ಸೊಸೆ ದುರ್ಗಾ ಮೊಸಳೆ ಕಣ್ಣೀರು, ಅತ್ತೆ ಲೀಲಾಗೆ ಮತ್ತೆ ಸಂಕಟ!

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾಳನ್ನು ಸೋಲಿಸಬೇಕೆಂದು ಪಣ ತೊಟ್ಟಿರುವ ದುರ್ಗಾ ಮೊಸಳೆ ಕಣ್ಣೀರು ಹಾಕಿದ್ದಾಳೆ. ಎಜೆ ಮುಂದೆ ಅತ್ತು ಕರೆದು, ಲೀಲಾ ಗಿಮಿಕ್ ಮಾಡಿದ್ದಾಳೆ ಎಂಬಂತೆ ನಾಟಕವಾಡಿದ್ದಾಳೆ. ದುರ್ಗಾ ಕಣ್ಣೀರಿಗೆ ಸೋತ ಎಜೆ ಮೋಸ ಹೋಗಿದ್ದು, ಲೀಲಾಳನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಲೀಲಾ ಮನೆಯವರನ್ನೆಲ್ಲಾ ದುರ್ಗಾ ರೂಮಿಗೆ ಕರೆದುಕೊಂಡು ಬಂದು, ವಾರ್ಡೋರ್ಬ್ ಓಪನ್ ಮಾಡುವಂತೆ ಹೇಳಿದ್ದಾಳೆ. ದುರ್ಗಾ ಡ್ರಾ ಓಪನ್ ಮಾಡಿದಾಗ ಅಲ್ಲಿ ಒಡವೆಯ ಡಬ್ಬಿ ಇರುವುದಿಲ್ಲ. ಆದರೆ ಇದನ್ನು ಗಮನಿಸದ ಲೀಲಾ, ನೋಡಿ, ಒಡವೆ ಬಾಕ್ಸ್ ನೋಡಿ ನಿಮಗೆಲ್ಲಾ ಶಾಕ್ ಆಗುತ್ತಿದ್ಯಾ..? ನನಗೂ ಹೀಗೆ ಶಾಕ್ ಆಗಿತ್ತು ಎನ್ನುತ್ತಾಳೆ.

ಆದರೆ ಅಜ್ಜಿ, ಲೀಲಾ ಡ್ರಾ ಖಾಲಿ ಇದೆ. ಅಲ್ಲಿ ಏನೂ ಇಲ್ಲವಲ್ಲಮ್ಮ ಎನ್ನುತ್ತಾಳೆ. ಆಗ ಲೀಲಾ ಶಾಕ್ ಆಗಿ ಡ್ರಾ ನೋಡಿದರೆ ಖಾಲಿ ಇರುತ್ತದೆ. ಒಡವೆಯೆಲ್ಲಾ ಎಲ್ಲಿ ಬಚ್ಚಿಟ್ಟಿದ್ದೀರಾ ಎಂದು ದುರ್ಗಾಳನ್ನು ಕೇಳುತ್ತಾಳೆ. ಇದೇ ಸಂದರ್ಭವನ್ನೇ ಲಾಭ ಮಾಡಿಕೊಂಡ ದುರ್ಗಾ ಮತ್ತೆ ನಾಟಕ ಶುರು ಮಾಡುತ್ತಾಳೆ.

ಮತ್ತೇ ನಾಟಕ ಶುರು ಮಾಡಿದ ದುರ್ಗಾ!

ಮತ್ತೇ ನಾಟಕ ಶುರು ಮಾಡಿದ ದುರ್ಗಾ!

