For Quick Alerts
  ALLOW NOTIFICATIONS  
  For Daily Alerts

  ಎಜೆ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ ಒಪ್ಪಿಕೊಂಡು ದುರ್ಗಾ ಹೆಸರು ಹೇಳೇ ಬಿಟ್ಳಾ ಆಕೆ..?

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಯಲ್ಲಿ ಈಗ ಲೀಲಾ ಮನೆಯಲ್ಲಿ ದುಃಖ ತುಂಬಿದೆ. ಹಿಟ್ಲರ್ ಮನದಲ್ಲಿ ಗೊಂದಲ ಶುರುವಾಗಿದೆ. ಲೀಲಾ ಅವರ ತಂದೆ ಅಂತ್ಯಾಚಾರ ಮಾಡಿರಲು ಸಾಧ್ಯವಿಲ್ಲ. ಸತ್ಯ ಬೇರೆಯೇ ಇದೆ ಎಂದು ಆರೋಪ ಮಾಡಿದ ಹುಡುಗಿಯನ್ನು ವಿಚಾರಿಸಲು ಎಜೆ ಮುಂದಾಗಿದ್ದಾನೆ.

  ಹಿಟ್ಲರ್ ಮನೆಗೆ ಆ ಹುಡುಗಿ ಬಂದಿದ್ದು, ದುರ್ಗಾಗೆ ಟೆನ್ಷನ್ ಶುರುವಾಗಿದೆ. ಯಾಕೆ ಬಂದಿದ್ದಾಳೆ? ಸತ್ಯವನ್ನೆಲ್ಲಾ ಹೇಳಿ ಬಿಡುತ್ತಾಳಾ ಎಂಬ ಭಯ ಶುರುವಾಗಿದೆ. ಆದರೂ ಅದನ್ನು ಪದ್ಮ ಹಾಗೂ ಲಕ್ಷ್ಮೀ ಬಳಿ ತೋರಿಸಿಕೊಳ್ಳುತ್ತಿಲ್ಲ. ದುರ್ಗಾ ಜೊತೆಗೆ ಲಕ್ಷ್ಮೀ ಹಾಗೂ ಪದ್ಮ ಕೂಡ ಹೆದರಿದ್ದಾರೆ.

  ಸುಳ್ಳಿನ ಜಾಡು ಹಿಡಿದು ಹೋದ ಎಜೆಗೆ ಸತ್ಯ ಗೊತ್ತಾಗುತ್ತಾ? ಬಯಲಾಗುತ್ತಾ ದುರ್ಗಾ ಮುಖವಾಡ?ಸುಳ್ಳಿನ ಜಾಡು ಹಿಡಿದು ಹೋದ ಎಜೆಗೆ ಸತ್ಯ ಗೊತ್ತಾಗುತ್ತಾ? ಬಯಲಾಗುತ್ತಾ ದುರ್ಗಾ ಮುಖವಾಡ?

  ಹಿಟ್ಲರ್ ಮನೆಗೆ ಬಂದಿರುವ ಹುಡುಗಿ. ನ್ಯಾಯ ಕೇಳೋಣ. ಅವರಿಂದ ಏನಾದರೂ ಸಿಕ್ಕರೆ ಲಾಭ ಮಾಡಿಕೊಳ್ಳೋಣ ಎಂಬ ಆಲೋಚನೆಯಲ್ಲಿ ಬಂದಿದ್ದಾಳೆ. ಆದರೆ ಎಜೆ ವಿಚಾರಣೆ ನಡೆಸಲು ಕರೆಸಿದ್ದಾನೆ. ತಾನು ಸುಳ್ಳು ಹೇಳಿರುವುದು ಎಜೆಗೆ ಗೊತ್ತಾಗಿದೆ ಎಂಬುದು ಆಕೆಗೆ ತಿಳಿದಿರುವುದಿಲ್ಲ

  ಎಜೆ ಬಳಿ ಗೋಳು ಹೇಳಿಕೊಂಡ ಸಂತ್ರಸ್ತೆ!

  ಎಜೆ ಬಳಿ ಗೋಳು ಹೇಳಿಕೊಂಡ ಸಂತ್ರಸ್ತೆ!

