For Quick Alerts
  ALLOW NOTIFICATIONS  
  For Daily Alerts

  ದುರ್ಗಾ ಪ್ಲ್ಯಾನ್ ಠುಸ್: ಅತ್ತೆ ಸೇವೆ ಮಾಡಿದ ಸೊಸೆಯಂದಿರು!

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಇದರಲ್ಲಿನ ಸೊಸೆಯಂದಿರ ಪಾತ್ರಗಳು ವೀಕ್ಷಕರ ಮನಗೆದ್ದಿದೆ. ಅವರ ಎಕ್ಸ್‌ಪ್ರೆಷನ್, ಡೈಲಾಗ್ಸ್‌ ಎಲ್ಲವೂ ಸೊಗಸಾಗಿ ಮೂಡಿ ಬರ್ತಿದೆ. ಇನ್ನು ಹೊಸ ಪ್ರತಿಭೆ ಮಲೈಕಾ ವಾಸುಪಾಲ್ ಕೂಡ ಲೀಲಾ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ತುಂಬಾ ನ್ಯಾಚುರಲ್ ಆಗಿ ನಟಿಸುತ್ತಿದ್ದಾರೆ.

  ಸದ್ಯ ಧಾರಾವಾಹಿಯಲ್ಲಿ ದುರ್ಗಾ ಮತ್ತು ಸರಸ್ವತಿ ಸೇರಿಕೊಂಡು ಲೀಲಾಳನ್ನು ಮನೆಯ ಹೊರಗೆ ಲಾಕ್ ಮಾಡಿದ್ದಾರೆ. ಕೌಸಲ್ಯ ಮನೆಯಲ್ಲಿ ತಾವು ಅನುಭವಿಸಿದ ನೋವನ್ನು ಲೀಲಾ ಅನುಭವಿಸಬೇಕು ಎಂದು ಹೀಗೆ ಮಾಡಿದ್ದಾರೆ. ಇಬ್ಬರೂ ಲೀಲಾ ಚಳಿಯಲ್ಲಿ ನಡುಗುತ್ತಿರುವುದನ್ನು ನೋಡುತ್ತಾ ಮಜಾ ಮಾಡುತ್ತಿದ್ದಾರೆ.

  ಚಳಿಗೆ ಕುಸಿದು ಬಿದ್ದ ಲೀಲಾ, ರಕ್ಷಣೆಗೆ ಬಂದ ಏಜೆ!ಚಳಿಗೆ ಕುಸಿದು ಬಿದ್ದ ಲೀಲಾ, ರಕ್ಷಣೆಗೆ ಬಂದ ಏಜೆ!

  ಲೀಲಾಗೆ ಚಳಿ ತಡೆಯಲಾರದೆ ಮೂಗಿನಲ್ಲಿ ರಕ್ತ ಬರುತ್ತಿದೆ. ಅಲ್ಲದೇ, ಬಾಲ್ಕನಿಯಲ್ಲೇ ನೆಲಕ್ಕುರುಳಿ ನಡುಗುತ್ತಿದ್ದಾಳೆ. ಲ್ಯಾಪ್‌ ಟಾಪ್‌ನಲ್ಲಿ ಇದನ್ನೆಲ್ಲಾ ಸರಸ್ವತಿ ಹಾಗೂ ದುರ್ಗಾ ನೋಡಿ ಖುಷಿ ಪಡುತ್ತಿದ್ದಾರೆ. ಇದು ಎಜೆಗೆ ಗೊತ್ತಾಗುತ್ತಾ ಎಂಬುದೇ ಈಗ ಕುತೂಹಲಕಾರಿ ವಿಷಯ.

