Hitler Kalyana: ಅಂತರಾ ಹೆಸರಲ್ಲಿ ಮನೆಗೆ ಬಂದಿರುವವಳು ಅಸಲಿಗೆ ಎಜೆ ಹೆಂಡತಿಯೇ ಅಲ್ಲ!
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ತನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಂತರಾ ಕಾಣೆಯಾಗಿದ್ದಕ್ಕೆ ಬಹಳ ನೊಂದಿದ್ದ. ಮಗನಿಗೊಬ್ಬಳು ಸಂಗಾತಿ ಬೇಕು ಎಂದು ಧೃಢ ನಿರ್ಧಾರ ಮಾಡಿದ ಸರೋಜಮ್ಮ, ಶತಪ್ರಯತ್ನ ಮಾಡಿ ಎಜೆ ಹಾಗೂ ಲೀಲಾ ಮದುವೆಯನ್ನು ಮಾಡಿಸಿದರು.
ಬಳಿಕ ಹಾವು ಮುಂಗುಸಿಯಂತಾಡುತ್ತಿದ್ದ ಎಜೆ-ಲೀಲಾಳನ್ನು ಒಂದು ಮಾಡಲು ರಾಮ್-ಲೀಲಾ ಆಪರೇಷನ್ ಗಳನ್ನೂ ನಡೆಸಿದರು. ಇನ್ನೇನು ಒಬ್ಬರನ್ನೊಬ್ಬರು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಒಂದಾಗಬೇಕು ಅಷ್ಟರಲ್ಲಿ ಲೀಲಾ ಬಾಳಲ್ಲಿ ಅಂತರಾ ಬಿರುಗಾಳಿಯಾಗಿ ಪ್ರತ್ಯಕ್ಷಳಾಗಿದ್ದಳು.

ಇದರಿಂದ ಇಡೀ ಎಜೆ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಆದರೆ, ಸದಾ ಇತರರಿಗೆ ಒಳ್ಳೆಯದನ್ನು ಬಯಸುವ ಲೀಲಾ, ಅಂತರಾಳನ್ನು ಸುಲಭವಾಗಿ ಒಪ್ಪಿಕೊಂಡಿದ್ದಳು.
ಮನೆಯಲ್ಲೂ ಕೂಡ ಎಲ್ಲರಿಗೂ ಅಂತರಾಳನ್ನು ಒಪ್ಪಿಕೊಳ್ಳುವಂತೆ ಮನವರಿಕೆ ಮಾಡಿದ್ದಳು. ಎಜೆ ಹಾಗೂ ಅಂತರಾ ಒಂದಾದರೆ ಸಾಕು. ಅವರು ಖುಷಿಯಾಗಿರಲಿ ಎಂದು ತನ್ನ ಪತಿಯನ್ನೇ ತ್ಯಾಗ ಮಾಡಿದ್ದಾಳೆ. ಮನೆಗೆ ಬಂದ ಹೊಸತರಲ್ಲಿ ಅಂತರಾ ತನಗೆ ಹಳೆಯದ್ಯಾವುದೂ ನೆನಪಿಲ್ಲ. ನೀವೆಲ್ಲಾ ನನ್ನನ್ನು ಬಿಟ್ಟು ಬಿಡಿ ಎನ್ನುತ್ತಿದ್ದಳು. ನಿಧಾನವಾಗಿ ಮನೆಗೆ ಹೊಂದಿಕೊಳ್ಳುತ್ತಾ, ತಾನೇ ಅಂತರಾ ಎಂದು ಹೇಳಲು ಶುರು ಮಾಡಿದಳು. ಒಳ್ಳೆಯವಳಾಗಿಯೇ ನಿಧಾನವಾಗಿ ತನ್ನ ಬಣ್ಣವನ್ನು ಕಳಚಲು ಶುರು ಮಾಡಿದಳು
ಎಜೆ ಹಾಗೂ ಲೀಲಾಳನ್ನು ದೂರ ಮಾಡಬೇಕು ಎಂದು ಮೊದಲು ಮದುವೆ ಮಾಡಿಸಲು ಮುಂದಾದಳು. ಆದರೆ ಲೀಲಾ, ಅಂತರಾಳನ್ನು ನಂಬಿಸುವ ಸಲುವಾಗಿ ತನಗೆ ಈಗಾಗಲೇ ಮದುವೆಯಾಗಿದೆ ಎಂಬ ಸುಳ್ಳನ್ನು ಕೂಡ ಹೇಳಿ ಬಿಟ್ಟಿದ್ದಾಳೆ. ಆದರೆ, ಇತ್ತೀಚೆಗೆ ಲೀಲಾಳನ್ನು ಧ್ವೇಷದಿಂದ ನೋಡುವ ಅಂತರಾ, ಸದಾ ವಿಷ ಕಾರುತ್ತಿರುತ್ತಾಳೆ. ಲೀಲಾಳನ್ನು ಲಂಡನ್ ಗೆ ಕಳಿಸಬೇಕು ಎಂದು ಪ್ಲಾನ್ ಮಾಡುತ್ತಾಳೆ. ಆದರೆ, ಅದೂ ಕೂಡ ಸಾಧ್ಯವಾಗುವುದಿಲ್ಲ. ಆದರೆ, ಈಗ ಎಜೆಗೆ ಲೀಲಾಳ ಬೆಲೆ ತಿಳಿಯುತ್ತಿದ್ದು, ಹತ್ತಿರವಾಗಲು ಬಯಸುತ್ತಿದ್ದಾನೆ. ಆದರೆ, ಆತನಿಗೆ ಅಂತರಾಳನ್ನು ಕೂಡ ಬಿಟ್ಟು ಕೊಡಲು ಆಗುತ್ತಿಲ್ಲ. ಲೀಲಾಳಿಗೆ ಅಂತರಾ ಎಂದರೆ ಇಷ್ಟ. ಆದರೆ, ಅವಳಿಗೂ ಎಜೆಯನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಎಲ್ಲಿಗೂ ಹೋಗದೇ ಮನೆಯಲ್ಲೇ ಇದ್ದಾಳೆ. ಈಗ ಅಂತರಾಳಿಗೆ ಲೀಲಾ ವಿಚಾರದಲ್ಲಿ ಎಜೆ ಮೇಲೂ ಕೋಪ ಬರುತ್ತಿದೆ. ಇದನ್ನು ಎಜೆ ಕೂಡ ಗಮನಿಸಿದ್ದಾನೆ.