ಸಾಕು ಮಾಡಿ, ನನಗೆ ಇನ್ನು ಅಪವಾದ ಹೊತ್ತುಕೊಳ್ಳಲು ಸಾಧ್ಯವಿಲ್ಲ. ಇನ್ನು ಸಮಾಧಾನವಾಗಿಲ್ಲ ಅಂದರೆ ಈ ರೂಮ್ ಅನ್ನು ಸಂಪೂರ್ಣವಾಗಿ ಜಾಲಾಡಿ ಪರವಾಗಿಲ್ಲ. ಆದರೆ ನನ್ನನ್ನು ಮಾತ್ರ ಈ ಮನೆಯಿಂದ ಕಳಿಸಿಕೊಡಿ. ನಾನು ನಮ್ಮ ಮನೆಯಲ್ಲಿದ್ದೀನಾ ಇಲ್ಲವೇ ಬೇರೆಯವರ ಮನೆಯಲ್ಲಿದ್ದೀನಾ ಅನ್ನೋ ಅನುಮಾನವಾಗುತ್ತಿದೆ. ಮಾಡದೆ ಇರುವ ತಪ್ಪಿಗೆ ಇನ್ನೂ ಏನೆಲ್ಲಾ ಕೇಳಬೇಕು ಎಂದು ಬೇಸರ ಮಾಡಿಕೊಳ್ಳುತ್ತಾಳೆ.

ಲೀಲಾ ಕಡೆಗೆ ಬೆಟ್ಟು ಮಾಡಿದ ಎಜೆ!

ಲೀಲಾ ಕಡೆಗೆ ಬೆಟ್ಟು ಮಾಡಿದ ಎಜೆ!

ಆಗ ಎಜೆ, ಮುಗೀತಾ ನಿನ್ನ ಸಾಕ್ಷಿಗಳೆಲ್ಲವೂ, ಅಥವಾ ಇನ್ನೂ ಏನಾದರೂ ಬಾಕಿ ಇದಿಯಾ.? ನೀನು ಕರೆದುಕೊಂಡು ಬಂದ ಸಾಕ್ಷಿ ಸುಳ್ಳಾಯ್ತು. ಈಗ ಈ ವಾರ್ಡ್ರೋಬ್ ಡ್ರಾನಲ್ಲೂ ಏನೂ ಇಲ್ಲ. ಈಗ ಒಡವೆ ಕಳೆದು ಹೋಗಿದ್ದು ನಿನ್ನಿಂದಲೇ ಅಂತ ಒಪ್ಪಿಕೊಳ್ಳುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಲೀಲಾ, ಇಲ್ಲ, ಇಲ್ಲ, ಇಲ್ಲ. ನಾನು ಸಾಕ್ಷಿ ಸಮೇತ ಪ್ರೂವ್ ಮಾಡುವುದಕ್ಕೆ ಆಗದೇ ಇರಬಹುದು. ಆದರೆ ಒಡವೆ ಕಳ್ಳತನ ಮಾಡಿಸಿದ್ದು ಮಾತ್ರ ನಾನಲ್ಲ, ದುರ್ಗಾನೇ ಎಂದು ಕಿರುಚುತ್ತಾಳೆ. ನನ್ನ ಕೈಯಲ್ಲಿ ದುರ್ಗಾ ತಪ್ಪು ಮಾಡೋಕೆ ಆಗಿಲ್ಲ ಅಂತ ಒಪ್ಪಿಕೊಳ್ಳೋದಕ್ಕೆ ಆಗೋದಿಲ್ಲ. ಆದರೆ, ಇವರ ತಪ್ಪನ್ನು ಪ್ರೂವ್ ಮಾಡುವುದಕ್ಕೆ ಆಗೊದಿಲ್ಲ.

ದುರ್ಗಾ ಸತ್ಯ ಮುಚ್ಚಿಡಲು ಹರಸಾಹಸ!

ದುರ್ಗಾ ಸತ್ಯ ಮುಚ್ಚಿಡಲು ಹರಸಾಹಸ!