  ದುರ್ಗಾ ಪ್ಲ್ಯಾನ್ ಠುಸ್

  ದುರ್ಗಾ ಪ್ಲ್ಯಾನ್ ಠುಸ್

  ಮಲಗಿದ್ದ ಎಜೆಗೆ ಎಚ್ಚರವಾಗಿದೆ. ಪಕ್ಕದಲ್ಲಿ ಲೀಲಾ ಇಲ್ಲದ್ದನ್ನು ಕಂಡ ಎಜೆ, ಲೀಲಾ ಎಲ್ಲಿ ಎಂದು ಹುಡುಕಾಡಲು ಶುರು ಮಾಡಿದ್ದಾನೆ. ಲೀಲಾ ಮಲಗುವ ಸೋಫಾ ಮೇಲೂ ಇರುವುದಿಲ್ಲ. ಫೋನ್ ಕೂಡ ಅಲ್ಲೇ ಬಿಟ್ಟು ಹೋಗಿದ್ದಾಳೆ. ಇದನ್ನೆಲ್ಲಾ ನೋಡಿದ ಎಜೆ ಲೀಲಾ, ಲೀಲಾ ಎಂದು ಕರೆಯುತ್ತಾನೆ. ಎಲ್ಲೂ ಕಾಣಿಸುವುದಿಲ್ಲ. ಬಳಿಕ ದುರ್ಗಾ ರೂಮ್‌ಗೆ ಎಜೆ ಬಂದು ಲೀಲಾ ಎಲ್ಲೂ ಕಾಣಿಸುತ್ತಿಲ್ಲ ಎಂದು ಹೇಳಿದಾಗ ದುರ್ಗಾ ಏನೋ ಸಬೂಬು ಹೇಳುತ್ತಾಳೆ. ಆದರೂ ಮನಸ್ಸು ತಡೆಯದೇ ಎಜೆ ಲೀಲಾಳನ್ನು ಬಹಳ ಹುಡುಕಾಡುತ್ತಾನೆ. ದುರ್ಗಾ ಮತ್ತು ಸರಸ್ವತಿ ನಮ್ಮ ಪ್ಲ್ಯಾನ್ ಠುಸ್ ಆಗುತ್ತಾ..? ಇಲ್ಲ ಸಕ್ಸಸ್ ಆಗುತ್ತಾ ಎಂದು ಗಾಬರಿಯಲ್ಲಿರುತ್ತಾರೆ.

  ಪುಟ್ಟಕ್ಕನ ಮಕ್ಕಳು: ಒಂದು ಗಿಫ್ಟ್‌ಗಾಗಿ ಬಾವಿಗೆ ಹಾರಿದ ಮುರುಳಿ ಮೇಷ್ಟ್ರು !ಪುಟ್ಟಕ್ಕನ ಮಕ್ಕಳು: ಒಂದು ಗಿಫ್ಟ್‌ಗಾಗಿ ಬಾವಿಗೆ ಹಾರಿದ ಮುರುಳಿ ಮೇಷ್ಟ್ರು !

  ಲೀಲಾ ಸೇವೆ ಮಾಡಿದ ಸೊಸೆಯಂದಿರು

  ಲೀಲಾ ಸೇವೆ ಮಾಡಿದ ಸೊಸೆಯಂದಿರು

  ಮನೆ ಎಲ್ಲಾ ಲೀಲಾಳನ್ನು ಹುಡುಕಾಡಿದಾಗ, ಬಾಲ್ಕನಿ ಬಾಗಿಲು ಹಾಕಿರುತ್ತದೆ. ಅದನ್ನು ನೋಡಿದ ಎಜೆ ಲೀಲಾ ಅಲ್ಲಿರುವುದನ್ನು ನೋಡುತ್ತಾನೆ. ಬಾಗಿಲ ಲಾಕ್ ತೆಗೆದು ಲೀಲಾಳನ್ನು ಎಜೆ ಎತ್ತಿಕೊಂಡು ರೂಮಿಗೆ ಬರುತ್ತಾನೆ. ಇದನ್ನು ನೋಡಿದ ದುರ್ಗಾ, ಸರಸ್ವತಿ ಬೇಸರ ಮಾಡಿಕೊಳ್ಳುತ್ತಾರೆ. ಲೀಲಾ ಕೈ ಕಾಲು ತಣ್ಣಗಾಗಿರುತ್ತದೆ. ಎಷ್ಟು ಉಜ್ಜಿದರೂ ಬಿಸಿ ಆಗುವುದಿಲ್ಲ. ಇದರಿಂದ ಹೆದರಿದ ಎಜೆ ದುರ್ಗಾ ಮತ್ತು ಸರಸ್ವತಿಯನ್ನು ರೂಮಿಗೆ ಕರೆಯುತ್ತಾರೆ. ಇಬ್ಬರೂ ಹೆದರಿಕೊಂಡು ಬರುತ್ತಾರೆ. ಆಗ ಎಜೆ ಲೀಲಾ ನಾರ್ಮಲ್ ಆಗುವವರೆಗೂ ಆಕೆಗೆ ಬಿಸಿ ಕಾವು ಕೊಡಿ ಎಂದು ಹೇಳುತ್ತಾನೆ.

