Hitler Kalyana Serial: ಎಜೆ ಪಾರ್ಟನರ್ ಲೀಲಾಗೆ 'ಹಿಟ್ಲರ್ ಕಲ್ಯಾಣ' ಸೀರಿಯಲ್ ಸಿಕ್ಕಿದ್ದರ ಹಿಂದಿದೆ ರೋಚಕ ಕಥೆ

By ಪೂರ್ವ

ಕಡಿಮೆ ಅವಧಿಯಲ್ಲೇ ಅಪಾರ ಜನಪ್ರಿಯತೆ ಗಳಿಸಿರುವ 'ಹಿಟ್ಲರ್‌ ಕಲ್ಯಾಣ' ಧಾರಾವಾಹಿಯ 'ಎಡವಟ್‌ ಲೀಲಾ' ಪಾತ್ರದಲ್ಲಿ ಅಭಿನಯಿಸಿರುವ ಮಲೈಕಾ ವಸುಪಾಲ್‌ ಕಿರುತೆರೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಂಗ್ ಅಡಲ್ಟ್ ಲವ್ ಸ್ಟೋರಿ ಗೆ ಜನ ಫಿದಾ ಆಗ್ತಿರೋ ಕಾರಣ ಈ ಜಾನರ್ ನಲ್ಲೇ ಹೊಸ ಹೊಸ ಸೀರಿಯಲ್‌ಗಳು ಹೊರಬರ್ತಿವೆ.

ಅದಕ್ಕೆ ಮತ್ತೊಂದು ಎಂಟ್ರಿ ಜೀ ಕನ್ನಡ ದ ಧಾರಾವಾಹಿ 'ಹಿಟ್ಲರ್ ಕಲ್ಯಾಣ'. ದಿಲೀಪ್ ರಾಜ್ ಈ ಸೀರಿಯಲ್ ನಲ್ಲಿ ನಾಯಕನಟನಾಗಿ ಕಾಣಿಸಿಕೊಂಡಿದ್ದಾರೆ. ಸೀರಿಯಲ್‌ ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ.

ಕಲ್ಲು ಮನಸ್ಸಿನ ಎಜೆಯನ್ನು ಹೇಗೆ ಕರಗಿಸ್ತಾಳೆ

ಕಲ್ಲು ಮನಸ್ಸಿನ ಎಜೆಯನ್ನು ಹೇಗೆ ಕರಗಿಸ್ತಾಳೆ

'ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ಅನಿರುದ್ಧ ಮಾಡಿರುವ ಆರ್ಯವರ್ಧನ್ ಪಾತ್ರದಂತೆ ಮಧ್ಯ ವಯಸ್ಕ ಪಾತ್ರದಲ್ಲಿ ನಟಿಸಿದ್ದಾರೆ ದಿಲೀಪ್ ರಾಜ್. ಜೊತೆಗೆ ದೊಡ್ಡ ಬ್ಯುಸಿನೆಸ್ ಮ್ಯಾನ್. ಅಲ್ಲಿ ಆರ್ಯವರ್ಧನ್ ಅನು ಸಿರಿಮನೆ ಮುಗ್ಧತೆಗೆ ಮನಸೋತರೆ, ಇಲ್ಲಿ ರಗಡ್ ಹೀರೋ ಎಜೆಯನ್ನು ಸೆಳೆಯೋ ಯುವತಿ ಲೀಲಾ. ಸದಾ ಎಡವಟ್ಟು ಮಾಡೋ ಈ ಮುಗ್ಧ ಹುಡುಗಿಗೆ ಹಿಟ್ಲರ್‌ ಬಾಸ್, ಕಲ್ಲು ಮನಸ್ಸಿನ ಎಜೆಯನ್ನು ಹೇಗೆ ಕರಗಿಸ್ತಾಳೆ ಅನ್ನೋದು ಕುತೂಹಲಕಾರಿ ವಿಷಯ.

ಲೀಲಾಗೆ ಬಾಲ್ಯದಿಂದಲೂ ಆಕ್ಟಿಂಗ್ ಅಂದ್ರೆ ಪ್ರಾಣ

ಲೀಲಾಗೆ ಬಾಲ್ಯದಿಂದಲೂ ಆಕ್ಟಿಂಗ್ ಅಂದ್ರೆ ಪ್ರಾಣ

ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಟಾಪ್‌ ಧಾರಾವಾಹಿಗಳಲ್ಲಿ 'ಹಿಟ್ಲರ್‌ ಕಲ್ಯಾಣ' ಕೂಡ ಒಂದು. ಧಾರಾವಾಹಿಯ ಪ್ರಮುಖ ಆಕರ್ಷಣೆ ಲೀಲಾ ಪಾತ್ರ ಜನಪ್ರಿಯತೆ ಪಡೆದುಕೊಂಡಿದೆ. ಇನ್ನು ಮಲೈಕಾಗೆ ಈ ಧಾರವಾಹಿಯಲ್ಲಿ ಅವಕಾಶ ಸಿಕ್ಕಿದ್ದು ಹೇಗೆ? ಸುಂದರಿ ಮಲೈಕಾಗೆ ಬಾಲ್ಯದಿಂದಲೂ ಆಕ್ಟಿಂಗ್ ಅಂದ್ರೆ ಪ್ರಾಣ. ಆದರೆ ಮನೆಯವರಿಗೆ ಮಗಳ ಈ ಹುಚ್ಚಾಟಕ್ಕಿಂತ ಓದೋದೇ ಮುಖ್ಯ ಎನಿಸಿತ್ತು. ಅದಕ್ಕೆ ಮೊದಲು ಓದು, ಆಮೇಲೆ ಆಕ್ಟಿಂಗ್ ಮಾಡಬಹುದು ಎಂದಿದ್ದಾರೆ. ಆಕ್ಟಿಂಗ್ ಕೆರಿಯರ್‌ ಜೀವನ ನಿರ್ವಹಣೆಗೆ ಸೂಕ್ತವಾದುದಲ್ಲ ಎಂಬುದು ಮಲೈಕಾ ಕುಟುಂಬದ ನಂಬಿಕೆ. ಹೀಗಾಗಿ ಮೊದಲು ಮಗಳು ಅವಳ ಜೀವನ ನೋಡಿಕೊಳ್ಳುವಷ್ಟು ಶಿಕ್ಷಣ ಪಡೆಯಲಿ ಅನ್ನೋದು ಹೆತ್ತವರ ಮನದ ಇಂಗಿತವಾಗಿತ್ತು.