  ಸಂತ್ರಸ್ತ ಯುವತಿ ಎಜೆ ಬಳಿ ಬಂದು ನನಗೆ ಎಲ್ಲೂ ತಲೆ ಎತ್ತಿಕೊಂಡು ಓಡಾಡಲು ಆಗುತ್ತಿಲ್ಲ. ಎಜೆ ಮನೆಯಲ್ಲಿ ನ್ಯಾಯಕ್ಕೆ ಕಡಿಮೆಯಿಲ್ಲ ಎನ್ನುತ್ತಾರೆ. ಅಂತಹದ್ದರಲ್ಲಿ ನಿಮ್ಮ ಮನೆಯಿಂದಲೇ ನನಗೆ ಅನ್ಯಾಯವಾಗಿದೆ. ನೀವೇ ನನಗೆ ನ್ಯಾಯ ಕೊಡಿಸಬೇಕು. ನಿಮ್ಮನ್ನೇ ನಂಬಿ ಬಂದಿದ್ದೇನೆ. ಹೊರಗಡೆ ಅಷ್ಟೇ ಅಲ್ಲ, ಮನೆಯವರ ಬಳಯೂ ತಲೆ ಎತ್ತಿ ಓಡಾಡುವುದಕ್ಕೆ ಆಗುತ್ತಿಲ್ಲ. ನನಗೆ ಅನ್ಯಾಯವಾಗಿದೆ ಎಂದು ಹೇಳುತ್ತಾಳೆ.

  ಎಜೆ ನಡವಳಿ ಹೀಗೇಕೆ? ಮನೆ ಬಿಟ್ಟು ಹೋಗ್ತಾಳಾ ಲೀಲಾ?ಎಜೆ ನಡವಳಿ ಹೀಗೇಕೆ? ಮನೆ ಬಿಟ್ಟು ಹೋಗ್ತಾಳಾ ಲೀಲಾ?

  ಖಡಕ್ ವಾರ್ನಿಂಗ್ ಕೊಡುವ ಎಜೆ!

  ಖಡಕ್ ವಾರ್ನಿಂಗ್ ಕೊಡುವ ಎಜೆ!

  ಎಜೆ ಮಾತು ಶುರು ಮಾಡುತ್ತಲೇ ಆಕೆಗೆ ವಾರ್ನಿಂಗ್ ಕೊಡುತ್ತಾನೆ. ನನ್ನ ಬಗ್ಗೆ, ನಮ್ಮ ಮನೆಯ ಬಗ್ಗೆ ಇಷ್ಟು ತಿಳಿದುಕೊಂಡಿರುವ ನೀನು, ತಪ್ಪು ಮಾಡಿದರೆ, ಸುಳ್ಳು ಹೇಳಿದರೆ ಯಾವ ರೀತಿಯಲ್ಲಿ ಶಿಕ್ಷೆ ಕೊಡುತ್ತೇನೆ ಎಂದು ಕೂಡ ಅರ್ಥ ಮಾಡಿಕೊಂಡಿರಬೇಕು. ಹಾಗೇನಾದರೂ ತಪ್ಪಾಗಿದ್ದರೆ, ನಿನ್ನ ಮುಖದಲ್ಲಿನ ನಗುವಿಗೆ ರಿಟೈರ್ಮೆಂಟ್ ಕೊಟ್ಟು, ಜೀವನದ ನೆಮ್ಮದಿಯನ್ನು ಪೋಸ್ಟ್ ಮಾರ್ಟಂ ಮಾಡಿ, ನಿನ್ನ ಜೀವನನಾ ಭಯ ಅನ್ನೋದಕ್ಕೆ ಅಡ್ರೆಸ್ ಮಾಡಿ, ನರಕದ ಲ್ಯಾಂಡ್ ಮಾರ್ಕ್ ಮಾಡಿ ಬಿಡುತ್ತೇನೆ ಎಂದು ವಾರ್ನಿಂಗ್ ಕೊಡುತ್ತಾನೆ.

  ಎಜೆ ಎದುರು ಸತ್ಯ ಬಾಯ್ಬಿಟ್ಟ ಮಹಿಳೆ!

  ಎಜೆ ಎದುರು ಸತ್ಯ ಬಾಯ್ಬಿಟ್ಟ ಮಹಿಳೆ!

