ಅತ್ತೆ ಲೀಲಾ ಲೆಕ್ಕಾಚಾರ ಉಲ್ಟಾ: ಸೊಸೆ ದುರ್ಗಾ ಬಿಗ್ ಶಾಕ್!

By ಪ್ರಿಯಾ ದೊರೆ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಈಗ ಲೀಲಾ ಸೊಸೆ ದುರ್ಗಾ ಮಾಡಿದ ತಪ್ಪನ್ನು ಸಾಕ್ಷಿ ಸಮೇತ ಎಜೆ ಎದುರು ತೋರಿಸಬೇಕಿದೆ. ಇದಕ್ಕಾಗಿ ಲೀಲಾ ತುಂಬಾ ಕಷ್ಟ ಪಟ್ಟು ಮನೆಗೆ ಬಂದು ದೇವಸ್ಥಾನಕ್ಕೆ ನೀಡಬೇಕಿದ್ದ ಒಡವೆಗಳನ್ನು ತೆಗೆದುಕೊಂಡ ಹೋದ ಕಳ್ಳನನ್ನು ಹಿಡಿದಿದ್ದಾರೆ. ಎಜೆ ಮುಂದೆ ಕಳ್ಳನನ್ನು ಕರೆದುಕೊಂಡು ಬಂದು ನಿಲ್ಲಿಸಿದ್ದಾಳೆ.

ಕಳ್ಳನಿಗೆ ಸತ್ಯ ಹೇಳುವಂತೆ ಲೀಲಾ ಹೇಳಿದ್ದು, ಕಳ್ಳ ಮನೆಯಲ್ಲಿ ಕಷ್ಟ. ಹಣದ ಆಸೆಗಾಗಿ ದುರ್ಗಾ ಅವರು ಹೇಳಿದಂತೆ ಮಾಡಿದೆ. ಮನೆಗೆ ಬಂದು ಲೀಲಾ ಮೇಡಂ ಬಳಿ ದೇವಸ್ಥಾನದವರು ಎಂದು ಹೇಳಿ ಒಡವೆಗಳನ್ನು ತೆಗೆದುಕೊಂಡು ಹೋದೆ. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಹೇಳುತ್ತಾನೆ.

ಆಗ ಅಜ್ಜಿ ದೇವಸ್ಥಾನದ ಒಡವೆಗಳನ್ನು ಕಳ್ಳತನ ಮಾಡಿದ್ಯಲ್ಲ ಒಳ್ಳೆಯದಾಗುತ್ತಾ ಎಂದು ಬೈಯುತ್ತಾರೆ. ಆಗ ಲೀಲಾ ಇರಿ ಅಜ್ಜಿ ಈ ಕೆಲಸನ ಇವರು ಮಾಡಿದ್ದಲ್ಲ. ಮಾಡಿಸಿದವರು ತುಂಬಾ ದೊಡ್ಡ ವ್ಯಕ್ತಿ. ಅವರ ಬಗ್ಗೆ ಇವನೇ ಹೇಳುತ್ತಾನೆ ಕೇಳಿ ಎಂದಾಗ, ಕಳ್ಳ ಸತ್ಯವನ್ನೆಲ್ಲಾ ಬಾಯ್ಬಿಟ್ಟು ಹೇಳುತ್ತಾನೆ.

Hitler Kalyana Serial Written Update On May 4th Episode

ಈ ಮಾತಿಗೆ ಶಾಕ್ ಆಗಿ ಎಜೆ, ದುರ್ಗಾ ಏನಿದೆಲ್ಲಾ ಎಂದು ಕೇಳುತ್ತಾನೆ. ಆಗ ದುರ್ಗಾ, ಎಜೆ ಕಾಲಿಗೆ ಬಿದ್ದು, ಇನ್ನು ನಾನು ನನ್ನನ್ನು ಪ್ರೂವ್ ಮಾಡಿಕೊಳ್ಳುವುದು ಸಾಧ್ಯವಿಲ್ಲ. ನಾನು ತಪ್ಪು ಮಾಡಿಬಿಟ್ಟಿದ್ದೀನಿ. ನನ್ನ ತಪ್ಪನ್ನು ನಾನು ಒಪ್ಪಿ ಕೊಳ್ಳುತ್ತೇನೆ. ಮನೆ ಬಿಟ್ಟು ಹೋಗುತ್ತೇನೆ. ಈ ಮನೆಗೆ ಸೊಸೆಯಾಗಿ ಬಂದು ಮೊದಲನೇ ತಪ್ಪ ಮಾಡಿದೆ. ಜವಾಬ್ದಾರಿ ಒಪ್ಪಿಕೊಂಡು ಎರಡನೇ ತಪ್ಪು ಮಾಡಿದೆ. ಲೀಲಾ ಮನೆಗೆ ಬಂದಮೇಲೂ ನಾನು ನಿಮ್ಮ ಮಾತಿಗೆ ಬೆಲೆ ಕೊಟ್ಟು ಮೂರನೇ ತಪ್ಪು ಮಾಡಿದೆ. ಇಷ್ಟಕ್ಕೋಸ್ಕರ ಲೀಲಾ ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ನನ್ನ ಮೇಲೆ ಗೂಬೆ ಕೂರಿಸುತ್ತಾರೆ ಎಂದು ಕೊಂಡಿರಲಿಲ್ಲ. ನಾನು ಎಲ್ಲಾ ಬಿಟ್ಟು ಹೋಗುತ್ತೀನಿ, ಈ ಮನೆ, ಆಸ್ತಿ ಏನೂ ಬೇಡ ಎನ್ನುತ್ತಾಳೆ.

