ಲೀಲಾಳ ಮೂವರು ಸೊಸೆಯರಿಗೆ ಕೌಸಲ್ಯ ಸವಾಲ್!

By ಪ್ರಿಯಾ ದೊರೆ

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಕೌಸಲ್ಯ ಈಗ ಫುಲ್ ಖುಷಿಯಾಗಿದ್ದಾಳೆ. ಯಾಕೆಂದರೆ, ಏಜೆ ಸೊಸೆಯಂದಿರಿಂದ ಮನೆ ಕೆಲಸ ಮಾಡಿಸುತ್ತಾ, ಗಿರ್ಗಿಟ್ಲೇ ರೀತಿ ಆಡಿಸುತ್ತಿದ್ದಾಳೆ. ಇದು ಕೌಸಲ್ಯಗೆ ಒಂದು ರೀತಿ ಹೆಮ್ಮೆ ಜೊತೆಗೆ ಖುಷಿಯೂ ನೀಡುತ್ತಿದೆ.

ಲೀಲಾ ಮತ್ತೆ ಏಜೆ ಇಬ್ಬರೆ ಮನೆಯಲ್ಲಿದ್ದಾರೆ. ಲೀಲಾ, ಗೌರಿ ಪೂಜೆಗೆ ಅಲಂಕಾರ ಮಾಡಿ ಪೂಜೆ ಮಾಡಿರುವುದು ಏಜೆಗೆ ಖುಷಿ ತಂದಿದೆ. ಲೀಲಾಳನ್ನು ಮೆಚ್ಚಿಕೊಂಡಿರುವ ಏಜೆಗೆ ಈಗೀಗ ಲೀಲಾ ಮೇಲೆ ಲವ್ ಆಗುತ್ತಿದೆ.

ಇನ್ನು ದೇವ್ ತಪ್ಪು ಮಾಡಿದ್ದು, ಈಗ ಶಿಕ್ಷೆ ಅನುಭವಿಸುತ್ತಿದ್ದಾನೆ. ಕಂಡ ಕಂಡವರೆಲ್ಲರೂ ದೇವ್ ನನ್ನು ಹೊಡೆಯುತ್ತಿದ್ದಾರೆ. ಅಲ್ಲದೇ, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು. ಇದು ನಮ್ ಬಾಸ್ ಡೈಲಾಗ್ ಎಂದು ಹೇಳುತ್ತಿದ್ದಾರೆ.

ಬೇಸರದಲ್ಲಿರುವ ಲೀಲಾ!

ಬೇಸರದಲ್ಲಿರುವ ಲೀಲಾ!

ಲೀಲಾ ಮನೆಯಲ್ಲಿ ಗೌರಿ ಪೂಜೆಯನ್ನು ಮಾಡಿದ್ದಾಳೆ. ಏಜೆ ಅದನ್ನು ಒಪ್ಪಿಕೊಂಡಿದ್ದು, ಖುಷಿ ಪಟ್ಟಿದ್ದಾನೆ. ಇನ್ನು ಲೀಲಾ ಅಮ್ಮನ ಮನೆಗೆ ಹೋಗಲು ಬಯಸಿದ್ದಾಳೆ. ಆದರೆ ಏಜೆ ಬಂದು ಬೇರೆಲ್ಲೋ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ಈಗ ಅಮ್ಮನ ಮನೆಗೆ ಹೇಗೆ ಹೋಗೋದು ಎಂಬ ಚಿಂತೆ ಲೀಲಾಳದ್ದು. ಕೇಳಿದರೆ ಏಜೆ ಏನು ಹೇಳುತ್ತಾರೋ. ಅಮ್ಮನನ್ನು ನೋಡುವುದು ಹೇಗೆ ಎನ್ನುತ್ತಾ ಯೋಚನೆ ಮಾಡುತ್ತಾ ಕೂತಿದ್ದಾಳೆ.

ದೇವ್‌ಗೆ ಎದುರಾಯ್ತು ದೊಡ್ಡ ಸಂಕಷ್ಟ!

ದೇವ್‌ಗೆ ಎದುರಾಯ್ತು ದೊಡ್ಡ ಸಂಕಷ್ಟ!