ಆದರೆ, ಅಸಲಿಗೆ ಅಂತರಾ ಅಂತರಾನೇ ಅಲ್ಲ ಎಂದು ಈಗ ತಿಳಿಯುತ್ತಿದೆ. ಎಜೆ ಹಾಗೂ ಅಂತರಾ ಇಬ್ಬರ ಕನಸಿನ ಅರಮನೆಯ ನಿರ್ಮಾಣ ಅರ್ಧಕ್ಕೆ ನಿಂತಿದೆ. ಅಲ್ಲೇ ಅಂತರಾ ಮಣ್ಣಲ್ಲಿ ಸಮಾಧಿಯಾಗಿದ್ದಾಳೆ. ಅಂತರಾ ಎಂದು ಹೇಳಿಕೊಂಡು ಬಂದಿರುವ ಪ್ರಾರ್ಥನಾ ಎಜೆಗೆ ಮೋಸ ಮಾಡುತ್ತಿದ್ದಾಳೆ. ಇದ್ದಕ್ಕಿದ್ದ ಹಾಗೆ ಅಂತರಾ ಮನೆಯಿಂದ ಕಾಣೆಯಾಗಿದ್ದಾಳೆ. ಇದರಿಂದ ಎಜೆ ಹಾಗೂ ಮನೆಯವರೆಲ್ಲಾ ಕಂಗಾಲಾಗಿದ್ದಾರೆ.
ಆದರೆ. ಅಂತರಾ ಪಾಳು ಬಿದ್ದಿರುವ ಮನೆಗೆ ಬಂದು ಹೂವಿನ ಬೊಕ್ಕೆಯನ್ನು ನೆಲದ ಮೇಲೆ ಇಟ್ಟು ಅಂತರಾ ಸತ್ತಾಗಿದೆ. ಅವಳಂತೆ ನಾನಿದ್ದೀನಿ ಅಷ್ಟೇ ಆದರೆ, ನನ್ನ ಅವಳ ಗುಣ ಸಂಪೂರ್ಣವಾಗಿ ಬೇರೆಯೇ ಇದೆ. ಆದಷ್ಟು ಬೇಗ ಲೀಲಾಳನ್ನು ಎಜೆಯಿಂದ ದೂರ ಮಾಡಬೇಕು. ನಾನು ಅಂತರಾ ಆಗಿ ಎಜೆ ಹೆಂಡತಿಯಾಗಬೇಕು. ಇಡೀ ಆಸ್ತಿ ಅನ್ನು ನಾನೇ ಅನುಭವಿಸಬೇಕು ಎಂದೆಲ್ಲಾ ಮಾತನಾಡಿದ್ದಾಳೆ. ಅಂತರಾಳ ಈ ಮಾತುಗಳು ಧಾರಾವಾಹಿಗೆ ಟ್ವಿಸ್ಟ್ ಅನ್ನು ತಂದಿದೆ. ಇದೀಗ ವೀಕ್ಷಕರಲ್ಲಿ ಅನುಮಾನವನ್ನು ಮೂಡಿಸಿದೆ. ಹಾಗಾದರೆ, ಅಂತರಾ ಹೇಗೆ ಸತ್ತಳು, ಪ್ರಾರ್ಥನಾ ಅಂತರಾ ಆಗಿ ಬರಲು ಕಾರಣವೇನು..? ಅಂತರಾ ಬಗ್ಗೆ ಪ್ರಾರ್ಥನಾಗೆ ಹೇಗೆ ಗೊತ್ತು ಎಂಬ ಪ್ರಶ್ನೆಗಳು ಎದ್ದಿವೆ.


Click it and Unblock the Notifications