Hitler Kalyana Serial Written Update On May 4th Episode

ಆಗ ಲೀಲಾ, ತಪ್ಪು ಮಾಡಿರೋದನ್ನುಒಪ್ಪಿಕೊಳ್ಳುವುದು ಬಿಟ್ಟು, ಈ ಗಿಮಿಕ್ ಮಾಡೋದನ್ನು ನಿಲ್ಲಿಸು ಎನ್ನುತ್ತಾಳೆ. ಇದಕ್ಕೆ ದುರ್ಗಾ, ನನಗೆ ಈ ಗಿಮಿಕ್ ಮಾಡೋದೆಲ್ಲಾ ಗೊತ್ತಿಲ್ಲ ಎಜೆ. ನನ್ನ ಗುರು ನೀವು, ನೀವು ನನಗೆ ಈ ಮನೆಯಲ್ಲಿ ಒಗ್ಗಟ್ಟಿನಿಂದ ಬದುಕುವುದನ್ನು ಹೇಳಿಕೊಟ್ಟಿದ್ದೀರಾ. ಸೋತು ಬದುಕುವುದನ್ನು ಕಲಿಸಿದ್ದೀರಾ. ಆದರೆ ಈ ಕಳ್ಳಿ ಅನ್ನೋ ಪಟ್ಟ ಹೊತ್ತುಕೊಂಡು. ನಾನು ಈ ಮನೆಯಲ್ಲಿ ಇರೋದಿಲ್ಲ. ದಯವಿಟ್ಟು ನನ್ನನ್ನು ಎಲ್ಲಿಂದ ಹೋಗೋದಕ್ಕೆ ಅವಕಾಶ ಮಾಡಿಕೊಡಿ. ಮದುವೆಗೂ ಮುಂಚೆ ನನ್ನ ದುರ್ಗಾ ಅಂತ ಕರೆಯುತ್ತಿದ್ದವರು. ಈಗ ನನ್ನನ್ನು ಎಜೆ ಸೊಸೆ ಅಂತ ಗುರುತಿಸುತ್ತಾರೆ. ನಾನು ಈ ಮನೆಯಲ್ಲಿ ನಿಯತ್ತಾಗಿ, ಈ ಮನೆಗೋಸ್ಕರ ದುಡಿದಿದ್ದೀನಿ. ನಾನು ಇಲ್ಲಿರೋದಿಲ್ಲ ಎಂದು ಹೇಳುತ್ತಾಳೆ.

ಇನ್ನು ಲೀಲಾಗೆ ನೀವು ಇಷ್ಟು ಕೀಳು ಮಟ್ಟಕ್ಕೆ ಇಳಿದು ಸುಳ್ಳು ಸಾಕ್ಷಿಯನ್ನು ಕರೆದುಕೊಂಡು ಬರುತ್ತೀರಾ ಎಂದುಕೊಂಡಿರಲಿಲ್ಲ ಎಂದು ಮಾತನಾಡುತ್ತಾಳೆ. ಆಗ ಕಳ್ಳ ಇದೆಲ್ಲಾ ಲೀಲಾ ಅವರು ನನಗೆ ಹಣ ಕೊಟ್ಟು ಸುಳ್ಳು ಸಾಕ್ಷಿ ಹೇಳುವುದಕ್ಕೆ ಹೇಳಿದರು. ಆದರೆ, ನಾನು ಹೇಳೋ ಸುಳ್ಳು ಸಾಕ್ಷಿಯಿಂದ ದುರ್ಗಾ ಮೇಡಂ ಮನೆ ಬಿಟ್ಟು ಹೋಗುತ್ತಿದ್ದಾರೆ ಎಂದು ಹೇಳುತ್ತಾನೆ.

ಆಗ ಎಜೆ ಲೀಲಾಳಿಗೆ ಬೈಯುತ್ತಾನೆ. ಆದರೆ, ಜಗ್ಗದ ಲೀಲಾ ಇಲ್ಲ ನನ್ನ ಹತ್ತಿರ ಇನ್ನು ಒಂದು ಸಾಕ್ಷಿ ಇದೆ ಎಂದು ಹೇಳುತ್ತಾಳೆ. ಸೀದಾ ದುರ್ಗಾ ರೂಮಿಗೆ ಹೋಗುತ್ತಾಳೆ. ಅಲ್ಲಿ ದುರ್ಗಾಳನ್ನು ಕಬೋರ್ಡ್ ತೆಗೆಸಿ, ಡ್ರಾ ನಲ್ಲಿ ಒಡವೆಗಳ ಬಾಕ್ಸ್ ಇಟ್ಟಿದ್ದಾಳೆ ಎಂದು ತೋರಿಸುತ್ತಾಳೆ. ಆದರೆ ಅಲ್ಲಿ ಡ್ರಾ ಖಾಲಿಯಾಗಿರುತ್ತದೆ. ಮುಂದೆ ಏನಾಗುತ್ತದೆ ಎಂದು ಇಂದಿನ ಸಂಚಿಕೆಯಲ್ಲಿ ರಿವೀಲ್ ಆಗುತ್ತೆ.

More from Filmibeat

English summary
Hitler Kalyana Serial Written Update On May 4th Episode, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X