ಆಯ್ಕೆ ಆದದ್ದು ಜೀ ಕನ್ನಡದ 'ಎಡವಟ್ಟು ಲೀಲಾ' ಪಾತ್ರಕ್ಕೆ.

ಆಯ್ಕೆ ಆದದ್ದು ಜೀ ಕನ್ನಡದ 'ಎಡವಟ್ಟು ಲೀಲಾ' ಪಾತ್ರಕ್ಕೆ.

ಹೀಗೆ ಅಪ್ಪ ಅಮ್ಮನ ಬಲವಂತಕ್ಕೆ ಓದಿದರೂ ಜಾಣೆಯಾದ ಮಲೈಕಾ ಇಂಜಿನಿಯರಿಂಗ್‌ ಪದವಿ ಪಡೆದರು. ಆಮೇಲೆ ತನ್ನ ಕನಸಿನ ಹಿಂದೆ ಬಿದ್ದಿದ್ದಾರೆ. ಚಂದದ ಪ್ರೊಫೈಲ್ ರೆಡಿ ಮಾಡಿ ಸಾಕಷ್ಟು ಸೀರಿಯಲ್ ತಂಡ ಸಂಪರ್ಕಿಸಿ ಅಡಿಶನ್ ಕೊಟ್ಟಿದ್ದೇ ಕೊಟ್ಟಿದ್ದು. ಅದಕ್ಕಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಸದಾ ಓಡಾಟ. ಹೀಗೆ ಅಡಿಶನ್ ಗಾಗಿ ಹಲವು ಸುತ್ತಾಟ ನಡೆಸಿದ ಬಳಿಕ ಕೊನೆಗೂ ಆಯ್ಕೆ ಆದದ್ದು ಜೀ ಕನ್ನಡದ 'ಎಡವಟ್ಟು ಲೀಲಾ' ಪಾತ್ರಕ್ಕೆ.

ಮುಗ್ಧ ಹುಡುಗಿಯ ಹುಡುಕಾಟದಲ್ಲಿದ್ದ ತಂಡ

ಮುಗ್ಧ ಹುಡುಗಿಯ ಹುಡುಕಾಟದಲ್ಲಿದ್ದ ತಂಡ

'ಏನು ಹೇಳಿದರೂ ಎರಡನೇ ಬಾರಿ ಯೋಚಿಸದೇ ಟಪಕ್ಕನೆ ನಂಬಿ ಬಿಡುವ, ನಂಬಿದವರು ಬೀಳು ಅಂದರೆ ಬಿದ್ದು ಬಿಡುವಷ್ಟು ಮುಗ್ಧ ಹುಡುಗಿಯ ಹುಡುಕಾಟದಲ್ಲಿದ್ದೆವು. ಆಗ ನಮ್ಮ ಈ ಪಾತ್ರಕ್ಕೆ ಕರೆಕ್ಟ್ ಫೇಸ್ ಅನಿಸಿದ್ದು ಮಲೈಕಾರದ್ದು' ಎನ್ನುತ್ತೆ ಚಿತ್ರತಂಡ. ಸದ್ಯಕ್ಕೀಗ ಈ ಸೀರಿಯಲ್‌ಗೋಸ್ಕರ ಮಲೈಕಾ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಆಡಿಶನ್‌ಗಾಗಿ ಸಾಕಷ್ಟು ಅಲೆದಾಡಿದ್ದರೂ ಕೊನೇ ಕ್ಷಣದಲ್ಲಿ ಅವರು ಈ ಸೀರಿಯಲ್‌ನಲ್ಲಿ ನಟಿಸಲು ಒಲ್ಲೆ ಅಂದಿದ್ದರಂತೆ. ಆದರೆ ಈಗ ಸಿಕ್ತಿರೋ ಪಾಪ್ಯುಲಾರಿಟಿ ನೋಡಿ ಒಪ್ಪಿಕೊಳ್ಳದೇ ಇದ್ದಿದ್ರೆ ಯಡವಟ್ಟಾಗ್ತಿತ್ತು ಅಂತ ಯೋಚಿಸ್ತಾರೆ ಯಡವಟ್ಟು ಲೀಲಾ ಅಲಿಯಾಸ್ ಮಲೈಕಾ ವಸುಪಾಲ್ .

More from Filmibeat

English summary
Hittler Kalyana serial fame Malika Vasupal life style . Hear is more details about her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X