Hitler Kalyana: ದುರ್ಗಾಳ ಕೆಟ್ಟ ಐಡಿಯಾಗೆ ಕಪಾಳ ಮೋಕ್ಷ ಮಾಡಿದ ಅಜ್ಜಿ.. ಇನ್ಮೇಲಾದ್ರೂ ಸರಿಯಾಗ್ತಾಳಾ ದೊಡ್ಡ ಸೊಸೆ..?
ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎಂಬ ಮಾತಿದೆ. ಆ ಮಾತಿಗೆ ತಕ್ಕನಾಗಿ ದುರ್ಗಾ ನಡೆದುಕೊಂಡರೆ ಲೀಲಾಗೆ ಯಾವುದೇ ರೀತಿಯ ಕೆಡುಕಾಗದೇ ಒಳ್ಳೆಯದ್ದೇ ಆಗ್ತಾ ಇದೆ. ದುರ್ಗಾಳ ಕುತಂತ್ರಗಳೆಲ್ಲಾ ನಿಂತಲ್ಲಿಯೇ ನೆಲ ಕಚ್ಚುತ್ತಿವೆ. ದುರ್ಗಾಳ ದುರ್ಬುದ್ದಿ ಗೊತ್ತಿರುವ ಲೀಲಾ, ಇವತ್ತು ಕಲಿತಾಳೆ, ನಾಳೆ ಕಲೀತಾಳೆ ಅಂತ ತಾಳ್ಮೆಯಿಂದ ಕಾಯುತ್ತಿದ್ದಾಳೆ. ಆದ್ರೆ ಒಂದರ ಹಿಂದೊಂದು ಕುತಂತ್ರ ಮಾಡಿ ಮಾಡಿ ಸಿಕ್ಕಿ ಬೀಳುತ್ತಿದ್ದಾಳೆ ದುರ್ಗಾದೇವಿ.
ಎಜೆಗೆ ದುರ್ಗಾ ಬುದ್ದಿ ಇನ್ನು ಗೊತ್ತಿಲ್ಲ. ತುಂಬಾನೇ ನಂಬಿದ್ದಾನೆ. ಒಂದು ವೇಳೆ ಆ ದುರ್ಬುದ್ದಿ ಗೊತ್ತಾದರೇ ಮುಗಿತು. ಆ ಕ್ಷಣವೇ ಮನೆಯಿಂದ ಹೊರಗೆ ಹಾಕುತ್ತಾರೆ. ಆದರೆ ಯಾವುದೇ ಸಮಸ್ಯೆ ಬಾರದಂತೆ, ದುರ್ಗಾಳನ್ನು ಸರಿ ದಾರಿಗೆ ತರುವುದಕ್ಕೆ ಅತ್ತೆಯೇ ಪ್ರಯತ್ನ ಪಡ್ತಾ ಇದ್ದಾರೆ.

ದುರ್ಗಾಳಿಂದ ಪದೇ ಪದೇ ತೊಂದರೆ
ದುರ್ಗಾಳಿಗೆ ಈಗ ಸದ್ಯ ಹೇಗಾದರೂ ಮಾಡಿ ಲೀಲಾಳನ್ನು ಮನೆಯಿಂದ ಹೊರಗೆ ಹಾಕಿಬಿಡಬೇಕು ಅಷ್ಟೇ. ಎಜೆ ಮತ್ತು ಲೀಲಾ ಪ್ರೀತಿ ಮಾಡುವುದಕ್ಕೆ ಶುರು ಮಾಡಿದ್ದಾರೆ ಎಂಬುದು ಗೊತ್ತಿದ್ದರು ಸಹ, ಆ ಸಂಬಂಧ ಹಾಳು ಮಾಡುವುದಕ್ಕೆ ಕೈ ಹಾಕುತ್ತಿದ್ದಾಳೆ. ಹೊಸ ಹೊಸ ಪ್ರಯೋಗ ಮಾಡುತ್ತಿದ್ದಾಳೆ. ಈ ಹಿಂದೆ ಕೂಡ ಲೀಲಾಳ ಬಳಿ ಬದಲಾದವಳಂತೆ ನಟಿಸಿ, ಕರೆಕ್ಟ್ ಆಗಿ ಲಾಕ್ ಮಾಡಿದ್ಲು. ಈಗ ಅದೃಷ್ಟವೆಲ್ಲಾ ಲೀಲಾಳ ಪರವೇ ಇರವ ಕಾರಣ ಹೊಸ ಹೊಸ ಐಡಿಯಾ ಹುಡುಕಿ ಲೀಲಾಳನ್ನು ಎಜೆಯಿಂದ ದೂರ ಮಾಡಲು ನೋಡುತ್ತಿದ್ದಾಳೆ.