ನಿಮ್ಮ ಬುದ್ಧಿವಂತಿಕೆ ನನ್ನಲ್ಲಿಲ್ಲ. ಆದರೆ, ಸತ್ಯ ಯಾವತ್ತಿದ್ದರೂ ಗೊತ್ತಾಗೇ ಗೊತ್ತಾಗುತ್ತೆ. ನಾನು ಹೊರಡುತ್ತೇನೆ. ಇಷ್ಟು ದಿನ ನಾನು ಮಾಡುತ್ತಿದ್ದ ಎಡವಟ್ಟುಗಳಿಂದ ಶಿಕ್ಷೆಯಾಗುತ್ತಿತ್ತು. ಇವತ್ತು ನಾನು ಮಾಡದ ತಪ್ಪಿಗೆ ಮನೆ ಬಿಟ್ಟು ಹೋಗುತ್ತಿದ್ದೇನೆ ಎಂದು ಲೀಲಾ ಅಳುತ್ತಲೇ ಮನೆಯಿಂದ ಹೊರಡುತ್ತಾಳೆ. ಆಗ ಅಜ್ಜಿ ತಡೆದಾಗ ಎಜೆ ಅವಳು ಇಲ್ಲೇ ಇರಬೇಕು ಅಂದರೆ ದುರ್ಗಾ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಹೇಳುತ್ತಾನೆ. ಅದಕ್ಕೆ ಲೀಲಾ ನಾನು ಸೋತಿಲ್ಲ. ನಾನು ಕ್ಷಮೆ ಕೇಳಲ್ಲ ಎನ್ನುತ್ತಾಳೆ. ಆಗ ದುರ್ಗಾ, ಲೀಲಾಳನ್ನು ತಡೆಯುತ್ತಾಳೆ.

ಅತ್ತೆಯನ್ನು ತಡೆದ ದುರ್ಗಾ ಹೊಸ ನಾಟಕ!

ಅತ್ತೆಯನ್ನು ತಡೆದ ದುರ್ಗಾ ಹೊಸ ನಾಟಕ!

ಈ ಮನೆ ಸೊಸೆ ನೀವು. ಮನೆ ಬಿಟ್ಟು ಹೋದರೆ ಎಜೆ ಮರಿಯಾದೆ ಏನಾಗಬೇಡ. ದಯವಿಟ್ಟು ನಾನೇ ನಿಮ್ಮ ಕಾಲು ಹಿಡಿದು ಬೇಡಿಕೊಳ್ಳುತ್ತೇನೆ. ನಾನು ಎಜೆ ನಾ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಹೇಳುವ ದುರ್ಗಾ, ಎಜೆ ಬಳಿ ಹೋಗಿ ಕೈ ಮುಗಿದು ಕೇಳಿಕೊಳ್ಳುತ್ತಾಳೆ. ಎಜೆ ಲೀಲಾಳನ್ನು ಮನೆಯಲ್ಲಿರಲು ಹೇಳುತ್ತಾನೆ. ನಿನಗೆ ಮತ್ತೆ ಈ ಮನೆಯಲ್ಲಿ ಜಾಗ ಸಿಕ್ಕಿದೆ ಅಂದರೆ ಅದು ದುರ್ಗಾ ಕೊಟ್ಟ ಭಿಕ್ಷೆ ಎಂದು ಹೇಳಿ ಹೊರಡುತ್ತಾನೆ. ಆಗ ಸುಮ್ಮನಿರದ ದುರ್ಗಾ ನಿಮಗೆ ದೃಷ್ಟಿ ತೆಗೆಯುತ್ತೇನೆ ಎಂದು ಹೇಳಿ ಲೀಲಾ ಮುಖಕ್ಕೆ ಮಸಿ ಬಳಿದು ಹೋಗುತ್ತಾಳೆ. ಲೀಲಾ ವಾಪಸ್ ಮನೆ ಒಳಗೆ ಹೋಗುತ್ತಾಳೆ.

More from Filmibeat

English summary
Hitler Kalyana Serial Written Update On May 5th Episode, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X