  ವಾರ್ನಿಂಗ್ ಕೊಡುವ ಎಜೆ, ನೀರು ಕುಡಿಯುವ ಕೆಲಸ ಮಾಡಿದರೂ ತಪ್ಪಿಲ್ಲ. ಆದರೆ ಮಣ್ಣು ತಿನ್ನುವ ಕೆಲಸ ಮಾಡಿದ್ದರೆ, ಈ ಎಜೆ ಮಣ್ಣು ಮುಕ್ಕಿಸುವವರೆಗೂ ಬಿಡುವುದಿಲ್ಲ. ನಿನಿಗೆ ಕೊನೆಯ ಅವಕಾಶವನ್ನು ಕೊಡುತ್ತಿದ್ದೇನೆ. ನೀನು ತಪ್ಪು ಮಾಡಿದ್ದರೆ ಈಗಲೇ ಒಪ್ಪಿಕೊಂಡು ಬಿಡು ಎಂದು ಹೇಳುತ್ತಾನೆ. ಆಕೆ ನಡುಗುತ್ತಿರುತ್ತಾಳೆ. ಆಗ ಎಜೆ ಏರು ಧ್ವನಿಯಲ್ಲಿ ಕೇಳುತ್ತಾನೆ. ಆಗ ಆಕೆ ತಪ್ಪು ಮಾಡಿದೀನಿ ಸರ್ ಎನ್ನುತ್ತಾಳೆ.

  ಸತ್ಯ ವಿರುದ್ಧ ರೊಚ್ಚಿಗೆದ್ದ ಕಾರ್ತಿಕ್ ತಾಳಿ ಕಟ್ಟುವಾಗ ಏನ್ ಮಾಡ್ತಾನೋಸತ್ಯ ವಿರುದ್ಧ ರೊಚ್ಚಿಗೆದ್ದ ಕಾರ್ತಿಕ್ ತಾಳಿ ಕಟ್ಟುವಾಗ ಏನ್ ಮಾಡ್ತಾನೋ

  ಸತ್ಯ ಮುಚ್ಚಿಡಲು ದುರ್ಗಾ ಪ್ರಯತ್ನ!

  ಸತ್ಯ ಮುಚ್ಚಿಡಲು ದುರ್ಗಾ ಪ್ರಯತ್ನ!

  ಆಕೆ ತಾನೇ ತಪ್ಪು ಮಾಡಿದ್ದು ಎಂದಾಗ, ಎಜೆ ಹತ್ತು ಜನರ ಮುಂದೆ ಯಾರ ಮಾನ ಕಳೆದೋ ಅಷ್ಟೇ ಜನರ ಮುಂದೆ ಅವರ ಕಾಲಿಗೆ ಬಿದ್ದು, ನಿನ್ನದೇ ತಪ್ಪು ಅಂತ ಒಪ್ಪಿಕೊಳ್ಳಬೇಕು. ಆಮೇಲೆ ನಿನಗೆ ಏನು ಮಾಡಬೇಕು ಎಂದು ನಿರ್ಧಾರ ಮಾಡುತ್ತೀನಿ ಎನ್ನುತ್ತಿದ್ದಂತೆಯೇ, ದುರ್ಗಾ ಬಂದು ಅವಳ ಕಪಾಳಕ್ಕೆ ಹೊಡೆಯುತ್ತಾಳೆ. ಸತ್ಯ ಹೇಳಬಾರದು ಎಂದು ಕಣ್ಣ ಸನ್ನೆ ಮಾಡುತ್ತಾಳೆ. ಆಗ ಎಜೆ ದುರ್ಗಾಳನ್ನು ತಡೆದು ಆಕೆಯನ್ನು ಪ್ರಶ್ನೆ ಮಾಡುತ್ತಾನೆ. ಆಕೆ ಹಣಕ್ಕಾಗಿ ಈ ಕೆಲ ಮಾಡಿದೆ ಎಂದು ಹೇಳುತ್ತಾಳೆ. ಆಗ ಎಜೆ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದಾಗ ಆಕೆ ಕಾಲಿಗೆ ಬೀಳುತ್ತಾಳೆ. ಇತ್ತ ಲೀಲಾ ಮನೆ ಬಾಗಿಲಿಗೆ ಪೊಲೀಸರು ಬರುತ್ತಾರೆ.

  English summary
  Hitler Kalyana Serial Written Update On May 20st Episode, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X