ಲೀಲಾ ಪರ್ಸನಲ್ ವಿಚಾರಕ್ಕೆ ಕೈ ಹಾಕಿದ್ದ ದುರ್ಗಾ
ಲೀಲಾಳ ಮೇಲಿನ ಕೋಪಕ್ಕೆ ದುರ್ಗಾ ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾಳೆ ಎಂಬುದು ಅರ್ಥವಾಗಿ ಹೋಯ್ತು. ದುರ್ಗಾ ಕೂಡ ಒಂದು ಹೆಣ್ಣಾಗಿ ಲೀಲಾಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂಬ ಒಂದೇ ಒಂದು ವಿಚಾರಕ್ಕೆ ಅವಳ ಕ್ಯಾರೆಕ್ಟರ್ ಅನ್ನೇ ಡ್ಯಾಮೇಜ್ ಮಾಡಲು ಹೊರಟಿದ್ದಳು. ಆದ್ರೆ ಎಜೆ, ಲೀಲಾಳನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡ ಕಾರಣದಿಂದಾಗಿ ಈ ಪ್ಲ್ಯಾನ್ ಪ್ಲಾಫ್ ಆಗಿದೆ.

ಶಾಸ್ತ್ರಿಗಳ ಮಾತಿಗೆ ದುರ್ಗಾ ಶಾಕ್..!
ಫೋಟೋ ಮೂಲಕ ಸಂಬಂಧ ಹಾಳು ಮಾಡಲು ಹೊರಟಿದ್ದ ದುರ್ಗಾಗೆ ಆ ಪ್ಲ್ಯಾನ್ ಕೈ ಕೊಟ್ಟಿದೆ. ಈಗ ಮತ್ತೆ ಹೊಸದೊಂದು ಪ್ಲ್ಯಾನ್ ಹುಡುಕಿ, ನಂಬಿಕೆಯಲ್ಲಿ ಆಟವಾಡಲು ಹೊರಟಿದ್ದಳು. ಜ್ಯೋತಿಷ್ಯ ಮೂಲಕ ಸಂಸಾರದಲ್ಲಿ ಸ್ಯೆ ತರಲು ಹೊರಟಿದ್ದಳು. ಆದ್ರೆ ಆ ಶಾಸ್ತ್ರಿಗಳು ಹೇಳಿದ್ದೇ ಬೇರೆಯಾಗಿದೆ. ಸೊಸೆಗೆ ಮತ್ತೊಮ್ಮೆ ಮಾಂಗಲ್ಯಧಾರಣೆ ಮಾಡಲೇಬೇಕು. ಆಗ ಮಾತ್ರ ಇಬ್ಬರ ಸಂಸಾರ ಜೀವನ ಚೆನ್ನಾಗಿ ಇರುತ್ತೆ ಎಂದಿದ್ದಾರೆ. ಅಜ್ಜಿ ಕೂಡ ಆ ಕಾರ್ಯಕ್ರಮ ಮಾಡುವುದಕ್ಕೆ ಮುಂದಾಗಿದ್ದಾರೆ.

ಅಜ್ಜಿಯಿಂದ ಕಪಾಳ ಮೋಕ್ಷ..!
ದುರ್ಗಾಳ ಈ ಪ್ಲ್ಯಾನ್ ಕೂಡ ಅಟ್ಟರ್ ಪ್ಲಾಫ್ ಆದ ಮೇಲೆ ಸರೂಗೆ ಇನ್ನಷ್ಟು ಕೋಪ ಬಂದಿದೆ. ದುರ್ಗಾಳ ಬಳಿ ಗೇಲಿ ಮಾಡಿ ಬೇಸರ ಮಾಡಿಕೊಂಡಿದ್ದಳು. ಇನ್ನೊಮ್ಮೆ ಈ ರೀತಿಯಾದಂತ ಪ್ಲ್ಯಾನ್ ಗಿಂತ ಸೋತು, ಅವಳನ್ನೆ ಅತ್ತೆ ಅಂತ ಒಪ್ಪಿಕೊಳ್ಳೋದು ಉತ್ತಮ ಅಂತ ಹೇಳಿ ಹೊರಟಿದ್ದಾಳೆ. ಆಗ ದುರ್ಗಾ ಒಬ್ಬಳೇ ನಿಮನತು ಮಾತನಾಡುವಾಗ ಅಜ್ಜಿಯ ಎಂಟ್ರಿಯಾಗಿದೆ. ಹೆಚ್ಚು ಮಾತನಾಡುವುದಕ್ಕೂ ಬಿಡದೆ ಕಪಾಳಕ್ಕೆ ಹೊಡೆದಿದ್ದಾರೆ.


Click it and Unblock the Notifications