ದೇವ್ ಈಗ ಎಲ್ಲಿಗೆ ಹೋದರೂ ಯಾರಾದರೂ, ಒಬ್ಬರು ಬಂದು ಸುಮ್ಮನೆ ಹೊಡೆಯುತ್ತಿದ್ದಾರೆ. ಕಾರಣವೇ ಇಲ್ಲದೇ, ದೇವ್ ಮೈ ಮೂಳೆಗಳನ್ನು ಪುಡಿ ಮಾಡುತ್ತಿದ್ದಾರೆ. ಇದರಿಂದ ದೇವ್‌ಗೆ ಸಾಕಾಗಿ ಹೋಗಿದೆ. ಹೊಡೆದ ಮೇಲೆ ಎಲ್ಲರ ಬಾಯಲ್ಲೂ ಒಂದೇ ಡೈಲಾಗ್ ಬರುತ್ತಿದೆ. ಅದು ಏನೆಂದರೆ, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ತಪ್ಪು ಮಾಡಿದ ಮೇಲೆ ಶಿಕ್ಷೆ ಅನುಭವಿಸಲೇ ಬೇಕು ಎಂದು ಹೇಳುತ್ತಿದ್ದಾರೆ. ಇದೆಲ್ಲವೂ ಎಜೆ ಕೆಲಸ ಎಂದು ತಿಳಿದು, ತಾನು ಜೈಲಿನಲ್ಲಿರುವುದೇ ವಾಸಿ ಎಂದು ತೀರ್ಮಾನಿಸಿದ್ದಾನೆ. ಹಾಗಾಗಿ ದೇವ್ ಪೊಲೀಸರ ಬಳಿ ಹೋಗಿದ್ದಾನೆ. ತನ್ನನ್ನು ಅರೆಸ್ಟ್ ಮಾಡುವಂತೆಯೂ, ತಾನು ಕೆಟ್ಟವನು ಎಂದು ಹೇಳಿದ್ದಾನೆ. ಪವಿತ್ರಾಳನ್ನು ಕೊಲ್ಲು ಯತ್ನಿಸಿದ ಸತ್ಯವನ್ನೂ ಸಹ ಹೇಳಿಕೊಂಡಿದ್ದಾನೆ. ಆದರೆ, ಪೋಲೀಸರು ಕೂಡ ಆತನಿಗೆ ಹೊಡೆದಿದ್ದು, ಎಜೆ ಹೇಳುವವರೆಗೂ ನಿನ್ನನ್ನು ಅರೆಸ್ಟ್ ಮಾಡೊಲ್ಲ ಎಂದು ಹೇಳಿದ್ದಾರೆ. ಇದು ದೇವ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕೌಸಲ್ಯಗೆ ಸೊಸೆಯರ ತಿರುಗೇಟು!

ಕೌಸಲ್ಯಗೆ ಸೊಸೆಯರ ತಿರುಗೇಟು!

ಕೌಸಲ್ಯ ಎಜೆ ಸೊಸೆಯಂದಿರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದಾಳೆ. ಕೌಸಲ್ಯ ಕೊಡುತ್ತಿರುವ ಟಾರ್ಟರ್ ಅನ್ನು ಇವರ ಕೈಯಲ್ಲಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಎಜೆಗೋಸ್ಕರ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆಗೆ ಕೌಸಲ್ಯ ಮನೆಗೆ ಗಣೇಶ ಹಬ್ಬದಂದು ಗಣಪತಿ ಮೂರ್ತಿಯನ್ನು ಸರಿಯಾದ ಸಮಯಕ್ಕೆ ಮನೆಗೆ ತರಬೇಕು. ಇಲ್ಲವಾದರೆ ತೊಂದರೆಯಾಗುತ್ತದೆ ಎಂಬ ಮಾತುಗಳನ್ನು ರಾಮಚಂದ್ರ ಹೇಳಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ದುರ್ಗಾ ಹೊಸ ಪ್ಲಾನ್ ಮಾಡಿದ್ದಾಳೆ.

ಕೌಸಲ್ಯಗೆ ಕಾದಿದೆ ಗಂಡಾಂತರ!

ಕೌಸಲ್ಯಗೆ ಕಾದಿದೆ ಗಂಡಾಂತರ!

ಈಗ ದುರ್ಗಾ, ಸರಸ್ವತಿ ಮತ್ತು ಲಕ್ಷ್ಮಿ ಸೇರಿಕೊಂಡು ಮನೆಗೆ ಮೂಹರ್ತದ ವೇಳೆಗೆ ಸರಿಯಾಗಿ ಗಣೇಶ ಬರದಂತೆ ನೋಡಿಕೊಳ್ಳಲು ಪ್ಲಾನ್ ಮಾಡುತ್ತಿದ್ದಾರೆ. ಇದರಿಂದ ಕೌಸಲ್ಯಗೆ ಗಂಡಾಂತರವಂತೂ ಕಾದಿದೆ. ಬೆಳಗ್ಗೆ ಎದ್ದು ಗಣೇಶನನ್ನು ತರಲು ರಾಮಚಂದ್ರ ಹೊರಟಿದ್ದಾನೆ. ಇದೇ ವೇಳೆಗೆ ಆತನಿಗೆ ಆಫೀಸಿನಿಂದ ಕರೆ ಬಂದಿದೆ. ಆಫೀಸಿಗೆ ಬರದಿದ್ದರೆ, ತೊಂದರೆಯಾಗುತ್ತದೆ ಎಂಬಂತೆ ದುರ್ಗಾ ಫೋನ್ ಮಾಡಿಸಿದ್ದಾಳೆ. ಮುಂದೇನಾಗುತ್ತೋ ಸೋಮವಾರದವರೆಗೂ ಕಾಯಬೇಕಿದೆ.

More from Filmibeat

English summary
Hitler Kalyana Serial Written Update On September 2nd Episode Episode, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X