  ದುರ್ಗಾಳಿಗೆ ವಾರ್ನಿಂಗ್ ಕೊಟ್ಟ ಲೀಲಾ

  ದುರ್ಗಾಳಿಗೆ ವಾರ್ನಿಂಗ್ ಕೊಟ್ಟ ಲೀಲಾ

  ಸರಸ್ವತಿ ಮತ್ತು ದುರ್ಗಾ ಬೇರೆ ದಾರಿ ಇಲ್ಲದೇ, ಲೀಲಾ ಸೇವೆ ಮಾಡುತ್ತಿರುತ್ತಾರೆ. ಲೀಲಾ ಚಳಿಯಲ್ಲಿ ನಡುಗುವುದನ್ನು ನೋಡಿಕೊಂಡು ಇರಬೇಕಿತ್ತು. ಬದಲಿಗೆ ಅವಳ ಸೇವೆ ಮಾಡುವಂತಾಗಿದೆ ಎಂದು ಇಬ್ಬರೂ ಬೇಸರ ಮಾಡಿಕೊಳ್ಳುತ್ತಾರೆ. ಆದರೆ, ವಿಧಿ ಇಲ್ಲದೇ, ಲೀಲಾ ಸೇವೆ ಮಾಡುತ್ತಿರುತ್ತಾರೆ. ಬೆಳಗ್ಗೆ ಎಲ್ಲಾ ಸರಿ ಹೋದಮೇಲೆ, ಇದೆಲ್ಲಾ ಹೇಗಾಯ್ತು ಎಂದು ಎಜೆ ಕೇಳುತ್ತಾನೆ. ಆಗ ಲೀಲಾ ಸುಳ್ಳು ಹೇಳುತ್ತಾಳೆ. ನಂತರ ಎಜೆ ಹೋದ ಮೇಲೆ ದುರ್ಗಾಗೆ ಲೀಲಾ ವಾರ್ನಿಂಗ್ ಕೊಡುತ್ತಾಳೆ. ಈ ಥರಹದ ಆಟಗಳೆಲ್ಲವನ್ನು ನನ್ನ ಬಳಿ ಇಟ್ಟುಕೊಳ್ಳಬೇಡ ಎಂದು ಹೇಳುತ್ತಾಳೆ.

  ಲೀಲಾಗೆ ಬಂದ ಆ ಫೋನ್ ಯಾವುದು..?

  ಲೀಲಾಗೆ ಬಂದ ಆ ಫೋನ್ ಯಾವುದು..?

  ಲೀಲಾ ರೂಮಿನಲ್ಲಿ ಮಲಗಿರುತ್ತಾಳೆ. ಎಜೆಯ ಮೊದಲ ಹೆಂಡತಿ ತಮ್ಮ ಎಂದು ಹೇಳಿಕೊಂಡು ನನ್ನ ಅಕ್ಕನನ್ನು ಎಜೆ ಕೊಲೆ ಮಾಡಿದ್ದಾನೆ ಎಂದು ಲೀಲಾ ಬಳಿ ಸುಳ್ಳು ಹೇಳಿರುವ ವ್ಯಕ್ತಿ ಕಾಲ್ ಮಾಡುತ್ತಿದ್ದಾನೆ. ಲೀಲಾ ನನ್ನ ಫೋನ್ ರಿಸೀವ್ ಮಾಡಬೇಕು, ಎಜೆಗೆ ಒಂದು ಗತಿ ಕಾಣಿಸಬೇಕು ಎಂದು ಒದ್ದಾಡುತ್ತಿದ್ದಾನೆ. ಈಗ ಫೋನ್ ಅನ್ನು ಎಜೆ ರಿಸೀವ್ ಮಾಡುತ್ತಾನಾ.? ಆ ವ್ಯಕ್ತಿ ಯಾರೆಂದು ಗೊತ್ತಾದರೆ ಲೀಲಾಗೆ ಏನಾಗಬಹುದು ಎಂಬುದೇ ಕುತೂಹಲವಾಗಿದೆ.

  English summary
  zee kannada serial Hitler kalyana Written Update on September 14th episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X