗ ಅತ್ತೆ ಅಂತ ಒಪ್ಪಿಕೊಂಡಿದ್ದಾಳೆ. ಆದ್ರೆ ಸರೂ ಮತ್ತು ದುರ್ಗಾ ಮತ್ತದೇ ಚಾಳಿ ತೋರಿಸಿದ್ದಾರೆ. ಆದ್ರೆ ಈ ಬಾರಿ ತೀರಾ ಕೆಳಮಟ್ಟಕ್ಕೆ ಇಳಿದಿದ್ದಾಳೆ. ಕ್ಯಾರೆಕ್ಟರ್ ಡ್ಯಾಮೇಜ್ ಮಾಡುವುದಕ್ಕೆ ಹೊರಟಿದ್ದಾಳೆ.

ಲೀಲಾಳ ಆ ಫೋಟೋ ನಿಜನಾ..?

ಲೀಲಾಳ ಆ ಫೋಟೋ ನಿಜನಾ..?

ಲೀಲಾ ಈ ಮುಂಚೆ ನಟಿ ಆಗಬೇಕು ಎಂದು ಬಯಸಿದ್ದವಳು. ಆದ್ರೆ, ಎಜೆನಾ ಮದುವೆಯಾದ ಬಳಿಕ ಆ ಆಸೆಯನ್ನು ಹಾಗೆ ಬಿಟ್ಟು ಬಿಟ್ಟಳು. ಈಗ ದುರ್ಗಾ ತೀರಾ ಕೆಳಮಟ್ಟಕ್ಕೆ ಇಳಿದು, ಲೀಲಾಳ ಕ್ಯಾರೆಕ್ಟರ್ ಡ್ಯಾಮೇಜ್ ಮಾಡುವುದಕ್ಕೆ ಹೊರಟಿದ್ದಾಳೆ. ಲೀಲಾಳ ಜೊತೆಗೆ ಇನ್ನೊಬ್ಬ ಯಾರೋ ಹುಡುಗನ ಜೊತೆಗೆ ಇರುವ ಫೋಟೋಗಳನ್ನು ಕಳುಹಿಸಿದ್ದಾಳೆ. ಆ ಹುಡುಗ ಯಾರೆಂದು ಯಾರಿಗೂ ಗೊತ್ತಿಲ್ಲ. ಇದು ರಿಯಲ್ ? ಫೋಟೋಶಾಪ್ ಮಾಡಿದ್ದಾ? ಅಥವಾ ಆ್ಯಡ್ ಶೂಟ್ ಗೆ ಮಾಡಿಸಿದ್ದಾ? ಎಂಬುದು ತಿಳಿಯಬೇಕಾಗಿದೆ.

ಮನೆಯವರಿಗೆಲ್ಲಾ ಶಾಕ್ ಕೊಟ್ಟ ದುರ್ಗಾ..!

ಮನೆಯವರಿಗೆಲ್ಲಾ ಶಾಕ್ ಕೊಟ್ಟ ದುರ್ಗಾ..!

ದುರ್ಗಾ ಈ ಬಾರಿ ದೊಡ್ಡ ಮಟ್ಟದಲ್ಲಿಯೇ ಪ್ಲ್ಯಾನ್ ಮಾಡಿದ್ದಾಳೆ. ಲೀಲಾ ಯಾವುದೋ ಹುಡುಗನ ಜೊತೆಗೆ ಇರುವ ಫೋಟೋಗಳನ್ನು ಕೊರಿಯರ್ ರೂಪದಲ್ಲಿ ಕಳುಹಿಸಿದ್ದಾಳೆ. ಮೊದಲು ಈ ಫೋಟೋಗಳನ್ನು ಅಜ್ಜಿ ನೋಡಿದ್ದಾರೆ. ಬಳಿಕ ವಿಶ್ವರೂಪ್, ಲಕ್ಷ್ಮೀ ಕೂಡ ನೋಡಿ ಶಾಕ್ ಆಗಿದ್ದಾಳೆ. ಅದಾದ ಮೇಲೆ ಲೀಲಾಳಿಂದ ಮುಚ್ಚಿಡುವುದಕ್ಕೆ ನೋಡಿದ್ರೂ, ಅದನ್ನು ನೋಡಿಯೇ ಬಿಟ್ಟಿದ್ದಾಳೆ. ಅದನ್ನು ನೋಡಿ ಶಾಕ್ ಆದ ಲೀಲಾ, ಫೋಟೋಗಳನ್ನು ಎಸೆದಿದ್ದಾಳೆ.

ಎಜೆಗೆ ಸತ್ಯ ತಿಳಿದೇ ಬಿಡ್ತಾ..?

ಎಜೆಗೆ ಸತ್ಯ ತಿಳಿದೇ ಬಿಡ್ತಾ..?

ಎಜೆ ಬಹಳ ಬುದ್ದಿವಂತ ಎಂಬುದು ಎಲ್ಲರಿಗೂ ಗೊತ್ತು. ಯಾವುದೇ ತಪ್ಪಾದರು, ಮೋಸವಾದರೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ. ಅದನ್ನು ಪರಾಮರ್ಶೆ ಮಾಡುತ್ತಾನೆ. ಈಗ ಲೀಲಾಳ ಫೋಟೋಗಳನ್ನು ಲಕ್ಷ್ಮೀ ತಂದು ಕೊಟ್ಟಿದ್ದಾಳೆ. ಅದಕ್ಕೆ ಸಡನ್ ಆಗಿ ರಿಯಾಕ್ಟ್ ಮಾಡದ ಎಜೆ, ಎಲ್ಲರ ಎದುರು ಆ ಫೋಟೋಗಳನ್ನು ಇಟ್ಟು, ನಿನ್ನೆಯ ಬಿಸಿನೆಸ್ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಇದನ್ನು ಕಂಡ ದುರ್ಗಾ ಮತ್ತು ಸರೂಗೆ ಶಾಕ್ ಆಗಿದೆ. ಆ ಫೋಟೋಗಳನ್ನು ನೋಡಿಯೂ ಇಷ್ಟು ಕೂಲಾಗಿ ಇರುವುದು ಹೇಗೆ ಎಂದು ಪ್ರಶ್ನೆ ಮಾಡಿಕೊಂಡಿದ್ದಾರೆ.

More from Filmibeat

English summary
Hitler kalyana Serial Written Update on March 1st Episode. Here is the details about Aj new plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X